Hair Mask: ನಿಮಗೆ ಕಂದು ಬಣ್ಣದ ಕೂದಲು ಬೇಕಾ? ಪಾರ್ಲರ್‌ಗೂ ಹೋಗದೇ ಕಾಫಿ ಪೌಡರ್ ಬಳಸಿ ಮನೆಯಲ್ಲೇ ಇದನ್ನು ಯಾವ ರೀತಿ ಮಾಡಿಕೊಳ್ಳಬಹುದು ನೋಡಿ
Brown Hair: ನಿಮಗೆ ಕಂದು ಬಣ್ಣದ ಕೂದಲು ಎಂದರೆ ತುಂಬಾ ಇಷ್ಟ ಇದೆ. ಆದರೆ ಪಾರ್ಲರ್‌ಗೆ ಹೋಗಿ ಕಲರ್ ಮಾಡಿಸಿ ಎಲ್ಲಿ ನಿಮ್ಮ ಕೂದಲು ಹಾಳಾಗಿಬಿಡುತ್ತೋ ಎನ್ನುವ ಭಯವೂ ಇದೆ. ಹೀಗಿದ್ದರೆ ನೀವು ನಾವು ಇಲ್ಲಿ ಹೇಳಲಾದ ಹೇರ್ ಮಾಸ್ಕ್ ಬಳಸಿ ಮನೆಯಲ್ಲೇ ಕಲರ್ ಮಾಡಿಸಿಕೊಳ್ಳಿ.
ಕೆಲವರಿಗೆ ಹೇರ್ ಕಲರಿಂಗ್ ಮಾಡಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲಿ ಕೂದಲು ಹಾಳಾಗುತ್ತದೆಯೋ ಎಂಬ ಭಯಕ್ಕೆ ಅವರು ಕಲರ್ ಮಾಡಿಸುವುದಿಲ್ಲ. ಆದರೆ ನೀವು ಮನೆಯಲ್ಲೇ ಕಲರ್ ಮಾಡಿಕೊಳ್ಳಬಹುದು ಎಂದು ಹೇಳಿದಾಗ ಅವರ ಕಣ್ಣುಗಳು ಅರಳುವುದು ಸಹಜ. ಹೌದು ನಿಜವಾಗಿಯೂ ಈಗ ನೀವು ನಿಮ್ಮ ಮನೆಯಲ್ಲೇ ಹೇರ್ ಕಲರಿಂಗ್ ಮಾಡಿಕೊಳ್ಳಬಹುದು. ಅದು ಕೂಡ ಸಹಹಜ ವಿಧಾನದಲ್ಲಿ. ಕೂದಲಿನ ಬಣ್ಣಕ್ಕಾಗಿ ಕಾಫಿ ಪುಡಿಯನ್ನು ನೀವು ಬಳಸಬಹುದು. ಸೆಲೆಬ್ರಿಟಿಗಳಂತೆ ಕಂದು ಬಣ್ಣದ ಕೂದಲನ್ನು ಈಗ ನೀವೂ ಕೂಡ ಮನೆಯಲ್ಲೇ ಪಡೆಯಬಹುದು. ಹಾಗಾದರೆ ಇದನ್ನು ಯಾವ ರೀತಿ ಬಳಸುವುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಕಾಫಿ ನೈಸರ್ಗಿಕ ಕೂದಲು ಬಣ್ಣವಾಗಿದ್ದು ಅದು ಕೂದಲಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಬದಲಿಗೆ ಇದು ಕೂದಲಿಗೆ ಹೊಳಪನ್ನು ತರಲು ಸಹ ಕೆಲಸ ಮಾಡುತ್ತದೆ. ಕಾಫಿ ಪೌಡರ್‌ಅನ್ನು ನೀವು ಕೂದಲಿನ ಬಣ್ಣವಾಗಿ ಬಳಸಿದರೆ, ಅದು ಒಂದು ಗಂಟೆಯೊಳಗೆ ಸಲೂನ್ ತರಹದ ಪರಿಣಾಮವನ್ನು ನೀಡುತ್ತದೆ. ಆದರೆ ಅದನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿಯುವುದು ಮುಖ್ಯ. ನಿಮ್ಮ ಕೂದಲನ್ನು ಕಂದುಬಣ್ಣವಾಗಿಸಲು ಕಾಫಿ ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸುವುದು ಮತ್ತು ಬಳಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಕಂದು ಬಣ್ಣದ ಕೂದಲಿಗೆ ಈ ರೀತಿ ಕಾಫಿ ಹೇರ್ ಮಾಸ್ಕ್ ತಯಾರಿಸಿ
ಬೇಕಾಗುವ ಸಾಮಾಗ್ರಿಗಳು:
4 ಚಮಚ - ಕಾಫಿ
1 ಗ್ಲಾಸ್ - ನೀರು
2 ಚಮಚ - ಕೋಕೋ ಪೌಡರ್
2 ಚಮಚ - ಜೋಳದ ಹಿಟ್ಟು
2 ಚಮಚ - ಮೊಸರು
1 ಚಮಚ - ವಿನೆಗರ್
ಮೊಟ್ಟೆ - ಬೇಕಿದ್ದರೆ
ತಯಾರಿಸುವ ವಿಧಾನ
ಮೊದಲನೆಯದಾಗಿ, ಒಂದು ಬಾಣಲೆಯಲ್ಲಿ ಎರಡು ಚಮಚ ಕಾಫಿ ಪುಡಿ ತೆಗೆದುಕೊಳ್ಳಿ. ಈಗ ಅದಕ್ಕೆ ಒಂದು ಲೋಟ ನೀರು ಸೇರಿಸಿ. ಇದನ್ನು ಗ್ಯಾಸ್ ಮೇಲೆ ಇಟ್ಟು ಎರಡು ನಿಮಿಷ ಕುದಿಸಿ. ನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಮತ್ತೆ ಅದನ್ನು ಫಿಲ್ಟರ್ ಮಾಡಿ.
-ಒಂದು ಪಾತ್ರೆಯಲ್ಲಿ ಎರಡು ಚಮಚ ಕಾಫಿ ಪುಡಿ ಹಾಕಿ. ಇದರೊಂದಿಗೆ ಎರಡು ಚಮಚ ಕೋಕೋ ಪೌಡರ್ ಕೂಡ ಸೇರಿಸಿ. ಅದಕ್ಕೆ ಎರಡು ಚಮಚ ಕಾರ್ನ್ ಪೌಡರ್ ಅನ್ನು ಕೂಡ ಸೇರಿಸಿ. ಈಗ ಅದಕ್ಕೆ ಮೊದಲೇ ಕಾಯಿಸಿದ ಕಾಫಿ ಡಿಕಾಕ್ಶನ್ ಸೇರಿಸಿ. ಒಂದು ಚಮಚದ ಸಹಾಯದಿಂದ ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
-ಈಗ ಗ್ಯಾಸ್ ಮೇಲೆ ಕಡಿಮೆ ಉರಿಯಲ್ಲಿ ಇಟ್ಟು ಬಿಸಿ ಮಾಡಿ. ಕ್ರಮೇಣ ದ್ರಾವಣವು ಸಂಪೂರ್ಣವಾಗಿ ದಪ್ಪವಾಗುತ್ತದೆ. ದ್ರಾವಣವು ಸಂಪೂರ್ಣವಾಗಿ ಮೆಲ್ಟ್ ಆಗಿ ದಪ್ಪವಾದಾಗ ಅದನ್ನು ಆಫ್ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ. ಈ ದ್ರಾವಣವು ಸಂಪೂರ್ಣವಾಗಿ ತಣ್ಣಗಾದಾಗ ಅದರಲ್ಲಿ ಎರಡು ಚಮಚ ಮೊಸರು ಸೇರಿಸಿ. ನೀವು ಮೊಸರಿನ ಬದಲಿಗೆ ಮೊಟ್ಟೆಯ ಹಳದಿ ಲೋಳೆ ಸೇರಿಸಬಹುದು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದರಲ್ಲಿರುವ ಪ್ರೊಟೀನ್ ಕೂದಲನ್ನು ಗಟ್ಟಿಯಾಗಿ, ದಪ್ಪವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಈಗ ಅದಕ್ಕೆ ಒಂದು ಚಮಚ ವಿನೆಗರ್ ಸೇರಿಸಿ. ನಿಮ್ಮ ಕಾಫಿ ಹೇರ್ ಪ್ಯಾಕ್ ನಿಮ್ಮ ಕೂದಲಿನ ಬಣ್ಣ ಬದಲಿಸಲು ಸಿದ್ಧವಾಗಿದೆ. ಈಗ ಅದನ್ನು ಕೂದಲಿಗೆ ಚೆನ್ನಾಗಿ ಹಚ್ಚಿ ಮತ್ತು ಒಂದು ಗಂಟೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಕೂದಲು ಮೃದು ಮತ್ತು ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ.
ವಿಭಾಗ