Top 10 BTech Courses: ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Top 10 Btech Courses: ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Top 10 BTech Courses: ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Top 10 BTech Courses in IITs: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಬಳಿಕ ವಿದ್ಯಾರ್ಥಿಗಳು ಐಐಟಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೂರಕ್ಕೂ ಹೆಚ್ಚು ಇರುವ ಬಿಟೆಕ್‌ ಕೋರ್ಸ್‌ಗಳಲ್ಲಿ ಅತ್ಯಧಿಕ ಬೇಡಿಕೆ ಇರುವ ಟಾಪ್‌ 10 ಕೋರ್ಸ್‌ಗಳ ವಿವರ ಇಲ್ಲಿ ನೀಡಲಾಗಿದೆ.

ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು
ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

Top 10 BTech Courses in IITs: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಬಳಿಕ ವಿದ್ಯಾರ್ಥಿಗಳು ಐಐಟಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಐಐಟಿಗಳಲ್ಲಿ ಒಟ್ಟು 130ಕ್ಕೂ ಹೆಚ್ಚು ಕೋರ್ಸ್‌ಗಳು ಇರುತ್ತವೆ. ಕಳೆದ ವರ್ಷ 133 ಪದವಿಗಳು ಇದ್ದವು. ಅವುಗಳಲ್ಲಿ 77 ನಾಲ್ಕು ವರ್ಷದ ಬಿಟೆಕ್‌ ಕೋರ್ಸ್‌ಗಳಾಗಿವೆ. 56 ಕೋರ್ಸ್‌ಗಳು ಐದು ವರ್ಷದ ಅಕಾಡೆಮಿಕ್‌ ಪದವಿಗಳಾಗಿವೆ. ಒಟ್ಟಾರೆ, ಐಐಟಿಗೆ ಸೇರುವುದೆಂದರೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದೆಂಬ ಸವಾಲು ವಿದ್ಯಾರ್ಥಿಗಳಿಗೆ ಎದುರಾಗುತ್ತದೆ. ಇವುಗಳಲ್ಲಿ ಕಳೆದ ವರ್ಷ ಅತ್ಯಧಿಕ ಬೇಡಿಕೆಯಲ್ಲಿದ್ದ ಹತ್ತು ಬಿಟೆಕ್ ಪದವಿಗಳು ಯಾವುವು ಎಂದು ತಿಳಿದುಕೊಳ್ಳೋಣ. ಭವಿಷ್ಯದಲ್ಲಿ ಜೆಇಇ  ಅಡ್ವಾನ್ಸ್ಡ್‌ ಉತ್ತೀರ್ಣರಾದ ಬಳಿಕ ಐಐಟಿ ಕೋರ್ಸ್‌ಗಳಲ್ಲಿ ಯಾವ ಬಿಟೆಕ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕೆಂದು ಸಂದಿಗ್ಧತೆಯಲ್ಲಿರುವ ವಿದ್ಯಾರ್ಥಿಗಳಿಗೆ ಇದು ನೆರವಾಗಬಹುದು.

ಐಐಟಿಗಳ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳು

  1.  ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
  2. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್
  3. ಎಲೆಕ್ಟ್ರಿಕಲ್ ಎಂಜಿನಿಯರಿಂಗ್
  4. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್
  5. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌)
  6.  ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
  7.  ಮೆಕ್ಯಾನಿಕಲ್ ಇಂಜಿನಿಯರಿಂಗ್
  8.  ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್
  9.  ಮ್ಯಾಥಮೆಟಿಕ್ಸ್‌ ಆಂಡ್‌ ಕಂಪ್ಯೂಟಿಂಗ್
  10.  ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್

ಈ ವರ್ಷ ಜೆಇಇ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ಯಾವಾಗ?

ಈ ವರ್ಷ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಗೆ ಏಪ್ರಿಲ್ 23, 2025ರಿಂದ ನೋಂದಣಿ ಪ್ರಾರಂಭವಾಗುತ್ತದೆ.

ನೋಂದಣಿ ಅವಧಿ: ಏಪ್ರಿಲ್ 23, 2025 (10:00)ರಿಂದ ಮೇ 2, 2025 (23:59)

ಶುಲ್ಕ ಪಾವತಿ ದಿನಾಂಕ: ಮೇ 5, 2025 (23:59 IST)

ಪರೀಕ್ಷೆಯ ದಿನಾಂಕ: ಮೇ 18, 2025

ಭಾರತದ ಟಾಪ್‌ 10 ಐಐಟಿಗಳು ಯಾವುವು?

ಎನ್‌ಐಆರ್‌ಎಫ್‌ ರ‍್ಯಾಕಿಂಗ್‌ ಪ್ರಕಾರ ಐಐಟಿ ಮದ್ರಾಸ್‌ ಭಾರತದ ಟಾಪ್‌ 10 ಐಐಟಿಗಳಲ್ಲಿ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಐಐಟಿ ಮುಂಬೈ, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ರೂರ್ಕಿ, ಐಐಟಿ ಖರಗ್‌ಪುರ, ಐಐಟಿ ಗುವಾಹಟಿ, ಐಐಟಿ ಹೈದರಾಬಾದ್‌, ಐಐಟಿ ಇಂದೋರ್‌ ಮತ್ತು ಐಐಟಿ ಬನಾರಸ್‌ಗಳು ಪಡೆದಿವೆ.

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಯಾರು ಬರೆಯಬಹುದು?

ಜೆಇಇ ಮೇನ್‌ನಲ್ಲಿ ಟಾಪ್ 2.5 ಲಕ್ಷ ರ‍್ಯಾಂಕ್ ಗಳಿಸಿದ ಅಭ್ಯರ್ಥಿಗಳು ಮಾತ್ರ ಜೆಇಇ  ಅಡ್ವಾನ್ಸ್ಡ್‌ ಪರೀಕ್ಷೆಗೆ ಹಾಜರಾಗಬಹುದು. ಜೆಇಇ  ಅಡ್ವಾನ್ಸ್ಡ್‌ನಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳು ದೇಶದ ಉನ್ನತ ಐಐಟಿಗಳಲ್ಲಿ ಬಿ.ಟೆಕ್ ಕೋರ್ಸ್‌ಗೆ ಪ್ರವೇಶ ಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಮೆಕ್ಯಾನಿಕಲ್, ಸಿವಿಲ್, ಇಸಿಇ, ಎಲೆಕ್ಟ್ರಿಕಲ್ ಮುಂತಾದ ಅನೇಕ ಬಿ.ಟೆಕ್ ಕೋರ್ಸ್‌ಗಳನ್ನು ನೀಡಲಾಗುತ್ತದೆ.

ಜೆಇಇ ಅಡ್ವಾನ್ಸ್ಡ್‌ 2025 ನಡೆಸುವ ಸಂಸ್ಥೆ ಯಾವುದು?

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ - ಕಾನ್ಪುರ್ 2025ನೇ ಸಾಲಿನ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ನಡೆಸಲಿದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂದರೆ ಐಐಟಿಗಳಲ್ಲಿ ಎಜಿನಿಯರಿಂಗ್, ಸೈನ್ಸ್‌, ಆರ್ಕಿಟೆಕ್ಚರ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ಅಗತ್ಯವಿರುತ್ತದೆ.

Whats_app_banner