Exam Tips: ಗಣಿತ ಪರೀಕ್ಷೆಯಲ್ಲಿ ನೀವು ನಿಧಾನವ? ಬ್ಯಾಂಕ್ ಶಾಲಾ ಪರೀಕ್ಷೆಗಳಲ್ಲಿ ಗಣಿತ ಪತ್ರಿಕೆ ವೇಗವಾಗಿ ಬಿಡಿಸಲು ಇಲ್ಲಿದೆ ಟ್ರಿಕ್ಸ್
Exam Tips: ಗಣಿತ ಪರೀಕ್ಷೆಯಲ್ಲಿ ಸಮಯ ವ್ಯರ್ಥವಾದರೆ ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಂಕ ಕಳೆದುಕೊಳ್ಳಬೇಕಾಗುತ್ತದೆ. ಗಣಿತ ಪರೀಕ್ಷೆಯಲ್ಲಿ ವೇಗವಾಗಿ ಲೆಕ್ಕ ಮಾಡಲು ತಿಳಿದವರು ಯಶಸ್ಸು ಪಡೆಯುತ್ತಾರೆ. ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್, ರೀಸನಿಂಗ್ ಪ್ರಶ್ನೆಗಳನ್ನು ಬುದ್ಧಿವಂತಿಕೆಯಿಂದ ಬೇಗ ಬಿಡಿಸಬೇಕು.
ಗಣಿತ ಪರೀಕ್ಷೆ ಎಂದರೆ ಕೆಲವರಿಗೆ ತಲೆನೋವು, ಇನ್ನು ಕೆಲವರಿಗೆ ಅಚ್ಚುಮೆಚ್ಚು. ಆದರೆ, ಗಣಿತ ಪರೀಕ್ಷೆಯಲ್ಲಿ ಲೆಕ್ಕ ಬಿಡಿಸೋದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವವರು ಅನೇಕರು ಇದ್ದಾರೆ. ಗಣಿತದ ಸಮಸ್ಯೆ ಬಿಡಿಸಲು ಗೊತ್ತು, ಉತ್ತರ ಬಿಡಿಸಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಎನ್ನುವವರಿಗೆ ಇಲ್ಲಿ ಒಂದಿಷ್ಟು ಸಲಹೆ ನೀಡಲಾಗಿದೆ. ಗಣಿತ ಪರೀಕ್ಷೆಯಲ್ಲಿ ಸಮಯ ವ್ಯರ್ಥವಾದರೆ ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಂಕ ಕಳೆದುಕೊಳ್ಳಬೇಕಾಗುತ್ತದೆ. ಗಣಿತ ಪರೀಕ್ಷೆಯಲ್ಲಿ ವೇಗವಾಗಿ ಲೆಕ್ಕ ಮಾಡಲು ತಿಳಿದವರು ಯಶಸ್ಸು ಪಡೆಯುತ್ತಾರೆ. ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್, ರೀಸನಿಂಗ್ ಪ್ರಶ್ನೆಗಳನ್ನು ಬುದ್ಧಿವಂತಿಕೆಯಿಂದ ಬೇಗ ಬಿಡಿಸಬೇಕು.
ಸಮಸ್ಯೆ ಬಿಡಿಸಲು ಕಲಿಯಿರಿ: ಗಣಿತದ ಸಮಸ್ಯೆ ಬಿಡಿಸಲು ಅದರದ್ದೇ ಆದ ತಂತ್ರಗಳು, ಅಡ್ಡದಾರಿಗಳು ಇರುತ್ತವೆ. ಇಂತಹ ಶಾರ್ಟ್‌ಕಟ್, ಟ್ರಿಕ್ಸ್ ಕಲಿತುಕೊಂಡರೆ ವೇಗವಾಗಿ ಗಣಿತದ ಪ್ರಶ್ನೆಗಳಿಗೆ ಉತ್ತರಿಸಬಹುದು. ನಿರ್ದಿಷ್ಟ ಸಮಸ್ಯೆ ಬಗೆಹರಿಸಲು ನಿರ್ದಿಷ್ಟ ಟ್ರಿಕ್ಸ್ ಇರುತ್ತದೆ.
ಕಠಿಣ ಅಭ್ಯಾಸದಿಂದ ಅನುಭವ: ಹೊಸದಾಗಿ ವಾಹನ ಕಲಿಯುವವರಿಗೂ ವಾಹನ ಕಲಿತು ಸಾಕಷ್ಟು ವರ್ಷ ಚಾಲನೆ ಮಾಡಿದವರಿಗೂ ವ್ಯತ್ಯಾಸ ಇರುತ್ತದೆ. ಕಠಿಣ ಪರಿಶ್ರಮ, ಅಭ್ಯಾಸದಿಂದ ಮಾತ್ರ ನೀವು ಉತ್ತಮವಾಗಿ ಪರೀಕ್ಷೆ ಬರೆಯಲು ಸಾಧ್ಯ. ಇತ್ತೀಚೆಗೆ ಸಿಇಟಿಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ಕರ್ನಾಟಕದಲ್ಲಿ ಮೊದಲ ರಾಂಕ್ ಪಡೆದ ವಿಘ್ನೇಶ್ ಕೂಡ ಇದೇ ಮಾತು ಹೇಳಿದ್ದರು. ಯಶಸ್ಸಿಗೆ ವೇಗದ ಅವಶ್ಯಕತೆಯಿದೆ ಎಂದಿದ್ದರು. ಅವರ ಸಂದರ್ಶನ ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ಯಾಟರ್ನ್ ಅನುಸರಿಸಿ: ಕೆಲವು ಲೆಕ್ಕದ ಪ್ರಶ್ನೆಗಳಲ್ಲಿ ಹೋಲಿಕೆಗಳು, ಮಾದರಿಗಳು ಒಂದೇ ರೀತಿ ಇರಬಹುದು. ಗುಣಾಕಾರ, ವ್ಯವಕಲನ ಇತ್ಯಾದಿ ಲೆಕ್ಕಗಳನ್ನು ಬಿಡಿಸಲು ಪ್ಯಾಟರ್ನ್ ಕಂಡುಕೊಳ್ಳುವುದು ಅತ್ಯಂತ ಮುಖ್ಯ.
ಗುಣಕಾರದ ಟೇಬಲ್ಸ್ ತಿಳಿದಿರಲಿ: ಬ್ಯಾಂಕ್ ಪರೀಕ್ಷೆ ಬರೆಯುವ ಅಭ್ಯರ್ಥಿಯು ಕನಿಷ್ಠ 1ರಿಂದ 30ರವರೆಗಿನ ಗುಣಾಕಾರವನ್ನು ತಿಳಿದಿರಬೇಕು. ಬಹುಆಯ್ಕೆ ಪ್ರಶ್ನೆಗಳಲ್ಲಿ ಸೂಕ್ತ ಉತ್ತರಕ್ಕೆ ಹತ್ತಿರವಾಗಿರುವ ಉತ್ತರವನ್ನು ತಿಳಿದುಕೊಳ್ಳಲು ಕೂಡ ಇದರಿಂದ ತಿಳಿಯಿರಿ. ಮಗ್ಗಿ ತಿಳಿಯದೆ ಇದ್ದರೆ ಕಲಿಯಿರಿ.
ವಿಷುವಲ್ ಕಲಿಕೆ: ಒಂದು ವಿಷಯದ ದೃಶ್ಯೀಕರಣ ಅಥವಾ ವಿಷುವಲ್ ಕಲಿಕೆಯು ವಿದ್ಯಾರ್ಥಿಯ ನೆನಪಿನ ಶಕ್ತಿಯನ್ನು ಉತ್ತಮಪಡಿಸುತ್ತದೆ. ಈ ರೀತಿ ಕಲಿತರೆ ಓದಿದ್ದು ದೀರ್ಘಕಾಲ ನೆನಪಲ್ಲಿ ಇರುತ್ತದೆ. ಪೆನ್ ಪೇಪರ್ ಬದಲಿಗೆ ವಿಷುಯಲೈಜೇಷನ್ ಮಾಡುತ್ತ ಲೆಕ್ಕ ಮಾಡಿ.
ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ: ಪ್ರಶ್ನೆಯನ್ನು ಸರಿಯಾಗಿ ಅಬ್ಸರ್ವೇಷನ್ ಮಾಡಿ ಮುಗಿಸಿದ ಬಳಿಕವೇ ಉತ್ತರಿಸಲು ಅಥವಾ ಲೆಕ್ಕ ಬಿಡಿಸಲು ಆರಂಭಿಸಿ. ಇದರೊಂದಿಗೆ, ಬಿಡುವಾಗಿದ್ದಾಗ ಗಣಿತದ ಪ್ರಶ್ನೆಗಳನ್ನು ಸರಳ ವಿಧಾನದಲ್ಲಿ ಬಗೆಹರಿಸಲು ಪ್ರಯತ್ನಿಸಿ. ಗಣಿತದ ಲೆಕ್ಕಾಚಾರಕ್ಕೆ ಸಂಬಂಧಪಟ್ಟ ಆನ್‌ಲೈನ್ ಅಣಕು ಪರೀಕ್ಷೆಗಳಲ್ಲಿ ಭಾಗವಹಿಸಿ. ಇಂತಹ ಪರೀಕ್ಷೆಗಳಲ್ಲಿ ಪ್ರತಿಯೊಂದು ಪ್ರಶ್ನೆಗಳನ್ನು ಉತ್ತರಿಸಲು ಎಷ್ಟು ಸಮಯ ತೆಗೆದುಕೊಳ್ಳುವಿರಿ ಎಂದು ತಿಳಿದುಕೊಳ್ಳಿ. ಯಾವ ಲೆಕ್ಕ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವಿರಿ ಎಂದು ತಿಳಿದುಕೊಳ್ಳಿ. ಆ ವಿಷಯದ ಕುರಿತು ಹೆಚ್ಚು ಅಭ್ಯಾಸ ನಡೆಸಿ. ಕ್ಯಾಲ್ಕ್ಯುಲೇಟರ್ ಬಳಕೆ ಮಾಡದೆ ಲೆಕ್ಕ ಮಾಡಲು ಪ್ರಯತ್ನಿಸಿ. ಮನಸ್ಸಿನಲ್ಲಿಯೇ ಲೆಕ್ಕ ಮಾಡುವ ವಿಧಾನ ಕಲಿತುಕೊಳ್ಳಿ.