Eid Ul Adha: ಬಕ್ರೀದ್‌ ಸಂಭ್ರಮದಂದು ಹೀಗಿರಲಿ ಹಿಜಾಬ್‌ ಫ್ಯಾಷನ್‌; ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸಲು ಇಲ್ಲಿದೆ ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  Eid Ul Adha: ಬಕ್ರೀದ್‌ ಸಂಭ್ರಮದಂದು ಹೀಗಿರಲಿ ಹಿಜಾಬ್‌ ಫ್ಯಾಷನ್‌; ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸಲು ಇಲ್ಲಿದೆ ಟಿಪ್ಸ್‌

Eid Ul Adha: ಬಕ್ರೀದ್‌ ಸಂಭ್ರಮದಂದು ಹೀಗಿರಲಿ ಹಿಜಾಬ್‌ ಫ್ಯಾಷನ್‌; ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸಲು ಇಲ್ಲಿದೆ ಟಿಪ್ಸ್‌

ಈದ್‌ ಅಲ್‌ ಅದ್ಹಾ ಅಥವಾ ಬಕ್ರೀದ್‌ ಸಮೀಪದಲ್ಲಿದೆ. ನಾಡಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್‌ ಸಂಭ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿ ಜೂನ್‌ 29ರಂದು ಬಕ್ರೀದ್‌ ಆಚರಣೆ ಇದೆ. ಈ ಬಕ್ರೀದ್‌ಗೆ ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸುವ ಯೋಚನೆ ನಿಮಗಿದೆಯೇ? ಭಿನ್ನವಾಗಿ ಹಾಗೂ ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸಲು ಬಯಸುವವರಿಗೆ ಇಲ್ಲಿದೆ ಟಿಪ್ಸ್‌.

ಹೀಗಿರಲಿ ಹಿಜಾಬ್‌ ಫ್ಯಾಷನ್‌ (ಸಾಂದರ್ಭಿಕ ಚಿತ್ರ)
ಹೀಗಿರಲಿ ಹಿಜಾಬ್‌ ಫ್ಯಾಷನ್‌ (ಸಾಂದರ್ಭಿಕ ಚಿತ್ರ)

ಈದ್‌ ಅಲ್‌ ಅದ್ಹಾ ಅಥವಾ ಬಕ್ರೀದ್‌ ಸಮೀಪದಲ್ಲಿದೆ. ನಾಡಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್‌ ಸಂಭ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿ ಜೂನ್‌ 29ರಂದು ಬಕ್ರೀದ್‌ ಆಚರಣೆ ಇದೆ. ಈ ಬಕ್ರೀದ್‌ಗೆ ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸುವ ಯೋಚನೆ ನಿಮಗಿದೆಯೇ? ಭಿನ್ನವಾಗಿ ಹಾಗೂ ಸ್ಟೈಲಿಶ್‌ ಆಗಿ ಹಿಜಾಬ್‌ ಧರಿಸಲು ಬಯಸುವವರಿಗೆ ಇಲ್ಲಿದೆ ಟಿಪ್ಸ್‌. ಹಿಜಾಬ್‌ ಧರಿಸುವಾಗ ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಿರಬೇಕು ಮತ್ತು ನಿಮಗೆ ಆರಾಮದಾಯಕ ಎನ್ನಿಸುವುದು ಮುಖ್ಯವಾಗುತ್ತದೆ.

ಸೂಕ್ತ ಫ್ಯಾಬ್ರಿಕ್‌ ಆರಿಸಿಕೊಳ್ಳಿ

ಹಗುರವಾಗಿರುವ, ಗಾಳಿಯಾಡುವಂತಿರುವ ಶಿಫಾನ್‌, ಸಿಲ್ಕ್‌ ಅಥವಾ ಕಾಟನ್‌ ಬಟ್ಟೆಯನ್ನು ಆಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಈ ಮೆಟಿರಿಯಲ್‌ಗಳು ಸುತ್ತಲೂ ಸೂಕ್ತವಾಗಿರುತ್ತವೆ ಹಾಗೂ ಧರಿಸಲು ಆರಾಮದಾಯಕ ಎನ್ನಿಸುತ್ತದೆ. ಇದು ಬೆಚ್ಚಗಿಡಲು ಸಹಾಯ ಮಾಡುತ್ತದೆ.

ಭಿನ್ನ ಸ್ಟೈಲ್‌ನೊಂದಿಗೆ ಪ್ರಯೋಗ ಮಾಡಿ

ಹಿಜಾಬ್‌ ಅನ್ನು ಭಿನ್ನವಾಗಿ ಧರಿಸುವ ಆಯ್ಕೆ ಇದ್ದು, ಕ್ಲಾಸಿಕ್‌ ವ್ರ್ಯಾಪ್‌, ಟರ್ಬನ್‌ ಸ್ಟೈಲ್‌ ಅಥವಾ ಡ್ರ್ಯಾಪ್ಡ್‌ ಸ್ಟೈಲ್‌ನಲ್ಲಿ ಧರಿಸಬಹುದು. ನಿಮ್ಮ ಮುಖ ಹಾಗೂ ವ್ಯಕ್ತಿತ್ವಕ್ಕೆ ಹೊಂದುವಂತೆ ಹಿಜಾಜ್‌ ಧರಿಸಲು ಆನ್‌ಲೈನ್‌ ಟ್ಯುಟೋರಿಯಲ್‌ಗಳಿವೆ. ಅಲ್ಲದೇ ನೀವೇ ಹೊಸ ಹೊಸ ಪ್ರಯೋಗಗಳನ್ನು ಕಲಿಯಬಹುದು.

ಬಣ್ಣ ಹಾಗೂ ವಿನ್ಯಾಸಗಳ ಸಂಯೋಜನೆ

ನೀವು ಆಯ್ಕೆ ಮಾಡುವ ಹಿಜಾಬ್‌ ನಿಮ್ಮ ಒಟ್ಟಾರೆ ಔಟ್‌ಫಿಟ್‌ ಅನ್ನು ಪರಿಪೂರ್ಣಗೊಳಿಸುತ್ತದೆ. ಕಲರ್‌ ಹಾಗೂ ವಿನ್ಯಾಸವನ್ನು ಆಯ್ಕೆ ಮಾಡುವುದು ಕೂಡ ನೀವು ಹೆಚ್ಚು ಸ್ಟೈಲಿಶ್‌ ಆಗಿ ಕಾಣುವಂತೆ ಮಾಡಲು ನೆರವಾಗುತ್ತದೆ. ಮ್ಯಾಚಿಂಗ್‌ ಅಥವಾ ಕಾಂಟ್ರ್ಯಾಸ್ಟ್‌ ಬಣ್ಣದ ಹಿಜಾಬ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.

ಪರಿಕರಗಳ ಬಳಕೆ

ವಿವಿಧ ಫ್ಯಾಷನ್‌ ಪರಿಕರಗಳನ್ನು ಬಳಸುವ ಮೂಲಕ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಪಿನ್‌, ಬ್ರೋಚಸ್‌, ಹೆಡ್‌ಬ್ಯಾಂಡ್‌ಗಳನ್ನು ಹಿಜಾಬ್‌ ಜೊತೆ ಧರಿಸಬಹುದು ಅಥವಾ ಸ್ಪಾರ್ಕಲ್‌ಗಳನ್ನು ಬಳಸಬಹುದು. ಆದರೆ ಇದು ನಿಮ್ಮ ನೋಟಕ್ಕೆ ಹೊಂದುವುದೋ ಇಲ್ಲವೋ ಎಂಬುದನ್ನು ಗಮನಿಸುವುದು ಮುಖ್ಯವಾಗುತ್ತದೆ.

ಭಿನ್ನ ಟೆಕ್‌ಶ್ಚರ್‌ಗಳು

ಟೆಕ್‌ಶ್ಚರ್‌ಗಳಲ್ಲಿ ಭಿನ್ನ ಪ್ರಯೋಗ ಮಾಡುವ ಮೂಲಕ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಸರಳ ಬಟ್ಟೆಯೊಂದಿಗೆ ಲೇಸ್‌, ಕಸೂತಿ, ವೆಲ್ವೆಟ್‌ ಟೆಕ್‌ಶ್ಚರ್‌ ಇರುವ ಬಟ್ಟೆಗಳನ್ನು ಜೋಡಿಸಿ ಧರಿಸಬಹುದು. ಇದು ಭಿನ್ನ ನೋಟ ಸಿಗುವಂತೆ ಮಾಡುತ್ತದೆ.

ಲೇಯರಿಂಗ್‌

ಹಿಜಾಬ್‌ ಅನ್ನು ಇತರ ಉಡುಪುಗಳೊಂದಿಗೆ ಲೇಯರ್‌ ರೂಪದಲ್ಲಿ ಧರಿಸುವುದು ಕೂಡ ಭಿನ್ನ ಹಾಗೂ ಫ್ಯಾಷನೇಬಲ್‌ ಲುಕ್‌ ನೀಡುತ್ತದೆ.

ವಾತಾವರಣಕ್ಕೆ ತಕ್ಕಂತೆ ಹಿಜಾಬ್‌ ಧರಿಸುವುದು

ವಾತಾವರಣಕ್ಕೆ ತಕ್ಕಂತೆ ಹಿಜಾಬ್‌ ಧರಿಸುವುದು ಬಹಳ ಮುಖ್ಯವಾಗುತ್ತದೆ. ಚಳಿಗಾಲ, ಮಳೆಗಾಲದಲ್ಲಿ ಸ್ವಲ್ಪ ದಪ್ಪನೆಯ ಪ್ಯಾಬ್ರಿಕ್‌ ಇರುವ ಬಟ್ಟೆ, ಬೇಸಿಗೆಯಲ್ಲಿ ಹಗುರಾದ ತೆಳ್ಳನೆಯ ಪ್ಯಾಬ್ರಿಕ್‌ ಧರಿಸುವುದು ಮುಖ್ಯವಾಗುತ್ತದೆ.

ಈ ಎಲ್ಲವೂ ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಹೊಂದಿಕೊಳ್ಳುವ ಹಿಜಾಬ್‌ ಫ್ಯಾಷನ್‌. ನಿಮ್ಮ ಮುಖ್ಯಕ್ಕೆ ಹೊಂದುವಂತೆ ನೀವು ಭಿನ್ನ ಪ್ರಯೋಗ ಮಾಡುವ ಮೂಲಕ ಇನ್ನಷ್ಟು ಸ್ಟೈಲಿಶ್‌ ಆಗಿ ಕಾರಣಬಹುದು. ಮಿಕ್ಸ್‌ ಅಂಡ್‌ ಮ್ಯಾಚ್‌ ಕೂಡ ಸೌಂದರ್ಯ ವೃದ್ಧಿಸಲು ನೆರವಾಗುವುದರಲ್ಲಿ ಎರಡು ಮಾತಿಲ್ಲ.

Whats_app_banner