ಹುಡುಗಿಯರ ಹತ್ತಿರ ಹೇಗೆ ಮಾತು ಆರಂಭಿಸಬೇಕು ಎಂದು ತಿಳಿತಾ ಇಲ್ವಾ? ಚಿಂತೆ ಬೇಡ ಈ ಕ್ರಮವನ್ನು ಅನುಸರಿಸಿ
ನೀವು ತುಂಬಾ ದಿನದಿಂದ ಒಂದು ಹುಡುಗಿ ಜೊತೆ ಮಾತಾಡ್ಬೇಕು ಅಂತ ಕಾಯ್ತಾ ಇದೀರಾ? ಆದ್ರೆ ಹೇಗೆ ಮಾತು ಆರಂಭ ಮಾಡ್ಬೇಕು ಅಂತಾನೇ ಗೊತ್ತಾಗದೇ ಸುಮ್ಮನಾಗಿದ್ದೀರಾ? ಹಾಗಾದ್ರೆ ನಾವಿಲ್ಲಿ ಕೆಲವು ಟಿಪ್ಸ್ ನೀಡಿದ್ದೇವೆ ಗಮನಿಸಿ.
ಹಲವರಿಗೆ ತಾವು ಹುಡುಗಿಯರ ಹತ್ತಿರ ಮಾತನಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಯಾವ ರೀತಿಯಲ್ಲಿ ಮಾತನ್ನು ಆರಂಭಿಸಬೇಕು ಎಂದು ಅವರಿಗೆ ಅರ್ಥವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ನಾವೆಲ್ಲಿ ತಿಳಿಸಿದ್ದೇವೆ. ನೀವು ಹುಡುಗಿಯ ಬಳಿ ಹೇಗೆ ಮಾತನ್ನು ಆರಂಭಿಸಬೇಕು ಎಂದು ಆಲೋಚನೆ ಮಾಡುತ್ತಿದ್ದರೆ ಇದನ್ನು ಸಂಪೂರ್ಣವಾಗಿ ಓದಿ. ಮೊದಲಿಗೆ ನೀವು ನಿಮ್ಮ ಪರಿಚಯ ಮಾಡಿಕೊಳ್ಳಿ. ನಿಮ್ಮ ಹೆಸರು, ಊರು ಹಾಗೂ ಈಗ ಏನು ಮಾಡುತ್ತಿದ್ದೀರಿ ಎಂಬುದನ್ನ ಹೇಳಿ. ಆನಂತರದಲ್ಲಿ ಅವರಿಗೆ ನೀವು ಪ್ರಶ್ನೆ ಕೇಳಿ. ನೀವು ಎಲ್ಲಿಯವರು ಯಾವ ಊರು ಎಂಬಿತ್ಯಾದಿ ಅವರ ಮಾಹಿತಿಯನ್ನು ಕೇಳಿ.
ಅಭಿಪ್ರಾಯ ಕೇಳಿ
ಮಾತನ್ನು ಆರಂಭಿಸಿ ಆಮೇಲೆ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಅದರ ಬಗ್ಗೆ ಅಭಿಪ್ರಾಯವನ್ನು ಅವರಲ್ಲಿ ಕೇಳಿ. ಅಂದರೆ ಹಾಡು ನೃತ್ಯ ಹವ್ಯಾಸ ಇವುಗಳ ಬಗ್ಗೆ ಅವರ ಹತ್ತಿರ ಮಾತನಾಡಿ. ನಿಮಗೆ ಇಷ್ಟವಾದ ವಿಷಯ ಅವರಿಗೂ ಇಷ್ಟವಾಗುತ್ತಾ ಎಂಬುದನ್ನ ಖಾತರಿಪಡಿಸಿಕೊಳ್ಳಿ. ಹಾಗೆ ಅವರಿಗೆ ಏನು ಇಷ್ಟ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಹೀಗೆ ಪರಸ್ಪರ ಒಪೀನಿಯನ್ ಕೇಳುವುದರಿಂದ ನಿಮ್ಮ ಮಾತು ಮುಂದುವರಿಯುತ್ತದೆ.
ಜಾಸ್ತಿ ತಮಾಷೆ ಬೇಡ
ನೀವು ಅವರಿಗೆ ಸ್ವಲ್ಪ ಕ್ಲೋಸ್ ಆಗಿದ್ದೀರಿ ಎಂದುಕೊಳ್ಳಿ. ಆಗ ಕೆಲವು ತಮಾಷೆಯ ಮಾತುಗಳನ್ನು ಆಡಿ. ಇನ್ನು ಅವರು ಹೆಚ್ಚಿಗೆ ಮಾತನಾಡುವವರಾಗಿದ್ದರೆ ಯಾವ ಮಾತನ್ನು ಆಡುತ್ತಾರೆ? ಎಂಬುದನ್ನ ಗಮನ ಕೊಟ್ಟು ಆಲಿಸಿ. ಆ ವಿಷಯಕ್ಕೆ ನಿಮ್ಮದೇನಾದರೂ ಸೇರ್ಪಡೆ ಇದ್ದರೆ ಮಧ್ಯ ಮಾತನಾಡಿ. ಇನ್ನು ಹಳೇ ವಿಚಾರಗಳನ್ನ ಕೆದುಕಲು ಹೋಗಬೇಡಿ. ನೀವು ಮೊದಲು ಏನಾಗಿದ್ರಿ? ಏನು ಮಾಡ್ತಿದ್ರಿ ಇತರದ ವಿಚಾರಗಳನ್ನ ಮಾತನಾಡುವುದು ಬೇಡ. ಅವರಿಗೆ ಅದು ಇಷ್ಟ ಆಗದೆ ಇರಬಹುದು.
ಈಗ ಪ್ರಸ್ತುತ ಏನಿದೆಯೋ ಅದರ ಬಗ್ಗೆ ಮಾತ್ರ ಮಾತನಾಡಿ. ಹಾಗೆ ನಿಮ್ಮಿಷ್ಟದ ಬಣ್ಣ, ನಿಮ್ಮಿಷ್ಟದ ಊಟ ಎಂದೆಲ್ಲ ಹಳೆಯ ಕಾಲದವರಂತೆ ಪ್ರಶ್ನೆ ಮಾಡಬೇಡಿ. ಅದೆಲ್ಲ ಈಗಿನ ಹುಡುಗಿಯರಿಗೆ ಇಷ್ಟ ಆಗುವುದಿಲ್ಲ. ಇನ್ನೂ ಕೆಲವರಿಗೆ ಇಂಥ ವಿಚಾರಗಳೇ ಈಗಲೂ ಇಷ್ಟವಾಗುತ್ತದೆ. ಆ ಕಾರಣದಿಂದ ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ. ಅವರಿಗೆ ಸಾಕು ಪ್ರಾಣಿ ಇಷ್ಟವಿದೆಯೇ ಎಂದು ಕೇಳಿ ಇಷ್ಟವಿದ್ದರೆ ಆ ವಿಚಾರವಾಗಿ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳಿ.
ನೀವು ತುಂಬಾ ದಿನದಿಂದ ಒಂದು ಹುಡುಗಿ ಜೊತೆ ಮಾತಾಡ್ಬೇಕು ಅಂತ ಕಾಯ್ತಾ ಇದೀರಾ? ಆದ್ರೆ ಹೇಗೆ ಮಾತು ಆರಂಭ ಮಾಡ್ಬೇಕು ಅಂತಾನೇ ಗೊತ್ತಾಗದೇ ಸುಮ್ಮನಾಗಿದ್ದೀರಾ? ಹಾಗಾದ್ರೆ ನಾವಿಲ್ಲಿ ನೀಡಿದ ಟಿಪ್ಸ್ ಫಾಲೋ ಮಾಡಿ ಈಗಲೇ ಮಾತನಾಡಲು ಆರಂಭ ಮಾಡಿ.
ವಿಭಾಗ