BSc Scope: ಬಿಎಸ್‌ಸಿ ನಂತರ ಮುಂದೇನು; ಉನ್ನತ ಶಿಕ್ಷಣಕ್ಕೆ ಉತ್ತಮ ಆಯ್ಕೆ ಯಾವುದು, ಉದ್ಯೋಗಾವಕಾಶಗಳು ಹೇಗಿವೆ?-education scope of bsc what is the best option for master degree after bachelor of science jobs opportunities jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bsc Scope: ಬಿಎಸ್‌ಸಿ ನಂತರ ಮುಂದೇನು; ಉನ್ನತ ಶಿಕ್ಷಣಕ್ಕೆ ಉತ್ತಮ ಆಯ್ಕೆ ಯಾವುದು, ಉದ್ಯೋಗಾವಕಾಶಗಳು ಹೇಗಿವೆ?

BSc Scope: ಬಿಎಸ್‌ಸಿ ನಂತರ ಮುಂದೇನು; ಉನ್ನತ ಶಿಕ್ಷಣಕ್ಕೆ ಉತ್ತಮ ಆಯ್ಕೆ ಯಾವುದು, ಉದ್ಯೋಗಾವಕಾಶಗಳು ಹೇಗಿವೆ?

ವಿಜ್ಞಾನ ವಿಭಾಗದಲ್ಲಿ ಭಾರಿ ಬೇಡಿಕೆ ಇರುವ ಕೋರ್ಸ್ ಬಿಎಸ್‌ಸಿ. ಹೆಚ್ಚಿನ ವಿದ್ಯಾರ್ಥಿಗಳು ಬಿಎಸ್‌ಸಿ ಪದವಿ ಶಿಕ್ಷಣ ಪಡೆಯಲು ಮುಂದೆ ಬರುತ್ತಾರೆ. ಆದರೆ, ಬ್ಯಾಚುಲರ್ ಆಫ್ ಸೈನ್ಸ್ ಬಳಿಕ ಮುಂದೇನು ಎಂಬ ಪ್ರಶ್ನೆ ಸಾಮಾನ್ಯ. ನಿಮ್ಮ ಮುಂದಿನ ಆಯ್ಕೆಯಾಗಿ ಏನು ಮಾಡಬಹುದು ಎಂಬ ಸರಳ ಮಾರ್ಗದರ್ಶನ ಇಲ್ಲಿದೆ.

ಬಿಎಸ್‌ಸಿ ನಂತರ ಉದ್ಯೋಗಾವಕಾಶಗಳು ಹೇಗಿವೆ?
ಬಿಎಸ್‌ಸಿ ನಂತರ ಉದ್ಯೋಗಾವಕಾಶಗಳು ಹೇಗಿವೆ?

ಪಿಯುಸಿ ನಂತರ ಹೆಚ್ಚಿನ ವಿದ್ಯಾರ್ಥಿಗಳು ಬಿಎಸ್‌ಸಿ (BSc) ಅಧ್ಯಯನ ಆಯ್ಕೆ ಮಾಡುತ್ತಾರೆ. ಈಗಾಗಲೇ ಬಿಎಸ್‌ಸಿ (Bachelor of Science ) ಕೋರ್ಸ್‌ನಲ್ಲಿರುವ ವಿವಿಧ ವಿಷಯಗಳು ಹಾಗೂ ಕಾಂಬಿನೇಷನ್‌ ಕುರಿತು ನೀವು ತಿಳಿದುಕೊಂಡಿರುತ್ತೀರಿ (ವಿವರಗಳಿಗೆ ಸುದ್ದಿಯ ಕೊನೆಯಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ. ಈಗ ಬಿಎಸ್‌ಸಿ ಓದಿದ ನಂತರ ಮುಂದೆ ಏನು ಮಾಡಬಹುದು ಎಂಬ ಕುರಿತು ತಿಳಿಯುವ ಸಮಯ. ಉತ್ತಮ ವ್ಯಾಪ್ತಿ ಹೊಂದಿರುವ ವಿಜ್ಞಾನ ವಿಭಾಗದಲ್ಲಿ, ಬಿಎಸ್‌ಸಿ ನಂತರ ಉನ್ನತ ಶಿಕ್ಷಣ ಪಡೆಯಬಹುದು. ಮಾಸ್ಟರ್‌ ಡಿಗ್ರಿ ಹೊರತಾಗಿ ಉದ್ಯೋಗ ಪಡೆಯಬಹುದು. ಭವಿಷ್ಯದ ದೃಷ್ಟಿಯಿಂದ ಏರೋನಾಟಿಕ್ಸ್, ಮರೈನ್ ಜಿಯಾಲಜಿ, ನ್ಯಾಚುರಲಿಸ್ಟ್, ಫಾರೆಸ್ಟ್ ಆಫೀಸರ್ ಈ ರೀತಿಯ ಕೋರ್ಸ್ ಅಥವಾ ಉನ್ನತ ಶಿಕ್ಷಣ ಪಡೆಯುವುದನ್ನು ಆಯ್ಕೆ ಮಾಡಬಹುದು.

ಬಿಎಸ್‌ಸಿ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವಿಜ್ಞಾನ ಕುರಿತಾಗಿ ಆಳವಾದ ಅಡಿಪಾಯ ಹಾಕಿಕೊಡುತ್ತದೆ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನ ನಡೆಸಲು ಅವಕಾಶ ಮಾಡಿಕೊಡುತ್ತದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿರುವುದರಿಂದ ಆಯಾ ಕೋರ್ಸ್‌ಗೆ ಅನುಗುಣವಾಗಿ ಉತ್ತಮ ಸಂಬಳದ ಉದ್ಯೋಗ ಪಡೆಯಬಹುದು. ಜೊತೆಗೆ ಆರೋಗ್ಯ, ತಂತ್ರಜ್ಞಾನ, ಐಟಿ, ಉತ್ಪಾದನಾ ಕ್ಷೇತ್ರ ಸೇರಿದಂತೆ ವಿವಿಧ ವಿಜ್ಞಾನ ಸಂಬಂಧಿತ ಉದ್ಯೋಗಗಳು ಭವಿಷ್ಯದಲ್ಲಿಯೂ ಹೆಚ್ಚು ಜನಪ್ರಿಯವಾಗಿರುತ್ತವೆ. ಉನ್ನತ ಅಧ್ಯಯನದ ಮೂಲಕ ಬಾಹ್ಯಾಕಾಶ, ತಂತ್ರಜ್ಞಾನ, ವಿಜ್ಞಾನಿಗಳಾಗಿ ಬೆಳೆಯಬಹುದು. ತಮ್ಮ ಅಧ್ಯಯನವನ್ನು ಒಂದು ಕ್ಷೇತ್ರ ಅಥವಾ ವಿಷಯದ ಮೇಲೆ ಕೇಂದ್ರೀಕರಿಸಲು ಉನ್ನತ ಅಧ್ಯಯನ ಮತ್ತು ಸಂಶೋಧನೆ ಮಾಡಬಹುದು.

ಬಿಎಸ್‌ಸಿ ನಂತರ ಮುಂದೇನು?

ಎಂಎಸ್‌ಸಿ: MSc ಅಥವಾ ಮಾಸ್ಟರ್ಸ್ ಆಫ್ ಸೈನ್ಸ್ ಬಿಎಸ್‌ಸಿ ನಂತರ ಅತ್ಯಂತ ಸಾಮಾನ್ಯವಾದ ಸ್ನಾತಕೋತ್ತರ ಪದವಿ ಕೋರ್ಸ್ ಆಗಿದೆ. ಎಂಎಸ್ಸಿ ಕೋರ್ಸ್‌ಗಳನ್ನು ಕರ್ನಾಟಕ ಹಾಗೂ ಭಾರತದ ಹಲವು ಕಾಲೇಜುಗಳು ಆಫರ್‌ ಮಾಡುತ್ತವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನುಸಾರ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಸೂಕ್ಷ್ಮ ಜೀವವಿಜ್ಞಾನ(Microbiology), ಸಸ್ಯಶಾಸ್ತ್ರ(Botany), ಪ್ರಾಣಿಶಾಸ್ತ್ರ (Zoology) ಮೊದಲಾದ ಕೋರ್ಸ್ ಮಾಡಬಹುದು.

ಎಂಬಿಎ ಕೋರ್ಸ್‌ಗಳು: ಎಂಬಿಎ ಅಥವಾ ಮಾಸ್ಟರ್ಸ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ 2 ವರ್ಷಗಳ ಮಾಸ್ಟರ್‌ ಡಿಗ್ರಿಯಾಗಿದೆ.

ಎಂಸಿಎ ಕೋರ್ಸ್‌: ಎಂಸಿಎ ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ 2 ವರ್ಷಗಳ ಮಾಸ್ಟರ್ಸ್ ಡಿಗ್ರಿ ಪಡೆಯಬಹುದು. ಇಲ್ಲಿ, ಅಭ್ಯರ್ಥಿಗಳು ಕಂಪ್ಯೂಟರ್ ಆರ್ಕಿಟೆಕ್ಚರ್, ಅಪ್ಲಿಕೇಶನ್ ಸಾಫ್ಟ್‌ವೇರ್, ಆಪರೇಟಿಂಗ್ ಸಿಸ್ಟಮ್‌ಗಳು ಇತ್ಯಾದಿ ಸೇರಿದಂತೆ ಕಂಪ್ಯೂಟರ್ ಪ್ರೋಗ್ರಾಂನ ವಿವಿಧ ಅಂಶಗಳ ಅಧ್ಯಯನ ಮಾಡಬಹುದು. ಡಿಗ್ರಿಯಲ್ಲಿ ಬಿಸಿಎ ಮಾಡಿದವರಿಗೆ ಇದು ಸುಲಭ.

ಬಿಟೆಕ್ : ಬಿಎಸ್‌ಸಿ ಪೂರ್ಣಗೊಳಿಸಿದ ನಂತರ (BTech) ಕೂಡಾ ಮಾಡಬಹುದು. ಇವರು ಬಿಟೆಕ್ ಪದವಿಯ ಎರಡನೇ ವರ್ಷಕ್ಕೆ ಪ್ರವೇಶ ಪಡೆಯುತ್ತಾರೆ. ಹಿಂದೆ ಲ್ಯಾಟರಲ್ ಎಂಟ್ರಿ ಮೂಲಕ ಬಿಟೆಕ್ ಪ್ರವೇಶಕ್ಕೆ ಡಿಪ್ಲೊಮಾ ಹೊಂದಿರುವವರಿಗೆ ಮಾತ್ರ ಅವಕಾಶವಿತ್ತು. ಆದರೆ 2013-14ರಿಂದ ಬಿಎಸ್‌ಸಿ ವಿದ್ಯಾರ್ಥಿಗಳಿಗೂ ಈ ಅವಕಾಶವಿದೆ. ಎಐಸಿಟಿಇ ಪ್ರಕಾರ, ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಮತ್ತು ಬಿಎಸ್ಸಿ ಐಟಿ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಬಿಟೆಕ್ 2ನೇ ವರ್ಷದಲ್ಲಿ ನೇರ ಪ್ರವೇಶಕ್ಕೆ ಅವಕಾಶವಿದೆ.

ಇದನ್ನು ಹೊರತುಪಡಿಸಿ ಏರೋನಾಟಿಕಲ್ ಸೈನ್ಸ್, ಮರೈನ್‌ ಜಿಯಾಲಜಿ (ಸಾಗರ ಭೂಗರ್ಭಶಾಸ್ತ್ರ, ಸ್ಪೇಸ್‌ ಸೈನ್ಸ್‌ ಸೇರಿದಂತೆ ಆಸಕ್ತಿಯನುಸಾರ ಕೋರ್ಸ್‌ಗಳನ್ನು ಮಾಡಬಹುದು.

ಬಿಎಸ್‌ಸಿ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು

ಬಿಎಸ್‌ಸಿ ಪದವಿ ಕೋರ್ಸ್ ಪೂರ್ಣಗೊಳಿಸಿದ ನಂತರ ಪದವೀಧರರು ತಮ್ಮ ಆಸಕ್ತಿಗನುಸಾರವಾಗಿ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬಹುದು. ಡಾಕ್ಟರ್‌, ಇಂಜಿನಿಯರ್‌, ನರ್ಸ್, ಪೈಲಟ್‌ಗಳು ಇತ್ಯಾದಿ ಉದ್ಯೋಗಗಳನ್ನು ಆಯ್ಕೆ ಮಾಡಬಹುದು. ಉತ್ತಮ ಸಂಬಳ ಕೂಡಾ ಪಡೆಯಬಹುದು. ಹೆಚ್ಚಿನ ಎಲ್ಲಾ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಟೀಚಿಂಗ್‌ ಅಥವಾ ಲೆಕ್ಚರರ್‌ ಆಗಿ ಕೆಲಸ ಮಾಡಬಹುದು. ಉಳಿದಂತೆ ಕೋರ್ಸ್‌ಗೆ ಅನುಸಾರವಾಗಿ ಈ ಉದ್ಯೋಗಗಳನ್ನು ಪಡೆಯಬಹುದು.

  • ಬಿಎಸ್‌ಸಿ ಭೌತಶಾಸ್ತ್ರ ನಂತರ ಉದ್ಯೋಗ: ಕಂಟೆಂಟ್ ಡೆವಲಪರ್, ಲ್ಯಾಬ್ ಮೇಲ್ವಿಚಾರಕ, ರೇಡಿಯಾಲಜಿಸ್ಟ್ ಅಸಿಸ್ಟೆಂಟ್, ಸಂಖ್ಯಾಶಾಸ್ತ್ರಜ್ಞ, ಹಿರಿಯ ಭೌತಶಾಸ್ತ್ರಜ್ಞ.
  • ಬಿಎಸ್‌ಸಿ ಗಣಿತದಲ್ಲಿ ಉದ್ಯೋಗಾವಕಾಶ: ಗಣಿತಶಾಸ್ತ್ರಜ್ಞ, ಡೇಟಾ ವಿಶ್ಲೇಷಕ, ಸಂಖ್ಯಾ ವಿಶ್ಲೇಷಕ, ಕ್ರಿಪ್ಟನಾಲಿಸ್ಟ್.
  • ಬಿಎಸ್‌ಸಿ ಭೂವಿಜ್ಞಾನ (Geology): ಪ್ಯಾಲಿಯಂಟಾಲಜಿಸ್ಟ್‌ಗಳು, ಭೂವಿಜ್ಞಾನಿಗಳು, ಪೆಟ್ರೋಲಿಯಂ ಭೂವಿಜ್ಞಾನಿಗಳು, ಗಣಿ ಮೇಲ್ವಿಚಾರಕರು
  • ಬಿಎಸ್‌ಸಿ ಬಯೋಟೆಕ್ನಾಲಜಿ ಉದ್ಯೋಗಗಳು: ಬಯೋಕೆಮಿಸ್ಟ್, ಎಪಿಡೆಮಿಯಾಲಜಿಸ್ಟ್, ಲ್ಯಾಬ್ ಟೆಕ್ನಿಷಿಯನ್, ರಿಸರ್ಚ್ ಸೈಂಟಿಸ್ಟ್
  • ಬಿಎಸ್‌ಸಿ ಸಸ್ಯಶಾಸ್ತ್ರ: ಫಾರೆಸ್ಟರ್, ಪರಿಸರಶಾಸ್ತ್ರಜ್ಞ, ಜೈವಿಕ ತಂತ್ರಜ್ಞ, ಸಸ್ಯಶಾಸ್ತ್ರಜ್ಞ, ನ್ಯಾಚುರಲಿಸ್ಟ್
  • ಬಿಎಸ್‌ಸಿ ಸ್ಟಾಟಿಸ್ಟಿಕ್ಸ್ ಉದ್ಯೋಗಗಳು: ಹಣಕಾಸು ವಿಶ್ಲೇಷಕ, ಡೇಟಾ ವಿಶ್ಲೇಷಕ, ಹಣಕಾಸು ಅಕೌಂಟೆಂಟ್, ವಿಶ್ಲೇಷಕ
  • ಬಿಎಸ್‌ಸಿ ಏರೋನಾಟಿಕಲ್ ಸೈನ್ಸ್: ಏರ್‌ಲೈನ್ ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲರ್, ಫ್ಲೈಟ್ ಇಂಜಿನಿಯರ್, ಏರ್‌ಲೈನ್ ಡೈರೆಕ್ಟರ್
  • ಬಿಎಸ್‌ಸಿ ಮೆಡಿಕಲ್: ಲ್ಯಾಬ್‌ ಅಸಿಸ್ಟೆಂಟ್, ವೈಜ್ಞಾನಿಕ ಸಂಶೋಧಕ, ಪ್ರಾಣಿಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞ
  • ಬಿಎಸ್‌ಸಿ ಮಾನವಶಾಸ್ತ್ರ‌ (Anthropology): ಮಾನವಶಾಸ್ತ್ರಜ್ಞ, ಪುರಾತತ್ವಶಾಸ್ತ್ರಜ್ಞ, ಕ್ಷೇತ್ರ ತನಿಖಾಧಿಕಾರಿ, ಸಂರಕ್ಷಣಾ ಅಧಿಕಾರಿ

ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಬಿಎಸ್‌ಸಿಯಲ್ಲಿ ಜನಪ್ರಿಯ ಕಾಂಬಿನೇಷನ್‌ಗಳು ಯಾವುವು; ಯಾರೆಲ್ಲಾ ಸೈನ್ಸ್ ಓದಬಹುದು, ಭವಿಷ್ಯದ ದೃಷ್ಟಿಯಿಂದ ಯಾವುದು ಒಳ್ಳೆಯದು?

 

mysore-dasara_Entry_Point