ಕನ್ನಡ ಸುದ್ದಿ  /  Lifestyle  /  Education News Tips For Being A Successful Student Adopt 10 Good Habits In Daily Routine Study Tips In Kannada Pcp

Good Habits: ಯಶಸ್ವಿ ವಿದ್ಯಾರ್ಥಿ ನೀವಾಗಬೇಕೆ, ಚೆನ್ನಾಗಿ ಓದಿದರೆ ಸಾಲದು, ಈ 10 ಉತ್ತಮ ಅಭ್ಯಾಸಗಳನ್ನು ನಿಮ್ಮದಾಗಿಸಿ

Tips for being a Successful Student: ಯಶಸ್ವಿ ವಿದ್ಯಾರ್ಥಿಯಾಗಲು ಚೆನ್ನಾಗಿ ಓದಬೇಕು ಎನ್ನುವುದು ನಿಜ. ಇದರ ಜತೆಗೆ ತಿನ್ನುವುದು, ಸಕಾರಾತ್ಮಕ ಮನೋಭಾವ, ದೈಹಿಕವಾಗಿ ಉಲ್ಲಾಸದಿಂದ ಇರುವುದು ಸೇರಿದಂತೆ ಹಲವು ಅಂಶಗಳೂ ವಿದ್ಯಾರ್ಥಿಗಳ ಯಶಸ್ಸಿಗೆ ಪೂರಕ.

Good Habits: ಯಶಸ್ವಿ ವಿದ್ಯಾರ್ಥಿ ನೀವಾಗಬೇಕೆ, ಈ 10 ಉತ್ತಮ ಅಭ್ಯಾಸಗಳನ್ನು ನಿಮ್ಮದಾಗಿಸಿ
Good Habits: ಯಶಸ್ವಿ ವಿದ್ಯಾರ್ಥಿ ನೀವಾಗಬೇಕೆ, ಈ 10 ಉತ್ತಮ ಅಭ್ಯಾಸಗಳನ್ನು ನಿಮ್ಮದಾಗಿಸಿ

ಯಶಸ್ವಿ ವಿದ್ಯಾರ್ಥಿಯಾಗುವುದು ಹೇಗೆ? ಮಕ್ಕಳಿಗೆ ಯಶಸ್ವಿ ಟಿಪ್ಸ್‌ ನೀಡುವುದೆಂದರೆ ಹೆತ್ತವರು, ಶಿಕ್ಷಕರು, ನೆರೆಹೊರೆಯವರಿಗೆ, ಬಂಧು ಬಳಗಕ್ಕೆ ತುಂಬಾ ಇಷ್ಟ. ನೀನು ಜಾಣ ವಿದ್ಯಾರ್ಥಿಯಾಗಬೇಕು, ಒಳ್ಳೆಯ ವಿದ್ಯಾರ್ಥಿಯಾಗಬೇಕು, ಒಳ್ಳೆ ಅಂಕ ಗಳಿಸಬೇಕು ಎಂದು ಸಲಹೆ ನೀಡುತ್ತಾರೆ. ಯಶಸ್ವಿ ವಿದ್ಯಾರ್ಥಿಯೆಂದರೆ ಕೇವಲ ಒಳ್ಳೆಯ ಅಂಕ ಪಡೆಯುವುದಷ್ಟೇ ಅಲ್ಲ. ಇನ್ನೂ ಅನೇಕ ವಿಷಯಗಳು ಇವೆ. Good Habits of Successful Students ಎಂಬ ವಿಷಯವನ್ನು ಇಂದಿನ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಶಿಕ್ಷಣ ಜಗತ್ತು ಅಂಕಣದಲ್ಲಿ ಚರ್ಚಿಸೋಣ.

ಟ್ರೆಂಡಿಂಗ್​ ಸುದ್ದಿ

ಯಶಸ್ವಿ ವಿದ್ಯಾರ್ಥಿಯಾಗಲು ಬೇಕಾದ ಉತ್ತಮ 10 ಅಭ್ಯಾಸಗಳು

  1. ಸಂಘಟಿಸುವುದು ಮತ್ತು ಶೆಡ್ಯೂಲ್‌ ಮಾಡುವುದು
  2. ಪ್ರಶ್ನೆ ಕೇಳುವುದು
  3. ಗುಂಪು ಚರ್ಚೆ ಅಥವಾ ಗ್ರೂಪ್‌ ಡಿಸ್ಕಷನ್‌
  4. ಮಲ್ಟಿ ಟಾಸ್ಕ್‌ ಮಾಡದೆ ಇರುವುದು
  5. ನೋಟ್ಸ್‌ ಮಾಡಿಕೊಳ್ಳುವುದು
  6. ಓದಲು ಪ್ರತ್ಯೇಕ ಸ್ಥಳ
  7. ಸಕಾರಾತ್ಮಕವಾಗಿ ಆಲೋಚಿಸುವುದು
  8. ತಪ್ಪುಗಳಿಂದ ಕಲಿಯುವ ಅಭ್ಯಾಸ
  9. ಸಮರ್ಪಕ ನಿದ್ದೆ ಮಾಡಿ
  10. ವ್ಯಾಯಾಮ ಮತ್ತು ಆರೋಗ್ಯಕರ ಆಹಾರ

ಸಂಘಟಿಸುವುದು

ವಿದ್ಯಾರ್ಥಿಗಳೇ ನೀವು ಮಾಡಬೇಕಾದ ಪ್ರತಿಯೊಂದು ಟಾಸ್ಕ್‌ಗೆ ನಿಯಮಿತ ಶೆಡ್ಯೂಲ್‌ ಅಥವಾ ವೇಳಾಪಟ್ಟಿ ಮಾಡಿ. ಅದಕ್ಕೆ ತಕ್ಕಂತೆ ಇರಿ. ಓದಲು ಇಂತಿಷ್ಟು ಹೊತ್ತು, ಆಟವಾಡಲು ಇಂತಿಷ್ಟು ಹೊತ್ತು, ಹವ್ಯಾಸಕ್ಕೆ ಇಂತಿಷ್ಟು ಹೊತ್ತು, ಮೊಬೈಲ್‌ಗೆ ಇಂತಿಷ್ಟು ನಿಮಿಷ ಎಂದೆಲ್ಲ ಆರ್ಗೈನೈಸ್‌ ಮಾಡುವುದು ವಿದ್ಯಾರ್ಥಿಗಳ ಯಶಸ್ಸಿಗೆ ಅಗತ್ಯವಾದ ಅಭ್ಯಾಸ.

ಪ್ರಶ್ನೆ ಕೇಳಿ

ನಿಮ್ಮ ಶಿಕ್ಷಕರಲ್ಲಿ ಅಥವಾ ಬಲ್ಲವರಲ್ಲಿ ಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಡಿ, ನಾಚಿಕೆಪಡಬೇಡಿ. ಶಾಲಾ ಜೀವನದಲ್ಲಿ ಈ ರೀತಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ನೆರವಾಗಲಿದೆ. ಇದು ನಿಮ್ಮ ವ್ಯಕ್ತಿತ್ವವನ್ನೂ ಉತ್ತಮಪಡಿಸುತ್ತದೆ.

ಗುಂಪು ಚರ್ಚೆ

ನೀವು ಒಬ್ಬರೇ ಕುಳಿತು ಓದುವುದು ಉತ್ತಮ ಅಭ್ಯಾಸ. ಆದರೆ, ಗುಂಪು ಚರ್ಚೆ ಇನ್ನೂ ಒಳ್ಳೆಯದು. ವಾರಕ್ಕೊಮ್ಮೆ ಅಥವಾ ಪ್ರತಿದಿನ ಶಾಲೆಯಲ್ಲಿ ಅಥವಾ ವಿದ್ಯಾರ್ಥಿಗಳ ಲಭ್ಯತೆ ಇದ್ದಾಗ ಗುಂಪು ಚರ್ಚೆ ಮಾಡಿ. ಇದರಿಂದ ನೀವು ಓದಿರುವ ವಿಷಯ ನೆನಪಿನಲ್ಲಿ ಉಳಿಯುತ್ತದೆ, ಹೆಚ್ಚಿನ ವಿವರ ದೊರಕುತ್ತದೆ.

ಟಿಪ್ಪಣಿ ಬರೆಯುವುದು

ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ನೋಟ್ಸ್‌ ಬರೆಯುವುದು ನೆರವಿಗೆ ಬರುತ್ತದೆ. ಓದಿನ ನಡುವೆ ಕೆಲವು ನಿಮಿಷ ಬ್ರೇಕ್‌ ತೆಗೆದುಕೊಂಡು ಏನು ಓದಿರುವಿರಿ ಎಂದು ನೆನಪು ಮಾಡಿಕೊಂಡು ಟಿಪ್ಪಣಿ ಮಾಡಿಕೊಳ್ಳಿ. ಇದರಿಂದ ಏಕಾಗ್ರತೆಯೂ ಹೆಚ್ಚುತ್ತದೆ.

ಮಲ್ಟಿ ಟಾಸ್ಕ್‌ ಮಾಡಬೇಡಿ

ಒಂದು ಬಾರಿ ಒಂದೇ ಕೆಲಸದ ಕುರಿತು ಗಮನ ನೀಡಿ. ಹಲವು ಕೆಲಸ ಒಂದೇ ಬಾರಿ ಮಾಡಲು ಹೋಗಬೇಡಿ.

ಓದುವ ವಿಭಾಗ

ನಿಮ್ಮ ಮನೆಯಲ್ಲಿ ನೆಮ್ಮದಿಯಾಗಿ ಓದಲು ಒಂದು ಪ್ರತ್ಯೇಕ ಸ್ಥಳ ನಿಗದಿಗೊಳಿಸಿ. ಅಲ್ಲಿಯೇ ಓದಿ.

ಸಕಾರಾತ್ಮಕ ಆಲೋಚನೆ

ಸಕಾರಾತ್ಮಕವಾಗಿ ಯೋಚಿಸುವುದು ಜೀವನದಲ್ಲಿ ಮತ್ತು ವಿದ್ಯಾರ್ಥಿ ದೆಸೆಯಲ್ಲಿ ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಮನಸ್ಸಿನಲ್ಲಿ ಎಂದಿಗೂ ನಕಾರಾತ್ಮಕ ಭಾವನೆ ಸುಳಿಯಲು ಅವಕಾಶ ನೀಡಬೇಡಿ.

ತಪ್ಪುಗಳಿಂದ ಕಲಿಯುವ ಅಭ್ಯಾಸ

ಏನಾದರೂ ತಪ್ಪಾದರೆ ಹಿಂಜರಿಯಬೇಡಿ. ಇದು ನೀವು ವಿಫಲವಾಗಿರುವುದರ ಸೂಚನೆಯಲ್ಲ. ತಪ್ಪಿನಿಂದಲೂ ಕಲಿಯಲು ಬೇಕಾದ್ದಷ್ಟು ಇರುತ್ತದೆ. ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ.

ಸಮರ್ಪಕ ನಿದ್ದೆ ಮಾಡಿ

ದಿನದಲ್ಲಿ ಕನಿಷ್ಠ ಎಂಟು ಗಂಟೆ ನಿದ್ದೆ ಮಾಡಿ. ಇದರಿಂದ ನಿಮ್ಮ ಮಿದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿದ್ದೆ ಮಾಡುವ ಮುನ್ನ ಮೊಬೈಲ್‌ ನೋಡಬೇಡಿ.

ಪ್ರತಿನಿತ್ಯ ವ್ಯಾಯಾಮ ಮಾಡಿ. ಉತ್ತಮ ಆಹಾರ ಸೇವನೆ ಮಾಡಿ

ಆರೋಗ್ಯವಾಗಿರಲು ಪ್ರತಿನಿತ್ಯ ಇಂತಿಷ್ಟು ಸಮಯ ವ್ಯಾಯಾಮ ಮಾಡಿ. ನೀವು ಸೇವಿಸುವ ಆಹಾರವು ನಿಮ್ಮ ದೇಹದ ಬೆಳವಣಿಗೆಗೆ, ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲಿ. ಹಾಳುಮೂಳು ತಿನ್ನಬೇಡಿ.

ಸಂಬಂಧಿತ ಲೇಖನ