CBSE Exam: ಸಿಬಿಎಸ್‌ಇ ವಾರ್ಷಿಕ ಪರೀಕ್ಷೆ ಬರೆಯುವ ಗೆಳತಿ, ಗೆಳೆಯರಿಗೆ 8 ಟಿಪ್ಸ್‌; ಈ ರೀತಿ ಸಿದ್ಧತೆ ನಡೆಸಿದರೆ ಯಶಸ್ಸು ಖಾತ್ರಿ
ಕನ್ನಡ ಸುದ್ದಿ  /  ಜೀವನಶೈಲಿ  /  Cbse Exam: ಸಿಬಿಎಸ್‌ಇ ವಾರ್ಷಿಕ ಪರೀಕ್ಷೆ ಬರೆಯುವ ಗೆಳತಿ, ಗೆಳೆಯರಿಗೆ 8 ಟಿಪ್ಸ್‌; ಈ ರೀತಿ ಸಿದ್ಧತೆ ನಡೆಸಿದರೆ ಯಶಸ್ಸು ಖಾತ್ರಿ

CBSE Exam: ಸಿಬಿಎಸ್‌ಇ ವಾರ್ಷಿಕ ಪರೀಕ್ಷೆ ಬರೆಯುವ ಗೆಳತಿ, ಗೆಳೆಯರಿಗೆ 8 ಟಿಪ್ಸ್‌; ಈ ರೀತಿ ಸಿದ್ಧತೆ ನಡೆಸಿದರೆ ಯಶಸ್ಸು ಖಾತ್ರಿ

CBSE board exams 2025: ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಅಥವಾ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ನಡೆಸುವ ಬೋರ್ಡ್‌ ಪರೀಕ್ಷೆ ಫೆಬ್ರವರಿ 15ರಿಂದ ಆರಂಭವಾಗಲಿದೆ. ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಒತ್ತಡವಿಲದೆ ಯಾವ ರೀತಿ ಸಿದ್ಧತೆ ನಡೆಸಬೇಕೆಂಬ ವಿವರ ಇಲ್ಲಿದೆ.

CBSE Exam: ಸಿಬಿಎಸ್‌ಇ ವಾರ್ಷಿಕ ಪರೀಕ್ಷೆ ಬರೆಯುವ ಗೆಳತಿ, ಗೆಳೆಯರಿಗೆ 8 ಟಿಪ್ಸ್‌
CBSE Exam: ಸಿಬಿಎಸ್‌ಇ ವಾರ್ಷಿಕ ಪರೀಕ್ಷೆ ಬರೆಯುವ ಗೆಳತಿ, ಗೆಳೆಯರಿಗೆ 8 ಟಿಪ್ಸ್‌

CBSE board exams 2025: ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಅಥವಾ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ನಡೆಸುವ ಬೋರ್ಡ್‌ ಪರೀಕ್ಷೆ ಫೆಬ್ರವರಿ 15ರಿಂದ ಆರಂಭವಾಗಲಿದೆ. ಈಗಾಗಲೇ ಸಿಬಿಎಸ್‌ಇ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯಲ್ಲಿ ಮಗ್ನರಾಗಿರಬಹುದು. ಪರೀಕ್ಷೆಗೆ ಇನ್ನು ಹೆಚ್ಚು ದಿನ ಇಲ್ಲ. ಹೀಗಾಗಿ, ಒತ್ತಡ ಸಹಜ. ಈ ಸಮಯದಲ್ಲಿ ಒತ್ತಡದಲ್ಲಿ ಅಭ್ಯಾಸ ಮಾಡುವುದಕ್ಕಿಂತ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಂಡು ಕೂಲ್‌ ಆಗಿರಲು ಆದ್ಯತೆ ನೀಡಬೇಕು. ಪರೀಕ್ಷೆ ತಯಾರಿ ಎಂದರೆ ಎಷ್ಟು ಗಂಟೆ ಎಷ್ಟು ಟೆನ್ಷನ್‌ನಿಂದ ಓದಿದ್ದೇವೆ ಎಂದಲ್ಲ. ಯಾವ ರೀತಿ ವಿಷಯಗಳನ್ನು ಅರ್ಥ ಮಾಡಿಕೊಂಡು ಓದುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಗೆಳತಿ, ಗೆಳೆಯರಿಗೆ ಇಲ್ಲೊಂದಿಷ್ಟು ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ.

ಪ್ರಮುಖ ಟಾಪಿಕ್‌ಗಳಿಗೆ ಆದ್ಯತೆ ನೀಡಿ

ಸಿಲೆಬಸ್‌ನಲ್ಲಿ ಹೆಚ್ಚು ಅಗತ್ಯವೆನಿಸುವ ಟಾಪಿಕ್‌ಗಳನ್ನು ಗುರುತಿಸಿ. ಈ ಹಿಂದಿನ ಪ್ರಶ್ನೆಪತ್ರಿಕೆಗಳಲ್ಲಿ ಯಾವ ವಿಷಯದ ಮೇಲೆ ಹೆಚ್ಚು ಪ್ರಶ್ನೆ ಕೇಳಲಾಗಿತ್ತು ಎಂದು ತಿಳಿದುಕೊಳ್ಳಿ. ಈ ರೀತಿ ಹೆಚ್ಚು ಆದ್ಯತೆ ನೀಡಬೇಕಾದ ಟಾಪಿಕ್‌ಗಳು, ಚಾಪ್ಟರ್‌ಗಳನ್ನು ಗುರುತಿಸಿ. ಈ ವಿಷಯಗಳನ್ನು ಓದಲು ಹೆಚ್ಚುವರಿ ಗಮನ ನೀಡಿ. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಪ್ರತಿಯೊಂದನ್ನು ನೆನಪಿಟ್ಟುಕೊಳ್ಳಬೇಕೆಂಬ ಒತ್ತಡದಲ್ಲಿ ಓದಬೇಡಿ. ಒಂದು ವಿಷಯವನ್ನು ಓದಿ, ಪುನರ್‌ಮನನ ಮಾಡಿ.

ಓದಿಗೊಂದು ಟೈಂಟೇಬಲ್‌ ಇರಲಿ

ಪರೀಕ್ಷೆಗೆ ಇನ್ನು ಇಪತ್ತೈದು ದಿನವಿದೆ ಎಂದು ಹೆಚ್ಚು ನಿದ್ದೆಗೆಟ್ಟು ಓದಬೇಡಿ. ಓದಲು ಒಂದು ಟೈಂಟೇಬಲ್ ಹಾಕಿಕೊಳ್ಳಿ. ಇಷ್ಟು ಸಮಯದಿಂದ ಇಷ್ಟು ಸಮಯದವರೆಗೆ ಈ ವಿಷಯ, ಬಳಿಕ ಐದು ಅಥವಾ ಹತ್ತು ನಿಮಿಷ ರೆಸ್ಟ್‌, ಬಳಿಕ ಈ ವಿಷಯ... ಹೀಗೆ ಟೈಂಟೇಬಲ್‌ ಹಾಕಿಕೊಂಡು ಓದಿ. ಮೊಬೈಲ್‌, ಟಿವಿ, ಗ್ಯಾಡ್ಜೆಟ್‌ಗಳು ದೂರದಲ್ಲಿ ಇರಲಿ.

ಹಳೆ ಪ್ರಶ್ನೆಪತ್ರಿಕೆಗಳನ್ನು ನೋಡಿ

ಈ ಹಿಂದಿನ ಪ್ರಶ್ನೆಪತ್ರಿಕೆಗಳ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿ. ಯಾವ ಪ್ರಶ್ನೆಗಳಿಗೆ ಎಷ್ಟು ಸಮಯ ನೀಡುತ್ತ ಬರೆಯಬೇಕು ಎನ್ನುವುದೂ ಇದರಿಂದ ತಿಳಿಯುತ್ತದೆ. ಪರೀಕ್ಷೆ ಬರೆಯುವ ವೇಗ ಮತ್ತು ನಿಖರವಾಗಿ ಬರೆಯುವ ಸಾಮರ್ಥ್ಯ ಇದರಿಂದ ವೃದ್ಧಿಯಾಗುತ್ತದೆ.

ಪುನರ್‌ಮನನಕ್ಕೆ ಆದ್ಯತೆ ನೀಡಿ

ಪ್ರತಿಬಾರಿಯೂ ಹೊಸತನ್ನು ಓದುತ್ತ ಹೈಸ್ಪೀಡ್‌ನಲ್ಲಿ ಹೋಗಬೇಡಿ. ಒಮ್ಮೆ ಓದಿದ ಬಳಿಕ ಏನು ಓದಿರುವೆ ಎಂದು ಪುನರ್‌ಮನನ ಮಾಡಿಕೊಳ್ಲಿ. ಈ ರೀತಿ ನೆನಪಿಸಿಕೊಳ್ಳಲು ಸುಲಭವಾಗುವಂತೆ ನೋಟ್ಸ್‌ ಮಾಡಿಡಿ.

ಮನಸ್ಸಿನ ಒತ್ತಡ ಕಡಿಮೆ ಮಾಡಿ

ಓದು ಒತ್ತಡ ತಾರದೆ ಇರಲಿ. ದೀರ್ಘ ಉಸಿರಾಟ, ವ್ಯಾಯಾಮ, ಆಗಾಗ ನೀರು ಕುಡಿಯುವುದು ಇತ್ಯಾದಿಗಳ ಮೂಲಕ ರಿಲಾಕ್ಸ್‌ ಆಗಿ ಓದಿ.

ಸಾಕಷ್ಟು ನಿದ್ದೆ ಮಾಡಿ

ಓದುವಾಗ ನಿದ್ರಾಹೀನತೆ ಬೇಡ. ಪ್ರತಿದಿನ ಕನಿಷ್ಠ ಆರು ಏಳು ಗಂಟೆಯ ನಿದ್ರೆ ಇರುವಂತೆ ನಿಮ್ಮ ಟೈಂಟೇಬಲ್‌ ಇದ್ದರೆ ಉತ್ತಮ. ನಿದ್ರೆ ಸಮರ್ಪಕವಾಗಿದ್ದರೆ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಉತ್ತಮವಾಗಿರುತ್ತದೆ.

ಪೌಷ್ಟಿಕಾಂಶಯುಕ್ತ ಆಹಾರ ಸೇವನೆ

ಪರೀಕ್ಷೆಗೆ ಓದುವುದೆಂದು ಹೆಚ್ಚು ಚಹಾ ಕಾಫಿ ಕುಡಿಯಬೇಡಿ. ಹಣ್ಣು, ತರಕಾರಿಗಳು ಒಳಗೊಂಡಿರುವ ಸಮತೋಲಿತ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿದು ಹೈಡ್ರೇಟ್‌ ಆಗಿರಿ.

ಭಯ ಬೇಡ

ಪರೀಕ್ಷೆ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬೇಡಿ. ಇತರರ ಜತೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಅವಳು ಬೆಳಗ್ಗೆ ಮೂರು ಗಂಟೆಗೆ ಎದ್ದೇಳ್ತಾಳೆ, ನಾನು ಎರಡು ಗಂಟೆಗೆ ಎದ್ದೇಳುವೆ.... ಹೀಗೆ ಇತರರ ಜತೆ ಹೋಲಿಕೆ ಮಾಡಿಕೊಂಡು ಓದಬೇಡಿ. ನಿಮ್ಮ ಪರೀಕ್ಷಾ ಸಿದ್ಧತೆ ಕುರಿತು ನಿಮಗೆ ನಂಬಿಕೆ ಇರಲಿ. ಶುಭವಾಗಲಿ.

Whats_app_banner