Dry Cough: ಒಣಕೆಮ್ಮುವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆಮದ್ದು ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Dry Cough: ಒಣಕೆಮ್ಮುವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆಮದ್ದು ಟ್ರೈ ಮಾಡಿ

Dry Cough: ಒಣಕೆಮ್ಮುವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆಮದ್ದು ಟ್ರೈ ಮಾಡಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಹಲವು ವಿಧದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಕೆಮ್ಮು ಹೆಚ್ಚಾಗಿ ಜನರಿಗೆ ತೊಂದರೆ ಕೊಡುತ್ತವೆ. ಆಯುರ್ವೇದದಲ್ಲಿ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಸರಳ ಮತ್ತು ತ್ವರಿತ ಶಮನ ನೀಡುವ ಮನೆಮದ್ದುಗಳಿವೆ.

ಆಯುರ್ವೇದದಲ್ಲಿ ಸರಳ ಮತ್ತು ತ್ವರಿತ ಶಮನ ನೀಡುವ ಮನೆಮದ್ದುಗಳಿವೆ.
ಆಯುರ್ವೇದದಲ್ಲಿ ಸರಳ ಮತ್ತು ತ್ವರಿತ ಶಮನ ನೀಡುವ ಮನೆಮದ್ದುಗಳಿವೆ. (Pixabay)

ಚಳಿಗಾಲದಲ್ಲಿ ಜನರಿಗೆ ಆರೋಗ್ಯ ವ್ಯತ್ಯಾಸವಾಗುವುದು ಮತ್ತು ವಿವಿಧ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಶೀತ, ಜ್ವರ ಮತ್ತು ಕೆಮ್ಮು ಹಾಗೂ ನೆಗಡಿ ಹೆಚ್ಚಾಗಿ ಸಮಸ್ಯೆ ತರುತ್ತದೆ. ಕೆಲವೊಮ್ಮೆ ಕಡಿಮೆ ಅವಧಿಗೆ ಶೀತ, ಕೆಮ್ಮು ಬಂದು ಹೋದರೆ ಮತ್ತೆ ಕೆಲವೊಮ್ಮೆ ವಾರವಾದರೂ ಕಡಿಮೆಯಾಗಿರುವುದಿಲ್ಲ. ಅಲ್ಲದೆ, ಸಣ್ಣಪುಟ್ಟ ಶೀತ, ಜ್ವರ ಮತ್ತು ಕೆಮ್ಮು ಬಂದಾಗ ಅದಕ್ಕೆ ವೈದ್ಯರ ಬಳಿ ತೆರಳುವುದು ಅಷ್ಟು ಸೂಕ್ತವಲ್ಲ. ಅದರ ಬದಲು, ಮನೆಯಲ್ಲೇ ತಯಾರಿಸಿದ ಮದ್ದು ಉತ್ತಮ.

ಚಳಿಗಾಲದಲ್ಲಿ ಜನರನ್ನು ಬಾಧಿಸುವ ಒಣಕೆಮ್ಮು

ಕೆಲವೊಮ್ಮೆ ಕೆಮ್ಮು ಬಂದರೆ ದಿನಪೂರ್ತಿ ಬರುತ್ತಲೇ ಇರುತ್ತದೆ. ಮತ್ತು ವಾರವಾದರೂ ಕಡಿಮೆಯಾಗಿರುವುದಿಲ್ಲ. ಒಣಕೆಮ್ಮುವಿನಿಂದಾಗಿ ಗಂಟಲು ಒಣಗುತ್ತದೆ, ಚರ್ಮ ಕೂಡ ಶುಷ್ಕವಾಗುತ್ತದೆ. ಗಂಟಲಿನಲ್ಲಿ ಕಿರಿಕಿರಿ ಉಂಟಾಗಿ, ಆಹಾರ ತಿನ್ನುವಾಗಲೂ ಸಮಸ್ಯೆಯಾಗಬಹುದು.

ಒಣಕೆಮ್ಮು ಲಕ್ಷಣಗಳು

ನಿಮಗೆ ಒಣಕೆಮ್ಮು ಸಮಸ್ಯೆ ಉಂಟಾದಾಗ, ಗಂಟಲಿನಲ್ಲಿ ಒಂದು ರೀತಿಯ ಉರಿ ಉಂಟಾಗಬಹುದು. ಜತೆಗೆ ಕೆರೆತದ ಅನುಭವವಾಗಬಹುದು. ಇದರಿಂದಾಗಿ ನೀವು ನಿರಂತರ ಕೆಮ್ಮುತ್ತೀರಿ. ಗಟ್ಟಿಯಾಗಿ ಕೆಮ್ಮಿದಾಗ ಗಾಳಿ ಒಳಗಡೆ ಸೇರಿಕೊಂಡು, ಗಂಟಲಿನಲ್ಲಿ ತೀವ್ರ ಕಿರಿಕಿರಿ ಉಂಟಾಗುತ್ತದೆ. ಇದರಿಂದ ಗಂಟಲು ತೇವಾಂಶ ಆರಿ, ಸಪ್ಪೆಯಾಗುತ್ತದೆ.

ಇದನ್ನೂ ಓದಿ: ಬಿಡದೆ ಕಾಡುವ ಕೆಮ್ಮಿಗೆ ಗಿಡಮೂಲಿಕೆಗಳಲ್ಲಿದೆ ಪರಿಹಾರ

ಒಣಕೆಮ್ಮು ಸಮಸ್ಯೆಗೆ ಕಾರಣ

ಹಲವು ಕಾರಣಗಳಿಂದ ಒಣಕೆಮ್ಮು ಸಮಸ್ಯೆ ಬಾಧಿಸಬಹುದು. ನೀರು ಬದಲಾವಣೆ, ಹವಾಮಾನ ವ್ಯತ್ಯಾಸವೂ ಕಾರಣವಾಗುತ್ತದೆ. ಜತೆಗೆ ಕೆಲವೊಂದು ಅಲರ್ಜಿಗಳು, ಅಸ್ತಮಾದಿಂದಲೂ ಒಣಕೆಮ್ಮು ಬರುತ್ತದೆ.

ಕೆಮ್ಮು ಹೆಚ್ಚಾದರೆ ಏನು ಮಾಡಬೇಕು?

ಸತತ ಕೆಮ್ಮು ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಅದರಿಂದ ಕೆಲವೊಮ್ಮೆ ಜೀವಕ್ಕೆ ಅಪಾಯ ಉಂಟಾಗಬಹುದು. ಹೀಗಾಗಿ ನಿರಂತರ ಕೆಮ್ಮು ಬರುತ್ತಿದ್ದರೆ, ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ. ಹಾಗೆಯೇ ಕೆಮ್ಮು ಹೆಚ್ಚಿದ್ದರೆ, ಸಾಕಷ್ಟು ನೀರು ಕುಡಿಯಿರಿ, ಕಫದ ಸಿರಪ್, ಔ‍ಷಧಿ ಇದ್ದರೆ ಸೇವಿಸಿ, ಜೇನುತುಪ್ಪ ಸೇವಿಸಿ, ಗೋಡಂಬಿ ತಿನ್ನಿ.

ಇದನ್ನೂ ಓದಿ: ಪ್ರತಿದಿನ ಸುಗಂಧ ದ್ರವ್ಯ ಬಳಸುವ ಮುನ್ನ ಇರಲಿ ಎಚ್ಚರ

ಕೆಮ್ಮಿಗೆ ಇವು ಕೂಡ ಕಾರಣ

ಕೆಲವರಿಗೆ ಕೆಲವೊಂದು ಪರಿಮಳ ಮತ್ತು ವಾಸನೆಗಳ ಅಲರ್ಜಿಯಿರುತ್ತದೆ, ಅವರಿಗೆ ಕೆಲವು ರಾಸಾಯನಿಕ, ಸುಗಂಧ ದ್ರವ್ಯದ ವಾಸನೆಯಿಂದಲೂ ಕೆಮ್ಮು ಬರಬಹುದು. ಹಾಗೆಯೇ, ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಉಸಿರಾಟದ ಸಮಸ್ಯೆ ಎದುರಾದರೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಧೂಮಪಾನದ ಅಭ್ಯಾಸವಿದ್ದರೆ, ಅದನ್ನು ಬಿಡಬೇಕು.

ಮನೆಮದ್ದು ಟ್ರೈ ಮಾಡಿ, ಒಣಕೆಮ್ಮು ಓಡಿಸಿ

ಸ್ವಲ್ಪ ಜೀರಿಗೆ, ಅರ್ಧ ಟೀಸ್ಪೂನ್ ಅರಶಿನ ಮತ್ತು ತುಪ್ಪವನ್ನು ಒಟ್ಟಿಗೆ ಸೇರಿಸಿ ಅದನ್ನು ಸೇವಿಸಿ. ಮೊದಲು ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರ ಮಾಡಿ, ತುಪ್ಪದಲ್ಲೇ ಬಿಸಿ ಮಾಡಿ ಸೇವಿಸಬೇಕು. ಹಾಗೆ ಮಾಡಿದರೆ ಒಣಕೆಮ್ಮು ದೂರಾಗುತ್ತದೆ. ಆದರೆ ಇಲ್ಲಿ ಸೂಚಿಸಿರುವ ಪ್ರಮಾಣದಲ್ಲೇ ಸೇವಿಸಿದರೆ ಸಾಕಾಗುತ್ತದೆ. ಕೆಮ್ಮು ಜಾಸ್ತಿ ಇದೆ ಮತ್ತು ಬೇಗ ಶಮನವಾಗಬೇಕು ಎಂದು ಅತಿಯಾಗಿ ಸೇವಿಸಿದರೆ, ತೊಂದರೆಯಾಗಬಹುದು. ಹೀಗಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ತೊಂದರೆ ಕೊಡುವ ಒಣಕೆಮ್ಮು ಸಮಸ್ಯೆಯಿಂದ ಪಾರಾಗಲು ಈ ಸರಳ ಮನೆಮದ್ದು ಸಹಕಾರಿಯಾಗಬಲ್ಲದು.

Whats_app_banner