Museums in Bengaluru: ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ನೋಡಬಹುದಾದ ಬೆಂಗಳೂರಿನ ಮ್ಯೂಸಿಯಂಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Museums In Bengaluru: ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ನೋಡಬಹುದಾದ ಬೆಂಗಳೂರಿನ ಮ್ಯೂಸಿಯಂಗಳಿವು

Museums in Bengaluru: ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ನೋಡಬಹುದಾದ ಬೆಂಗಳೂರಿನ ಮ್ಯೂಸಿಯಂಗಳಿವು

ಬೆಂಗಳೂರಿನಲ್ಲಿ 10ಕ್ಕೂ ಅಧಿಕ ಜನಪ್ರಿಯ ಮ್ಯೂಸಿಯಂಗಳಿವೆ. ವಿದ್ಯಾರ್ಥಿಗಳು ಈ ವಸ್ತುಸಂಗ್ರಹಾಲಯಗಳಿಂದ ಸಾಕಷ್ಟು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಶೈಕ್ಷಣಿಕ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಭೇಟಿ ನೀಡಿದರೆ ಈ ಮ್ಯೂಸಿಯಂಗಳನ್ನು ತಪ್ಪದೇ ಭೇಟಿ ನೀಡಿ.

ಬೆಂಗಳೂರಿನಲ್ಲಿರುವ ಪ್ರಮುಖ ಮ್ಯೂಸಿಯಂಗಳ ಮಾಹಿತಿ ಇಲ್ಲಿದೆ
ಬೆಂಗಳೂರಿನಲ್ಲಿರುವ ಪ್ರಮುಖ ಮ್ಯೂಸಿಯಂಗಳ ಮಾಹಿತಿ ಇಲ್ಲಿದೆ

ರಾಜಧಾನಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತಹ ಸಾಕಷ್ಟು ಮ್ಯೂಸಿಯಂಗಳಿವೆ. ಒಂದು ವೇಳೆ ನೀವಾದರೂ ಬೆಂಗಳೂರು ಪ್ರವಾಸ ಕೈಗೊಂಡರೆ ತಪ್ಪದೆ ಇಲ್ಲಿರುವ ಮ್ಯೂಸಿಯಂಗಳಿಗೆ ಭೇಟಿ ನೀಡಿ. ಸಾಕಷ್ಟು ವಸ್ತುಗಳ ಪ್ರದರ್ಶನಗಳು, ಶೋಗಳನ್ನು ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನಲ್ಲಿ ಪ್ರಮುಖ ವಸ್ತುಸಂಗ್ರಹಾಲಯಗಳ ವಿವರ ಇಲ್ಲಿದೆ.

1. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ

ಬೆಂಗಳೂರಿನ ಕಸ್ತೂರಿ ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂ ಮಕ್ಕಳು ಮತ್ತು ವಯಸ್ಕರಿಗೆ ವಿನೋದವನ್ನು ನೀಡುವ ಪ್ರಮುಖ ತಾಣವಾಗಿದೆ. ಇಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಯಂತ್ರಗಳು ಹಾಗೂ ಕಲಾಕೃತಿಗಳನ್ನು ಕಾಣಬಹುದು. ಮಕ್ಕಳಿಗೆ ವಿಜ್ಞಾನದ ಪ್ರೀತಿಯನ್ನು ಹೆಚ್ಚಿಸಲು ಉತ್ತಮ ಸ್ಥಳವಾಗಿದೆ. ಇಂಜಿನ್ ಗಳು, ವಿದ್ಯುತ್ ಶಕ್ತಿ, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿನ 3ಡಿ ಫಿಲ್ಮ್ ಶೋ ಹಾಗೂ ಸೈನ್ಸ್ ಶೋಗಳು ವಿದ್ಯಾರ್ಥಿಗಳ ಗಮನ ಸೆಳೆಯತ್ತವೆ. ಗಣೇಶ ಚತುರ್ಥಿ ಮತ್ತು ದೀಪಾವಳಿಯನ್ನು ಹೊರತುಪಡಿಸಿ ವರ್ಷದ ಎಲ್ಲಾ ದಿನಗಳಲ್ಲಿ ಮ್ಯೂಸಿಯಂ ತೆರೆದಿರುತ್ತದೆ. ಕಬ್ಬನ್ ಪಾರ್ಕ್ ಪಕ್ಕದಲ್ಲಿ ಈ ಮ್ಯೂಸಿಯಂ ಇದೆ.
ಸಮಯ: ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರಿಗೆ ತೆರೆದಿರುತ್ತದೆ

2. ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ

ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ (ಐಎಂಇ) ಭಾರತದ ಮೊದಲ ಸಂವಾದಾತ್ಮಕ ಸಂಗೀತದ ಸಂಗ್ರಹಾಲಯವಾಗಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಐಎಂ ಮ್ಯೂಸಿಯಂ ಇದೆ. ಸಂಗೀತ ಪರಂಪರೆಯನ್ನು ಪರಿಚಯಿಸವ ಉದ್ದೇಶದಿಂದ ಮ್ಯೂಸಿಯಂ ಸ್ಥಾಪಿಸಲಾಗಿದೆ. ಹೈಟೆಕ್ ಶೋಗಳು, ಸೌಂಡ್ ಗಾರ್ಡನ್, ಸಂಗೀತ್ ಶಿಕ್ಷಣಕ್ಕಾಗಿ ಕಲಿತಾ ಕೇಂದ್ರವೂ ಇಲ್ಲಿದೆ.
ಸಮಯ: ಬೆಳಗ್ಗೆ 10.00 ರಿಂದ ಸಂಜೆ 6 ಗಂಟೆಯವರಿಗೆ ತೆರೆದಿರುತ್ತದೆ

3. ಹೆರಿಟೇಜ್ ಸೆಂಟರ್ ಅಂಡರ್ ಏರೋಸ್ಪೇಸ್ ಮ್ಯೂಸಿಯಂ

ಮಾರತ್ತಹಳ್ಳಿಯ ಎಚ್ಎಎಲ್ ಪೊಲೀಸ್ ಠಾಣೆ ಸಮೀಪದಲ್ಲಿರುವ ಹೆರಿಟೇಜ್ ಸೆಂಟರ್ ಅಂಡರ್ ಏರೋಸ್ಪೇಸ್ ಮ್ಯೂಸಿಯಂ ಭಾರತದ ಮೊದಲ ಏರೋಸ್ಪೇಸ್ ಮ್ಯೂಸಿಯಂ ಎನಿಸಿದೆ. ಭಾರತದ ವೈಮಾನಿಕ ಇತಿಹಾಸದ ನೋಡವನ್ನು ತೆರೆದಿಡುತ್ತದೆ. ವಿವಿಧ ಮಾದರಿಗಳ ವಿಮಾನಗಳ ಛಾಯಚಿತ್ರಗಳನ್ನು ಕಾಣಬಹುದು.
ಸಮಯ: ಬೆಳಗ್ಗೆ 9.00 ರಿಂದ ಸಂಜೆ 4.30 ಗಂಟೆಯವರಿಗೆ ತೆರೆದಿರುತ್ತದೆ

4. ಕರ್ನಾಟಕ ಚಿತ್ರಕಲಾ ಪರಿಷತ್ತು

ಬೆಂಗಳೂರಿನ ಲಲಿತ್ ಹೋಟೆಲ್ ಸಮೀಪದ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ನಗರ ಪ್ರಸಿದ್ಧ ಕಲಾ ಶಾಲೆಯಾಗಿದೆ. ಮರಗಳಿಂದ ಸುತ್ತವರಿದ ಕ್ಯಾಂಪಸ್ನಲ್ಲಿರುವ ಸಿಕೆಪಿಯಲ್ಲಿ ವಸ್ತುಸಂಗ್ರಹಾಲಯ ಅಂಗಡಿಗಳು ಹಾಗೂ ಗ್ಯಾಲರಿಗಳನ್ನು ಕಾಣಬಹುದು. ವರ್ಣಚಿತ್ರಗಳು, ಕರಕುಶಲ ಶಾಶ್ವತ ಪ್ರದರ್ಶನಗಳನ್ನು ಇಲ್ಲಿ ನಡೆಯುತ್ತವೆ. ವಾರ್ಷಿಕ ಕರಕುಶಲ ಮತ್ತು ಚಿತ್ರ ಸಂತೆ ತುಂಬಾ ಜನಪ್ರಿಯವಾಗಿದೆ.
ಸಮಯ: ಬೆಳಗ್ಗೆ 10.00 ರಿಂದ ಸಂಜೆ 7 ಗಂಟೆಯವರಿಗೆ ತೆರೆದಿರುತ್ತದೆ

5. ಜವಾಹರ್ ಲಾಲ್ ನೆಹರು ತಾರಾಲಯ

ಬೆಂಗಳೂರಿನ ಹೈಗ್ರೌಂಡ್ಸ್ ನ ಸ್ಯಾಂಕಿ ಕೆರೆ ಸಮೀಪದಲ್ಲಿರುವ ಜವಾಹರ್ ಲಾಲ್ ನೆಹರು ತಾರಾಲಯ ವಿಜ್ಞಾನದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ವಿಜ್ಞಾನ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಶಾಲಾ ಮಕ್ಕಳಿಗಾಗಿ ವಾರಾಂತ್ಯದ ಸೆಷನ್ ಗಳು ಇರುತ್ತವೆ. ಬೇಸಿಗೆ ಕಾರ್ಯಕ್ರಮಗಳು, ವಿಜ್ಞಾನ ಪ್ರದರ್ಶನಗಳು ಹಾಗೂ ಕಾರ್ಯಗಾರಗಳು ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ.

6. ಕಾವೇರಿ ಕರಕುಶಲ ವಸ್ತುಗಳು

ನಗರಗ ಎಂಜಿ ರಸ್ತೆಯಲ್ಲಿ ಕಾವೇರಿ ಕರಕುಶಲ ವಸ್ತುಗಳ ಸಂಗ್ರಹಾಲಯವಿದೆ. ವಿವಿಧ ಬಗೆಯ ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. ವಿಶೇಷವಾಗಿ ಶ್ರೀಗಂಧದ ಕೆತ್ತನೆಗಳು ತುಂಬಾ ಜನಪ್ರಿಯವಾಗಿಲವೆ. ಲೋಹದ ಕರಕುಶಲ ವಸ್ತುಗಳು, ರೇಷ್ಮೆ ಕಸೂತಿ ವಸ್ತುಗಳು, ಸುಗಂಧ ದ್ರವ್ಯಗಳ ಪ್ರದರ್ಶನ ಮತ್ತು ಮಾರಾಟ ಇಲ್ಲಿ ನಡೆಯುತ್ತವೆ.

ಸಮಯ: ಬೆಳಗ್ಗೆ 9.30 ರಿಂದ ರಾತ್ರಿ 8.30 ರವರಿಗೆ ತೆರೆದಿರುತ್ತದೆ.

ಕ್ಯೂರಿಯಸಿಟಿ ಸೈನ್ಸ್ ಸೆಂಟರ್ ನಿಂದ ಬ್ರೈನ್ ಮ್ಯೂಸಿಯಂವರಿಗೆ

ಇವಷ್ಟೇ ಅಲ್ಲದೆ, ಕ್ಯೂರಿಯಸಿಟಿ ಸೈನ್ಸ್ ಸೆಂಟರ್, ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್, ಕಿಂಕಿನಿ ಆರ್ಟ್, ವೆಂಕಟಪ್ಪ ಆರ್ಟ್ ಗ್ಯಾಲರಿ ಮತ್ತು ಸರ್ಕಾರಿ ವಸ್ತುಸಂಗ್ರಹಾಲಯ, ಇಂಡಿಯನ್ ಕಾರ್ಟೂನ್ ಗ್ಯಾಲರಿ ಹಾಗೂ ಬ್ರೈನ್ ಮ್ಯೂಸಿಯಂಗೂ ಭೇಟಿ ನೀಡಬಹುದು.

Whats_app_banner