ರುಮಟಾಯ್ಡ್ ಸಂಧಿವಾತವು ಹೃದಯ ಸಮಸ್ಯೆಯನ್ನು ಸೂಚಿಸುತ್ತದೆಯೇ? ಇದನ್ನು ತಡೆಗಟ್ಟುವುದು ಹೇಗೆ- ಡಾ. ರವಿಚಂದ್ರ ಕೇಳ್ಕರ್ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ರುಮಟಾಯ್ಡ್ ಸಂಧಿವಾತವು ಹೃದಯ ಸಮಸ್ಯೆಯನ್ನು ಸೂಚಿಸುತ್ತದೆಯೇ? ಇದನ್ನು ತಡೆಗಟ್ಟುವುದು ಹೇಗೆ- ಡಾ. ರವಿಚಂದ್ರ ಕೇಳ್ಕರ್ ಬರಹ

ರುಮಟಾಯ್ಡ್ ಸಂಧಿವಾತವು ಹೃದಯ ಸಮಸ್ಯೆಯನ್ನು ಸೂಚಿಸುತ್ತದೆಯೇ? ಇದನ್ನು ತಡೆಗಟ್ಟುವುದು ಹೇಗೆ- ಡಾ. ರವಿಚಂದ್ರ ಕೇಳ್ಕರ್ ಬರಹ

ರುಮಟಾಯ್ಡ್ಸಂಧಿವಾತವು ದೀರ್ಘಕಾಲದ ಉರಿಯೂತದ ಕಾಯಿಲೆಯಾಗಿದ್ದು ಅದು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಒರ್ಥೋಪೆಡಿಕ್ ಸರ್ಜನ್ ಡಾ.ರವಿಚಂದ್ರ ಕೇಳ್ಕರ್ ಈ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ರುಮಟಾಯ್ಡ್ ಸಂಧಿವಾತವು ಹೃದಯ ಸಮಸ್ಯೆಯನ್ನು ಸೂಚಿಸುತ್ತದೆಯೇ? ಡಾ. ರವಿಚಂದ್ರ ಕೇಳ್ಕರ್ ಬರಹ
ರುಮಟಾಯ್ಡ್ ಸಂಧಿವಾತವು ಹೃದಯ ಸಮಸ್ಯೆಯನ್ನು ಸೂಚಿಸುತ್ತದೆಯೇ? ಡಾ. ರವಿಚಂದ್ರ ಕೇಳ್ಕರ್ ಬರಹ

ರುಮಟಾಯ್ಡ್ ಸಂಧಿವಾತವು ದೀರ್ಘಕಾಲದ ಉರಿಯೂತದ ಕಾಯಿಲೆಯಾಗಿದ್ದು ಅದು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ದೇಹದ ಇತರ ಭಾಗದ ಮೇಲೂ ಇವು ಪರಿಣಾಮ ಬೀರುತ್ತದೆ. ಕಣ್ಣುಗಳ ಮೇಲೂ ರುಮಟಾಯ್ಡ್ ಸಂಧಿವಾತ ಪರಿಣಾಮ ಬೀರುತ್ತದೆ. ಈ ಬಗ್ಗೆ ಬೆಂಗಳೂರಿನ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಒರ್ಥೋಪೆಡಿಕ್ ಸರ್ಜನ್ ಡಾ. ರವಿಚಂದ್ರ ಕೇಳ್ಕರ್ ಮಾಹಿತಿ ನೀಡಿದ್ದಾರೆ. ಮುಂದಿರುವುದು ವೈದ್ಯ ರವಿಚಂದ್ರ ಅವರ ಬರಹ.

ದೀರ್ಘಕಾಲೀನ ಉರಿಯೂತ, ಸಾಮಾನ್ಯ ಅಪಾಯಕಾರಿ ಅಂಶಗಳು ಮತ್ತು ರುಮಟಾಯ್ಡ್ ಸಂಧಿವಾತ ಔಷಧಿಗಳ ಪರಿಣಾಮಗಳಿಂದಾಗಿ ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ರುಮಟಾಯ್ಡ್ ಸಂಧಿವಾತ ಇರುವ ಜನರು ಹೃದ್ರೋಗ ಮತ್ತು ಹೃದಯ ವೈಫಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ಅಪಾಯವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ.

ರುಮಟಾಯ್ಡ್ ಸಂಧಿವಾತ ಮತ್ತು ಹೃದ್ರೋಗದ ನಡುವಿನ ಸಂಪರ್ಕ

  • ಊತ: ರುಮಟಾಯ್ಡ್ ಸಂಧಿವಾತ ಇರುವ ಜನರಲ್ಲಿ ದೀರ್ಘಕಾಲದ ಊತವು ರಕ್ತಪರಿಚಲನಾ ವ್ಯವಸ್ಥೆಗೆ ಹಾನಿಯನ್ನುಂಟು ಮಾಡಬಹುದು, ಇದು ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದು ಅಪಧಮನಿಗಳನ್ನು ಕಿರಿದಾಗಿಸುತ್ತದೆ ಮತ್ತು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಆ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ರುಮಟಾಯ್ಡ್ ಸಂಧಿವಾತದಲ್ಲಿ ಕೀಲುಗಳಿಗೆ ಹಾನಿ ಮಾಡುವ ಸೈಟೊಕಿನ್‌ಗಳಂತಹ ಊತ-ಪ್ರಚೋದಕ ಅಂಶಗಳು ರಕ್ತನಾಳಗಳನ್ನು ಹಾನಿಗೊಳಿಸುತ್ತವೆ ಮತ್ತು ಹೃದಯ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
  • ಇತರ ಅಪಾಯಕಾರಿ ಅಂಶಗಳು: ರುಮಟಾಯ್ಡ್ ಸಂಧಿವಾತ ಮತ್ತು ಹೃದ್ರೋಗಗಳು ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಧೂಮಪಾನದಂತಹ ಸಾಮಾನ್ಯ ಅಪಾಯಕಾರಿ ಅಂಶಗಳನ್ನು ಹಂಚಿಕೊಳ್ಳುತ್ತವೆ. ರುಮಟಾಯ್ಡ್ ಸಂಧಿವಾತ ಇರುವ ಜನರು ಕಡಿಮೆ ಹಿಗ್ಗುವಿಕೆ ಇರುವ ಅಪಧಮನಿಗಳನ್ನು ಹೊಂದಿರಬಹುದು, ಇದರಿಂದಾಗಿ ರಕ್ತದೊತ್ತಡದ ಅಪಾಯವು ಹೆಚ್ಚಾಗಬಹುದು.
  • ಹೃದಯ ಸಂಬಂಧಿತ ಕಾಯಿಲೆಗಳು: ರುಮಟಾಯ್ಡ್ ಸಂಧಿವಾತ ಪರಿಧಮನಿ ಕಾಯಿಲೆಗೆ ಕಾರಣವಾಗಬಹುದು. ಈ ಸ್ಥಿತಿಯಲ್ಲಿ ಅಪಧಮನಿಗಳು ಮುಚ್ಚಿಹೋಗಿ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ಹೃದಯ ವೈಫಲ್ಯ, ಪೆರಿಕಾರ್ಡಿಟಿಸ್ ಮತ್ತು ಮಯೋಕಾರ್ಡಿಟಿಸ್‌ಗೆ ಸಹ ಸಂಬಂಧಿಸಿದೆ. ರುಮಟಾಯ್ಡ್ ಸಂಧಿವಾತ ರೋಗಿಗಳು ಪರಿಧಮನಿ ಕಾಯಿಲೆಯನ್ನು ಪಡೆಯುವ ಅಪಾಯವು 1.5–2.0 ಪಟ್ಟು ಹೆಚ್ಚಿದೆ.

ಇದನ್ನೂ ಓದಿ: ಮೆದುಳಿನ ಜೀವಕೋಶಗಳ ಅಸಹಜ ಚಟುವಟಿಕೆಯಿಂದ ಉಂಟಾಗುತ್ತೆ ಅಪಸ್ಮಾರ; ಡಾ ಕಿಶೋರ್ ಕೆ ವಿ ಬರಹ

ರುಮಟಾಯ್ಡ್ ಸಂಧಿವಾತ ಇರುವ ಮಹಿಳೆಯರು ಏನೆಲ್ಲಾ ತಿಳಿದುಕೊಳ್ಳಬೇಕು?

ರುಮಟಾಯ್ಡ್ ಸಂಧಿವಾತ ಇರುವ ಮಹಿಳೆಯರಿಗೆ ಹೃದಯ ಕಾಯಿಲೆಯ ಅಪಾಯ ಹೆಚ್ಚು, ಏಕೆಂದರೆ ರುಮಟಾಯ್ಡ್ ಸಂಧಿವಾತ ಮಧುಮೇಹದಂತೆಯೇ, ಹೃದಯಕ್ಕೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಸಂಭವಿಸುವ ಹೃದಯ ಕಾಯಿಲೆಗೆ ಸ್ವತಂತ್ರ ಅಪಾಯಕಾರಿ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ರುಮಟಾಯ್ಡ್ ಸಂಧಿವಾತ ಇರುವ ಅಥವಾ ಇಲ್ಲದ ಮಹಿಳೆಯರಿಗೆ ಹೃದಯರಕ್ತನಾಳದ ಕಾಯಿಲೆಯನ್ನು ತಡೆಗಟ್ಟುವ ತಂತ್ರಗಳು ಒಂದೇ ಆಗಿರುತ್ತವೆ.

ತಡೆಗಟ್ಟುವಿಕೆ

  • ರುಮಟಾಯ್ಡ್ ಸಂಧಿವಾತ ನಿರ್ವಹಿಸುವುದು: ರುಮಟಾಯ್ಡ್ ಸಂಧಿವಾತವನ್ನು ನಿರ್ವಹಿಸಲು ಮತ್ತು ಚಿಕಿತ್ಸೆ ನೀಡಲು ನಿಮ್ಮ ವೈದ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ. ನಿಮ್ಮ ರೋಗಲಕ್ಷಣಗಳ ಮೇಲೆ ನಿಗಾ ಇರಿಸಿ ಮತ್ತು ರುಮಟಾಯ್ಡ್ ಸಂಧಿವಾತ ಹದಗೆಟ್ಟರೆ ಸಹಾಯ ಪಡೆಯಿರಿ.
  • ಜೀವನಶೈಲಿಯಲ್ಲಿ ಹೊಂದಾಣಿಕೆಗಳು: ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ, ನಿಯಮಿತವಾಗಿ ವ್ಯಾಯಾಮ ಮಾಡಿ, ಧೂಮಪಾನ, ಮತ್ತು ಒತ್ತಡವನ್ನು ತಪ್ಪಿಸಿ.
  • ಹೃದಯದ ಆರೋಗ್ಯವನ್ನು ನೋಡಿಕೊಳ್ಳಿ: ಹೃದಯದ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ನಿಮ್ಮ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಯುರೋಪಿಯನ್ ಲೀಗ್ ಅಗೇನ್ಸ್ಟ್ ರುಮಾಟಿಸಮ್ (EULAR) ಪ್ರತಿ ಐದು ವರ್ಷಗಳಿಗೊಮ್ಮೆ ಅಥವಾ ನೀವು ರುಮಟಾಯ್ಡ್ ಸಂಧಿವಾತ ಔಷಧಿಯನ್ನು ಬದಲಾಯಿಸಿದಾಗ ಹೃದಯ ಕಾಯಿಲೆ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸುತ್ತದೆ.
  • ಔಷಧಿಯ ಬಳಕೆ: ಕೆಲವು ಸ್ಟೀರಾಯ್ಡ್ ರಹಿತ ಊತ ಜನಕವಲ್ಲದ ನೋವು ನಿವಾರಕ (NSAID) ಔಷಧಿಗಳು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಅವುಗಳ ಬಳಕೆಯನ್ನು ಕಡಿಮೆ ಮಾಡಿ ಇತರ ನೋವು ನಿವಾರಣಾ ವಿಧಾನಗಳನ್ನು ಪ್ರಯತ್ನಿಸುವುದು ಒಳ್ಳೆಯದು.
  • ರೋಗಲಕ್ಷಣಗಳ ಬಗ್ಗೆ ಎಚ್ಚರವಹಿಸಿ: ಉಸಿರಾಟದ ತೊಂದರೆ, ಎದೆ ನೋವು ಅಥವಾ ತೋಳು ನೋವು ಮುಂತಾದ ಹೃದಯ ಸಮಸ್ಯೆಗಳ ಲಕ್ಷಣಗಳ ಕಡೆಗೆ ಗಮನ ಕೊಡಿ ಮತ್ತು ತಕ್ಷಣವೇ ಅವುಗಳ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ.

ಡಾ. ರವಿಚಂದ್ರ ಕೇಳ್ಕರ್
ಡಾ. ರವಿಚಂದ್ರ ಕೇಳ್ಕರ್

Priyanka Gowda

eMail
Whats_app_banner