ಧ್ಯಾನದ ವೇಳೆ ನಿಮ್ಮ ಮನಸ್ಸು ಅಲೆದಾಡುತ್ತದೆಯೇ? ಇದನ್ನು ತಡೆಯಲು ಯೋಗ ತಜ್ಞರು ನೀಡಿದ ಸಲಹೆಗಳಿವು..
ಕನ್ನಡ ಸುದ್ದಿ  /  ಜೀವನಶೈಲಿ  /  ಧ್ಯಾನದ ವೇಳೆ ನಿಮ್ಮ ಮನಸ್ಸು ಅಲೆದಾಡುತ್ತದೆಯೇ? ಇದನ್ನು ತಡೆಯಲು ಯೋಗ ತಜ್ಞರು ನೀಡಿದ ಸಲಹೆಗಳಿವು..

ಧ್ಯಾನದ ವೇಳೆ ನಿಮ್ಮ ಮನಸ್ಸು ಅಲೆದಾಡುತ್ತದೆಯೇ? ಇದನ್ನು ತಡೆಯಲು ಯೋಗ ತಜ್ಞರು ನೀಡಿದ ಸಲಹೆಗಳಿವು..

ಧ್ಯಾನದ ವೇಳೆ ಅಲೆರ್ಟ್​ ಆಗಿರಲು, ಸ್ವಯಂ ಜಾಗೃತರಾಗಿರಲು ಮತ್ತು ಸಂವೇದನಾಶೀಲರಾಗಲು ನಾವು ನಮ್ಮನ್ನು ನಿರ್ಮಿಸಿಕೊಳ್ಳಬೇಕು. ಧ್ಯಾನದ ಉದ್ದೇಶಕ್ಕಾಗಿ ನಾವು ಶಾಂತವಾದ ಸ್ಥಳವನ್ನು ಕಂಡುಹಿಡಿಯಬೇಕು ಎನ್ನುತ್ತಾರೆ ತಜ್ಞರು. ಧ್ಯಾನದ ಸಮಯದಲ್ಲಿ ಮನಸ್ಸು ಅಲೆದಾಡುವುದನ್ನು ತಡೆಯಲು ಯೋಗ ತಜ್ಞರು ಉಪಯುಕ್ತ ಸಲಹೆಗಳನ್ನು ಪಟ್ಟಿಮಾಡಿದ್ದಾರೆ. ಅವು ಇಲ್ಲಿವೆ ನೋಡಿ..

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ

ಧ್ಯಾನದ ಅಭ್ಯಾಸವು ಭಾವನಾತ್ಮಕ ಯೋಗಕ್ಷೇಮ ಮತ್ತು ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪ್ರಯೋಜನಗಳನ್ನು ಹೊಂದಿದೆ ಎಂದು ಸಂಶೋಧನೆಗಳು ತೋರಿಸಿದೆ. ಖಿನ್ನತೆ, ಆತಂಕ, ಹೃದ್ರೋಗ, ಅಧಿಕ ರಕ್ತದೊತ್ತಡ, ನಿದ್ರೆಯ ಸಮಸ್ಯೆಗಳನ್ನು ಧ್ಯಾನವು ದೂರ ಮಾಡುತ್ತದೆ.

ಧ್ಯಾನದ ಸಮಯದಲ್ಲಿ ಮನಸ್ಸು ಅಲೆದಾಡುವುದು ತುಂಬಾ ಸಾಮಾನ್ಯವಾಗಿದೆ. ಈ ವೇಳೆ ಉದ್ದೇಶಪೂರ್ವಕವಲ್ಲದ ಮತ್ತು ಸಂಬಂಧವಿಲ್ಲದ ಸ್ವಯಂಪ್ರೇರಿತ ಗಮನವು ಸಂಭವಿಸುತ್ತದೆ ಮತ್ತು ಮನಸ್ಸು ವಿವಿಧ ಆಲೋಚನೆಗಳಲ್ಲಿ ಮುಳುಗುತ್ತದೆ. ಇದು ಧ್ಯಾನದಿಂದ ಆರೋಗ್ಯಕರ ಶಾಂತ ಮತ್ತು ಸ್ಥಿರವಾದ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಕಾರ್ಯವನ್ನು ಅಡ್ಡಿಪಡಿಸುತ್ತದೆ.

ನಿಮ್ಮ ಮನಸ್ಸು ಅಲೆದಾಡಿದಾಗಲೆಲ್ಲಾ ನಿಮ್ಮ ಗಮನವನ್ನು ಧ್ಯಾನದ ಕಡೆಗೆ ಎಳೆದೊಯ್ಯಲು ಪ್ರಯತ್ನಿಸುತ್ತಿದ್ದರೆ ಚಿಂತಿಸಬೇಡಿ. ನೀವು ಹೆಚ್ಚು ಜಾಗರೂಕರಾಗಿ, ಸ್ವಯಂ-ಅರಿವು, ಸಂವೇದನಾಶೀಲರಾಗಿರುವ ಮನಸ್ಸಿನ ಅಲೆದಾಟವನ್ನು ನಿಭಾಯಿಸಲು ಮತ್ತು ಪ್ರಜ್ಞೆಯ ಈ ವಿಕಾಸವನ್ನು ಸಾಧಿಸಲು ಯೋಗ ತಜ್ಞರಿಂದ ಸಲಹೆಗಳನ್ನು ನಾವು ನಿಮಗೆ ನೀಡಿದ್ದೇವೆ.

ಧ್ಯಾನದ ವೇಳೆ ಅಲೆರ್ಟ್​ ಆಗಿರಲು, ಸ್ವಯಂ ಜಾಗೃತರಾಗಿರಲು ಮತ್ತು ಸಂವೇದನಾಶೀಲರಾಗಲು ನಾವು ನಮ್ಮನ್ನು ನಿರ್ಮಿಸಿಕೊಳ್ಳಬೇಕು. ಧ್ಯಾನದ ಉದ್ದೇಶಕ್ಕಾಗಿ ನಾವು ಶಾಂತವಾದ ಸ್ಥಳವನ್ನು ಕಂಡುಹಿಡಿಯಬೇಕು ಎನ್ನುತ್ತಾರೆ ತಜ್ಞರು. ಧ್ಯಾನದ ಸಮಯದಲ್ಲಿ ಮನಸ್ಸು ಅಲೆದಾಡುವುದನ್ನು ತಡೆಯಲು ಯೋಗ ತಜ್ಞರು ಉಪಯುಕ್ತ ಸಲಹೆಗಳನ್ನು ಪಟ್ಟಿಮಾಡಿದ್ದಾರೆ. ಅವು ಈ ಕೆಳಕಂಡಂತಿವೆ..

1. ಉತ್ತಮ ಸ್ಥಳದ ಆಯ್ಕೆ

ಧ್ಯಾನದಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ಅಡೆತಡೆಯಿಲ್ಲದೆ ಧ್ಯಾನ ಮಾಡಲು ಸೂಕ್ತವಾದ ಪರಿಪೂರ್ಣ, ಅನುಕೂಲಕರ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ ನೀವು ಉತ್ತಮ ಹಾಗೂ ಶಾಂತ ಸ್ಥಳವನ್ನು ಆಯ್ದುಕೊಳ್ಳಬೇಕು.

2. ಉದ್ದೇಶ ಮತ್ತು ಕ್ರಿಯೆಯೊಂದಿಗೆ ಆಲೋಚನೆಗಳ ಜೋಡಣೆ

ನೀವು ಮಾಡಲು ಬಯಸುವ ಕ್ರಿಯೆಯೊಂದಿಗೆ ನಿಮ್ಮ ಆಲೋಚನೆಗಳು ಹೊಂದಾಣಿಕೆಯಲ್ಲಿರುವಂತೆ ಮಾಡಿಕೊಳ್ಳಬೇಕು. ನೀವು ಧ್ಯಾನಕ್ಕೆ ಕುಳಿತುಕೊಂಡಿದ್ದೀರ, ಆದರೆ ಹೊರಗೆ ಹೋಗಿ ಏನನ್ನಾದರೂ ತಿನ್ನುವ ಅಥವಾ ಪಾರ್ಟಿಯಲ್ಲಿರಲು ಬಯಸುವ ಬಯಕೆಯಿಂದ ನೀವು ಗೊಂದಲವನ್ನು ಅನುಭವಿಸಲು ಪ್ರಾರಂಭಿಸಿದರೆ ನಿಮ್ಮ ಪ್ರಯತ್ನಗಳು ವ್ಯರ್ಥವಾಗುತ್ತವೆ.

3. ಮೊಬೈಲ್​​ನಿಂದ ದೂರವಿರಿ

ಮೊಬೈಲ್​ಗಳ ಸದ್ದು ಕೇಳದಂತೆ ಮಾಡಿ. ಧ್ಯಾನದ ವೇಳೆ ಮೊಬೈಲ್​ ದೂರವಿರಿಸಿ. ನಿಮಗೆ ಬೇಕಾದರೆ ಮೊಬೈಲ್​ ಸ್ವಲ್ಪ ದೂರದಲ್ಲಿ ಇಟ್ಟು ಅಲಾರಂ ಸೆಟ್​ ಮಾಡಿಕೊಳ್ಳಿ.

4. ನಿಮ್ಮ ಉಸಿರಾಟವನ್ನು ಎಣಿಸಿ

ನೀವು ಧ್ಯಾನದ ವೇಳೆ ಮಾಡುವ ದೀರ್ಘ ಉಸಿರಾಟವನ್ನು ಕೌಂಟ್​ ಮಾಡಿ. ಇದರಿಂದ ಮನಸ್ಸು ಬೇರೆಡೆ ಜಾರುವುದಿಲ್ಲ.

5. ಮಾರ್ಗದರ್ಶನ ಮೇಲೆ ಧ್ಯಾನ ಮಾಡುವುದು

ಧ್ಯಾನ ಮಾಡಲು ಉತ್ತಮ ಮಾರ್ಗವೆಂದರೆ ಯಾರದ್ದಾದರೂ ಮಾರ್ಗದರ್ಶನವನ್ನು (ರೆಕಾರ್ಡ್​ ಮಾಡಿರುವ) ಕೇಳುತ್ತಾ ಧ್ಯಾನ ಮಾಡುವುದು. ಆಗ ನಿಮ್ಮ ಆಲೋಚನೆಗಳು ಓಡಲು ಕಡಿಮೆ ಸ್ಥಳಾವಕಾಶವಿರುತ್ತದೆ. ಹೀಗಾಗಿ ಮಾರ್ಗದರ್ಶಿ ಧ್ಯಾನ ಸಲಹೆಗಳಿಗಾಗಿ ವಿಭಿನ್ನ ಧ್ಯಾನ ಪಾಡ್‌ಕಾಸ್ಟ್‌ಗಳನ್ನು ಪ್ರಯತ್ನಿಸಿ

6. ನಿಮ್ಮ ಆಲೋಚನೆಗಳನ್ನು ದೃಶ್ಯೀಕರಿಸುವುದು

ಮೌನವಾದ ಧ್ಯಾನವನ್ನು ಅಭ್ಯಾಸ ಮಾಡುವಾಗ, ಆಲೋಚನೆಗಳನ್ನು ದೂರವಿಡಲು ಪ್ರಯತ್ನಿಸುವ ಬದಲು, ಅವುಗಳನ್ನು ಸ್ವಾಗತಿಸಿ. ಆದರೆ ಆಗ ನೀವು ಆಲೋಚನೆಗಳನ್ನು ದೃಶ್ಯೀಕರಿಸುತ್ತಾ ಹೋಗಬೇಕು.

7. ನಿಮ್ಮ ಆಲೋಚನೆಗಳನ್ನು ಬರೆಯುವುದು

ಹೌದು,, ನಿಮ್ಮ ತಲೆಯಲ್ಲಿ ಬರುವ ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಬರೆದುಕೊಳ್ಳುತ್ತಾ ಹೋಗಿ. ಆಗ ಕೂಡ ನಿಮ್ಮ ಗಮನ ಬೇರೆಡೆ ಹರಿಯುವುದಿಲ್ಲ.

Whats_app_banner