Interviews: ಜಾಬ್‌ ಇಂಟರ್‌ವ್ಯೂನಲ್ಲಿ ಸಕ್ಸಸ್‌ ಆಗ್ಬೇಕಾ; ಹಾಗಾದ್ರೆ ಈ 5 ಕೌಶಲಗಳನ್ನು ಕರಗತ ಮಾಡ್ಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Interviews: ಜಾಬ್‌ ಇಂಟರ್‌ವ್ಯೂನಲ್ಲಿ ಸಕ್ಸಸ್‌ ಆಗ್ಬೇಕಾ; ಹಾಗಾದ್ರೆ ಈ 5 ಕೌಶಲಗಳನ್ನು ಕರಗತ ಮಾಡ್ಕೊಳ್ಳಿ

Interviews: ಜಾಬ್‌ ಇಂಟರ್‌ವ್ಯೂನಲ್ಲಿ ಸಕ್ಸಸ್‌ ಆಗ್ಬೇಕಾ; ಹಾಗಾದ್ರೆ ಈ 5 ಕೌಶಲಗಳನ್ನು ಕರಗತ ಮಾಡ್ಕೊಳ್ಳಿ

ಓದು ಮುಗಿಸುವವರೆಗೂ ಓದುವ ಚಿಂತೆಯಾದ್ರೆ ಓದು ಮುಗಿದ ಮೇಲೆ ಉದ್ಯೋಗದ ಚಿಂತೆ. ಚಿಂತೆ ಎಂದ ಮೇಲೆ ಸಂದರ್ಶನ ಇರುವುದು ಖಚಿತ. ಹಲವರು ಸಂದರ್ಶನದಲ್ಲಿ ಫೇಲ್‌ ಆಗುತ್ತಾರೆ. ನೀವು ಜಾಬ್‌ ಇಂಟರ್‌ವ್ಯೂ ಎದುರಿಸುತ್ತಿದ್ದ, ಇಂಟರ್‌ವ್ಯೂ ಸಕ್ಸಸ್‌ ಆಗಬೇಕು ಅಂತಿದ್ರೆ ಈ 5 ಕೌಶಲಗಳನ್ನು ಕರಗತ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇತ್ತೀಚೆಗೆ ಓದುವವರ ಸಂಖ್ಯೆ ಹೆಚ್ಚಿರುವ ಕಾರಣದಿಂದ ಉದ್ಯೋಗಕ್ಷೇತ್ರದಲ್ಲಿನ ಬೇಡಿಕೆಯೂ ಹೆಚ್ಚಾಗಿದೆ. ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಸಂದರ್ಶನಕ್ಕೆ ಬಹಳ ಪ್ರಾಮುಖ್ಯವಿದೆ. ಒಂದು ಉದ್ಯೋಗಕ್ಕೆ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಹಲವರ ರೆಸ್ಯೂಮೆಗಳು ಆಯ್ಕೆಯಾದರೂ ಸಂದರ್ಶನಕ್ಕೆ ಆಯ್ಕೆ ಆಗುವವರು ಕಡಿಮೆ. ಸಂದರ್ಶನದಲ್ಲಿ ನಿಮ್ಮ ಕೌಶಲವನ್ನು ಹೊರಹಾಕಿದರಷ್ಟೇ ಉದ್ಯೋಗ ಗಳಿಸಲು ಸಾಧ್ಯ. ಇಲ್ಲದಿದ್ದರೆ ಖಂಡಿತ ನಿಮಗೆ ಜಾಬ್‌ ಸಿಗುವುದು ಕಷ್ಟ. ಅಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಸಂದರ್ಶನ ಎದುರಿಸುವಾಗ ಒಂದಿಷ್ಟು ಕೌಶಲಗಳನ್ನು ರೂಢಿಸಿಕೊಳ್ಳುವುದು ಬಹಳ ಅಗತ್ಯ.

ತಂತ್ರಜ್ಞಾನದ ಪರಿಣತಯನ್ನು ಮೀರಿಯೂ ಉದ್ಯೋಗದಾತರು ನಿಮ್ಮ ಸಂವಹನ ಕೌಶಲ ಹಾಗೂ ಮಾತಿನ ಧಾಟಿಯನ್ನು ಗಮನಿಸುತ್ತಾರೆ. ಹಾಗಾಗಿ ನಮ್ಮ ಮಾತಿನ ಧಾಟಿ ಸಂದರ್ಶನದಲ್ಲಿ ಯಶಸ್ಸು ಗಳಿಸಲು ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ಈ ಕೆಲವು ಕೌಶಲಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಪರಿಣಾಮಕಾರಿ ಸಂವಹನ

ಪರಿಣಾಮಕಾರಿ ಸಂವಹನ ಪ್ರತಿಯೊಬ್ಬರ ಬದುಕಿನಲ್ಲೂ ಅವಶ್ಯ. ಸಂದರ್ಶನದ ಹಂತದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಹಾಗೂ ಸಂಕ್ಷಿಪ್ತವಾಗಿ ವ್ಯಕ್ತಪಡಿಸುವುದು ಮುಖ್ಯವಾಗುತ್ತದೆ. ಸಂದರ್ಶಕರ ಮಾತನ್ನು ಆಲಿಸಿ. ಅವರ ಮಾತಿನ ಒಳನೋಟಗಳನ್ನು ಅರ್ಥ ಮಾಡಿಕೊಳ್ಳಿ. ಅರ್ಥವಾಗದ ಪ್ರಶ್ನೆಗಳನ್ನು ಪುನಃ ಇನ್ನೊಮ್ಮೆ ಹೇಳುವಂತೆ ಕೇಳಿ. ಆತ್ಮವಿಶ್ವಾಸದಿಂದ ಮಾತನಾಡುವುದನ್ನು ಅಭ್ಯಾಸ ಮಾಡಿ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಮುಖ್ಯವಾಗುತ್ತದೆ. ನಿಮ್ಮ ಆಂಗಿಕ ಭಾಷೆಯ ಮೇಲೆ ಗಮನ ಹರಿಸಿ. ಒಟ್ಟಾರೆ ಪರಿಣಾಮಕಾರಿ ಸಂವಹನ ಇಂಟರ್‌ವ್ಯೂನಲ್ಲಿ ಬಹಳ ಮುಖ್ಯ ಎನ್ನಿಸುತ್ತದೆ.

ಸಕ್ರಿಯವಾಗಿ ಆಲಿಸುವುದು

ಸಂದರ್ಶನದಲ್ಲಿ ಸಂದರ್ಶಕರು ಹೇಳುವ ಮಾತಗಳನ್ನು ಗಮನಕೊಟ್ಟು ಆಲಿಸುವುದು ಮುಖ್ಯವಾಗುತ್ತದೆ. ಇದು ಸಂದರ್ಶನದ ಸಮಯದಲ್ಲಿ ಬಹಳ ಮುಖ್ಯ. ಇದರಿಂದ ನಿಮಗೆ ನಿಮಗೆ ಗೊಂದಲಗಳು ಮೂಡುವುದಿಲ್ಲ. ಅಲ್ಲದೆ ನೀವು ಗಮನಕೊಟ್ಟು ಆಲಿಸುವುದನ್ನು ನೋಡಿದ ಸಂದರ್ಶಕರಿಗೆ ನಿಮಗೆ ಅವರು ಹೇಳುವ ವಿಚಾರದಲ್ಲಿ ಆಸಕ್ತಿ ಇದೆ ಎಂಬುದನ್ನು ತೋರಿಸಿದಂತಾಗುತ್ತದೆ. ಸಂದರ್ಶಕರು ಕೇಳುವ ಯಾವುದೇ ಪ್ರಶ್ನೆಗೆ ಉತ್ತರಿಸುವ ಮೊದಲು ಅವರು ಹೇಳುವುದನ್ನು ಸರಿಯಾಗಿ ಗ್ರಹಿಸಿ. ಸಂದರ್ಶನಕ್ಕೂ ಮೊದಲು ಸ್ನೇಹಿತರು ಅಥವಾ ಸಹೋದ್ಯೋಗಿಗಳು ಅಥವಾ ಮಾರ್ಗದರ್ಶಕರೊಂದಿಗೆ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕ್ರಿಯವಾಗಿ ಆಲಿಸುವ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ. ಅವರ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಸಮಸ್ಯೆಯನ್ನು ಎದುರಿಸುವುದು

ಉದ್ಯೋಗ ನೀಡುವವರು ಸಮಸ್ಯೆ ಪರಿಹರಿಸುವ ಕೌಶಲ ಹಾಗೂ ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳನ್ನು ಹೆಚ್ಚು ಗೌರವಿಸುತ್ತಾರೆ. ಸಂದರ್ಶನಗಳು ಸಾಮಾನ್ಯವಾಗಿ ತ್ವರಿತ ಚಿಂತನೆ ಮತ್ತು ಸಮರ್ಥ ಸಮಸ್ಯೆ-ಪರಿಹರಿಸುವ ಅಗತ್ಯವಿರುವ ಸನ್ನಿವೇಶಗಳನ್ನು ಒಳಗೊಂಡಿರುತ್ತವೆ.

ನೀವು ಎದುರಿಸಿದ ಹಿಂದಿನ ಸವಾಲುಗಳು ಮತ್ತು ಅವುಗಳನ್ನು ಜಯಿಸಲು ನೀವು ಬಳಸಿದ ತಂತ್ರಗಳನ್ನು ಸಂದರ್ಶಕರ ಎದುರು ಬಿಂಬಿಸಲು ಸಿದ್ಧರಾಗಿ. ನಿಮ್ಮ ವಿಶ್ಲೇಷಣಾತ್ಮಕ ಕೌಶಲಗಳು, ಸೃಜನಶೀಲತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಒತ್ತು ನೀಡಿ.

ಅಳವಡಿಸಿಕೊಳ್ಳುವಿಕೆ ಮತ್ತು ಹೊಂದಿಕೊಳ್ಳುವಿಕೆ

ಇಂದಿನ ಕ್ರಿಯಾತ್ಮಕ ಉದ್ಯೋಗ ವಾತಾವರಣದಲ್ಲಿ ಹೊಂದಿಕೊಳ್ಳುವುದು ಹಾಗೂ ನಮ್ಯತೆಯು ಉದ್ಯೋಗದಾತರು ಹೆಚ್ಚು ಗೌರವಿಸುವ ಗುಣವಾಗಿದೆ. ಹೊಸ ಅನುಭವಗಳನ್ನು ಸಕ್ರಿಯವಾಗಿ ಹುಡುಕುವ ಮೂಲಕ, ವಿವಿಧ ಯೋಜನೆಗಳಿಗೆ ಸ್ವಯಂಸೇವಕರಾಗಿ ಅಥವಾ ವಿಭಿನ್ನ ಪಾತ್ರಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಯತೆಯನ್ನು ಅಭ್ಯಾಸ ಮಾಡಿ. ನಿಮ್ಮ ಕೌಶಲವನ್ನು ವಿಸ್ತರಿಸುವುದು ಮಾತ್ರವಲ್ಲದೆ ಯಾವುದೇ ಕೆಲಸದ ವಾತಾವರಣದಲ್ಲಿ ಬದಲಾವಣೆಯನ್ನು ಸ್ವೀಕರಿಸಲು ಮತ್ತು ಉತ್ಕೃಷ್ಟಗೊಳಿಸಲು ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ನಾಯಕತ್ವ ಮತ್ತು ಟೀಮ್‌ವರ್ಕ್

ಉದ್ಯೋಗದಾತರು ತಂಡಗಳನ್ನು ಮುನ್ನಡೆಸುವ, ಇತರರನ್ನು ಪ್ರೇರೇಪಿಸುವ ಮತ್ತು ಪರಿಣಾಮಕಾರಿಯಾಗಿ ಸಹಕರಿಸುವ ಅಭ್ಯರ್ಥಿಗಳನ್ನು ಗೌರವಿಸುತ್ತಾರೆ. ಪ್ರಮುಖ ಯೋಜನೆಗಳು ಅಥವಾ ಇತರರಿಗೆ ಮಾರ್ಗದರ್ಶನ ನೀಡುವಂತಹ ನಿಮ್ಮ ನಾಯಕತ್ವದ ಅನುಭವಗಳನ್ನು ಹೈಲೈಟ್ ಮಾಡಿ. ಸಾಮೂಹಿಕ ಗುರಿಗಳನ್ನು ಸಾಧಿಸಲು ನೀವು ತಂಡದ ಸದಸ್ಯರನ್ನು ಹೇಗೆ ಪ್ರೇರೇಪಿಸಿದ್ದೀರಿ ಮತ್ತು ಪ್ರಭಾವ ಬೀರಿದ್ದೀರಿ ಎಂಬುದನ್ನು ಚರ್ಚಿಸಿ.

ಗುಂಪಿನಲ್ಲಿ ಮಾಡುವ ಕೆಲಸದಲ್ಲಿ ನೀವು ಎಷ್ಟು ಯಶಸ್ವಿಯಾಗುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಾಯಕತ್ವ ಮತ್ತು ಟೀಮ್‌ವರ್ಕ್ ಕೌಶಲಗಳ ಮೂಲಕ ಸಂಸ್ಥೆಯ ಯಶಸ್ಸಿಗೆ ಕೊಡುಗೆ ನೀಡಬಹುದು ಮತ್ತು ಇತರರೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬಹುದು ಎಂದು ತೋರಿಸುತ್ತದೆ.

Whats_app_banner