Healthy Recipe: ಅನ್ನ ಅಥವಾ ಚಪಾತಿ ಯಾವುದರ ಜೊತೆ ಬೇಕಾದರೂ ತಿನ್ನಿ ಈ ಮೊಳಕೆ ಕಾಳಿನ ಕರಿ, ಆರೋಗ್ಯಕ್ಕೂ ಸೈ - ರುಚಿಗೂ ಸೈ
Healthy Recipe: ನೀವು ಮೊಳಕೆ ಕಾಳಿನ ಕರಿ ಮಾಡಿ ತಿನ್ನಿ. ಇದರಿಂದ ನಿಮಗೆ ಸಾಕಷ್ಟು ಪೋಷಕಾಂಶ ದೊರೆಯುತ್ತದೆ. ಇದನ್ನು ಮಾಡುವ ವಿಧಾನವನ್ನು ಇಲ್ಲಿ ನೀಡಿದ್ದೇವೆ. ಚಪಾತಿ ಅಥವಾ ಅನ್ನ ಯಾವುದರ ಜೊತೆಗೆ ಬೇಕಾದರೂ ನೀವಿದನ್ನು ತಿನ್ನಬಹುದು.
ಜನರು ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕಾಗಿ ಪ್ರೋಟೀನ್ ಮತ್ತು ಫೈಬರ್ ಭರಿತ ಮೊಳಕೆ ಕಾಳು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಕ್ಕಳು ಈ ಆರೋಗ್ಯಕರ ಉಪಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ಕೆಲವೊಮ್ಮೆ ವಯಸ್ಕರು ಸಹ ಅದನ್ನು ತಿನ್ನಲು ನಿರಾಕರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳು ಮತ್ತು ವಯಸ್ಕರಿಗೆ ಆರೋಗ್ಯಕರ ಮೊಳಕೆ ಅವರ ಆಹಾರವಾಗುವಂತೆ ಮಾಡಲು ನಾವು ನಿಮಗಿಲ್ಲಿ ಸಲಹೆ ನೀಡಿದ್ದೇವೆ. ನೀವೂ ಸಹ ನಿಮ್ಮ ಮನೆಯಲ್ಲಿ ರೀತಿ ಮೊಳಕೆ ಕಾಳಿನ ಕರಿ ಮಾಡಿದರೆ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನು ಹೇಗೆ ಮಾಡುವುದು ಎಂದು ತಿಳಿಸಿದ್ದೇವೆ ಗಮನಿಸಿ.
ಮೊಳಕೆ ಕಾಳು - ಒಂದು ಕಪ್
ಮೊಸರು - ಅರ್ಧ ಕಪ್
ಜೀರಿಗೆ - ಅರ್ಧ ಚಮಚ
ಕರಿಬೇವಿನ ಎಲೆ
ಉಪ್ಪು - ರುಚಿಗೆ
ಕರಿಮೆಣಸು
ಅರಿಶಿನ - ಕಾಲು ಚಮಚ
ಕೊತ್ತಂಬರಿ ಪುಡಿ - ಅರ್ಧ ಚಮಚ
ಟೊಮೆಟೊ ಪೇಸ್ಟ್ - ಮೂರು ಚಮಚಗಳು
ಬೆಳ್ಳುಳ್ಳಿ ಶುಂಠಿ ಪೇಸ್ಟ್ - ಒಂದು ಟೀಚಮಚ
ಈರುಳ್ಳಿ - ಒಂದು
ಕಾಶ್ಮೀರಿ ಮೆಣಸಿನಕಾಯಿ
ಕಸೂರಿ ಮೇತಿ
ತಯಾರಿಸುವ ವಿಧಾನ
ಮೊಳಕೆ ಕರಿ ಮಾಡಲು ಮೊದಲು ಹೆಸರು ಕಾಳುಗಳನ್ನು ನೆನೆಸಿ. ಅವು ಮೊಳಕೆ ಒಡೆಯುವವರೆಗೂ ಹಾಗೇ ಬಿಡಿ. ನಂತರ ಆ ಮೊಳಕೆ ಬಂದ ಕಾಳುಗಳನ್ನು ಚೆನ್ನಾಗಿ ತೊಳೆಯಿರಿ. ಯಾವುದೇ ವಾಸನೆ ಬರದ ಹಾಗೆ ತೊಳೆಯಿರಿ. ಅವುಗಳನ್ನು ಒಲೆಯ ಮೇಲೆ ಸಣ್ಣ ಪಾತ್ರೆಯಲ್ಲಿ ಹಾಕಿ ಬೇಯಿಸಿ. ಸ್ವಲ್ಪ ನೀರು ಸೇರಿಸಿ ಮತ್ತು ಹಬೆಯಲ್ಲಿ ಬೇಯಿಸಿ. ನಂತರ ಒಲೆ ಆಫ್ ಮಾಡಿ ಈ ರೀತಿ ಬೇಯಿಸಿದರೆ ರುಚಿ ಜಾಸ್ತಿ. ಕುಕ್ಕರ್‌ನಲ್ಲಿ ಹಾಕಿ ಬೇಯಿಸಿದರೂ ಆಗುತ್ತದೆ.
ಈಗ ಮೊಳಕೆಕಾಳುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಮೊಸರು, ಕರಿಮೆಣಸು, ಧನಿಯಾ ಪುಡಿ, ಹುರಿದ ಜೀರಿಗೆ, ಅರಿಶಿನ, ಕಸೂರಿ ಮೆಂತ್ಯ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು 15-20 ನಿಮಿಷಗಳ ಕಾಲ ಹಾಗೇ ಬಿಟ್ಟು ಮ್ಯಾರಿನೇಟ್ ಮಾಡಿ.
ಈಗ ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಬಿರಿಯಾನಿ ಎಲೆ, ಏಲಕ್ಕಿ, ಲವಂಗ, ಕರಿಮೆಣಸು, ಮಸಾಲೆ, ದಾಲ್ಚಿನ್ನಿ ಮುಂತಾದ ಕೆಲವು ಮಸಾಲೆಗಳನ್ನು ಸೇರಿಸಿ.
ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಸಣ್ಣ ಉರಿಯಲ್ಲಿ ಗೋಲ್ಡನ್ ಬಣ್ಣ ಬರುವವವರೆಗೆ ಹುರಿಯಿರಿ. ಈರುಳ್ಳಿ ಬಿಸಿಯಾದ ನಂತರ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಇದಕ್ಕೆ ಅರಿಶಿನ ಮತ್ತು ಕಾಶ್ಮೀರಿ ಕರಿಮೆಣಸನ್ನೂ ಸೇರಿಸಬೇಕು.ನಂತರ ಟೊಮೆಟೊ ಪೇಸ್ಟ್ ಹಾಕಿ ಫ್ರೈ ಮಾಡಿ. ಚೆನ್ನಾಗಿ ಬೆಂದ ನಂತರ ಸ್ವಲ್ಪ ನೀರು ಹಾಕಿ ಕುದಿಸಿ. ಹೆಚ್ಚಿನ ಉರಿಯಲ್ಲಿ ದಪ್ಪವಾಗಿ ಬೇಯಿಸಿ.
ಈಗ ಮೊದಲೇ ಮ್ಯಾರಿನೇಟ್ ಮಾಡಿದ ಕಾಳುಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎರಡು ನಿಮಿಷ ಬೇಯಿಸಿ. ನೀರು ಜಾಸ್ತಿ ಆಗದಂತೆ ನೋಡಿಕೊಳ್ಳಿ. ನೀರು ಹೆಚ್ಚಾದರೆ ರುಚಿ ಇರೋದಿಲ್ಲ. ರುಚಿಕರವಾದ ಮೊಳಕೆ ಕಾಳನ್ನು ಅನ್ನ, ರೊಟ್ಟಿ ಮತ್ತು ಚಪಾತಿಯೊಂದಿಗೆ ಕೂಡ ತಿನ್ನಬಹುದು. ಇವು ತುಂಬಾ ಆರೋಗ್ಯಕರವಾಗಿರುತ್ತದೆ.