ಕನ್ನಡ ಸುದ್ದಿ  /  ಜೀವನಶೈಲಿ  /  Hereditary Diabetes: ತಂದೆ-ತಾಯಿಗೆ ಡಯಾಬಿಟಿಸ್‌ ಇದ್ರೆ ಮಕ್ಕಳಿಗೂ ಬರುತ್ತಾ...ವೈದ್ಯರು ಏನು ಹೇಳ್ತಾರೆ..?

Hereditary Diabetes: ತಂದೆ-ತಾಯಿಗೆ ಡಯಾಬಿಟಿಸ್‌ ಇದ್ರೆ ಮಕ್ಕಳಿಗೂ ಬರುತ್ತಾ...ವೈದ್ಯರು ಏನು ಹೇಳ್ತಾರೆ..?

ನಮ್ಮ ದೇಶದ ಕುಟುಂಬಗಳು ಒಂದೇ ರೀತಿಯ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಹೊಂದಿರುವುದರಿಂದ ಭಾರತದಲ್ಲಿ ಮಧುಮೇಹ ಸಮಸ್ಯೆ ಬಹಳ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಹೆತ್ತವರಿಂದ ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸನ್ನು ಅನುವಂಶಿಕವಾಗಿ ಪಡೆಯದಿದ್ದರೂ ಇನ್ನಿತರ ಹಲವಾರು ಕಾರಣಗಳಿಂದ ಅದು ಉಲ್ಬಣಗೊಳ್ಳಬಹುದು.

ಅನುವಂಶಿಕ ಡಯಾಬಿಟಿಸ್
ಅನುವಂಶಿಕ ಡಯಾಬಿಟಿಸ್ (PC: pixaby)

40 ವರ್ಷ ವಯಸ್ಸು ದಾಟುತ್ತಿದ್ದಂತೆ ಉಲ್ಬಣಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡಾ ಒಂದು. ಯಾರನ್ನು ಕೇಳಿದರೂ ಹೌದು ನನಗೆ ಡಯಾಬಿಟಿಸ್‌ ಇದೆ, ಫುಡ್‌ ಕಂಟ್ರೋಲ್‌ ಮಾಡುತ್ತಿದ್ದೇನೆ, ವಾಕ್‌ ಮಾಡುತ್ತಿದ್ದೇನೆ, ಮಾತ್ರೆ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಆದರೆ ಕುಟುಂಬದಲ್ಲಿ ತಂದೆ-ತಾಯಿಗೆ ಮಧುಮೇಹ ಇದ್ದರೆ ಮಕ್ಕಳಿಗೂ ಅನುವಂಶಿಕವಾಗಿ ಡಯಾಬಿಟಿಸ್‌ ಕಾಡಲಿದ್ಯಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ನಮ್ಮ ದೇಶದ ಕುಟುಂಬಗಳು ಒಂದೇ ರೀತಿಯ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಹೊಂದಿರುವುದರಿಂದ ಭಾರತದಲ್ಲಿ ಮಧುಮೇಹ ಸಮಸ್ಯೆ ಬಹಳ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಹೆತ್ತವರಿಂದ ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸನ್ನು ಅನುವಂಶಿಕವಾಗಿ ಪಡೆಯದಿದ್ದರೂ ಇನ್ನಿತರ ಹಲವಾರು ಕಾರಣಗಳಿಂದ ಅದು ಉಲ್ಬಣಗೊಳ್ಳಬಹುದು. ಕುಟುಂಬದ ಇತಿಹಾಸಕ್ಕೆ ವಿರುದ್ಧವಾಗಿ, ಒಬ್ಬ ವ್ಯಕ್ತಿಯು ಮಧುಮೇಹವನ್ನು ಹೊಂದಿರುವ ಸಾಧ್ಯತೆಯಿದೆ. ಜೀವನಶೈಲಿಯ ಅಂಶಗಳು, ಅಭ್ಯಾಸಗಳು ಮತ್ತು ಬೊಜ್ಜು ಹೊಂದುವ ವ್ಯಕ್ತಿಯ ಪ್ರವೃತ್ತಿಯು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುವುದರಿಂದ ಜೀನ್‌ಗಳ ಪಾತ್ರ ಇಲ್ಲಿ ಹೆಚ್ಚಾಗಿದೆ.

ತಂದೆ-ತಾಯಿ ಇಬ್ಬರಿಗೂ ಮಧುಮೇಹ ಇರುವುದು ಕಂಡು ಬಂದರೆ ಟೈಪ್ 2 ಮಧುಮೇಹ ಬರುವ ಅಪಾಯ ಶೇ.60ರಿಂದ ಶೇ.70ರಷ್ಟಿರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ತಂದೆಗೆ ಮಾತ್ರ ಮಧುಮೇಹ ಇದ್ದರೆ ಮಕ್ಕಳಿಗೆ ಮಧುಮೇಹ ಕಾಡುವ ಅವಕಾಶ ಶೇ.30 ರಷ್ಟು ಇರುತ್ತದೆ. ಆದರೆ ತಾಯಿಗೆ ಇದ್ದರೆ ಮಕ್ಕಳಿಗೆ ಡಯಾಬಿಟಿಸ್‌ ಬರುವ ಅವಕಾಶ ಹೆಚ್ಚು ಎನ್ನಲಾಗಿದೆ. ಮಧುಮೇಹ ರೋಗಿಯೊಂದಿಗಿನ ನಿಕಟ ಸಂಬಂಧ ಹೆಚ್ಚಾದಲ್ಲಿ, ಕುಟುಂಬದಲ್ಲಿ ಮಧುಮೇಹಿಗಳ ಸಂಖ್ಯೆಯು ಹೆಚ್ಚಾದಂತೆ ಮಧುಮೇಹಕ್ಕೆ ಅನುವಂಶಿಕ ಪ್ರವೃತ್ತಿಯು ಹೆಚ್ಚಾಗುತ್ತದೆ. ಅನುವಂಶಿಕ ಅಂಶಗಳು ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಆದರೆ ಅನಾರೋಗ್ಯಕರ ಜೀವನಶೈಲಿಯಿಂದ ಕೂಡಾ ಈ ಸಮಸ್ಯೆ ಕಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಂದು ವೇಳೆ ನಿಮ್ಮ ಮನೆಯಲ್ಲಿ ಹೆತ್ತವರಿಗೆ ಮಧುಮೇಹ ಇದ್ದಲ್ಲಿ, ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಇನ್‌ಸ್ಟಂಟ್‌, ಜಂಕ್‌ ಫುಡ್‌ ಸೇವನೆ, ಸಂಸ್ಕರಿಸಿದ ಆಹಾರವನ್ನು ಸೇವಿಸುವುದು ಕಡಿಮೆ ಮಾಡಿ. ವ್ಯಾಯಾಮ ಮಾಡಿ, ಆದಷ್ಟು ವಾಕಿಂಗ್‌ ಮಾಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಮಧುಮೇಹ ಇದ್ದರೆ ಅದು ಇತರ ಕಾಯಿಲೆಗಳಿಗೆ ಕೂಡಾ ಅನುವು ಮಾಡಿಕೊಡುತ್ತದೆ. ಅದರಲ್ಲೂ ಹೃದಯ ಮತ್ತು ಕಿಡ್ನಿ ಸಮಸ್ಯೆಗಳು ಹೆಚ್ಚು ಎನ್ನಲಾಗಿದೆ. ಮಧುಮೇಹವು 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಆದರೂ ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರ ಸೇವನೆಯಿಂದ 20-30 ವರ್ಷ ವಯಸ್ಸಿನವರಲ್ಲಿಯೂ ಮಧುಮೇಹದ ಸಾಧ್ಯತೆ ಹೆಚ್ಚು. ಆದ್ದರಿಂದ ನಿಮ್ಮ ಹೆತ್ತವರಿಗೆ ಮಧುಮೇಹ ಇದ್ದರೆ ಆರೋಗ್ಯಕರ ಆಹಾರ, ಜೀವನಶೈಲಿಯನ್ನು ಅಳವಡಿಸಿಕೊಂಡಲ್ಲಿ ಟೈಪ್ 2 ಮಧುಮೇಹವನ್ನು ತಡೆಗಟ್ಟಲು ಹಾಗೂ ವಿಳಂಬಗೊಳಿಸಲು ನೆರವಾಗಬಹುದು.

ವಿಭಾಗ