ಈ ಬಾರಿ ಚೌತಿಗೆ ಚಕ್ಕುಲಿ ಮಾಡೋದು ಹೇಗಪ್ಪ ಎಂಬ ಯೋಚನೆ ಬೇಡ; ತುಂಬಾ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಬಾರಿ ಚೌತಿಗೆ ಚಕ್ಕುಲಿ ಮಾಡೋದು ಹೇಗಪ್ಪ ಎಂಬ ಯೋಚನೆ ಬೇಡ; ತುಂಬಾ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ

ಈ ಬಾರಿ ಚೌತಿಗೆ ಚಕ್ಕುಲಿ ಮಾಡೋದು ಹೇಗಪ್ಪ ಎಂಬ ಯೋಚನೆ ಬೇಡ; ತುಂಬಾ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ

ಈ ಬಾರಿ ಚೌತಿಗೆ ಚಕ್ಕುಲಿ ಮಾಡೋದು ಹೇಗಪ್ಪ ಎಂಬ ಯೋಚನೆ ನಿಮ್ಮಲ್ಲಿದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾವು ನಿಮಗೆ ಇಲ್ಲಿ ತುಂಬಾ ಸುಲಭವಾಗಿ ಚಕ್ಕುಲಿ ಮಾಡುವುದು ಹೇಗೆ ಎಂಬ ರೆಸಿಪಿಯನ್ನು ನೀಡಿದ್ದೇವೆ ಗಮನಿಸಿ.

ಚಕ್ಕುಲಿ
ಚಕ್ಕುಲಿ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಚೌತಿಗೆ ನೈವೇದ್ಯಕ್ಕೆಂದು ಚಕ್ಕುಲಿ ಮಾಡೇ ಮಾಡುತ್ತಾರೆ. ಆದರೆ ನೀವು ಈ ಬಾರಿ ಹೊಸದಾಗಿ ಚಕ್ಕುಲಿ ಮಾಡಲು ಟ್ರೈ ಮಾಡುವವರಾಗಿದ್ದರೆ ಈ ಸರಳವಾದ ರೆಸಿಪಿ ನಿಮ್ಮ ಸಹಾಯಕ್ಕೆ ಬರುತ್ತದೆ. ಇದನ್ನು ಮಾಡಲು ಬೇಕಾಗುವ ಕೆಲವು ಸಾಮಗ್ರಿಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡಿದ್ದೇವೆ. ಮೊದಲಿಗೆ ನೀವು ಅಕ್ಕಿ ಹಿಟ್ಟು ಹಾಗೂ ಜೋಳದ ಹಿಟ್ಟನ್ನು ಮುಖ್ಯವಾಗಿ ತೆಗೆದಿಟ್ಟುಕೊಳ್ಳಬೇಕಾಗುತ್ತದೆ.

ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು
ಜೋಳದ ಹಿಟ್ಟು
ಇಂಗು
ಖಾರದ ಪುಡಿ
ಅರಶಿನ ಪುಡಿ
ಬೆಣ್ಣೆ
ಅವಲಕ್ಕಿ ಪೌಡರ್
ಉಪ್ಪು
ಜೀರಿಗೆ
ಬಿಳಿ ಎಳ್ಳು

ಈ ಎಲ್ಲ ಸಾಮಗ್ರಿಗಳನ್ನು ಮೊದಲು ಒಂದು ಕಡೆ ಜೋಡಿಸಿಕೊಳ್ಳಿ. ಆ ನಂತರದಲ್ಲಿ ಈ ವಿಧಾನವನ್ನು ಪಾಲಿಸಿ

ಮಾಡುವ ವಿಧಾನ
ನೀವು ಮೊದಲನೇಯದಾಗಿ ಇಲ್ಲಿ ಹೇಳಲಾದ ಎಲ್ಲಾ ಹಿಟ್ಟುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇಲ್ಲವಾದರೆ ರೆಡಿಮೇಡ್‌ ಚಕ್ಕುಲಿ ಹಿಟ್ಟು ನಿಮಗೆ ಸಿಗುತ್ತದೆ ಅದನ್ನೇ ತರಿಸಿಕೊಳ್ಳಿ. ನಂತರ ಅದಕ್ಕೆ ಮೇಲೆ ತಿಳಿಸಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿ ನಂತರ ಒಂದಷ್ಟು ಬೆಣ್ಣೆಯನ್ನು ಹಾಕಿ ಆ ಹಿಟ್ಟನ್ನು ಗಟ್ಟಿಯಾಗಿ ಮಿಕ್ಸ್‌ ಮಾಡಿಕೊಳ್ಳಿ. ಮೊದಲಿಗೆ ನೀರು ಹಾಕಬೇಡಿ. ಆ ನಂತರ ಬೆಣ್ಣೆ ಚೆನ್ನಾಗಿ ಮಿಕ್ಸ್‌ ಆದಮೇಲೆ ನೀವು ಅದಕ್ಕೆ ನೀರು ಹಾಕಿ ಮಿಕ್ಸ್‌ ಮಾಡಿ ಅದನ್ನು ಚೆನ್ನಾಗಿ ನಾದಿ. ಆ ನಾದಿದ ಮಿಶ್ರಣವನ್ನು ಚಕ್ಕುಲಿ ಮಾಡುವ ಸಾಧನದ ಒಳಗಡೆ ಹಾಕಿ ಒತ್ತಿ.

ಆಗ ಚಕ್ಕುಲಿ ರೆಡಿಯಾಗುತ್ತದೆ. ಅದನ್ನು ಗೋಲಾಕಾರದಲ್ಲಿ ಸುತ್ತಿಕೊಳ್ಳಿ. ಡೈರೆಕ್ಟ್‌ ಎಣ್ಣೆಗೆ ಇದನ್ನು ಬಿಡಬೇಕು ಎಂದೇನೂ ಇಲ್ಲ. ನೀವು ಮೊದಲು ಯಾವುದಾದರೂ ಬಟ್ಟೆಯ ಮೇಲೆ ಹಾಕಿಕೊಂಡು ಆ ನಂತರದಲ್ಲಿ ಅದನ್ನು ಎಣ್ಣೆಗೆ ಹಾಕಿದರೂ ತೊಂದರೆ ಇಲ್ಲ. ನಾವು ಇಲ್ಲಿ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ನೀವು ಚಕ್ಕುಲಿ ಮಾಡಿದರೆ ಗರಿಗರಿಯಾದ ಚಕ್ಕುಲಿ ರೆಡಿಯಾಗುತ್ತದೆ.