ಕನ್ನಡ ಸುದ್ದಿ  /  ಜೀವನಶೈಲಿ  /  Exam Tips: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ಮಾಡುವ 10 ಸಾಮಾನ್ಯ ತಪ್ಪುಗಳಿವು

Exam Tips: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ಮಾಡುವ 10 ಸಾಮಾನ್ಯ ತಪ್ಪುಗಳಿವು

ಎಐಎಸ್, ಐಪಿಎಸ್, ಎಸ್ಎಸ್‌ಸಿ, ಬ್ಯಾಕಿಂಗ್‌ನಂತಹ ಉನ್ನತ ಹುದ್ದೆಗಳಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಸಿದ್ಧತೆ ವೇಳೆ ಮಾಡುವ ಸಾಮಾನ್ಯ 10 ತಪ್ಪುಗಳನ್ನು ತಿಳಿಯಿರಿ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವಾಗ ವಿದ್ಯಾರ್ಥಿಗಳು ಮಾಡುವ 10 ತಪ್ಪುಗಳ ಪಟ್ಟಿ ಇಲ್ಲಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವಾಗ ವಿದ್ಯಾರ್ಥಿಗಳು ಮಾಡುವ 10 ತಪ್ಪುಗಳ ಪಟ್ಟಿ ಇಲ್ಲಿದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (Competitive Exam Preparation) ಉತ್ತೀರ್ಣರಾಗುವುದೆಂದರೆ ಜೀವನದಲ್ಲಿ ಅರ್ಧ ಗೆದ್ದಂತೆ. ಇದು ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತೆ. ಉತ್ತಮ ಹಣ ಸಂಪಾದನೆಯ ವೃತ್ತಿಜೀವನಕ್ಕೆ ನಾಂದಿ ಹಾಡುತ್ತದೆ. ನೀವೇನಾದರೂ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ, ಎಸ್‌ಎಸ್‌ಸಿ ಅಥವಾ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ, ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ತಿಳಿಯಿರಿ. ಈ ತಪ್ಪುಗಳನ್ನು ತಿದ್ದಿಕೊಂಡು ಸಿದ್ಧತೆಗಳನ್ನು ಮುಂದುವರಿಸಿದರೆ ಖಂಡಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೀರಿ. ನಿಮ್ಮಷ್ಟದ ಉನ್ನತ ಸರ್ಕಾರಿ ಹುದ್ದೆಯನ್ನು ನಿಮ್ಮದಾಸಿಕೊಳ್ಳುತ್ತೀರಿ.

ಟ್ರೆಂಡಿಂಗ್​ ಸುದ್ದಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವಾದ ತಪ್ಪಿಸಬೇಕಾದ 10 ತಪ್ಪುಗಳು

1. ಬೇರೊಬ್ಬರ ಮೇಲೆ ಅವಲಂಬಿತವಾಗುವುದು

ಯಾವುದೇ ಅಭ್ಯರ್ಥಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿರಬೇಕು. ಕೆಲವೊಂದು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಅಭ್ಯರ್ಥಿಗಳು ಶಿಕ್ಷಕರು, ಮಾರ್ಗದರ್ಶಕರು, ಸ್ನೇಹಿತರು ಅಥವಾ ಆನ್‌ಲೈನ್ ವಿಡಿಯೊಗಳು ಸೇರಿದಂತೆ ಮುಂತಾದ ಬಾಹ್ಯ ಅಂಶಗಳ ಮೇಲೆ ಅವಲಂಬಿತರಾಗುತ್ತಾರೆ. ಮೊದಲ ಈ ಅವಲಂಬನೆಯಿಂದ ಹೊರ ಬರಬೇಕು.

2. ಹಿಂದಿನ ಶೈಕ್ಷಣಿಕ ಸಂಸ್ಥೆಗಳ ಮೇಲೆ ಆಧಾರವಾಗಿರುವುದು

ನಾನು ಐಐಎಂ ಅಥವಾ ಐಐಟಿಯಿಂದ ಬಂದಿದ್ದೇನೆ. ಈ ಪರೀಕ್ಷೆಯನ್ನು ನಾನು ಸುಲಭವಾಗಿ ಪಾಸ್ ಮಾಡ್ತೇನೆ ಎಂದು ಕೆಲವರು ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಪ್ರತಿ ಪರೀಕ್ಷೆ ಭಿನ್ನವಾಗಿರುತ್ತದೆ. ಆದ್ದರಿಂದ ಪ್ರತಿಯೊಂದು ಪರೀಕ್ಷೆಯನ್ನು ಹೊಸದಾಗಿ ಪರಿಗಣಿಸಿ ಸರಿಯಾದ ರೀತಿಯಲ್ಲಿ ತಯಾರಿ ನಡೆಸಬೇಕು.

3. ಪ್ಲಾನ್ ಮಾಡಿದರೆ ಸಾಲದು, ಕಾರ್ಯರೂಪಕ್ಕೆ ತರಬೇಕು

ಪರೀಕ್ಷೆ ವಿಷಯಕ್ಕೆ ಬಂದರೆ ಪದಗಳಿಗಿಂತ ಕ್ರಿಯೆಗಳು ಜೋರಾಗಿ ಕೆಲಸ ಮಾಡುತ್ತವೆ. ಸಿದ್ಧತೆಗೆ ಕೇವಲ ಪ್ಲಾನ್ ಮಾಡಿದರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

4. ಪರೀಕ್ಷೆ ಸಿದ್ಧತೆಗೆ ಹೆಚ್ಚು ಸಾಮಗ್ರಿಗಳನ್ನು ಸಂಗ್ರಹಿಸುವುದು

ಇದು ನಿಜಕ್ಕೂ ಸಾಮಾನ್ಯ ತಪ್ಪಾಗಿದೆ. ವಿಶೇಷವಾಗಿ ಐಎಎಸ್ ಪರೀಕ್ಷೆಗೆ ಸಾಕಷ್ಟು ಸಾಮಗ್ರಿಗಳು ಲಭ್ಯಇವೆ. ಆದರೆ ಲಭ್ಯ ಇರುವ ಎಲ್ಲವನ್ನೂ ಖರೀದಿಸುವ ಪ್ರವೃತ್ತಿ ಕೆಲವರಿಗೆ ಇರುತ್ತದೆ. ಡಿಜಿಟಲ್ ಯುಗದಲ್ಲಿ ಸಾಕಷ್ಟು ಮೆಟೀರಿಯಲ್ ಆನ್‌ಲೈನ್‌ನಲ್ಲೂ ಲಭ್ಯವಿದೆ. ಅಭ್ಯರ್ಥಿಗಳು ತಮ್ಮೊಂದಿಗೆ ಎಲ್ಲಾ ಎಲೆಕ್ಟ್ರಾನಿಕ್ ಡೇಟಾವನ್ನು ಸಂಗ್ರಹಿಸಲು ಒಲವು ತೋರುತ್ತಾರೆ. ಈ ಅಭ್ಯಾಸ ಅರ್ಥಹೀನವಾಗಿರುತ್ತದೆ. ಅಗತ್ಯಕ್ಕೆ ತಕ್ಕಷ್ಟು ಸಾಮಗ್ರಿಗಳನ್ನು ಮಾತ್ರ ತಮ್ಮಲ್ಲಿ ಇರಿಸಿಕೊಳ್ಳಬೇಕು.

5. ಸ್ವಯಂ ಸಿದ್ಧತೆಯನ್ನ ನಿರ್ಲಕ್ಷಿಸುವುದು

ಅಭ್ಯರ್ಥಿಗಳು ಕೋಚಿಂಗ್ ತರಗತಿಗಳಿಗೆ ಹಾಜರಾಗುವುದು ಅಥವಾ ಇವುಗಳಿಂದ ದೂರ ಉಳಿಯವುದು ಅವರವರ ಆಯ್ಕೆಗೆ ಬಿಟ್ಟಿದ್ದು. ಇದು ನಿಮ್ಮ ವೈಯಕ್ತಿಕ ಇಷ್ಟದ ಆಯ್ಕೆಯಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸ್ವಯಂ ಸಿದ್ಧತೆಯನ್ನು ನಿರ್ಲಕ್ಷಿಸಬಾರದು. ಪರೀಕ್ಷೆಯಲ್ಲಿ ಉತ್ತರ ಬರೆಯಲು ನಿಮ್ಮ ಸ್ವಯಂ ಅಧ್ಯಯನ ಮಾತ್ರ ನೆರವಾಗುತ್ತೆ.

6. ಹಲವಾರು ಪರೀಕ್ಷೆಗಳ ಮೇಲೆ ಕೇಂದ್ರೀಕರಿಸುವುದು

ಅಭ್ಯರ್ಥಿಗಳು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವುದು ಅವರ ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಆದರೆ ಉತ್ತಮ ಫಲಿತಾಂಶಗಳಿಗಾಗಿ ಒಂದು ಸಮಯದಲ್ಲಿ ಒಂದೇ ಪರೀಕ್ಷೆ ಮೇಲೆ ಕೇಂದ್ರೀಕರಿಸಲುವುದು ಉತ್ತಮ ನಿರ್ಧಾರವಾಗಿರುತ್ತದೆ.

7. ಪರೀಕ್ಷೆಗಳ ಮೇಲೆ ಕೇಂದ್ರೀಕರಿಸುವುದು

ಬಹಳಷ್ಟು ಅಭ್ಯರ್ಥಿಗಳು ಅಧ್ಯಯನ ಮಾಡುತ್ತಲೇ ಇರುತ್ತಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದು ಅವರ ಸಾಮರ್ಥ್ಯ ಮತ್ತು ದೌರ್ಜಲ್ಯಗಳನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ.

8. ಸರಿಯಾಗಿ ತಯಾರಿ ಮಾಡದಿರುವುದು

ಐಎಎಸ್ ಪರೀಕ್ಷೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ವಿಭಿನ್ನವಾಗಿರುತ್ತದೆ. ಯುಪಿಎಸ್‌ಸಿ ಪರೀಕ್ಷೆಯಲು ಕನಿಷ್ಠ 10 ತಿಂಗಳವರೆಗೆ ವಿಸ್ತರಿಸುವ ದೀರ್ಘವಧಿಯ ಪ್ರಕ್ರಿಯೆ ಇದಾಗಿರುತ್ತದೆ. ಅಭ್ಯರ್ಥಿಗಳು ದಿನಕ್ಕೆ 8 ಗಂಟೆಗಳ ಓದುವಿಕೆಯೊಂದಿಗೆ ತಯಾರಿ ಆರಂಭಿಸಿದರೆ ಸಮಸ್ಯೆಯಾಗಬಹುದು. ಸಣ್ಣ ಹಂತದಲ್ಲಿ ಪ್ರಾರಂಭಿಸುವುದು ಯಾವಾಗಲೂ ವಿವೇಕಯುತವಾಗಿರುತ್ತದೆ. ಒಂದೇ ದಿನ ಹೆಚ್ಚು ಓದುವುದಕ್ಕಿಂತ ಪರೀಕ್ಷೆಯ ದಿನದವರೆಗೆ ಹಂತ ಹಂತವಾಗಿ ನಡೆಸುವ ಸಿದ್ಧತೆ ಉತ್ತಮ ವಿಧಾನವಾಗಿದೆ.

9. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ವೇಳೆ ಸಮಯ ವ್ಯರ್ಥ ಮಾಡುವುದು

ಇದು ಕೂಡ ಸಾಮಾನ್ಯ ತಪ್ಪಾಗಿದೆ. ತಯಾರಿ ಸಮಯದಲ್ಲಿ ವಿಶೇಷವಾಗಿ ಜಾಲತಾಣಗಳಲ್ಲಿ ವದಂತಿಗಳನ್ನು ಅಬ್ಬಿಸಲಾಗುತ್ತದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಸ್ಟಡಿ ಟೇಬಲ್‌ನಲ್ಲಿ 10 ಗಂಟೆಗಳನ್ನು ಕಳೆಯುವುದು ಮುಖ್ಯವಲ್ಲ, ಅದರಲ್ಲಿ ಓದಿದ ಎಷ್ಟು ಮಾಹಿತಿ ತಲೆಯಲ್ಲಿ ಉಳಿದಿದೆ ಅನ್ನೋದು ಮುಖ್ಯವಾಗುತ್ತದೆ. ಸುಮ್ಮನೆ ಪುಸ್ತಕದ ಮುಂದೆ ಕೂತು ಸಮಯ ವ್ಯರ್ಥ ಮಾಡಬಾರದು.

10. ಸ್ಮಾರ್ಟ್ ಸಿದ್ಧತೆ ಮಾಡದಿರುವುದು

ಸರಿಯಾದ ವಿಧಾನದಲ್ಲಿ ಸ್ಪರ್ಧಾತಕ ಪರೀಕ್ಷೆಗೆ ಸಿದ್ಧತೆ ನಡೆಸುವುದು ಕೂಡ ಒಂದು ಕಲೆಯಾಗಿದೆ. ಹೇಗೆ ಓದಬೇಕು, ಯಾವುದನ್ನ ಓದಬೇಕು, ಯಾವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು, ಯಾವುದೇ ಕಡಿಮೆ ಸಮಯ ಎಂಬಿತ್ಯಾದಿಗಳನ್ನು ತಿಳಿದುಕೊಂಡಿರಬೇಕು. ತಾವು ಎದುರಿಸುತ್ತಿರುವ ಪರೀಕ್ಷೆಗೆ ಸೂಕ್ತವಾದಿರುವ ವಿಷಯಗಳು ಯಾವುವು ಅನ್ನೋದು ಗೊತ್ತಿರಬೇಕು.