Curly Hair: ರಾತ್ರಿ ಬೆಳಗಾಗುವುದರೊಳಗೆ ನಿಮ್ಮ ಕೂದಲನ್ನು ಕರ್ಲಿ ಮಾಡಿಕೊಳ್ಳುವ ಆಸೆ ನಿಮಗಿದ್ಯಾ? ಹಾಗಾದ್ರೆ ಇದನ್ನೊಮ್ಮೆ ಓದಿ-do you want to curl your hair before dawn then read this once beauty tips smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Curly Hair: ರಾತ್ರಿ ಬೆಳಗಾಗುವುದರೊಳಗೆ ನಿಮ್ಮ ಕೂದಲನ್ನು ಕರ್ಲಿ ಮಾಡಿಕೊಳ್ಳುವ ಆಸೆ ನಿಮಗಿದ್ಯಾ? ಹಾಗಾದ್ರೆ ಇದನ್ನೊಮ್ಮೆ ಓದಿ

Curly Hair: ರಾತ್ರಿ ಬೆಳಗಾಗುವುದರೊಳಗೆ ನಿಮ್ಮ ಕೂದಲನ್ನು ಕರ್ಲಿ ಮಾಡಿಕೊಳ್ಳುವ ಆಸೆ ನಿಮಗಿದ್ಯಾ? ಹಾಗಾದ್ರೆ ಇದನ್ನೊಮ್ಮೆ ಓದಿ

Curly Hair: ಹಲವಾರು ಹುಡುಗಿಯರಿಗೆ ಗುಂಗುರು ಕೂದಲು ಎಂದರೆ ತುಂಬಾ ಇಷ್ಟ. ಬೇಕು ಎಂದೇ ತಮ್ಮ ಕೂದಲನ್ನು ಗುಂಗುರು ಮಾಡಿಕೊಳ್ಳಲು ಬಯಸುತ್ತಾ ಇರುತ್ತಾರೆ. ಇದಕ್ಕಾಗಿ ಏನೇನೋ ಪ್ರಯತ್ನ ಪಡುತ್ತಾರೆ. ನಾಳೆ ಏನೋ ಒಂದು ಕಾರ್ಯಕ್ರಮ ಇದೆ ಎಂದಾದರೆ ಅವರಿಗೆ ಇಂದೇ ಗುಂಗುರು ಕೂದಲು ಮಾಡಿಕೊಳ್ಳುವ ಮನಸಾಗುತ್ತದೆ. ಅಂತವರಿಗೆ ಇಲ್ಲಿದೆ ಟಿಪ್ಸ್‌.

ಗುಂಗುರು ಕೂದಲು
ಗುಂಗುರು ಕೂದಲು

ಹಲವಾರು ಹುಡುಗಿಯರಿಗೆ ಗುಂಗುರು ಕೂದಲು ಎಂದರೆ ತುಂಬಾ ಇಷ್ಟ. ಬೇಕು ಎಂದೇ ತಮ್ಮ ಕೂದಲನ್ನು ಗುಂಗುರು ಮಾಡಿಕೊಳ್ಳಲು ಬಯಸುತ್ತಾ ಇರುತ್ತಾರೆ. ಇದಕ್ಕಾಗಿ ಏನೇನೋ ಪ್ರಯತ್ನ ಪಡುತ್ತಾರೆ. ನಾಳೆ ಏನೋ ಒಂದು ಕಾರ್ಯಕ್ರಮ ಇದೆ ಎಂದಾದರೆ ಅವರಿಗೆ ಇಂದೇ ಗುಂಗುರು ಕೂದಲು ಮಾಡಿಕೊಳ್ಳುವ ಮನಸಾಗುತ್ತದೆ. ನಿಮಗೂ ಇದೇ ರೀತಿ ಅನ್ನಿಸಿದರೆ ನಾವಲ್ಲಿ ನೀಡಲಾದ ಟಿಪ್ಸ್‌ ಬಳಸಿಕೊಂಡು ಕೂದಲನ್ನು ಗುಂಗರಾಗಿಸಿಕೊಳ್ಳಿ.

ನೀವು ಸ್ನಾನ ಮಾಡಿದ ನಂತರ ಕೂದಲನ್ನು ಚೆನ್ನಾಗಿ ಒಣಗಿಸಿ ಬಾಚದೆ ಹಾಗೆ ಬಿಡಿ. ಹೀಗೆ ಬಿಟ್ಟರೆ ನಿಮ್ಮ ಕೂದಲು ಗೊಂಗುರಾಗಿ ಇರುತ್ತದೆ. ಇನ್ನು ನಿಮ್ಮ ಕೂದಲು ಒದ್ದೆ ಇರುವ ಸಂದರ್ಭದಲ್ಲಿ ಒಂದಷ್ಟು ಚಿಕ್ಕಚಿಕ್ಕ ಸ್ಟಿಕ್‌ ಅಥವಾ ಪೆನ್ ಪೆನ್ಸಿಲ್ ಗಳನ್ನು ಬಳಸಿ ಅದಕ್ಕೆ ನಿಮ್ಮ ಕೂದಲುಗಳನ್ನು ಸುತ್ತಿಕೊಳ್ಳಿ. ಈ ರೀತಿ ಸುತ್ತಿಕೊಂಡಾಗ ಅದು ಗುಂಗುರಾಗುತ್ತದೆ. ಮತ್ತು ಸ್ವಲ್ಪ ಸಮಯದ ನಂತರ ನೀವು ಸುತ್ತಿದ ಕೂದಲನ್ನು ಬಿಚ್ಚಿ.

ಎಣ್ಣೆ ಹಾಕಬೇಡಿ

ನಿಮ್ಮ ಕೂದಲಿಗೆ ಯಾವುದೇ ಎಣ್ಣೆ ಅಥವಾ ಕಂಡಿಷನರ್ ಬಳಸಬೇಡಿ. ಈ ರೀತಿ ಬಳಸಿದರೆ ನಿಮ್ಮ ಕೂದಲು ಮೃದುವಾಗಿ ಗುಂಗುರು ಕೂದಲು ಇರುವುದಿಲ್ಲ. ಗುಂಗರು ಕೂದಲು ಇರಬೇಕು ಎಂದರೆ ನೀವು ನಿಮ್ಮ ಕೂದಲಿನ ಸಾಫ್ಟ್ನೆಸ್ ಅನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ.

ಹೆಡ್‌ಬ್ಯಾಂಡ್‌ ಬಳಸಿ:
ನಿಮ್ಮ ಹೇರ್ ಬ್ಯಾಂಡ್ ಅಥವಾ ಹೆಡ್‌ಬ್ಯಾಂಡ್‌ ಯಾವುದಾದರೂ ಒಂದನ್ನು ಬಳಸಿ ಅದಕ್ಕೆ ನಿಮ್ಮ ಕೂದನ್ನು ಸುತ್ತಿಕೊಂಡು ಮಲಗಿಕೊಳ್ಳಿ.

ಹೇರ್ ರೋಲರ್:
ಇದನ್ನು ನೀವು ಆನ್‌ಲೈನ್‌ನಲ್ಲಿ ಬೇಕಾದರೂ ಕೊಂಡುಕೊಳ್ಳಬಹುದು. ಅಥವಾ ಹತ್ತಿರದ ಯಾವುದಾದರೂ ಒಂದು ಸ್ಟೋರ್‌ಗೆ ಹೋಗಿ ಈ ಹೇರ್‌ ರೋಲರ್ ತಂದುಕೊಳ್ಳಿ. ಆನಂತರದಲ್ಲಿ ನೀವು ಅದಕ್ಕೆ ನಿಮ್ಮ ಕೂದಲುಗಳನ್ನು ಸುತ್ತಿಕೊಳ್ಳಿ. ಇದನ್ನು ಸುತ್ತಿಕೊಂಡು ನೀವು ಮಲಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ವಲ್ಪ ಮೊದಲೇ ಇದನ್ನು ಪ್ರಯತ್ನಿಸಿ.

ಒದ್ದೆ ಕೂದಲನ್ನು ಹೀಗೆ ಮಾಡಿ

ಒದ್ದೆಯಾದ ಕೂದಲನ್ನು ಬಿಗಿಯಾದ ಸುರುಳಿಗಳಾಗಿ ತಿರುಗಿಸಿ ಮತ್ತು ಕ್ಲಿಪ್‌ಗಳೊಂದಿಗೆ ಅದನ್ನು ಅಲ್ಲಲ್ಲೇ ಹಾಗೇ ಕಟ್ಟಿಡಿ. ಈ ರೀತಿ ಮಾಡುವುದರಿಂದಲೂ ನಿಮ್ಮ ಕೂದಲು ಕರ್ಲಿಯಾಗುತ್ತದೆ. ಕೂದಲು ಒಣಗುವುದರಿಂದ ಕೂದಲು ಹೆಚ್ಚು ಸಿಕ್ಕಾಗುತ್ತದೆ. ಆದರೆ ಇದನ್ನು ನಂತರದಲ್ಲಿ ನೀವು ಎಣ್ಣೆ ನೇವರಿಸಿಕೊಂಡು ನಿಧಾನವಾಗಿ ಬಿಡಿಸಿಕೊಳ್ಳಬಹುದು. ಹಾರ್ಡ್‌ ಆಗಿರುವ ಬಾಚಣಿಗೆ ಬಳಸಿ ನಂತರ ನೀವು ನಿಮ್ಮ ಕೂದಲನ್ನು ಮತ್ತೆ ಮೊದಲಿನಂತೆ ಮಾಡಿಕೊಳ್ಳಬಹುದು.