Viral Video: ರಸ್ತೆಯೊಂದು, ನೂರಾರು ತರಬೇತಿ ಕೇಂದ್ರಗಳು; ದೇಶದ ಪ್ರಮುಖ ಕೋಚಿಂಗ್ ಹಬ್ ಹೈದರಾಬಾದ್‌ ವಿಡಿಯೊ ವೈರಲ್
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ರಸ್ತೆಯೊಂದು, ನೂರಾರು ತರಬೇತಿ ಕೇಂದ್ರಗಳು; ದೇಶದ ಪ್ರಮುಖ ಕೋಚಿಂಗ್ ಹಬ್ ಹೈದರಾಬಾದ್‌ ವಿಡಿಯೊ ವೈರಲ್

Viral Video: ರಸ್ತೆಯೊಂದು, ನೂರಾರು ತರಬೇತಿ ಕೇಂದ್ರಗಳು; ದೇಶದ ಪ್ರಮುಖ ಕೋಚಿಂಗ್ ಹಬ್ ಹೈದರಾಬಾದ್‌ ವಿಡಿಯೊ ವೈರಲ್

Coaching Centers in Hyderabad: ಕೋಚಿಂಗ್ ಕೇಂದ್ರಗಳನ್ನು ಹೊಂದಿರುವ ದೇಶದ ಪ್ರಮುಖ ನಗರಗಳ ಪೈಕಿ ಹೈದರಾಬಾದ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅದು ಎಷ್ಟರ ಮಟ್ಟಿಗೆ ಅನ್ನೋದನ್ನು ನೀವೇ ನೋಡಿ.

ಹೈದರಾಬಾದ್‌ನ ಅಮೀರ್‌ಪೇಟ್‌ ರಸ್ತೆಯಲ್ಲಿರುವ ನೂರಾರು ಕೋಚಿಂಗ್ ಕೇಂದ್ರಗಳು
ಹೈದರಾಬಾದ್‌ನ ಅಮೀರ್‌ಪೇಟ್‌ ರಸ್ತೆಯಲ್ಲಿರುವ ನೂರಾರು ಕೋಚಿಂಗ್ ಕೇಂದ್ರಗಳು

ಹೈದರಾಬಾದ್ (ತೆಲಂಗಾಣ): ಯಾವುದಾದರೂ ಒಂದು ಏರಿಯಾ ಅಥವಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎರಡ್ಮೂರು ಕೋಚಿಂಗ್ ಸೆಂಟರ್‌ಗಳು ಇರುವುದನ್ನು ನೋಡಿರುತ್ತೇವೆ. ಇನ್ನೂ ಸ್ವಲ್ಪ ಹೆಚ್ಚೆಂದರೆ 10 ಇರಬಹುದು. ಆದರೆ ನೆರೆಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನೂರಾರು ಕೋಚಿಂಗ್ ಕೇಂದ್ರಗಳು (Coaching Centers in Hyderabad) ಒಂದೇ ರಸ್ತೆಯಲ್ಲಿವೆ. ನಗರದ ಅಮೀರ್‌ಪೇಟ್‌ನಲ್ಲಿರುವ (Ameerpet) ಕೋಚಿಂಗ್ ಕೇಂದ್ರಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕಣ್ಣು ಹಾಯಿಸಿದಷ್ಟು ದೂರ ಪ್ರಮುಖ ರಸ್ತೆ, ಬೀದಿಗಳಲ್ಲಿ ಬರೀ ಈ ತರಬೇತಿ ಕೇಂದ್ರಗಳೇ ಇವೆ.

ಸ್ಟಾರ್ಟ್‌ಅಪ್ ಸಂಸ್ಥಾಪಕ ಹಾಗೂ ಕೋಚಿಂಗ್ ಕೇಂದ್ರದ ಮಾಲೀಕ ಅಕ್ಷಯ್ ನರಿಸೆಟ್ಟಿ ಎಂಬುವರು ವಿಡಿಯೊವನ್ನು ಹಂಚಿಕೊಂಡಿದ್ದು, ಹೈದರಾಬಾದ್ ಖಾಸಗಿ ಕೋಚಿಂಗ್ ಕೇಂದ್ರಗಳ ತಾಣವಾಗಿದೆ. ರಸ್ತೆ ಪಕ್ಕದಲ್ಲಿರುವ ಬಹುಮಹಡಿಗಳ ತುಂಬಾ ಕೋಚಿಂಗ್ ಕೇಂದ್ರಗಳ ಪೋಸ್ಟರ್ ಹಾಗೂ ಬ್ಯಾನರ್‌ಗಳೇ ಇವೆ.

ಸದಾ ಗದ್ದಲದಿಂದ ಕೂಡಿರುವ ನಗರವಾಗಿರುವ ಹೈದರಾಬಾದ್‌ನ ಪ್ರಮುಖ ಪ್ರದೇಶವಾಗಿರುವ ಅಮೀರ್‌ಪೇಟ್ ಅನ್ನು ಒಜಿ (ಒರಿಜಿನಲ್) ಅಂತಲೂ ಕರೆಯುತ್ತಾರೆ. ಹೈದರಾಬಾದ್‌ನ ಒಟಿ ಅಮೀರ್‌ಪೇಟ್. ಇಲ್ಲಿ ಡೇಟಾ ಸೈನ್ಸ್‌ ಕೋರ್ಸ್‌ಗಳಿಂದ ಹಿಡಿದು ಲ್ಯಾಪ್‌ಟಾಪ್ ರಿಪೇರಿ ಕೋರ್ಸ್‌ಗಳ ವರೆಗೆ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಕೋರ್ಸ್ ಕಲಿಸಲು ನಾವೂ ಕೂಡ ತರಬೇತಿ ಕೇಂದ್ರವನ್ನು ಹೊಂದಿದ್ದೇವೆ ಎಂದು ಅಕ್ಷಯ್ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರು ಈ ವಿಡಿಯೊವನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಖಾಸಗಿ ಕೋಚಿಂಗ್ ಸೆಂಟರ್‌ಗಳ ಹಬ್ಬ ಎಂಬುದನ್ನು ವಿಡಿಯೊ ಸಾಬೀತು ಮಾಡಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಯುಎಸ್‌ಎ-ಯುನೈಟೆಡ್ ಸ್ಟೇಟ್ಸ್ ಆಫ್ ಅಮೀರ್‌ಪೇಟೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ರಾಜಸ್ಥಾನದ ಕೋಟಾ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಸ್ಥಳ ಎಂಬ ಖ್ಯಾತಿಯನ್ನು ಪಡೆಯುವ ಮೊದಲೇ ಅಮೀರ್‌ಪೇಟ್ ಕೋಚಿಂಗ್ ಹಬ್‌ ಆಗಿ ಅಭಿವೃದ್ಧಿ ಹೊಂದಿತ್ತು. ಅಪಾರ ಜನಪ್ರಿಯತೆಯನ್ನೂ ಗಳಿಸಿತ್ತು ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ದಿವಾಕರ್ ವಿ ವಿಠಲ್ ಎಂಬುವರು ಪ್ರತಿಕ್ರಿಯಿಸಿ, ಅವರು ಕಳೆದ 25 ವರ್ಷಗಳಿಂದ ಅಲ್ಲಿದ್ದಾರೆ. ಅಲ್ಲಿರುವ ಪ್ರತಿಯೊಂದು ಕ್ರ್ಯಾಶ್ ಕೋರ್ಸ್‌ಗಳಾಗಿವೆ. ನಿಮ್ಮದೇ ಸ್ಥಳದಲ್ಲಿ ಏಕಾಂಗಿಯಾಗಿ ಅಭ್ಯಾಸ ಮಾಡಲು ಕೋರ್ಸ್‌ಗಳ ಮಾಹಿತಿಯನ್ನು ನೀಡುತ್ತವೆ. ಈ ಹಿಂದೆ ಕೋರ್ಸ್‌ಗೆ 150 ಸದಸ್ಯರಿಗೆ ಆಸನ ಸಾಮರ್ಥ್ಯವಿರುವ ಕೆಲವು ಸಂಸ್ಥೆಗಳು ಇದ್ದವು ಎಂದು ಹೇಳಿದ್ದಾರೆ.

ನಮ್ಮ ಚಿಕ್ಕಮ್ಮ ಭಾರತಕ್ಕೆ ಭೇಟಿ ನೀಡಿದ್ದಾಗ ಅಮೀರ್‌ಪೇಟ್‌ನಿಂದ ಜಾಲಾ ಕಲಿತರು. ಅವರು ಒರಾಕಲ್, ಟೆರಾಡಾಟಾ ಹಾಗೂ ಈಗ ವಿಎಂವೇರ್‌ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದರು. ಅಮೀರ್‌ಪೇಟೆ ಒಜಿ ಎಂದು ಚಂದ್ರಭಟ್ಟ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಅಮೀರ್‌ಪೇಟ್ ಒಜಿ ಬಗ್ಗೆ ಪರ ಅಷ್ಟೇ ಅಲ್ಲದೆ, ವಿರೋಧಗಳೂ ಇವೆ. ಇಲ್ಲಿರುವ ನೂರಾರು ತರಬೇತಿ ಕೇಂದ್ರಗಳು ತುಂಬಾ ಇಕ್ಕಟ್ಟಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತವೆ, ಕೋಚಿಂಗ್ ಸೆಂಟರ್‌ಗೆ ಹೋಗಲು ಚಿಕ್ಕದಾದ ಮೆಟ್ಟಿಲುಗಳು, ಅಗ್ನಿ ಸುರಕ್ಷತಾ ಸಾಧನಗಳಿಲ್ಲ, ಸುರಕ್ಷತಾ ಮಾನದಂಡಗಳಿಗೆ ಹೆಚ್ಚಿನ ಗಮನ ನೀಡುವುದಿಲ್ಲ ಎಂದು 2019ರಲ್ಲಿ ಮೈಟ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ನಿಗದಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ತುಂಬಿಸಿಕೊಂಡಿರುತ್ತಾರೆ. 20 ವಿದ್ಯಾರ್ಥಿಗಳಿಗೆ ತರಬೇತಿ ಕೊಠಡಿ ನಿರ್ಮಿಸಿದ್ದರೆ, 40 ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ತರಬೇತಿ ನೀಡುತ್ತಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆಲವರು ಜಾಲತಾಣ ಎಕ್ಸ್‌ನಲ್ಲೇ ಒತ್ತಾಯಿಸಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner