ಕನ್ನಡ ಸುದ್ದಿ / ಜೀವನಶೈಲಿ /
CBSE Math Class 10: ಸಿಬಿಎಸ್‌ಇ 10ನೇ ತರಗತಿ ಗಣಿತ ಪರೀಕ್ಷೆಗೆ ಸಿದ್ಧತೆ ನಡೆಸಲು ಟಿಪ್ಸ್, ಬೋರ್ಡ್ ಎಕ್ಸಾಂನಲ್ಲಿ ಗರಿಷ್ಠ ಅಂಕ ಪಡೆಯಿರಿ
CBSE Math class 10 Exam Tips: ಸಿಬಿಎಸ್‌ಇ 10ನೇ ತರಗಗತಿ ಬೋರ್ಡ್ ಎಕ್ಸಾಂ ಹತ್ತಿರದಲ್ಲಿದೆ. ಸಿಬಿಎಸ್‌ಇ ಗಣಿತ ಪರೀಕ್ಷೆಗೆ ಸಿದ್ಧತೆ ನಡೆಸಲು ಬಯಸುವವರಿಗೆ ಅನುಕೂಲವಾಗುವಂತೆ ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

CBSE Math class 10: ಸಿಬಿಎಸ್‌ಇ 10ನೇ ತರಗತಿ ಗಣಿತ ಪರೀಕ್ಷೆಗೆ ಸಿದ್ಧತೆ ನಡೆಸಲು ಟಿಪ್ಸ್
CBSE Math class 10 Exam Tips: ಸಿಬಿಎಸ್‌ಇ 10ನೇ ತರಗಗತಿ ಬೋರ್ಡ್ ಎಕ್ಸಾಂನಲ್ಲಿ ಉತ್ತಮ ಅಂಕ ಪಡೆಯಬೇಕಾದರೆ ಸಮರ್ಪಕ ಸಿದ್ಧತೆ ಅಗತ್ಯ. ವಿಶೇಷವಾಗಿ ಗಣಿತವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸುಲಭವಾಗಿ ಹೆಚ್ಚು ಅಂಕ ಗಳಿಸಬಹುದು. ಗಣಿತವು ಲೆಕ್ಕಾಚಾರ ಮತ್ತು ಸಮಸ್ಯೆ ಬಗೆಹರಿಸುವ ಕೌಶಲ ಬಯಸುವುದರಿಂದ ಈ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಗಣಿತದಲ್ಲಿ ಉತ್ತಮ ಅಂಕ ಪಡೆಯಬೇಕಾದರೆ ಸಮರ್ಪಕ ಸಿದ್ಧತೆ, ತಯಾರಿ ಅತ್ಯಗತ್ಯ.
ಪರೀಕ್ಷೆ ಮಾದರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಶಾರ್ಟ್ ಆನ್ಸರ್ ಪ್ರಶ್ನೆಗಳು ಇರುತ್ತವೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳು ಇರುತ್ತವೆ. ಪ್ರತಿಪ್ರಶ್ನೆಗೆ ಉತ್ತರಿಸಲು ಎಷ್ಟು ಸಮಯ ಬೇಕಾಗಬಹುದು ಎಂದೆಲ್ಲ ಪರೀಕ್ಷಾ ಮಾದರಿಯನ್ನು ಅರ್ಥ ಮಾಡಿಕೊಳ್ಳಿ.
- ಸೂತ್ರಗಳನ್ನು ನೆನಪಿಡಿ: ಸೂತ್ರಗಳನ್ನು ನೆನಪಿಡಲು ಪ್ರತ್ಯೇಕ ನೋಟ್‌ಬುಕ್ ಇರಲಿ. ಬಿಡುವಿನ ವೇಳೆಯಲ್ಲಿ ಸೂತ್ರಗಳನ್ನು ಪರಿಹರಿಸಲು, ಬಿಡಿಸಲು ಪ್ರಯತ್ನಿಸುತ್ತ ಇರಿ.
- ಸ್ಟಡಿ ಟೈಂಟೇಬಲ್: ಪ್ರತಿದಿನ ಇಂತಿಷ್ಟು ಸಮಯ ಗಣಿತ ಅಭ್ಯಾಸ ಮಾಡಬೇಕೆಂದು ಟೈಂಟೇಬಲ್ ಹಾಕಿಕೊಳ್ಳಿ. ಪ್ರತಿದಿನ ಕನಿಷ್ಠ ಒಂದೆರಡು ಗಂಟೆ ಗಣಿತಕ್ಕೆ ಸಮಯ ನೀಡಲು ಪ್ರಯತ್ನಿಸಿ.
- ಎನ್‌ಸಿಇಆರ್‌ಟಿ ಬುಕ್‌ನಲ್ಲಿರುವ ಪ್ರಾಬ್ಲಂ ಸಾಲ್ವಿಂಗ್ ಪ್ರಶ್ನೆಗಳನ್ನು ಬಿಡಿಸಲು ಪ್ರಯತ್ನಿಸಿ.
- ಗುಂಪು ಅಧ್ಯಯನ: ಗಣಿತದ ಕುರಿತು ಉತ್ತಮ ಜ್ಞಾನ ಇರುವ ನಿಮ್ಮ ಗೆಳತಿ, ಗೆಳೆಯರ ಜತೆ ಗ್ರೂಪ್ ಸ್ಟಡಿ ಮಾಡಿ. ನಿಮ್ಮ ಸಮಯ ವ್ಯರ್ಥ ಮಾಡುವ ಸ್ನೇಹಿತರಿಂದ ದೂರವಿರಿ.
- ಇತರರಿಗೆ ಹೇಳಿಕೊಡಿ: ನೀವು ಕಲಿತಿರುವ ಗಣಿತ ವಿಷಯವನ್ನು ಸ್ನೇಹಿತರಿಗೆ ಹೇಳಿಕೊಡಿ. ಇದೇ ರೀತಿ ಅವರು ಕಲಿತಿರುವುದನ್ನು ನಿಮಗೆ ತಿಳಿಸಿ. ಇದರಿಂದ ವಿಷಯ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.
- ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ: ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಸಾಲ್ವ್ ಮಾಡಲು ಯತ್ನಿಸಿ. ಬಳಿಕ ಎನ್‌ಸಿಇಆರ್‌ಟಿ ಸೊಲ್ಯುಷನ್ ಪಿಡಿಎಫ್‌ಗಳನ್ನು ನೋಡಿ ನೀವು ನೀಡಿರುವ ಸರಿ ಉತ್ತರಗಳ ಜತೆ ತಾಳೆ ಮಾಡಿ.
- ಅಧ್ಯಯನದ ನಡುವೆ ಬ್ರೇಕ್: ಒಂದೇ ವಿಷಯವನ್ನು ಹೆಚ್ಚು ಸಮಯ ಓದುವುದರಿಂದ ಏಕತಾನತೆ ಬರುತ್ತದೆ. ಒಂದು ಗಂಟೆಗೊಮ್ಮೆ ಅಥವಾ ಅರ್ಧ ಗಂಟೆಗೊಮ್ಮೆ ಐದು ನಿಮಿಷ ಬ್ರೇಕ್ ತೆಗೆದುಕೊಂಡು ಓದಿ.
- ರಿವಿಷನ್ ಮಾಡಿ: ಇನ್ನು ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವುದರಿಂದ ರಿವಿಷನ್‌ಗೆ ಆದ್ಯತೆ ನೀಡಿ. ಹೆಚ್ಚು ಅಂಕದ ವೇಟೇಜ್ ಇರುವ ಟಾಪಿಕ್‌ಗಳಿಗೆ ವಿಶೇಷ ಗಮನ ನIಡಿ.
- ಸಮರ್ಪಕ ವಿಶ್ರಾಂತಿ ಇರಲಿ: ಪರೀಕ್ಷೆಗೆ ಕೆಲವು ದಿನಗಳು ಇರುವಾಗ ನಿದ್ರಾಹೀನತೆ ಇರದಂತೆ ನೋಡಿಕೊಳ್ಳಿ. ಪ್ರತಿದಿನ ಆರು ಅಥವಾ ಏಳು ಗಂಟೆ ನಿದ್ರೆ ಮಾಡಲು ಮರೆಯಬೇಡಿ. ನಿದ್ದೆ ಮಾಡುವಾಗ ಅನಗತ್ಯ ಯೋಚನೆಗಳು ಬಾರದಂತೆ ನೋಡಿಕೊಳ್ಳಿ.
- ಗಣಿತವನ್ನು ಪ್ರೀತಿಸಿ: ನಿಮ್ಮ ಮನಸ್ಸಿನಲ್ಲಿ ಗಣಿತ ಕಷ್ಟ ಎಂಬ ಅಭಿಪ್ರಾಯವಿದ್ದರೆ ಬದಲಾಯಿಸಲು ಪ್ರಯತ್ನಿಸಿ. ಗಣಿತದ ಕುರಿತು ಹೆಚ್ಚು ಆಸಕ್ತಿ ಇರುವವರ ಬಳಿ ಗಣಿತದ ಗುಟ್ಟುಗಳನ್ನು ಕೇಳಿ ತಿಳಿದುಕೊಳ್ಳಿ. ಮನಸ್ಸಿಟ್ಟು ಅಧ್ಯಯನ ಮಾಡಿ. ಖಂಡಿತಾ ಯಶಸ್ಸು ನಿಮ್ಮದಾಗುತ್ತದೆ.

ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.