ನಿಮ್ಮ ಲ್ಯಾಪ್‌ಟಾಪ್ ಪದೇ ಪದೇ ಹ್ಯಾಂಗ್ ಆಗ್ತಾ ಇದ್ಯಾ? ಹಾಗಾದ್ರೆ ಈ ಟೆಕ್ನಿಕ್ ಫಾಲೊ ಮಾಡಿನೋಡಿ
ಕಚೇರಿಯಲ್ಲಿ ಕೆಲಸ ಮಾಡುವವರಿಂದ ಹಿಡಿದು ಕಾಲೇಜಿಗೆ ಹೋಗುವ ಮಕ್ಕಳವರೆಗೆ ಈಗ ಎಲ್ಲರಿಗೂ ಲ್ಯಾಪ್‌ಟಾಪ್ ಒಂದು ಅತ್ಯಗತ್ಯ ವಸ್ತುವಾಗಿದೆ. ಎಷ್ಟೊಂದು ಅಸೈನ್‌ಮೆಂಟ್‌ಗಳು, ಪಿಪಿಟಿ ಪ್ರೆಸೆಂಟೇಶನ್ ಹೀಗೆ ಹತ್ತು ಹಲವು ಕೆಲಸಗಳು ಇದರಲ್ಲೇ ಆಗಬೇಕು. ಆದರೆ ಲ್ಯಾಪ್‌ಟ್ಯಾಪ್ ಪದೇ ಪದೇ ಹ್ಯಾಂಗ್ ಆದ್ರೆ ಏನ್ ಮಾಡೋದು ನೋಡಿ.
ತುಂಬಾ ಮುಖ್ಯವಾದ ಸಮಯದಲ್ಲಿ ಲ್ಯಾಪ್‌ಟಾಪ್ ಕೈಕೊಡುವುದು ಜಾಸ್ತಿ. ಇದೇ ರೀತಿ ಮೊಬೈಲ್ ಕೂಡ. ನೀವು ಯಾವುದಾದರೂ ಪ್ರೆಸೆಂಟೇಶನ್ ಕೊಡುತ್ತಿರುವ ಸಂದರ್ಭದಲ್ಲಿ ಹ್ಯಾಂಗ್ ಆದರೆ ನಿಮಗೆ ತುಂಬಾ ಜನರ ಮುಂದೆ ಒಂದು ರೀತಿಯ ಮುಜುಗರ ಉಂಟಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ನೀವು ಆದಷ್ಟಯ ಹೈ ಹ್ಯಾಂಡ್f ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡಲು ಪ್ರಯತ್ನ ಮಾಡುತ್ತೀರಿ. ಆದರೆ ಅದು ಕೂಡ ಕೆಲವು ಬಾರಿ ಇದೇ ರೀತಿ ಆಗುತ್ತದೆ. ಇಂತಹ ಸಂದರ್ಭದಲ್ಲಿ ನೀವೇನು ಮಾಡಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
1) ಪವರ್ ಆಫ್ ಮಾಡಿ: ತುಂಬಾ ಸಮಯದವರೆಗೆ ಇದು ಏನೂ ಮಾಡಲಾಗದ ಸ್ಥಿತಿಯಲ್ಲಿದೆ ಎಂದಾದರೆ ಒಮ್ಮೆ ಪವರ್ ಆಫ್ ಮಾಡಿ. ಹೀಗೆ ಮಾಡಿದಾಗ ಅದು ತನ್ನಿಂದ ತಾನೇ ಬಂದ್ ಆಗಯತ್ತದೆ. ಈ ರೀತಿ ಯಾಕೆ ಮಾಡಬೇಕು ಎಂದರೆ ಕೆಲವೊಮ್ಮೆ ನಿಮ್ಮ ಮೌಸ್ ಕೂಡ ವರ್ಕ್ ಆಗುವುದಿಲ್ಲ. ಇನ್ನು ನೀವು ಕರ್ಸರ್ ಎಲ್ಲಿಟ್ಟರೂ ಅದು ವರ್ಕ್ ಆಗುವುದಿಲ್ಲ. ಬ್ಯಾಕ್ ಬರಲು ಸಾಧ್ಯವಿಲ್ಲ ಎನ್ನುವ ಸಂದರ್ಭ ಬರುತ್ತದೆ. ಆ ರೀತಿ ಆದಾಗ ಕೊನೆಯಲ್ಲಿ ಉಳಿಯುವ ಒಂದೇ ಉಪಾಯ ಎಂದರೆ ಅದು ಇದೇ ಆಗಿರುತ್ತದೆ.
2) ರಿಫ್ರೆಶ್ ಮಾಡಿ: ಇನ್ನು ಪೂರ್ತಿಯಾಗಿ ಬಂದ್ ಮಾಡಿ ಆನ್ ಆದ ನಂತರದಲ್ಲಿ ನೀವು ಕೆಲಸ ಆರಂಭಿಸುವುದಕ್ಕಿಂತಲೂ ಮುನ್ನ ರಿಫ್ರೆಷ್ ಕೊಡಲೇಬೇಕು. ಈ ರೀತಿ ಮಾಡಿದರೆ ಮಾತ್ರ ನಿಮ್ಮ ಲ್ಯಾಪ್‌ಟಾಪ್ ಒಂದು ಸಮಸ್ಥಿತಿಯಲ್ಲಿ ಇರುತ್ತದೆ. ಇಲ್ಲವಾದರೆ ಖಂಡಿತ ಅದು ಮಧ್ಯದಲ್ಲಿ ನಿಮಗೆ ಕೈಕೊಡುತ್ತದೆ. ಈ ಬಗ್ಗೆ ಮೊದಲೇ ಮುಂಜಾಗ್ರತೆವಹಿಸಿಕೊಂಡು ನೀವು ಈ ಕೆಲಸ ಮಾಡಿಕೊಳ್ಳಬೇಕು.
3) Cache ಕ್ಲಿಯರ್ ಮಾಡಿ: ಇದನ್ನು ನೀವು ಕಂಪ್ಯೂಟರ್ ಆನ್ ಮಾಡಿ, ಆ ನಂತರದಲ್ಲಿ ಗೂಗಲ್‌ನಲ್ಲಿ ಏನೇನು ಸರ್ಚ್ ಮಾಡಿದ್ದೀರಾ? ಹಾಗೇ ಎಷ್ಟೊಂದು ವಿಷಯಗಳನ್ನು ಅಥವಾ ಫೋಟೋಗಳನ್ನು, ವಿಡಿಯೋವನ್ನು ಡೌನ್‌ಲೋಡ್ ಮಾಡಿದ್ದೀರಾ ಎಂಬೆಲ್ಲ ಮಾಹಿತಿ ಶೇಕರಣೆ ಆಗಿ ಇದರ ಮೆಮೊರಿ ತುಂಬಿದಂತೆ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಸರ್ಚ್ ತುಂಬಾ ಸ್ಲೋ ಆಗುತ್ತಾ ಬರುತ್ತದೆ. ಯಾವುದೂ ಸ್ಪೀಡ್ ಆಗಿ ಆಗುವುದಿಲ್ಲ. ನಂತರ ಇದನ್ನು ನೀವು ಆನ್‌ಲೈನ್ ಇರುವಾಗಲೇ ಕ್ಲಿಯರ್ ಮಾಡಬೇಕು.
4) ಮೆಮೊರಿ ಟ್ರಾನ್ಸಫರ್ ಮಾಡಿ: ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ತುಂಬಾ ಫೋಟೋ ಅಥವಾ ವಿಡಿಯೋ ತುಂಬಿಕೊಂಡಿದ್ದರೆ. ಅದರ ಮೆಮೊಮಿ ಫುಲ್ ಆಗುತ್ತದೆ. ಆಗ ನೀವು ಏನೇ ಮಾಡಲು ಹೋದರು ಅದರ ವೇಗ ಕಡಿಮೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಯಾವುದನ್ನು ಡಿಲೀಟ್ ಮಾಡಬೇಕು? ಯಾವುದನ್ನು ಬಿಡಬೇಕು ಎಂದೇ ಅರ್ಥ ಆಗುವುದಿಲ್ಲ. ಆಗ ಈ ರೀತಿ ಒಂದರಿಂದ ಇನ್ನೊಂದಕ್ಕೆ ಮೆಮೊರಿ ಟ್ರಾನ್ಸಫರ್ ಮಾಡಿ. ಫೆನ್‌ಡ್ರೈವ್ ಅಥವಾ ಹಾರ್ಡ್‌ಡಿಸ್ಕ್‌ಗೆ ಹಾಕಿಡಿ.
ವಿಭಾಗ