ಕನ್ನಡ ಸುದ್ದಿ  /  Lifestyle  /  Education News How To Stay Away From Rumors During Exams You Should Know These 5 Things Rmy

ಪರೀಕ್ಷೆ ಸಮಯದಲ್ಲಿ ವದಂತಿಗಳಿಂದ ದೂರವಿರುವುದು ಹೇಗೆ; ಈ 5 ಸುಲಭ ಮಾರ್ಗಗಳು ನಿಮಗೆ ತಿಳಿದಿರಲಿ -Exam Tips

Exam Tips: ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಕೊಡಬಾರದು. ಏಕೆಂದರೆ ಇದು ಪರೀಕ್ಷೆಯ ಸಿದ್ಧತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಕೊಡಬಾರದು. ಇದು ಪರೀಕ್ಷೆಯ ಸಿದ್ಧತೆ ಮೇಲೆ ಪರಿಣಾಮ ಬೀರುತ್ತದೆ. (ಫೋಟೊ-ಫೈಲ್)
ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಕೊಡಬಾರದು. ಇದು ಪರೀಕ್ಷೆಯ ಸಿದ್ಧತೆ ಮೇಲೆ ಪರಿಣಾಮ ಬೀರುತ್ತದೆ. (ಫೋಟೊ-ಫೈಲ್)

How to Stay Away from Rumors During Exams: ಇತ್ತೀಚಿನ ದಿನಗಳಲ್ಲಿ ಯಾವುದೇ ಅಗತ್ಯ ಮಾಹಿತಿ ತುಂಬಾ ವೇಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ ಸುಳ್ಳು ಮಾಹಿತಿ, ವದಂತಿಗಳು ಕೂಡ ಅಷ್ಟೇ ವೇಗವಾಗಿ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಯಾವುದು ಸತ್ಯ, ಯಾವುದು ನಿಜ ಎಂಬುದನ್ನು ಖಾತ್ರಿ ಮಾಡಿಕೊಳ್ಳುವಷ್ಟರಲ್ಲಿ ಎಲ್ಲಾ ಕಡೆಗೆ ತಲುಪಿರುತ್ತೆ.

ವದಂತಿಗಳು ನಮ್ಮ ಜೀವನದಲ್ಲಿ ಅತ್ಯಂತ ಸಾಮಾನ್ಯ ವಿದ್ಯಮಾನಗಳಲ್ಲಿ ಒಂದಾಗಿದೆ ಎಂದು ಯಾವುದೇ ಸಂದೇಹವಿಲ್ಲದೆ ಹೇಳಬಹುದು. ಸಾಮಾಜಿಕ ಮಾಧ್ಯಮಗಳು ಬಂದ ನಂತರವಂತೂ ವದಂತಿಗಳು ವೇಗವನ್ನು ಪಡೆದುಕೊಂಡಿವೆ. ಪ್ರಮುಖ ಸಂದರ್ಭಗಳಲ್ಲಿ ವದಂತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಹಾನಿಕಾರಕ. ಪರೀಕ್ಷೆ ಎದುರಿಸುವಂತ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳು ಅನುಮಾನಾಸ್ಪದ ಮಾಹಿತಿಗೆ ಯಾವುದೇ ಕಾರಣಕ್ಕೂ ಕಿವಿಗೊಡಬಾರದು. ಇದು ಪರೀಕ್ಷೆ ಸಿದ್ಧತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಕೂಡ ಸಾಮಾಜಿಕ ಮಾಧ್ಯಮಗಳಲ್ಲಿನ ವದಂತಿಗಳಿಗೆ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಇತ್ತೀಚೆಗೆ, ಸಿಬಿಎಸ್ಇ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಪರೀಕ್ಷೆಗಳಿಗೆ ಸಂಬಂಧಿಸಿದ ವದಂತಿಗಳು ಮತ್ತು ನಕಲಿ ಮಾಹಿತಿಯ ವಿರುದ್ಧ ಎಚ್ಚರಿಕೆ ನೀಡಲು ನೋಟಿಸ್ ಬಿಡುಗಡೆ ಮಾಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಈ ಹಿಂದೆ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಮತ್ತು ಟೆಲಿಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವದಂತಿಗಳನ್ನು ಹರಡಲು ಕೆಲವು ನಿರ್ಲಜ್ಜ ಶಕ್ತಿಗಳು ಪ್ರಯತ್ನಿಸಿವೆ ಎಂದು ಸಿಬಿಎಸ್ಇ ಹೇಳಿದೆ.

ಮಂಡಳಿಯ ಪ್ರಕಾರ, ಪರೀಕ್ಷೆಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳು ಬರುತ್ತವೆ ಎಂಬ ಹೇಳಿಕೆಯೊಂದಿಗೆ ದುಷ್ಕರ್ಮಿಗಳು ಮಾದರಿ ಪತ್ರಿಕೆಗಳಿಗೆ ನಕಲಿ ಲಿಂಕ್‌ಗಳನ್ನು ಶೇರ್ ಮಾಡಲು ಪ್ರಯತ್ನಿಸಿದ್ದರು. ಈ ಕಾಣದ ಕಿಡಿಗೇಡಿಗಳು ಉದ್ದೇಶವೇ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಹಣ ಲೂಟಿ ಮಾಡುವುದು. ಮಾದರಿ ಪ್ರಶ್ನೆ ಪತ್ರಿಕೆಯಿದೆ ಎಂದು ಹೇಳಿ ಹಣ ಕೇಳುತ್ತಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕಾನೂನು ಜಾರಿ ಸಂಸ್ಥೆಗಳ ಸಹಾಯದಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಸಿಬಿಎಸ್ಇ ಹೇಳಿದೆ.

ಹಾಗಾದರೆ ಪರೀಕ್ಷೆ ಸಂದರ್ಭಗಳಲ್ಲಿ ಅನುಮಾನಸ್ಪದ, ವದಂತಿಗಳು, ಊಹಾಪೋಹ ಹಾಗೂ ಸುಳ್ಳು ಮಾಹಿತಿಗೆ ಕಿವಿಕೊಡದಂತೆ ಇರಲು ಏನು ಮಾಡಬೇಕು? ಎಂಬ ಪ್ರಶ್ನೆ ನಿಮಗೂ ಎದುರಾಗಬಹುದು. ಇದಕ್ಕಾಗಿ ಇಲ್ಲಿ ನೀಡಿರುವ ಪ್ರಮುಖ 5 ಅಂಶಗಳನ್ನು ತಿಳಿದುಕೊಳ್ಳುವುದು ತುಂಬಾ ಪ್ರಯೋಜಕಾರಿಯಾಗಿದೆ.

1. ಸಾಮಾಜಿಕ ಮಾಧ್ಯಮ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳ್ಳೇದು

ನಮ್ಮಲ್ಲಿ ಹೆಚ್ಚಿನವರು ವಿರಾಮದ ಸಮಯದಲ್ಲಿ ನೆಚ್ಚಿನ ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ನಿಮ್ಮ ಪರೀಕ್ಷೆಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕೆಲವೊಂದು ಮಾಹಿತಿ ವೆಬ್‌ಸೈಟ್‌ಗಳಲ್ಲಿ ಸಿಗಬಹುದು. ಆದರೆ ಇದನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುವ ಕೆಲವು ಕಿಡಿಗೇಡಿಗಳು ಇತರೆ ಮಾಹಿತಿ ನೀಡುವ ನೆಪದಲ್ಲಿ ನೀವು ಅವರ ನಕಲಿ ಸೈಟ್‌ಗಳನ್ನು ತೆರೆಯುವಂತೆ ಮಾಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂತರ ವೆಬ್‌ಸೈಟ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಆಕರ್ಷಕ ಹೆಡ್‌ಲೈನ್ ಮೂಲಕ ನಿಮ್ಮ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದಿರಿ. ಪರೀಕ್ಷೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯುವುದು ಉತ್ತಮ. ಕನಿಷ್ಠ, ಅನಗತ್ಯ ಮಾಹಿತಿಯಿಂದ ನೀವು ವಿಚಲಿತರಾಗುವುದಿಲ್ಲ.

2. ಅಧಿಕೃತ ಮೂಲದಿಂದ ಮಾತ್ರ ವಿಶ್ವಾಸಾರ್ಹ ಮಾಹಿತಿ ಪಡೆಯಿರಿ

ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯ ವಿಷಯಕ್ಕೆ ಬಂದಾಗ, ಅಧಿಕೃತ ಮೂಲವನ್ನು ಮಾತ್ರ ನಂಬಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಬೇಕು. ಉದಾಹರಣೆಗೆ, 30 ನಕಲಿ ಸೈಟ್‌ಗಳಿಗೆ ಸಂಬಂಧಿಸಿದ ತನ್ನ ಅಧಿಸೂಚನೆಯಲ್ಲಿ, ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ಮತ್ತು ಅಧಿಕೃತ ಮಾಹಿತಿಗಾಗಿ @cbseindia29 ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಫಾಲೋ ಮಾಡುವಂತೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪರೀಕ್ಷೆಗಳನ್ನು ನಡೆಸುವ ಸಂಸ್ಥೆ ಮಾತ್ರ ನಿರ್ದಿಷ್ಟ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಿಗೆ ತಿಳಿಸುವ ಅಥವಾ ಸೂಚನೆ ನೀಡುವ ಏಕೈಕ ಪ್ರಾಧಿಕಾರವಾಗಿದೆ. ಹೀಗಾಗಿ ಇಂತಹ ವಿಷಯಗಳ ಬಗ್ಗೆಯೂ ಗಮನವಿರಲಿ.

3. ಮಾಹಿತಿ ತಿಳಿಯುವ ಮುನ್ನ ವಿಶ್ವಾಸಾರ್ಹತೆಯನ್ನ ಪರಿಶೀಲಿಸಿ

ವೆಬ್‌ಸೈಟ್‌ಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯ ತುಣುಕನ್ನು ನೀವು ಕಂಡರೆ, ಅದು ಬಹುತೇಕ ಅಧಿಕೃತ ಮೂಲದಂತೆಯೇ ಕಾಣಿಸುತ್ತದೆ. ಆದರೆ ಅದನ್ನು ನೇರವಾಗಿ ನಂಬಬೇಡಿ. ಮಾಡಬೇಕಾದ ಮೊದಲ ಹಂತವೆಂದರೆ ಮಾಹಿತಿಯು ಎಷ್ಟು ಅಧಿಕೃತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಮ್ಮ ಶಿಕ್ಷಕರು, ಸ್ನೇಹಿತರಿಂದಲೂ ಮಾಹಿತಿಯನ್ನು ಸ್ಪಷ್ಟಪಡಿಸಿಕೊಳ್ಳಿ.

4. ಸೂಕ್ತ ಕ್ರಮ ತೆಗೆದುಕೊಳ್ಳಿ

ಕೆಲವೊಮ್ಮೆ ಸುಳ್ಳು ಮಾಹಿತಿಯನ್ನು ಹರಡುವ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುವುದು ಯಾವಾಗಲೂ ನೀವು ಮಾಡಬಹುದಾದ ಅತ್ಯುತ್ತಮ ವಿಷಯವಾಗಿದೆ. ತಪ್ಪುಗಳ ವಿರುದ್ಧ ನಿಲ್ಲುವುದು ನಕಾರಾತ್ಮಕ ಫಲಿತಾಂಶವನ್ನು ತಡೆಗಟ್ಟುವಲ್ಲಿ ಬಹಳ ದೂರ ಹೋಗುತ್ತದೆ. ಇದಲ್ಲದೆ, ಅವರು ನಂಬಬಾರದ ಮೂಲದ ಬಗ್ಗೆ ತಿಳಿದುಕೊಳ್ಳಲು ಇದು ಇತರರಿಗೆ ಸಹಾಯ ಮಾಡುತ್ತದೆ. ನಕಲಿ ಮಾಹಿತಿಯನ್ನು ಹರಡುವವರ ಬಗ್ಗೆ ಪರೀಕ್ಷಾ ಮಂಡಳಿಯನ್ನು ಎಚ್ಚರಿಸುವುದು ಕ್ರಮ ತೆಗೆದುಕೊಳ್ಳುವಂತೆ ಮಾಡುವುದು ಒಂದು ಮಾರ್ಗವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಮಂಡಳಿಯು ಅಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ.

5. ಸುಳ್ಳು ಮಾಹಿತಿಯ ಬಗ್ಗೆ ಇತರರನ್ನು ಎಚ್ಚರಿಸಿ

ನಕಲಿ ಮಾಹಿತಿಯನ್ನು ನೋಡಿದ ನಂತರ ಮಾಡಬೇಕಾದ ಮತ್ತೊಂದು ಸಂವೇದನಾಶೀಲ ವಿಷಯವೆಂದರೆ ಅದರ ಬಗ್ಗೆ ಇತರರಿಗೆ ಅರಿವು ಮೂಡಿಸುವುದು. ನೀವು ನೋಡಿದ ಸುಳ್ಳು ಮಾಹಿತಿಯ ಬಗ್ಗೆ ನಿಮ್ಮ ಗೆಳೆಯರು ಮತ್ತು ಶಿಕ್ಷಕರು ಹಾಗೂ ಪೋಷಕರಿಗೆ ತಿಳಿಸಿ. ಅದನ್ನು ಮಾಡಲು ಸುಲಭವಾದ ಮಾರ್ಗವೆಂದರೆ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕುವುದು. ಹಾಗೆ ಮಾಡುವುದರಿಂದ, ನೀವು ಇನ್ನೂ ಅನೇಕರನ್ನು ವದಂತಿಗಳ ಬಲೆಗೆ ಬೀಳದಂತೆ ಉಳಿಸುತ್ತೀರಿ.

(This copy first appeared in Hindustan Times Kannada website. To read more like this please logon to kannada.hindustantimes.com )