ಪಿಯುಸಿ ನಂತರ ನರ್ಸಿಂಗ್ ಕಲಿತರೆ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಅವಕಾಶ, ಉತ್ತಮ ಸಂಪಾದನೆಯೂ ಸಾಧ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಪಿಯುಸಿ ನಂತರ ನರ್ಸಿಂಗ್ ಕಲಿತರೆ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಅವಕಾಶ, ಉತ್ತಮ ಸಂಪಾದನೆಯೂ ಸಾಧ್ಯ

ಪಿಯುಸಿ ನಂತರ ನರ್ಸಿಂಗ್ ಕಲಿತರೆ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಅವಕಾಶ, ಉತ್ತಮ ಸಂಪಾದನೆಯೂ ಸಾಧ್ಯ

ಪಿಯುಸಿ ನಂತರ ನರ್ಸಿಂಗ್‌ ಕೋರ್ಸ್ ಮಾಡಿದವರು ಆಸ್ಪತ್ರೆ, ಚಿಕಿತ್ಸಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಮೊದಲಾದ ಆರೋಗ್ಯ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗ ಅವಕಾಶ ಪಡೆಯಬಹುದು. ಉದ್ಯಮ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಉತ್ತಮ ಸಂಪಾದನೆ ಮಾಡಬಹುದು.

ಪಿಯುಸಿ ನಂತರ ನರ್ಸಿಂಗ್ ಕಲಿತರೆ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಅವಕಾಶ, ಉತ್ತಮ ಸಂಪಾದನೆ ಸಾಧ್ಯ
ಪಿಯುಸಿ ನಂತರ ನರ್ಸಿಂಗ್ ಕಲಿತರೆ ಆರೋಗ್ಯ ಕ್ಷೇತ್ರದಲ್ಲಿ ವಿಪುಲ ಅವಕಾಶ, ಉತ್ತಮ ಸಂಪಾದನೆ ಸಾಧ್ಯ (Pexel File)

ಪಿಯುಸಿ ನಂತರ ಮುಂದೇನು ಎಂಬ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ನರ್ಸಿಂಗ್‌ ಕಲಿಕೆ ಒಂದು ಪ್ರಮುಖ ಆಯ್ಕೆ. ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು, ನರ್ಸಿಂಗ್ ಕೋರ್ಸ್‌ ಮೂಲಕ ಅಗತ್ಯ ಶಿಕ್ಷಣ ಮತ್ತು ತರಬೇತಿಯನ್ನು ಪಡೆಯಬಹುದು. ಈ ಕೋರ್ಸ್‌ಗಳು ರೋಗಿಗಳ ಆರೈಕೆ, ಮೌಲ್ಯಮಾಪನ, ವೈದ್ಯಕೀಯ ಕಾರ್ಯವಿಧಾನಗಳು ಮತ್ತು ಆರೋಗ್ಯ ನಿರ್ವಹಣೆ ಸೇರಿದಂತೆ ನರ್ಸಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಈ ಕೋರ್ಸ್‌ ಕುರಿತ ವಿಸ್ತೃತ ಮಾಹಿತಿ ಹಾಗೂ ಉದ್ಯೋಗಾವಕಾಶಗಳ ಕುರಿತ ಸರಳ ವಿವರಣೆಯನ್ನು ಇಲ್ಲಿ ಓದಿ.

ಸಾಮಾನ್ಯ ನರ್ಸಿಂಗ್ ಕೋರ್ಸ್‌ಗಳಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಇನ್ ನರ್ಸಿಂಗ್ ಅಥವಾ ಬಿಎಎಸ್‌ಸಿ ನರ್ಸಿಂಗ್ ಎಂಬ ಡಿಗ್ರಿ ಕೋರ್ಸ್‌ ಇರುತ್ತದೆ. ಇದೇ ವೇಳೆ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (GNM) ಕೋರ್ಸ್‌ ಕೂಡಾ ಇದೆ. ವಿದ್ಯಾರ್ಥಿಗಳು ಇಚ್ಛೆ ಹಾಗೂ ಸಾಮರ್ಥ್ಯ ಅನುಸಾರ ಕೋರ್ಸ್ ಆಯ್ಕೆ ಮಾಡಬಹುದು.

ನರ್ಸಿಂಗ್ ಕೋರ್ಸ್‌ಗಳ ವಿಧಗಳು

ಬಿ.ಎಸ್‌ಸಿ ನರ್ಸಿಂಗ್: 4 ವರ್ಷಗಳ ಪದವಿಪೂರ್ವ ಕೋರ್ಸ್‌ನಲ್ಲಿ ನರ್ಸಿಂಗ್‌ನ ಥಿಯರಿ ಮತ್ತು ಪ್ರಾಯೋಗಿಕ ಅಂಶಗಳನ್ನು ಕಲಿಸಲಾಗುತ್ತದೆ. ವಿವಿಧ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಪದವೀಧರರನ್ನು ಸಿದ್ಧಪಡಿಸುತ್ತದೆ.

ಜಿಎನ್ಎಂ: 3 ವರ್ಷಗಳ ಡಿಪ್ಲೊಮಾ ಕೋರ್ಸ್‌ನಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಪ್ರವೇಶ ಮಟ್ಟದ ನರ್ಸಿಂಗ್ ಹುದ್ದೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ.

ಎಂಎಸ್‌ಸಿ ನರ್ಸಿಂಗ್: ಬಿಎಸ್‌ಸಿ ನಂತರ ಉನ್ನತ ಶಿಕ್ಷಣಕ್ಕೆ ಇರುವ ಕೋರ್ಸ್.‌ ವೈದ್ಯಕೀಯ, ಶಸ್ತ್ರಚಿಕಿತ್ಸೆ ಅಥವಾ ಸಮುದಾಯ ಆರೋಗ್ಯದಂತಹ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸುಧಾರಿತ ಜ್ಞಾನವನ್ನು ಪಡೆಯಬಹುದು.

ಪೋಸ್ಟ್ ಬೇಸಿಕ್ ನರ್ಸಿಂಗ್: ಈಗಾಗಲೇ ನರ್ಸಿಂಗ್‌ ಕಲಿತಿರುವ ದಾದಿಯರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಇರುವ ವಿಶೇಷ ಕೋರ್ಸ್‌ ಇದಾಗಿದ್ದು, ಕ್ರಿಟಿಕಲ್ ಕೇರ್ ಅಥವಾ ಆಂಕೊಲಾಜಿಯಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

ಅರ್ಹತಾ ಮಾನದಂಡಗಳು

ಸಾಮಾನ್ಯವಾಗಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಬಿಎಸ್‌ಸಿ ನರ್ಸಿಂಗ್‌ ಆಯ್ಕೆ ಮಾಡಬಹುದು. ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿದವರಿಗೆ ಆದ್ಯತೆ. ಇತರ ವಿಭಾಗಗಳಲ್ಲಿ ಓದಿದವರಿಗೂ ಹೆಚ್ಚಿಣ ಸಂಸ್ಥೆಗಳಲ್ಲಿ ನರ್ಸಿಂಗ್‌ ಮಾಡಲು ಅವಕಾಶಗಳಿವೆ. ಬಿಎಸ್‌ಸಿ ನರ್ಸಿಂಗ್ ಮತ್ತು ಜಿಎನ್ಎಂ, ಈ ಎರಡೂ ಕೋರ್ಸ್‌ಗಳಿಗೆ ಹೆಚ್ಚಾಗಿ ಪ್ರವೇಶ ಪರೀಕ್ಷೆಗಳು ಇರುತ್ತವೆ.

ವೃತ್ತಿ ಅವಕಾಶಗಳು

ಬಿಎಸ್‌ಸಿ ನರ್ಸಿಂಗ್‌ನಂತಹ ಕೋರ್ಸ್ ಮಾಡಿದವರು ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಸೇರಿದಂತೆ ವಿವಿಧ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗ ಅವಕಾಶ ಪಡೆಯಬಹುದು. ನೋಂದಾಯಿತ ನರ್ಸ್ (RN) ಇಂತಹ ಸಾಂಪ್ರದಾಯಿಕ ನರ್ಸಿಂಗ್ ಆಗುವುದು ಮಾತ್ರವಲ್ಲದೆ, ನರ್ಸಿಂಗ್‌ ಟೀಚರ್‌, ಆರೋಗ್ಯ ಸೇವೆ ನಿರ್ವಾಹಕರು ಮತ್ತು ಆರೋಗ್ಯ ಸೇವೆಯಲ್ಲಿ ಉದ್ಯಮ ಕ್ಷೇತ್ರಗಳಲ್ಲಿಯೂ ವಿಪುಲ ಅವಕಾಶಗಳಿವೆ. ವಿದೇಶಗಳಲ್ಲೂ ನರ್ಸಿಂಗ್‌ ಮಾಡಿದವರಿಗೆ ಬೇಡಿಕೆಯಿದ್ದು ಉತ್ತಮ ಸಂಪಾದನೆ ಮಾಡಬಹುದು.

  • ಆಸ್ಪತ್ರೆ ಸಿಬ್ಬಂದಿ: ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ಮಾಡುವುದು.
  • ಶಾಲಾ ಆರೋಗ್ಯ ನರ್ಸ್: ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವುದು.
  • ಕೈಗಾರಿಕಾ ನರ್ಸ್: ಕೆಲಸದ ಸ್ಥಳಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು.
  • ಸಾರ್ವಜನಿಕ ಆರೋಗ್ಯ ನರ್ಸ್: ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳಲ್ಲಿ ಕೆಲಸ.
  • ಲಾಂಗ್ ಕೇರ್ ಹೋಂ ನರ್ಸ್: ಮನೆಗಳಲ್ಲಿ ಅನಾರೋಗ್ಯ ಪೀಡಿತರನ್ನು ದೀರ್ಘಕಾಲ ಆರೈಕೆ ಮಾಡುವುದು.
  • ನರ್ಸಿಂಗ್ ಟೀಚರ್‌: ನರ್ಸಿಂಗ್ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಬೋಧನೆ ಮಾಡುವುದು.

ಇದನ್ನೂ ಓದಿ | ಹತ್ತು ಪುಸ್ತಕ ಓದುವ ಬದಲು ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಇಶಿಕಾ ಸಿಂಗ್‌ ಸಲಹೆ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.