Dragon Fruit Tea:ಡ್ರ್ಯಾಗನ್ ಫ್ರೂಟ್‌ನಿಂದ ಡಿಲೀಷಿಯಸ್ ಟೀ ಕೂಡಾ ಮಾಡಬಹುದು..ವೈರಲ್ ವಿಡಿಯೋ
ಒಂದು ವೇಳೆ ನಿಮ್ಮಲ್ಲಿ ಯಾರಾದರೂ ವೆಕೇಶನ್‌ಗೆ ಬಾಂಗ್ಲಾದೇಶಕ್ಕೆ ಹೋದರೆ ಅಲ್ಲಿ ಈ ಟೀ ರುಚಿ ಮಾಡಬಹುದು. ಅದೂ ಸಾಧ್ಯವಿಲ್ಲದಿದ್ದಲ್ಲಿ, ಹೇಗಿದ್ದರೂ ಈ ವಿಡಿಯೋದಲ್ಲಿ ರೆಸಿಪಿ ಇದೆ, ಅದನ್ನು ನೀವೇ ಮನೆಯಲ್ಲಿ ತಯಾರಿಸಬಹುದು.
ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾವುದೇ ಋತುಮಾನದ ಹಣ್ಣನ್ನು ಖರೀದಿಸಿ ತಿನ್ನುತ್ತಿದ್ದರೆ ಆ ಹಣ್ಣಿನಲ್ಲಿನ ಪೋಷಕಾಂಶಗಳು ನಿಮ್ಮ ದೇಹ ಸೇರುತ್ತದೆ. ಈ ಋತುವಿನಲ್ಲಿ ಡ್ರ್ಯಾಗನ್ ಹಣ್ಣು ಹೇರಳವಾಗಿ ಸಿಗುತ್ತದೆ. ಈ ಡ್ರ್ಯಾಗನ್ ಹಣ್ಣನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಆದರೆ ಡ್ರ್ಯಾಗನ್ ಹಣ್ಣು ಹೇಗೆ ತಿನ್ನಬೇಕೆಂದು ಕೆಲವರಿಗೆ ಗೊತ್ತಿಲ್ಲ. ಅದನ್ನು ಕತ್ತರಿಸಿ ತಿನ್ನಬೇಕಾ...? ಅಥವಾ ಜ್ಯೂಸ್ ಮಾಡಿ ಕುಡಿಯಬೇಕಾ? ಎಂದು ಕನ್ಫ್ಯೂಸ್ ಇದೆ. ಆದರೆ ಅದರಿಂದ ಟೀ ಕೂಡಾ ತಯಾರಿಸಬಹುದು ಎಂದು ಹಲವರಿಗೆ ತಿಳಿದಿಲ್ಲ. ಡ್ರ್ಯಾಗನ್ ಫ್ರೂಟ್‌ನಲ್ಲಿ ಟೀ ಮಾಡಬಹುದಾ ಅಂತ ಆಶ್ಚರ್ಯವಾಗಬೇಡಿ. ಬಾಂಗ್ಲಾದೇಶದ ರಸ್ತೆ ಬದಿ ಚಹಾ ಮಾಡುವ ಬಾಲಕನೊಬ್ಬ ಡ್ರ್ಯಾಗನ್ ಫ್ರೂಟ್‌ನಿಂದ ಟೀ ತಯಾರಿಸುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟಿಜನ್ಸ್ ನಾನಾ ಕಮೆಂಟ್ ಮಾಡುತ್ತಿದ್ದಾರೆ.
ಡ್ರ್ಯಾಗನ್ ಫ್ರೂಟ್ ಟೀ ರೆಸಿಪಿ ಬಹಳ ಸರಳವಾಗಿದೆ. ಮೊದಲು ನಾರ್ಮಲ್ ಆಗಿ ಚಯಾ ಮಾಡಬೇಕು. ಅದನ್ನು ಶೋಧಿಸಿ ಗ್ಲಾಸ್‌ಗೆ ಸೇರಿಸಿ, ಅದರೊಂದಿಗೆ ಡ್ರ್ಯಾಗನ್ ಹಣ್ಣಿನ ತಿರುಳನ್ನು ಸೇರಿಸಿ ಜೊತೆಗೆ ಸ್ವಲ್ಪ ಮಿಲ್ಕ್ ಮೇಯ್ಡ್ ಸೇರಿಸಿದರೆ ಡ್ರ್ಯಾಗನ್ ಫ್ರೂಟ್ ಟೀ ರೆಡಿ, ಮಿಲ್ಕ್ ಮೇಯ್ಡ್‌ನಲ್ಲಿ ಸಿಹಿ ಅಂಶ ಇರುವುದರಿಂದ ಚಹಾ ತಯಾರಿಸುವಾಗ ಸಕ್ಕರೆ ಸೇರಿಸುವ ಅಗತ್ಯವಿಲ್ಲ.
ಡ್ರ್ಯಾಗನ್ ಫ್ರೂಟ್ ಟೀ ಎಷ್ಟು ರುಚಿ ಇದೆ ಎಂಬುದು ಕುಡಿದವರಿಗೇ ಗೊತ್ತು. ನಿಮಗೂ ಅದರ ರುಚಿ ತಿಳಿಯಬೇಕೆಂದರೆ ನೀವೂ ಕೂಡಾ ಸೇವಿಸಬಹುದು. ಆದರೆ ಅದು ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ. ಅದನ್ನು ಕುಡಿಯಬೇಕೆಂದರೆ ನೀವು ಬಾಂಗ್ಲಾದೇಶಕ್ಕೆ ಹೋಗಬೇಕು. ಒಂದು ಕಪ್ ಟೀ ಕುಡಿಯಲು ಅಲ್ಲಿವರೆಗೂ ಹೋಗಾಬೇಕಾ ಎಂದು ನೀವು ಪ್ರಶ್ನಿಸಬಹುದು. ಒಂದು ವೇಳೆ ನಿಮ್ಮಲ್ಲಿ ಯಾರಾದರೂ ವೆಕೇಶನ್‌ಗೆ ಬಾಂಗ್ಲಾದೇಶಕ್ಕೆ ಹೋದರೆ ಅಲ್ಲಿ ಈ ಟೀ ರುಚಿ ಮಾಡಬಹುದು. ಅದೂ ಸಾಧ್ಯವಿಲ್ಲದಿದ್ದಲ್ಲಿ, ಹೇಗಿದ್ದರೂ ಈ ವಿಡಿಯೋದಲ್ಲಿ ರೆಸಿಪಿ ಇದೆ, ಅದನ್ನು ನೀವೇ ಮನೆಯಲ್ಲಿ ತಯಾರಿಸಬಹುದು.
ಬಾಣಸಿಗರು ಸದಾ ಏನಾದರೂ ಹೊಸತನ್ನು ಪ್ರಯತ್ನಿಸುತ್ತಾರೆ. ಮಿಕ್ಸೆಡ್ ಫ್ರೂಟ್ ಟೀ, ರಸಗುಲ್ಲಾ ಟೀ, ಮ್ಯಾಂಗೋ ನ್ಯೂಡಲ್ಸ್, ಡರ್ಟಿ ರೈಸ್ ಹೀಗೆ ವಿಭಿನ್ನವಾದ ರೆಸಿಪಿಗಳನ್ನು ಕಂಡುಹಿಡಿಯಲಾಗಿದೆ. ಹಾಗಿದ್ರೆ ಒಮ್ಮೆ ಡ್ರ್ಯಾಗನ್ ಫ್ರೂಟ್ ಚಹಾ ಏಕೆ ಟ್ರೈ ಮಾಡಬಾರದು..? ಒಮ್ಮೆ ಮಾಡಿ ನಿಮಗೆ ಇಷ್ಟವಾದಲ್ಲಿ ಇತರರಿಗೂ ಈ ಹೊಸ ರುಚಿ ಪರಿಚಯಿಸಿ.
ವಿಭಾಗ