Eco Friendly Ganesha: ಪರಿಸರ ಸ್ನೇಹಿ ಗಣಪನನ್ನು ಮಣ್ಣೊಂದೇ ಅಲ್ಲ, ಇಷ್ಟೆಲ್ಲ ಬೇರೆ ಬೇರೆ ವಸ್ತುಗಳಿಂದ ತಯಾರಿಸಬಹುದು-eco friendly ganesha can be made from different materials not just clay smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Eco Friendly Ganesha: ಪರಿಸರ ಸ್ನೇಹಿ ಗಣಪನನ್ನು ಮಣ್ಣೊಂದೇ ಅಲ್ಲ, ಇಷ್ಟೆಲ್ಲ ಬೇರೆ ಬೇರೆ ವಸ್ತುಗಳಿಂದ ತಯಾರಿಸಬಹುದು

Eco Friendly Ganesha: ಪರಿಸರ ಸ್ನೇಹಿ ಗಣಪನನ್ನು ಮಣ್ಣೊಂದೇ ಅಲ್ಲ, ಇಷ್ಟೆಲ್ಲ ಬೇರೆ ಬೇರೆ ವಸ್ತುಗಳಿಂದ ತಯಾರಿಸಬಹುದು

ಪರಿಸರ ಸ್ನೇಹಿ ಗಣಪ: ಮಣ್ಣಿನಿಂದ ಅಥವಾ ಗೋಧಿ ಹಿಟ್ಟಿನಿಂದ ಪುಟ್ಟದಾದ ಗಣಪನನ್ನು ನಿಮ್ಮ ಮನೆಯಲ್ಲೇ ತಯಾರಿಸಿ. ಹಬ್ಬವನ್ನು ಆಚರಿಸಿ. ಇನ್ನಷ್ಟು ಪರಿಸರ ಸ್ನೇಹಿ ಗಣಪನ ಮೂರ್ತಿ ರೆಡಿ ಮಾಡಲು ನಾವು ನಿಮಗಿಲ್ಲಿ ಐಡಿಯಾ ನೀಡಿದ್ದೇವೆ ಗಮನಿಸಿ.

ಪರಿಸರ ಸ್ನೇಹಿ ಗಣಪ
ಪರಿಸರ ಸ್ನೇಹಿ ಗಣಪ

ಗಣೇಶ ಚತುರ್ಥಿಯನ್ನು ಗಣೇಶನ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗೋವಾದಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಕೆಲವು ಪ್ಲಾಸ್ಟರ್‌ಆಫ್‌ ಪ್ಯಾರಿಸ್‌ನಂತಹ ವಸ್ತುವಿನಿಂದ ತಯಾರಿಸಿದ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ತುಂಬಾ ತೊಂದರೆ ಉಂಟಾಗಿದೆ. ಪರಿಸರ ಹಾಳಾಗಿದೆ. ಆ ಸಮಸ್ಯೆ ಆಗುತ್ತದೆ ಎಂದು ತಿಳಿದಿದ್ದರೂ ಸಹ ಮತ್ತೆ ಅದೇ ತಪ್ಪನ್ನು ಮಾಡುವುದು ಸರಿ ಅಲ್ಲ. ಆ ಕಾರಣದಿಂದ ಮಣ್ಣಿನಿಂದ ಅಥವಾ ಗೋಧಿ ಹಿಟ್ಟಿನಿಂದ ಪುಟ್ಟದಾದ ಗಣಪನನ್ನು ನಿಮ್ಮ ಮನೆಯಲ್ಲೇ ತಯಾರಿಸಿ. ಹಬ್ಬವನ್ನು ಆಚರಿಸಿ.

ಗೋಧಿ ಹಿಟ್ಟಿನ ಗಣಪ

ಇನ್ನು ಗೋದಿ ಹಿಟ್ಟಿನ ಗಣಪನನ್ನು ತಯಾರಿಸುವುದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ಎಂದಾದರೆ ಇದನ್ನು ಸಂಪೂರ್ಣವಾಗಿ ಓದಿ. ಗಣೇಶ ಚತುರ್ಥಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಣೇಶನ ವಿಗ್ರಹವನ್ನು ಮನೆಗೆ ತರುವುದು ಆದರೆ ಅದೇ ಗಣೇಶನನ್ನು ನೀವು ನಿಮ್ಮ ಕೈಯ್ಯಾರ ಮಾಡಿದರೆ ಅದು ಇನ್ನೂ ಹೆಚ್ಚು ಖುಷಿ ಕೊಡುತ್ತದೆ. ನೀವೂ ಸಹ ಭಕ್ತಿ ಪೂರ್ವಕವಾಗಿ ಸಂಪೂರ್ಣ ಗಣಪನ ಆರಾಧನೆಯಲ್ಲಿ ಭಾಗಿಯಾದಂತಾಗುತ್ತದೆ.

ಸಂಕಲ್ಪದಿಂದ ವಿಸರ್ಜನೆವರೆಗೆ ಎಲ್ಲವನ್ನೂ ನೀವೇ ನೋಡಿಕೊಂಡಂತೆ ಆಗುತ್ತದೆ. ಅರಶಿನ ಗಣಪನನ್ನು ಮಾಡಲು ನೀವು ಮೊದಲಿಗೆ ಅರಶಿನದ ಹಿಟ್ಟನ್ನು ರೆಡಿ ಇಟ್ಟುಕೊಳ್ಳಬೇಕು. ಅರಿಶಿನ, ಗೋಧಿ ಹಿಟ್ಟು, ಮತ್ತು ಹಾಲು ಸೇರಿಸಿ ಮೃದುವಾದ ಹಿಟ್ಟನ್ನು ಮಾಡಿಟ್ಟುಕೊಳ್ಳಿ ನಂತರದಲ್ಲಿ ಹಿಟ್ಟಿನಿಂದ ದೊಡ್ಡ ಮತ್ತು ಸಣ್ಣದಾದ ಎರಡು ಉಂಡೆಗಳನ್ನು ಮಾಡಿಕೊಳ್ಳಿ. ಆ ಉಂಡೆಗಳನ್ನು ನೀವು ಗಣಪನ ಹೊಟ್ಟೆ ಮತ್ತು ತಲೆ ಭಾಗಕ್ಕೆ ಉಪಯೋಗ ಮಾಡಬಹುದು. ನಂತರ ಉದ್ದುದ್ದನೆಯ ನಾಲ್ಕು ಪೈಪ್ ರೀತಿಯಲ್ಲಿ ಮಣ್ಣನ್ನು ರೆಡ ಮಾಡಿಕೊಂಡು ಅದರಿಂದ ಕೈ ಮತ್ತು ಕಾಲುಗಳ ರಚನೆ ಮಾಡಿ. ಇದೆಲ್ಲವನ್ನೂ ಒಂದು ಸರಿಯಾದ ವಿಧಾನದಲ್ಲಿ ಜೋಡಿಸಿಕೊಂಡು ಆದ ನಂತರ ನೀವು ಅದಕ್ಕೆ ರೂಪ ನೀಡುತ್ತಾ ಸಾಗಬಹುದು.

ಜಾಕಲೇಟ್ ಗಣಪ:
ಬೆಲ್ಜಿಯಂ ಚಾಕೊಲೇಟ್‌ನಿಂದ ತಯಾರಿಸಿದ ಗಣೇಶನ ವಿಗ್ರಹವು ಒಂದು ವರ್ಷದ ಹಿಂದೆ ವೈರಲ್ ಆಗಿತ್ತು. ತಿನ್ನಬಹುದಾದ ವಿಗ್ರಹವನ್ನು ನಂತರ ಚಾಕೊಲೇಟ್ ಶೇಕ್ ಆಗಿ ಪರಿವರ್ತಿಸಿ ಅದಕ್ಕೆ ಹಾಲಿನ ಅಭಿಶೇಕ ಮಾಡಿ. ಮೂರ್ತಿ ವಿಸರ್ಜನೆಯನ್ನೂ ಸಹ ಹಾಲಿನಲ್ಲೇ ಮಾಡಿ ಅದು ಸಂಪೂರ್ಣ ಕರಗಿದ ನಂತರದಲ್ಲಿ ಅದನ್ನು ಪ್ರಸಾದ ರೂಪದಲ್ಲಿ ಸೇವನೆ ಮಾಡಲಾಗಿತ್ತು.

ಹಣ್ಣಿನ ಗಣಪ:
ನಾನಾ ರೀತಿಯ ಹಣ್ಣುಗಳನ್ನು ಬಳಸಿಕೊಂಡು ಮಾಡಬಹುದು. ಬಾಳೆಹಣ್ಣು, ಸೇಬು, ಪಪ್ಪಾಯಿ, ಚೆರ್ರಿ ಮತ್ತು ಇತರ ಹಣ್ಣುಗಳನ್ನು ಗಣೇಶನ ಮೂರ್ತಿಯನ್ನು ಮಾಡಲು ನಿಮ್ಮ ಕಲ್ಪನೆಯ ಪ್ರಕಾರ ಬಳಸಬಹುದು. ಆದರೆ ಈ ಗಣಪತಿಯನ್ನು ಹಲವು ದಿನಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಣ್ಣುಗಳು ಹಾಳಾಗುತ್ತ ಬಂದರೆ ಅದು ಸೂಕ್ತವಲ್ಲ. ಹಾಗಾಗಿ ಅಲಂಕಾರಕ್ಕೆ ಬೇಕಾದರೆ ಈ ರೀತಿ ಗಣೇಶನನ್ನು ಮಾಡಬಹುದು. ಇವುಗಳು ಪೂಜೆಗೆ ಅಷ್ಟು ಸೂಕ್ತವಲ್ಲ.

ಅರಿಶಿನ, ಗೋಧಿ ಹಿಟ್ಟು, ಸಕ್ಕರೆ ಪುಡಿ ಮತ್ತು ಹಾಲು ಸೇರಿಸಿ ಮೃದುವಾದ ಹಿಟ್ಟನ್ನು ಬಳಸಿ ನೀವು ಅರಶಿನ ಗಣಪನನ್ನೂ ಸಹ ಮಾಡಬಹುದು. ನಿಮ್ಮ ಗಣೇಶ ಉತ್ಸವವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ನೀವು ಈ ಗಣೇಶನ ವಿಗ್ರಹ 10 ದಿನಗಳ ಕಾಲ ಇಟ್ಟುಕೊಳ್ಳಬಹುದು.