ಕನ್ನಡ ಸುದ್ದಿ  /  ಜೀವನಶೈಲಿ  /  ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು, ಮುಂದೆ ಯಾವ ಕೋರ್ಸ್‌ ಮಾಡೋದು ಅನ್ನೋ ಚಿಂತೆನಾ, ಹಾಗಿದ್ರೆ ಈ ಆಯ್ಕೆಗಳನ್ನೊಮ್ಮೆ ನೋಡಿ

ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು, ಮುಂದೆ ಯಾವ ಕೋರ್ಸ್‌ ಮಾಡೋದು ಅನ್ನೋ ಚಿಂತೆನಾ, ಹಾಗಿದ್ರೆ ಈ ಆಯ್ಕೆಗಳನ್ನೊಮ್ಮೆ ನೋಡಿ

ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಿದ್ರೆ ಉತ್ತಮ ಎಂಬ ಗೊಂದಲ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕಾಡುವುದು ಸಹಜ. ನಿಮ್ಮಲ್ಲೂ ಈ ಗೊಂದಲವಿದ್ರೆ ಪಿಯುಸಿ ಕಾಮರ್ಸ್‌ ನಂತರ ಮಾಡಬಹುದಾದ ಬೆಸ್ಟ್‌ ಕೋರ್ಸ್‌ಗಳ ಪಟ್ಟಿ ಇಲ್ಲಿದೆ.

ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು, ಮುಂದೆ ಯಾವ ಕೋರ್ಸ್‌ ಮಾಡೋದು ಅನ್ನೋ ಚಿಂತೆನಾ, ಹಾಗಿದ್ರೆ ಈ ಆಯ್ಕೆಗಳನ್ನೊಮ್ಮೆ ನೋಡಿ
ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು, ಮುಂದೆ ಯಾವ ಕೋರ್ಸ್‌ ಮಾಡೋದು ಅನ್ನೋ ಚಿಂತೆನಾ, ಹಾಗಿದ್ರೆ ಈ ಆಯ್ಕೆಗಳನ್ನೊಮ್ಮೆ ನೋಡಿ

ಇಂದು (ಏಪ್ರಿಲ್‌ 10) ದ್ವಿತೀಯ ಪಿಯುಸಿ ಫಲಿತಾಂಶವಿದ್ದು, ಪಿಯುಸಿಯಲ್ಲಿ ವಿವಿಧ ವಿಭಾಗಗಳನ್ನು ಆಯ್ಕೆ ಮಾಡಿಕೊಂಡವರು ಮುಂದೇನು ಎಂಬ ಗೊಂದಲದಲ್ಲಿರುತ್ತಾರೆ. ನೀವು ಪಿಯುಸಿ ಕಾಮರ್ಸ್‌ ವಿಭಾಗ ಆಯ್ಕೆ ಮಾಡಿಕೊಂಡಿದ್ದು, ಮುಂದೆ ಯಾವ ಕೋರ್ಸ್‌ ಮಾಡುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಮಕ್ಕಳ ಭವಿಷ್ಯ ಓದಿನ ಬಗ್ಗೆ ಪೋಷಕರಿಗೂ ಅಷ್ಟೇ ಚಿಂತೆ ಇರುತ್ತದೆ. ಆದರೆ ಕಾಮರ್ಸ್‌ ಮಾಡಿದವರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹತ್ತು ಹಲವು ಕೋರ್ಸ್‌ಗಳಿವೆ. ಇವರು ಕೇವಲ ಕಾಮರ್ಸ್‌ ಮಾತ್ರವಲ್ಲ, ಇವರ ಅಭಿರುಚಿಗೆ ತಕ್ಕಂತಹ ಕೋರ್ಸ್‌ ಆರ್ಟ್ಸ್‌ನಲ್ಲಿದ್ದರೂ ಅದಕ್ಕೆ ಸೇರಬಹುದು.

ಟ್ರೆಂಡಿಂಗ್​ ಸುದ್ದಿ

ಕಾಮರ್ಸ್‌ನ ವ್ಯಾಪ್ತಿಯು ವ್ಯಾಪಾರ, ಹಣಕಾಸು, ಲೆಕ್ಕಪತ್ರ ನಿರ್ವಹಣೆ, ಅರ್ಥಶಾಸ್ತ್ರ, ನಿರ್ವಹಣೆ ಮತ್ತು ಮಾರುಕಟ್ಟೆಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ. ವಾಣಿಜ್ಯ ವಿದ್ಯಾರ್ಥಿಗಳು ಬ್ಯಾಂಕಿಂಗ್, ಚಿಲ್ಲರೆ ಮತ್ತು ಇ-ಕಾಮರ್ಸ್‌ನಂತಹ ಕ್ಷೇತ್ರಗಳಲ್ಲಿ ವೈವಿಧ್ಯಮಯ ಅವಕಾಶಗಳನ್ನು ಕಾಣಬಹುದು. ಬ್ಯಾಚುಲರ್ ಆಫ್ ಕಾಮರ್ಸ್, ಬಿಕಾಮ್ ವಾಣಿಜ್ಯ ಸ್ಟ್ರೀಮ್‌ನಲ್ಲಿ ಅತ್ಯಂತ ಜನಪ್ರಿಯ ಕೋರ್ಸ್‌ಗಳಲ್ಲಿ ಒಂದಾಗಿದೆ. ವಾಣಿಜ್ಯ ವಿಭಾಗ ಅಥವಾ ಕಾಮರ್ಸ್‌ನಲ್ಲಿ ಮಾಡಿದ ವಿದ್ಯಾರ್ಥಿಗಳು ತಮ್ಮ ಕರಿಯರ್‌ಗೆ ಆಯ್ಕೆ ಮಾಡಿಕೊಳ್ಳುವ ಜನಪ್ರಿಯ ಕೋರ್ಸ್‌ಗಳ ಪಟ್ಟಿ ಇಲ್ಲಿದೆ.

ಪಿಯುಸಿ ಕಾಮರ್ಸ್‌ ನಂತರ ಮಾಡಬಹುದಾದ ಬೆಸ್ಟ್‌ ಕೋರ್ಸ್‌ಗಳು

ಬಿಕಾಂ: ಸಾಮಾನ್ಯವಾಗಿ ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದವರ ಮೊದಲ ಆಯ್ಕೆ ಬಿಕಾಂ ಆಗಿರುತ್ತದೆ. ಬಿಕಾಂನಲ್ಲಿ ಅಕೌಂಟಿಂಗ್‌, ಟಾಕ್ಸ್‌ಸೇಷನ್‌, ಎಕನಾಮಿಕ್ಸ್‌, ಫೈನಾಷಿಯಲ್‌ ಮ್ಯಾನೇಜ್‌ಮೆಂಟ್‌ ಸೇರಿದಂತೆ ಇನ್ನಿತರ ವಿಷಯಗಳಿರುತ್ತವೆ. ಸದ್ಯ ಹೆಚ್ಚು ಜನ ಬಿಕಾಂ ಮಾಡುತ್ತಿದ್ದರೂ ಇದರಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ಅವಕಾಶಗಳಿಗೆ ಕೊರತೆ ಇಲ್ಲ.

ಬ್ಯಾಚುಲರ್ಸ್‌ ಅಫ್‌ ಎಕನಾಮಿಕ್ಸ್‌: ಇದು ಮೂರು ವರ್ಷಗಳ ಪದವಿ ಕೋರ್ಸ್‌ ಆಗಿದೆ. ಅರ್ಥಶಾಸ್ತ್ರದ ಬಗ್ಗೆ ಭದ್ರ ಬುನಾದಿ ನೀಡುವುದು ಈ ಕೋರ್ಸ್‌ನ ಉದ್ದೇಶವಾಗಿದೆ.

ಬ್ಯಾಚುಲರ್‌ ಅಫ್‌ ಅಕೌಂಟಿಂಗ್‌ ಅಂಡ್‌ ಫೈನಾನ್ಸ್‌: ಬಿಎಫ್‌ಎ ಎಂದು ಕರೆಯುವ ಈ ಕೋರ್ಸ್‌ 3 ವರ್ಷದ ಬ್ಯಾಚುಲರ್‌ ಡಿಗ್ರಿಯಾಗಿದೆ. ಭಾರತದಲ್ಲಿ ಬಿಎಫ್‌ಎ ಕೋರ್ಸ್‌ ಮಾಡಲು ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ.

ಬ್ಯಾಚುಲರ್‌ ಅಫ್‌ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ (ಬಿಬಿಎ): ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಬರುವ ಬಿಬಿಎ ಮೂರು ವರ್ಷಗಳ ಡಿಗ್ರಿ ಕೋರ್ಸ್‌ ಆಗಿದೆ. ಇದನ್ನು ಮುಗಿಸಿದವರಿಗೆ ಸೇಕ್ಸ್‌, ಮಾರ್ಕೆಟಿಂಗ್‌, ಫೈನಾನ್ಸ್‌ ಎಜುಕೇಷನ್‌ ಮುಂತಾದ ವಿಭಾಗಗಳಲ್ಲಿ ಉದ್ಯೋಗ ದೊರೆಯುತ್ತದೆ.

ಬ್ಯಾಚುಲರ್‌ ಆಫ್‌ ಬ್ಯುಸಿನೆಸ್‌ ಅಡ್ಮಿಸ್ಟ್ರೇಷನ್‌ ಕಂಪ್ಯೂಟರ್‌ ಅಪ್ಲಿಕೇಷನ್‌(ಬಿಬಿಎಸಿಎ): ಬಿಬಿಎ ಕಂಪ್ಯೂಟರ್‌ ಅಪ್ಲಿಕೇಷನ್‌ ಎಂದೂ ಕರೆಯುವ ಮೂರು ವರ್ಷದ ಡಿಗ್ರಿ ಕೋರ್ಸ್‌ ಭಾರತದಾದ್ಯಂತ ಕೆಲವು ಯೂನಿವರ್ಸಿಟಿ ಹಾಗೂ ಕಾಲೇಜಿಗಳಲ್ಲಿ ಲಭ್ಯವಿದೆ. ಈ ಕೋರ್ಸ್‌ಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾಗಿ ಐಟಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳ ಕ್ಷೇತ್ರದಲ್ಲಿ ತರಬೇತಿ ನೀಡಲಾಗುತ್ತದೆ.

ಚಾರ್ಟೆಡ್‌ ಅಕೌಂಟೆನ್ಸಿ: ಚಾರ್ಟೆಡ್‌ ಅಕೌಂಟೆಂಟ್‌ ಕೋರ್ಸ್‌ ಆಡಿಟಿಂಗ್‌, ಅಕೌಂಟಿಂಗ್‌, ಫೈನಾಷಿಯಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಟ್ಯಾಕ್ಸೇಷನ್‌ ಈ ಎಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ. ಐಸಿಎಐ ಪ್ರತಿ ವರ್ಷ ಸಿಎ ಫೌಂಡೇಷನ್‌ ಪರೀಕ್ಷೆಗಳನ್ನು ಆಯೋಜಿಸುತ್ತದೆ.

ಬ್ಯಾಚುಲರ್‌ ಆಫ್‌ ಲಾ: (ಬಿಎ ಎಲ್‌ಎಲ್‌ಬಿ): ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದವರು ಬಿಎ ಎಲ್‌ಎಲ್‌ಬಿ ಕೂಡ ಮಾಡಬಹುದು. 5 ವರ್ಷಗಳ ಸಮಗ್ರ ಕೋರ್ಸ್‌ ಇದಾಗಿರುತ್ತದೆ. ಕಾನೂನು ವಲಯದಲ್ಲಿ ವೃತ್ತಿ ಬಯಸುವವರಿಗೆ ಇದು ಬೆಸ್ಟ್‌ ಆಯ್ಕೆ.

ಸಿಎಸ್‌: ಕಂಪನಿ ಸೆಕ್ರೆಟರಿ ಅಥವಾ ಸಿಎ ಕೋರ್ಸ್‌ ಅನ್ನು ಕೂಡ ಪಿಯುಸಿ ಕಾಮರ್ಸ್‌ ಮಾಡಿದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ICSI ನಡೆಸುವ ವಿವಿಧ ಹಂತಗಳಲ್ಲಿ ಅರ್ಹತಾ ಪರೀಕ್ಷೆಗಳಿಗೆ ಹಾಜರಾಗಬೇಕು.

ಪಿಯುಸಿ ನೀವು ಕಾಮರ್ಸ್‌ ಮಾಡಿದ್ದು, ಮುಂದೇನು ಮಾಡಬಹುದು ಎಂಬ ಗೊಂದಲದಲ್ಲಿದ್ದರೆ ಈ ಕೋರ್ಸ್‌ಗಳು ನಿಮ್ಮ ಆಯ್ಕೆಯಾಗಬಹುದು. ಸದ್ಯ ಭಾರತದಲ್ಲಿ ಪ್ರಚಲಿತದಲ್ಲಿರುವ ಟಾಪ್‌ ಕೋರ್ಸ್‌ಗಳ ಇದಾಗಿವೆ.