CBSE Science Exam: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ತಯಾರಿ; ಫಿಸಿಕ್ಸ್‌, ಕೆಮಿಸ್ಟ್ರಿ, ಬಯೋಲಜಿಯಲ್ಲಿ ಹೆಚ್ಚು ಅಂಕ ಗಳಿಸಲು ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  Cbse Science Exam: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ತಯಾರಿ; ಫಿಸಿಕ್ಸ್‌, ಕೆಮಿಸ್ಟ್ರಿ, ಬಯೋಲಜಿಯಲ್ಲಿ ಹೆಚ್ಚು ಅಂಕ ಗಳಿಸಲು ಟಿಪ್ಸ್‌

CBSE Science Exam: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ತಯಾರಿ; ಫಿಸಿಕ್ಸ್‌, ಕೆಮಿಸ್ಟ್ರಿ, ಬಯೋಲಜಿಯಲ್ಲಿ ಹೆಚ್ಚು ಅಂಕ ಗಳಿಸಲು ಟಿಪ್ಸ್‌

CBSE 10 Science Exam Tips: ಶೀಘ್ರದಲ್ಲಿ ಸಿಬಿಎಸ್‌ಇ 10ನೇ ತರಗತಿ ಬೋರ್ಡ್‌ ಪರೀಕ್ಷೆ ನಡೆಯಲಿದೆ. ಸಿಬಿಎಸ್‌ಇ ವಿಜ್ಞಾನ ಪರೀಕ್ಷೆಗೆ ಸಿದ್ಧತೆ ನಡೆಸಲು ಇಲ್ಲೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ. ಕೆಮಿಸ್ಟ್ರಿ, ಬಯೋಲಜಿ, ಫಿಸಿಕ್ಸ್‌ನಲ್ಲಿ ಹೆಚ್ಚು ಅಂಕ ಗಳಿಕೆಗೆ ಈ ಮುಂದಿನ ಸಲಹೆಗಳು ನಿಮಗೆ ನೆರವಾಗಬಹುದು.

CBSE Science Exam: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ತಯಾರಿ ಹೀಗಿರಲಿ
CBSE Science Exam: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ತಯಾರಿ ಹೀಗಿರಲಿ

CBSE 10 Science Exam Tips: ಶೀಘ್ರದಲ್ಲಿ ಸಿಬಿಎಸ್‌ಇ 10ನೇ ತರಗತಿ ಬೋರ್ಡ್‌ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಬಯಸುವವರು ಗಣಿತದಂತೆ ವಿಜ್ಞಾನದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಮೊದಲನೆಯದಾಗಿ, ಎಕ್ಸಾಂ ಪ್ಯಾಟರ್ನ್‌ ತಿಳಿದುಕೊಳ್ಳಿ. ಅತಿಸಣ್ಣ, ಸಣ್ಣ ಮತ್ತು ದೀರ್ಘ ಉತ್ತರ ಬಯಸುವ ಪ್ರಶ್ನೆಗಳು ಮತ್ತು ಅವುಗಳಿಗೆ ನಿಗದಿಗೊಳಿಸಿದ ಅಂಕಗಳ ಬಗ್ಗೆ ತಿಳಿದುಕೊಳ್ಳಿ. ಅಂತಹ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಓದಿ. ವಿಜ್ಞಾನ ಪರೀಕ್ಷೆಗೆ ಕೆಲವೇ ದಿನಗಳಿವೆ. ಸಾಧ್ಯವಾದರೆ ಒಮ್ಮೆ ಪೂರ್ಣ ಸಿಲೇಬಸ್‌ ಮೇಲೆ ಕಣ್ಣಾಡಿಸಿ. ಕೆಮಿಸ್ಟ್ರಿ, ಬಯೋಲಜಿ, ಫಿಸಿಕ್ಸ್‌ನಲ್ಲಿ ಹೆಚ್ಚು ಅಂಕ ಗಳಿಕೆಗೆ ಈ ಮುಂದಿನ ಸಲಹೆಗಳು ನಿಮಗೆ ನೆರವಾಗಬಹುದು.

ಸಿಬಿಎಸ್‌ಇ ಫಿಸಿಕ್ಸ್‌ ಪರೀಕ್ಷೆಗೆ ತಯಾರಿ

ಭೌತಶಾಸ್ತ್ರದಲ್ಲಿ, ಪರಿಕಲ್ಪನೆ ಮತ್ತು ಸೂತ್ರ ಆಧರಿತ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳಲಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಎಲ್ಲಾ ಪ್ರಮುಖ ಸೂತ್ರಗಳನ್ನು ಸಂಪೂರ್ಣವಾಗಿ ತಿಳಿದಿರಬೇಕು. ನ್ಯೂಟನ್‌ನ ಚಲನೆಯ ನಿಯಮಗಳು ಮತ್ತು ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಂಡಿರಿ. ನ್ಯೂಮರಿಕಲ್‌ ಸರಣಿ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸಲು ಗೊತ್ತಿರಲಿ. ಲೆನ್ಸ್‌ ಮತ್ತು ಮಿರರ್‌ ನ್ಯೂಮರಿಕಲ್‌ ಪ್ರಾಬ್ಲಮ್ಸ್‌ ಬಗ್ಗೆಯೂ ಪ್ರಶ್ನೆ ಇರಬಹುದು. ವಿದ್ಯುತ್ ಸರ್ಕ್ಯೂಟ್ ರೇಖಾಚಿತ್ರ, ಎಸಿ ಮತ್ತು ಡಿಸಿ ಜನರೇಟರ್, ಮಸೂರಗಳು, ಮಾನವನ ಕಣ್ಣು, ಸೊಲೆನಾಯ್ಡ್ ಮತ್ತು ಬಾರ್ ಮ್ಯಾಗ್ನೆಟ್ ಸುತ್ತಲಿನ ಕಾಂತೀಯ ಕ್ಷೇತ್ರದ ರೇಖೆಗಳು ಮುಂತಾದ ವಿಷಯಗಳ ಪ್ರಶ್ನೆಗಳೂ ಪರೀಕ್ಷೆಯಲ್ಲಿ ಇರಬಹುದು. ಯಾವ ರೀತಿಯಲ್ಲಿ ಸಂಖ್ಯಾತ್ಮಕ ಮತ್ತು ಸೈದ್ಧಾಂತಿಕ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ತಿಳಿಯಲು ಹಳೆಯ ಪ್ರಶ್ನೆಪತ್ರಿಕೆಗಳನ್ನು ಅವಲೋಕಿಸಲು ಮರೆಯಬೇಡಿ.

ಕೆಮಿಸ್ಟ್ರಿಗೆ ತಯಾರಿ ಹೀಗಿರಲಿ

ಹತ್ತನೇ ತರಗತಿ ವಿಜ್ಞಾನದಲ್ಲಿ ರಸಾಯನಶಾಸ್ತ್ರ ಪರೀಕ್ಷೆಗೂ ಸಮರ್ಪಕವಾದ ಸಿದ್ಧತೆ ನಡೆಸಲು ಮರೆಯಬೇಡಿ. ರಸಾಯನಶಾಸ್ತ್ರವು ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಸಲು ನೆರವಾಗುತ್ತದೆ. balancing chemical equations ಇತ್ಯಾದಿಗಳು ತಿಳಿದಿರಲಿ. ದೈನಂದಿನ ಜೀವನದಲ್ಲಿ ಆಮ್ಲಗಳು, ಬೇಸ್‌ಗಳು ಮತ್ತು ಲವಣಗಳನ್ನು ಹೇಗೆ ಅಪ್ಲೈ ಮಾಡಬಹುದು ಎಂದು ತಿಳಿದುಕೊಂಡಿರಿ. ಪ್ರತಿ ವರ್ಷ ಲವಣಗಳು ಮತ್ತು ಅವುಗಳ ಸಂಯುಕ್ತಗಳ ಬಗ್ಗೆ 2-3 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಲವಣಗಳು ಮತ್ತು ಅವುಗಳ ಸಂಯುಕ್ತಗಳ ಸಾಮಾನ್ಯ ಹೆಸರುಗಳು, ತಯಾರಿಕೆ, ರಾಸಾಯನಿಕ ಸೂತ್ರ ಮತ್ತು ಉಪಯೋಗಗಳನ್ನು ತಿಳಿದಿರಬೇಕು. ಕಾರ್ಬನ್ ಸಂಯುಕ್ತಗಳ ಬಗ್ಗೆಯೂ ಸಾಕಷ್ಟು ವಿಷಯ ತಿಳಿದುಕೊಂಡಿರಿ. ಹೀಗೆ, ಕೆಮಿಸ್ಟ್ರಿಗೆ ಸಂಬಂಧಪಟ್ಟ ಹಲವು ಪ್ರಮುಖ ವಿಷಯಗಳನ್ನು ಅರ್ಥ ಮಾಡಿಕೊಳ್ಳಿ. ಕೆಮಿಸ್ಟ್ರಿಯಲ್ಲಿ ಉತ್ತಮ ಅಂಕ ಪಡೆಯಲು ಹಳೆಯ ಪ್ರಶ್ನೆಪತ್ರಿಕೆಗಳ ಅವಲೋಕನವೂ ನೆರವಾಗಬಹುದು.

ಬಯೋಲಜಿ ಪರೀಕ್ಷೆಗೆ ತಯಾರಿ

ಬಯೋಲಜಿ ಪರೀಕ್ಷೆಗೆ ಉತ್ತರ ಬರೆಯಲು ಸಮರ್ಪಕ ಸಿದ್ಧತೆ ಅಗತ್ಯ. ಉಸಿರಾಟದ ವ್ಯವಸ್ಥೆ, ಮಾನವ ಮೆದುಳು, ಹೂವಿನ ವಿವಿಧ ಭಾಗಗಳು ಇತ್ಯಾದಿಗಳ ರೇಖಾಚಿತ್ರಗಳನ್ನು ಮಾಡಲು ಅಭ್ಯಾಸ ಮಾಡಬೇಕು. ಮೆಂಡೆಲ್ ಅವರ ಪ್ರಯೋಗಗಳನ್ನು ಅರ್ಥ ಮಾಡಿಕೊಳ್ಳಿ. ನುವಂಶಿಕತೆಯ ಲಕ್ಷಣಗಳನ್ನು ತಿಳಿದುಕೊಂಡಿರಿ. ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಅನೇಕ ಪರಿಭಾಷೆಗಳು ಅಥವಾ ಟರ್ಮಿನಾಲಜಿಯನ್ನು ನೆನಪಿಟ್ಟುಕೊಳ್ಳಿ. ಇವುಗಳನ್ನು ಬರೆದು ಅರ್ಥಮಾಡಿಕೊಳ್ಳುವುದು ಉತ್ತಮ. ಜೀವಶಾಸ್ತ್ರವು ಹಲವಾರು ಸಂಕೀರ್ಣ ರೇಖಾಚಿತ್ರಗಳನ್ನು ಒಳಗೊಂಡಿದೆ. ಹೀಗಾಗಿ ಅಚ್ಚುಕಟ್ಟಾಗಿ ರೇಖಾಚಿತ್ರಗಳನ್ನು ಮಾಡಲು ಪ್ರ್ಯಾಕ್ಟಿಸ್‌ ಮಾಡಿ. ಇದು ಹೆಚ್ಚು ಅಂಕಗಳಿಕೆಗೆ ಸಹಾಯಕ. ಇನ್ನುಳಿದಂತೆ ಉಳಿದ ಪಠ್ಯ ವಿಷಯಗಳ ಕಡೆಗೂ ಗಮನವಿರಲಿ.

ತರಗತಿಯಲ್ಲಿ ಶಿಕ್ಷಕರು ಪಾಠ ಮಾಡಿರುವ ವಿಷಯಗಳನ್ನು ನೆನಪಿಸಿಕೊಳ್ಳಿ. ನೋಟ್ಸ್‌ಗಳನ್ನು ಓದಿ. ಯಾವುದಾದರೂ ವಿಷಯ ಅರ್ಥವಾಗದೆ ಇದ್ದರೆ ಇಂಟರ್‌ನೆಟ್‌ ಸಹಾಯದಿಂದ ಹೆಚ್ಚಿನ ವಿವರ ಪಡೆದುಕೊಳ್ಳಿ.

Whats_app_banner