ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ತರಕಾರಿಗಳನ್ನು ತಿನ್ನಿ, ನೀವು ಇನ್ನಷ್ಟು ಸ್ಟ್ರಾಂಗ್‌ ಆಗ್ತೀರ ಜೊತೆಗೆ ಖಾಯಿಲೆಗಳಿಂದ ದೂರ ಇರ್ತೀರ-eat these vegetables to boost immunity you will be stronger and stay away from diseases smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ತರಕಾರಿಗಳನ್ನು ತಿನ್ನಿ, ನೀವು ಇನ್ನಷ್ಟು ಸ್ಟ್ರಾಂಗ್‌ ಆಗ್ತೀರ ಜೊತೆಗೆ ಖಾಯಿಲೆಗಳಿಂದ ದೂರ ಇರ್ತೀರ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ತರಕಾರಿಗಳನ್ನು ತಿನ್ನಿ, ನೀವು ಇನ್ನಷ್ಟು ಸ್ಟ್ರಾಂಗ್‌ ಆಗ್ತೀರ ಜೊತೆಗೆ ಖಾಯಿಲೆಗಳಿಂದ ದೂರ ಇರ್ತೀರ

Immunity Boost: ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೀವು ಪ್ರತಿನಿತ್ಯ ನಿಮ್ಮ ಊಟದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಹೆಚ್ಚಿನ ತರಕಾರಿಗಳನ್ನು ತಿನ್ನಬೇಕು. ಹೀಗೆ ಮಾಡಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ನೀವು ಆರೋಗ್ಯವಂತರಾಗುತ್ತೀರಿ.

ತರಕಾರಿಗಳು
ತರಕಾರಿಗಳು

ಹೆಚ್ಚುತ್ತಿರುವ ಸವಾಲುಗಳ ಮಧ್ಯೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಪೌಷ್ಟಿಕಾಂಶವನ್ನು ತೆಗೆದುಕೊಳ್ಳಬೇಕು. ನಿಮ್ಮ ಆಹಾರದಲ್ಲಿ ಹೆಚ್ಚಿನ ಪೋಷಕಾಂಶ ಹೊಂದಿರುವ ತರಕಾರಿಗಳಂತು ಇರಲೇಬೇಕು. ಹಸಿರು ಸೊಪ್ಪುಗಳನ್ನು ನೀವು ತಿನ್ನಬೇಕು. ಇದರಲ್ಲಿ ಹೆಚ್ಚಿನ ಪೋಷಕಾಂಶವಿರುತ್ತದೆ. ನೀವು ಸಸ್ಯಾಹಾರಿಯಾಗಿದ್ದು ಯಾವುದೇ ಮೊಟ್ಟೆ ಅಥವಾ ಮೀನುಗಳನ್ನು ತಿನ್ನುತ್ತಿಲ್ಲ ಎಂದಾದರೆ ಖಂಡಿತ ಹೆಚ್ಚಿನ ತರಕಾರಿಯನ್ನು ತಿನ್ನಲೇಬೇಕು. ಇದರಿಂದ ನಿಮಗೆ ಶಕ್ತಿ ದೊರೆಯುತ್ತದೆ. ಪೌಷ್ಟಿಕಾಂಶ ಹೆಚ್ಚಿದಂತೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಿಗೆ ಆಗುತ್ತದೆ.

ಪಾಲಕ್ ಸೊಪ್ಪು: ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇರುತ್ತದೆ. ಯಾರಿಗೆ ರಕ್ತ ಹೀನತೆ ಸಮಸ್ಯೆ ಇದೆಯೋ ಅವರು ಇದನ್ನು ತಿನ್ನಬೇಕು. ಉತ್ಕರ್ಷಣ ನಿರೋಧಕ ಗುಣವನ್ನು ಇದು ಹೊಂದಿದೆ. ಇದರಿಂದ ನಿಮಗೆ ಶಕ್ತಿ ಸಿಗುತ್ತದೆ. ಇದರ ಪಲ್ಯ, ಗ್ರೇವಿ ಅಥವಾ ದಾಲ್ ಮಾಡಿಕೊಂಡು ನೀವು ತಿನ್ನಬಹುದು.

ಕೋಸುಗಡ್ಡೆ, ಹೂಕೋಸು: ಈ ರೀತಿ ಗಡ್ಡೆಗಳಲ್ಲೂ ಹೆಚ್ಚಿನ ಪೋಷಕಾಂಶ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಇರುತ್ತದೆ. ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿ ತುಂಬಿರುತ್ತದೆ. ಪೊಟ್ಯಾಸಿಯಮ್-ಭರಿತ ಆಹಾರವಾಗಿ ನೀವು ಇದನ್ನು ಸೇವಿಸಬಹುದು. ಇದರಿಂದ ಪ್ರಯೋಜನ ಇಲ್ಲ ಎಂದು ಅಂದುಕೊಂಡು ಬದಿಗಿಟ್ಟಿದ್ದರೆ ಇಂದೇ ಇದನ್ನು ಮನೆಗೆ ತಂದು ಏನಾದರೊಂದು ಪದಾರ್ಥ ಮಾಡಿಕೊಂಡು ತಿನ್ನಿ. ಸಾಮಾನ್ಯವಾಗಿ ಚೈನೀಸ್‌ ಆಹಾರದಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಪಾಕ ವಿಧಾನದಲ್ಲಿ ಇದರ ಬಳಕೆ ಕಂಡುಬರುತ್ತಿದೆ.

ಕ್ಯಾರೇಟ್‌: ಇದರಲ್ಲಿರುವ ಅಂಶ ನಿಮ್ಮ ಸ್ನಾಯುಗಳಿಗೆ ಬಲ ತುಂಬುತ್ತದೆ. ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ. ನೀವು ಇದನ್ನು ಬೇಯಿಸದೇ ಹಸಿಯಾಗಿ ಕೂಡ ತಿನ್ನಬಹುದು. ಇದು ಲೂಡ ನಿಮಗೆ ಉತ್ತಮ ಪೋಷಕಾಂಶ ನೀಡುತ್ತದೆ.

ಇದನ್ನೂ ಓದಿ: ಏನಿದು ಹೆಪಟೊಟ್ರೋಪಿಕ್‌ ವೈರಸ್‌; ಯಕೃತ್ತಿನ ಆರೋಗ್ಯದ ಹೆಪಟೈಟಿಸ್ ಬಿ, ಸಿ ಹೇಗೆಲ್ಲಾ ಪರಿಣಾಮ ಬೀರುತ್ತೆ? ಇಲ್ಲಿದೆ ವಿವರ

ಸಿಹಿ ಗೆಣಸು: ವಿಟಮಿನ್ ಎ ಮತ್ತು ಫೈಬರ್‌ ಹೊಂದಿರುವ ಸಿಹಿ ಗೆಣಸನ್ನು ನೀವು ತಿನ್ನಿರಿ. ಇದರಿಂದ ನಿಮಗೆ ಪೌಷ್ಟಿಕಾಂಶ ದೊರೆಯುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ. ಇದನ್ನು ಹೆಚ್ಚಾಗಿ ತಿಂದರೆ ಗ್ಯಾಸ್‌ ಸಮಸ್ಯೆ ಕಾಡುತ್ತದೆ. ಆ ಕಾರಣ ಅನ್ನ ಮಾಡುವ ಸಂದರ್ಭದಲ್ಲಿ ಅದೇ ಕುಕ್ಕರ್‌ನಲ್ಲಿ ಒಂದು ಗಡ್ಡೆಯನ್ನಿಟ್ಟು ಅದನ್ನು ಬೇಯಿಸಿಕೊಂಡು ನೀವು ತಿನ್ನಬಹುದು.

ತರಕಾರಿ ತಿನ್ನಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿವಿಧ ಆಹಾರಗಳನ್ನು ಸೇವಿಸಬೇಕು. ಅವುಗಳ ಮೂಲಕ ನೀವು ಆರೋಗ್ಯವಾಗಿರಬಹುದು. ಆಹಾರದಲ್ಲಿ ಕೆಲವು ಆಹಾರಗಳನ್ನು ಬಳಕೆ ಮಾಡುವುದರಿಂದ ನೀವು ಉಪಯೋಗ ಪಡೆಯುತ್ತೀರಿ. ವಿವಿಧ ಆರೋಗ್ಯ ಸವಾಲುಗಳನ್ನು ಎದುರಿಸಲು ನಿಮ್ಮ ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಇದು ಮಾಡುತ್ತದೆ.

ಈ ಅಭ್ಯಾಸ ಬಿಡಿ
ಕೆಲವರು ಅನ್ನ ಮತ್ತು ಸಾಂಬಾರ್ ಊಟ ಮಾಡುವ ಸಂದರ್ಭದಲ್ಲಿ ಅದರಲ್ಲಿದ್ದ ತರಕಾರಿ ಹೋಳುಗಳನ್ನೆಲ್ಲ ತೆಗೆದು ಬದಿಗಿಡುತ್ತಾರೆ. ಈ ರೀತಿ ಮಾಡಬಾರದು ಅದರ ಬದಲಾಗಿ ಎಲ್ಲ ರೀತಿಯ ತರಕಾರಿಯನ್ನು ತಿನ್ನಲು ಕಲಿಯಬೇಕು. ಇದು ನಿಮ್ಮ ಆರೋಗ್ಯಕ್ಕೇ ಒಳ್ಳೆಯದು.