Rangoli Tips: ನಿಮಗೆ ರಂಗೋಲಿ ಬಿಡಿಸೋಕೆ ಬರೋದಿಲ್ವಾ? ಚಿಂತೆ ಬೇಡ ನಿಮಗೆಂದೇ ತಯಾರಿಸಲಾದ ಈ ವಸ್ತುಗಳನ್ನು ಬಳಸಿ ಅಂದದ ರಂಗೋಲಿ ರಚಿಸಿ-do you want to make a rangoli dont worry create a beautiful rangoli using these materials made for you smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Rangoli Tips: ನಿಮಗೆ ರಂಗೋಲಿ ಬಿಡಿಸೋಕೆ ಬರೋದಿಲ್ವಾ? ಚಿಂತೆ ಬೇಡ ನಿಮಗೆಂದೇ ತಯಾರಿಸಲಾದ ಈ ವಸ್ತುಗಳನ್ನು ಬಳಸಿ ಅಂದದ ರಂಗೋಲಿ ರಚಿಸಿ

Rangoli Tips: ನಿಮಗೆ ರಂಗೋಲಿ ಬಿಡಿಸೋಕೆ ಬರೋದಿಲ್ವಾ? ಚಿಂತೆ ಬೇಡ ನಿಮಗೆಂದೇ ತಯಾರಿಸಲಾದ ಈ ವಸ್ತುಗಳನ್ನು ಬಳಸಿ ಅಂದದ ರಂಗೋಲಿ ರಚಿಸಿ

Rangoli Tips: ನೀವು ಅಂದದ ರಂಗೋಲಿಗಳನ್ನು ಮನೆ ಮುಂದೆ ಬಿಡಿಸಬೇಕು ಎಂದುಕೊಂಡಿರುತ್ತೀರ. ಆದರೆ ನಿಮಗೆ ಅದು ಕಷ್ಟದ ಕೆಲಸ ಎಂದು ಅನಿಸಿದರೆ ಈ ರೀತಿ ವಸ್ತುಗಳನ್ನು ಬಳಸಿ ಸುಂದರವಾದ ರಂಗೋಲಿ ರಚಿಸಿ.

ರಂಗೋಲಿ
ರಂಗೋಲಿ

ರಂಗೋಲಿ ಹಾಕುವುದು ಒಂದು ಕಲೆ. ಹಿಂದಿನಿಂದಲೂ ನಮ್ಮ ಸಂಪ್ರದಾಯದಲ್ಲಿ ಮನೆಯ ಬಾಗಿಲ ಮುಂದೆ ರಂಗೋಲಿ ಇಡುವುದನ್ನು ರೂಢಿಸಿಕೊಂಡು ಬರಲಾಗಿದೆ. ಹಬ್ಬದ ದಿನಗಳಲ್ಲಂತೂ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಇರುತ್ತದೆ. ಹೆಂಗಳೆಯರು ತುಂಬಾ ಸಂತೋಷದಿಂದ ರಂಗೋಲಿ ಹಾಕುತ್ತಾರೆ. ಈಗ ಗಣೇಶ ಚತುರ್ತಿ ಹತ್ತಿರ ಬರುತ್ತಿದೆ. ಹಾಗಾದರೆ ಹಬ್ಬದ ದಿನ ಮನೆಯ ಮುಂದೆ ಯಾವ ರೀತಿ ರಂಗೋಲಿ ಹಾಕುವುದು ಎಂದು ಆಲೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಒಂದಿಷ್ಟು ಐಡಿಯಾಗಳು.

ಅಚ್ಚುಗಳನ್ನು ಬಳಸಿ:

ಮನೆಯ ಮುಂದೆ ಇಡಲು ಕೆಲವು ರಂಗೋಲಿ ಅಚ್ಚುಗಳು ಸಿಗುತ್ತವೆ. ಇವು ತುಂಬಾ ಪ್ರಯೋಜನಕಾರಿ. ನೀವು ಆ ಅಚ್ಚುಗಳನ್ನು ಮನೆಯ ಮುಂದೆ ಇಟ್ಟು ಅದರಲ್ಲಿ ಬಣ್ಣವನ್ನು ತುಂಬಬಹುದು. ಅಥವಾ ಹೂವಿನ ಎಸಳುಗಳನ್ನು ಹಾಕಬಹುದು. ಇಲ್ಲವೆಂದರೆ ಅದರಲ್ಲಿ ಬೇರೆ ಬೇರೆ ಬಣ್ಣದ ಧಾನ್ಯಗಳನ್ನು, ಬೆಳೆಕಾಳುಗಳನ್ನು ತುಂಬಬಹುದು. ಆನಂತರ ಅದನ್ನು ಮತ್ತೆ ತೆಗೆದು ಮನೆಯ ಒಳಗಡೆ ಇಟ್ಟುಕೊಳ್ಳಬಹುದು. ಈ ರೀತಿಯ ಅಚ್ಚುಗಳು ಆನ್ಲೈನ್ ನಲ್ಲಿ ಲಭ್ಯವಿದೆ ನೀವು ಕೂಡ ತರಿಸಿಕೊಳ್ಳಬಹುದು.

ರಂಗೋಲಿ ಮ್ಯಾಟ್‌

ಇನ್ನು ರಂಗೋಲಿ ಮ್ಯಾಟ್‌ಗಳು ಇವು ತುಂಬಾ ಪ್ರಯೋಜನಕಾರಿ. ಉಲ್ಲನ್ ಅಥವಾ ಬಟ್ಟೆಯಿಂದ ಮಾಡಿದ ರಂಗೋಲಿಯಂತೆ ಕಾಣುವ ಕೆಲವು ಮ್ಯಾಟ್‌ಗಳು ಮಾರ್ಕೆಟ್‌ನಲ್ಲಿ ಲಭ್ಯವಿದೆ. ನೀವು ಇವುಗಳನ್ನು ಸಹ ತಂದು ಮನೆಯ ಮುಂದೆ ಇಡಬಹುದು. ಇದು ಅಮೆಜಾನ್ ಮತ್ತು ಮಿಶೋ ಇನ್ನಿತರ ಆನ್‌ಲೈನ್‌ ಶಾಪಿಂಗ್‌ ಅಪ್ಲಿಕೇಷನ್‌ಗಳಲ್ಲಿ ಲಭ್ಯವಿದೆ. ಇದರ ದರ 300 ರಿಂದ 400 ರೂಪಾಯಿಗಳಾಗಿರುತ್ತದೆ. ಇದನ್ನು ರಂಗೋಲಿ ಚಾಪೆ ಎಂದರು ಸಹ ಇದನ್ನು ಕರೆಯುತ್ತಾರೆ.

ಮಣಿ ರಂಗೋಲಿ ತಟ್ಟೆ

ಇನ್ನು ಲೋಹ ಹಾಗೂ ಮಣಿಗಳಿಂದ ಮಾಡಿದ ಕೆಲವೊಂದು ರಂಗೋಲಿ ತಟ್ಟೆಗಳು ನಿಮಗೆ ಸಿಗುತ್ತದೆ. ಇದನ್ನು ನೀವು ಎಷ್ಟು ವರ್ಷ ಬೇಕಾದರೂ ಹಾಗೆ ಇಡಬಹುದು. ಹೂವುಗಳು, ಎಲೆಗಳು, ನವಿಲುಗರಿಗಳು, ಕಮಲಗಳು ಹೇಗೆ ವಿವಿಧ ರೀತಿಯ ಸೃಜನಶೀಲ ಕಲೆಗಳಿಂದ ಇವುಗಳನ್ನು ಮಾಡಲಾಗಿದೆ. ಕಾಣಲು ಇವು ತುಂಬಾ ಆಕರ್ಷಕವಾಗಿರುತ್ತದೆ.

ಅಚ್ಚುಗಳು

ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ರಂಗೋಲಿ ಅಚ್ಚುಗಳು. ಈ ರಂಗೋಲಿ ಅಚ್ಚಿನಲ್ಲಿ ಚಿಕ್ಕ ಚಿಕ್ಕ ಚುಕ್ಕೆಗಳಿರುತ್ತದೆ. ಆ ಚುಕ್ಕೆಗಳ ಮೂಲಕ ರಂಗೋಲಿ ಪುಡಿ ಉದುರುತ್ತದೆ. ಇದರಿಂದ ಚಂದದ ಆಕಾರ ರೆಡಿ ಆಗುತ್ತದೆ. ಆ ತಟ್ಟೆಗಳ ಮೂಲಕ ಅಚ್ಚೊತ್ತಿದರೆ, ಮನೆಯ ಮುಂದೆ ಯಾವ ಗಾತ್ರದಲ್ಲಿ ಬೇಕಾದರೂ ರಂಗೋಲಿಗಳು ಮೂಡಿಬರುತ್ತವೆ.