PPP 2024: ಇಚ್ಛಾಶಕ್ತಿ ಇದ್ದರೆ ಒತ್ತಡದ ನಡುವೆಯೂ ಯಶಸ್ಸು ಸಾಧಿಸಬಹುದು; ಪರೀಕ್ಷಾ ಪೇ ಚರ್ಚಾ ಸಂವಾದಲ್ಲಿ ಪ್ರಧಾನಿ ಮೋದಿ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Ppp 2024: ಇಚ್ಛಾಶಕ್ತಿ ಇದ್ದರೆ ಒತ್ತಡದ ನಡುವೆಯೂ ಯಶಸ್ಸು ಸಾಧಿಸಬಹುದು; ಪರೀಕ್ಷಾ ಪೇ ಚರ್ಚಾ ಸಂವಾದಲ್ಲಿ ಪ್ರಧಾನಿ ಮೋದಿ ಟಿಪ್ಸ್

PPP 2024: ಇಚ್ಛಾಶಕ್ತಿ ಇದ್ದರೆ ಒತ್ತಡದ ನಡುವೆಯೂ ಯಶಸ್ಸು ಸಾಧಿಸಬಹುದು; ಪರೀಕ್ಷಾ ಪೇ ಚರ್ಚಾ ಸಂವಾದಲ್ಲಿ ಪ್ರಧಾನಿ ಮೋದಿ ಟಿಪ್ಸ್

Pariksha Pe Charcha: ವಿದ್ಯಾರ್ಥಿಗಳು ಒತ್ತಡವನ್ನು ನಿಭಾಯಿಸುವ ಪ್ರಕ್ರಿಯೆಯಲ್ಲಿ ಅವರ ಫೋಷಕರು ಮತ್ತು ಶಿಕ್ಷಕರಿಗೂ ಜವಾಬ್ದಾರಿ ಇರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪರೀಕ್ಷಾ ಪೇ ಚರ್ಚಾ ಸಂವಾದಲ್ಲಿ ಪ್ರಧಾನಿ ನರೇಂದ್ರ ಮೋದಿ (ANI)
ಪರೀಕ್ಷಾ ಪೇ ಚರ್ಚಾ ಸಂವಾದಲ್ಲಿ ಪ್ರಧಾನಿ ನರೇಂದ್ರ ಮೋದಿ (ANI)

ದೆಹಲಿ: ಯಾವುದೇ ರೀತಿಯ ಒತ್ತಡವನ್ನು ನಿಭಾಯಿಸಲು ನಮ್ಮನ್ನು ನಾವು ರೂಪಿಸಿಕೊಳ್ಳಬೇಕು. ಇಚ್ಛಾಶಕ್ತಿಯಿಂದ ಒತ್ತಡದ ನಡುವೆಯೂ ನಾವು ಯಶಸ್ಸನ್ನು ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ದೆಹಲಿಯ ಪ್ರಗತಿ ಮೈದಾನದಲ್ಲಿರುವ ‘ಭಾರತ್ ಮಂಟಪಂ’ನಲ್ಲಿ ನಡೆದ 7ನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ (Pariksha Pe Charcha 2024) ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಅವರು, ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕ್ರಮೇಣ ಅಳವಡಿಸಿಕೊಳ್ಳಬೇಕು. ಇದು ಕೇವಲ ವಿದ್ಯಾರ್ಥಿಗಳ ಕೆಲಸವಲ್ಲ, ಪ್ರಕ್ರಿಯೆಯನ್ನು ಸುಲಭಗೊಳಿಸುವ ಜವಾಬ್ದಾರಿ ಮನೆಯಲ್ಲಿರುವ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದೆ ಹೇಳಿದ್ದಾರೆ.

ಯಾವುದೇ ರೀತಿಯ ಒತ್ತಡವನ್ನು ನಿಭಾಯಿಸಲು ನಮ್ಮನ್ನು ನಾವು ರೂಪಿಸಿಕೊಳ್ಳಬೇಕು. ಇಚ್ಛಾಶಕ್ತಿಯಿಂದ ಒತ್ತಡದ ನಡುವೆಯೂ ನಾವು ಯಶಸ್ಸನ್ನು ಸಾಧಿಸಬೇಕು. ಅವಸರದಲ್ಲಿ ಅಲ್ಲ, ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕ್ರಮೇಣ ಅಳವಡಿಸಿಕೊಳ್ಳಬೇಕು. ಇದು ಕೇವಲ ವಿದ್ಯಾರ್ಥಿಗಳ ಕೆಲಸವಲ್ಲ, ಪ್ರಕ್ರಿಯೆಯನ್ನು ಸುಲಭಗೊಳಿಸುವ ಜವಾಬ್ದಾರಿ ಮನೆಯಲ್ಲಿರುವ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸಬೇಡಿ

ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಪ್ರಧಾನಿ ಮೋದಿ, ನಿಮ್ಮ ಮಕ್ಕಳನ್ನು ಮನೆಯ ಸುತ್ತಮುತ್ತಲಿನ ಇತರೆ ಮಕ್ಕಳೊಂದಿಗೆ ಹೋಲಿಸಬಾರದು ಎಂದಿದ್ದಾರೆ. ಬಾಲ್ಯದಿಂದಲೂ ಕುಟುಂಬದವರು ಇತರರೊಂದಿಗೆ ಹೋಲಿಕೆ ಮಾಡುತ್ತಾರೆಂಬುದು ಮಕ್ಕಳ ಮನಸ್ಸಿನಲ್ಲಿ ಬೇರೂರಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬಾರದೆಂದು ಪೋಷಕರಲ್ಲಿ ಕೋರುತ್ತೇನೆ ಎಂದಿದ್ದಾರೆ.

ವಿದ್ಯಾರ್ಥಿಗಳಿಗೆೆ ಒಂದಷ್ಟು ಸಲಹೆಗಳನ್ನು ನೀಡಿ, ಮಹತ್ವಾಕಾಂಕ್ಷೆ ಇರುವಂತಹ ಸ್ನೇಹಿತರನ್ನು ಹೊಂದುವುದು ಒಳ್ಳೆಯದು. ಅವರ ಸಾಧನೆಗಳ ಬಗ್ಗೆ ಚಿಂತಿಸದೆ ನಮ್ಮ ಪ್ರಗತಿಗೆ ಶ್ರಮಿಸಬೇಕು. ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಯಶಸ್ಸಿನ ಹಾದಿಯಲ್ಲಿ ಕೈ ಜೋಡಿಸಲು ಸ್ನೇಹಿತರ ಸಹಾಯವನ್ನು ಪಡೆಯಬೇಕು ಎಂದಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ಇತ್ತೀಚಿನ ತಂತ್ರಜ್ಞಾನಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಅದ್ಭುತ ಯೋಜನೆಗಳಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳ ಪ್ರದರ್ಶನವನ್ನು ಪರಿಶೀಲಿಸುವ ಭಾಗ್ಯ ನನಗೆ ಸಿಕ್ಕಿತ್ತು. ಇಂತಹ ಅದ್ಭುತ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದಕ್ಕಾಗಿ ಮತ್ತು ಹೊಸ ಪೀಳಿಗೆಯ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಭಿನಂದಿಸಲೇಬೇಕು ಹೇಳಿದ್ದಾರೆ.

ವಿದ್ಯಾರ್ಥಿಗಳೊಂದಿಗಿನ ಸಂವಾದಕ್ಕೂ ಮುನ್ನ ಪ್ರಧಾನಿ ಮೋದಿ ಅವರು, ‘ಭಾರತ್ ಮಂಟಪಂ’ನಲ್ಲಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ವಿದ್ಯಾರ್ಥಿಗಳ ವಸ್ತು ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಅಲ್ಲದೆ, ಕೆಲವು ಅಗತ್ಯ ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner