ನಿಮ್ಮ ಮಗುವನ್ನು ಸ್ಕೂಲಿಗೆ ಸೇರಿಸೋಕೆ ಪ್ಲಾನ್ ಮಾಡ್ತಿದ್ರೆ ಈ ಮಾಹಿತಿ ನಿಮಗೆ ಗೊತ್ತಿರಬೇಕು
ಮಕ್ಕಳನ್ನು ಶಾಲೆಗೆ ಕಳುಹಿಸುವ ಮುನ್ನ ಯಾವ ಎಜುಕೇಷನ್ ಬೋರ್ಡ್ ಆಯ್ಕೆ ಮಾಡಬೇಕು ಎಂಬ ಬಗ್ಗೆ ಪೋಷಕರಲ್ಲಿ ಸಂದೇಹ ಮೂಡುವುದು ಸಹಜ. ಅದಕ್ಕಾಗಿ ಶಾಲೆಗೆ ಸೇರಿಸುವ ಮುನ್ನವೇ ಒಂದಿಷ್ಟು ತಯಾರಿ ಮಾಡಿಕೊಳ್ಳುವುದು ಉತ್ತಮ.
ಮಕ್ಕಳನ್ನು ಶಾಲೆಗೆ ಕಳುಹಿಸೋದು ಈಗಿನ ತಂದೆ ತಾಯಿಯರ ಮುಂದಿರುವ ಬಹುದೊಡ್ಡ ಸವಾಲು. ಭಾರತದಲ್ಲಿ ಹಲವು ಎಜುಷೇಕನ್ ಬೋರ್ಡ್‌ಗಳಿವೆ. ಆದರೆ ಅವುಗಳಲ್ಲಿ ಯಾವುದು ಬೆಸ್ಟ್ ಎನ್ನುವ ಗೊಂದಲ ಪೋಷಕರನ್ನು ಕಾಡುವುದು ಸಹಜ. ಸಿಬಿಎಸ್‌ಇ, ಐಸಿಎಸ್‌ಇ, ಸ್ಟೇಟ್ ಹೀಗೆ ವಿವಿಧ ಎಜುಷೇಕನ್ ಬೋರ್ಡ್‌ಗಳಲ್ಲಿ ನಿಮ್ಮ ಮಗುವಿಗೆ ಯಾವುದು ಉತ್ತಮ ಎಂದು ನಿರ್ಧಾರ ಮಾಡುವುದು ನಿಜಕ್ಕೂ ಕಷ್ಟ.
ಸಿಬಿಎಸ್‌ಇ
ಸೆಂಟ್ರಲ್ ಬೋರ್ಡ್ ಆಪ್ ಸೆಕಂಡರಿ ಎಜುಕೇಷನ್ (ಸಿಬಿಎಸ್‌ಇ) ಭಾರತದಲ್ಲಿ ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ಎಜುಕೇಷನ್ ಬೋರ್ಡ್. 24,000ಕ್ಕೂ ಹೆಚ್ಚು ಶಾಲೆಗಳಲ್ಲಿ ಸಿಬಿಎಸ್‌ಇ ಪದ್ಧತಿ ಇದೆ. ಇದು ಸಮಗ್ರವಾಗಿದ್ದು, ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿರುವ ಕಾರಣಕ್ಕೆ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಸಿಬಿಎಸ್‌ಇ ಬೋರ್ಡ್‌ನಲ್ಲಿ ಪರೀಕ್ಷೆಗಳು ಹೆಚ್ಚು ಸವಾಲಿನದ್ದಾಗಿರುತ್ತದೆ. ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕೆ ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಇದು ಪ್ಯಾನ್ ಇಂಡಿಯಾ ವ್ಯವಸ್ಥೆಯಾಗಿರುವ ಕಾರಣ ನೀವು ಯಾವುದೇ ರಾಜ್ಯಕ್ಕೆ ಹೋದರೂ ಮಕ್ಕಳ ಶಾಲೆ ಬದಲಿಸುವುದು ಸಮಸ್ಯೆಯಾಗುವುದಿಲ್ಲ.
ಐಸಿಎಸ್‌ಸಿ
ಇದು ಭಾರತದಲ್ಲಿ ಜನಪ್ರಿಯವಾಗಿರುವ ಇನ್ನೊಂದು ಪ್ರಮುಖ ಎಜುಕೇಷನ್ ಬೋರ್ಡ್. ಇದು ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾಗಿದ್ದು ಇದನ್ನು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಇದನ್ನು ನಿಯಂತ್ರಿಸುತ್ತದೆ ಮತ್ತು ನಿರ್ವಹಿಸುತ್ತದೆ. ಸಿಬಿಎಸ್‌ಇ ಪಠ್ಯಕ್ರಮಕ್ಕಿಂತ ಐಸಿಎಸ್‌ಇ ಪಠ್ಯಕ್ರಮವು ಪ್ರಾಯೋಗಿಕ ಕಲಿಕೆಯ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಪರೀಕ್ಷೆಗಳು ಸಿಬಿಎಸ್‌ಇ ಪರೀಕ್ಷೆಗಳಿಗಿಂತ ಕಡಿಮೆ ಸವಾಲು ಹೊಂದಿರುತ್ತವೆ. ಆದರೆ ಈ ಬೋರ್ಡ್‌ನಲ್ಲಿ ಓದಿದ ವಿದ್ಯಾರ್ಥಿಗಳು ಕೂಡ ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕೆ ಚೆನ್ನಾಗಿ ತಯಾರಾಗಿರುತ್ತಾರೆ.
ಸ್ಟೇಟ್ ಬೋರ್ಡ್
ರಾಜ್ಯ ಶಿಕ್ಷಣ ಮಂಡಳಿ ಭಾರತದಲ್ಲಿರುವ ಇನ್ನೊಂದು ಎಜುಕೇಷನ್ ಬೋರ್ಡ್. ಭಾರತದಲ್ಲಿ 36 ವಿವಿಧ ಸ್ಟೇಟ್ ಎಜುಕೇಷನ್ ಬೋರ್ಡ್‌ಗಳಿವೆ. ಈ 36ರಲ್ಲಿ ಪ್ರತಿಯೊಂದು ತನ್ನದೇ ಆದ ಪಠ್ಯಕ್ರಮ ಮತ್ತು ಪರೀಕ್ಷೆಗಳನ್ನು ಹೊಂದಿದೆ. ರಾಜ್ಯ ಮಂಡಗಳಿಗಳು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗಳಿಗಿಂತ ಸರಳ ಎನ್ನಿಸುತ್ತದೆ. ಈ ಬೋರ್ಡ್‌ನಲ್ಲಿ ಹಲವು ವಿಶೇಷ ಕೋರ್ಸ್‌ಗಳಿರುತ್ತವೆ. ಅದಾಗ್ಯೂ ಶಿಕ್ಷಣದ ಗುಣಮಟ್ಟ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿರಬಹುದು.
ಹಾಗಾದರೆ ಭಾರತದಲ್ಲಿ ಯಾವ ಎಜುಕೇಷನ್ ಬೋರ್ಡ್ ಉತ್ತಮವಾಗಿದೆ
ಈ ವಿಚಾರಕ್ಕೆ ಬರುವುದಾದರೆ ಇದು ಅವರವರ ವೈಯಕ್ತಿಕ ಅಗತ್ಯಗಳು ಹಾಗೂ ಆದ್ಯತೆಗಳ ಮೇಲೆ ಅವಲಂಬಿತವಾಗಿದೆ. ಸವಾಲಿನ ಹಾಗೂ ಸಮಗ್ರ ಪಠ್ಯಕ್ರಮ ಹುಡುಕುತ್ತಿದ್ದರೆ, ಸಿಬಿಎಸ್‌ಇ ಉತ್ತಮ ಆಯ್ಕೆಯಾಗಿದೆ. ನೀವು ಹೆಚ್ಚು ಪ್ರಾಯೋಗಿಕ ಹಾಗೂ ಸ್ವಲ್ಪ ಕಡಿಮೆ ಸವಾಲು ಎನ್ನಿಸುವ ಪಠ್ಯಕ್ರಮ ಹುಡುಕುತ್ತಿದ್ದರೆ ಐಸಿಎಸ್‌ಇ ಉತ್ತಮ ಆಯ್ಕೆ. ಸ್ವಲ್ಪ ಸುಲಭ ಎನ್ನಿಸುವ ಎಲ್ಲಿರಿಗೂ ಹೊಂದುವ ಹಾಗೂ ವಿಶೇಷ ಪಠ್ಯಕ್ರಮ ನಿಮ್ಮ ಆಯ್ಕೆಯಾಗಿದ್ದರೆ ಸ್ಟೇಟ್ ಎಜುಕೇಷನ್ ಬೋರ್ಡ್ ಆಯ್ಕೆ ಮಾಡುವುದು ಉತ್ತಮ.
ಯಾವ ಶಿಕ್ಷಣ ಮಂಡಳಿ ನಿಮ್ಮ ಮಗುವಿಗೆ ಸೂಕ್ತ ಎಂಬುದನ್ನು ನಿರ್ಧಾರ ಮಾಡಲು ಇರುವ ಉತ್ತಮ ಮಾರ್ಗವೆಂದರೆ ಈಗಾಗಲೇ ಈ ಎಜುಕೇಷನ್ ಬೋರ್ಡ್‌ಗಳಲ್ಲಿ ಓದಿರುವ ನಿಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಮಾತನಾಡುವುದು, ಶಿಕ್ಷಕರ ಬಳಿ ಚರ್ಚಿಸುವುದು, ಇತರ ವಿದ್ಯಾರ್ಥಿಗಳ ಬಳಿ ಅನುಭವ ಕೇಳುವುದು ಇದು ಮುಖ್ಯವಾಗುತ್ತದೆ. ಇದರಿಂದ ವಿವಿಧ ಎಜುಕೇಷನ್ ಬೋರ್ಡ್‌ಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ವಿಭಾಗ