ವಾಷಿಂಗ್ ಮೆಷಿನ್ ನಿಂದ ಕೆಟ್ಟ ವಾಸನೆ ಬರುತ್ತಿದೆಯಾ? ಕಾರಣಗಳು ಹೀಗಿರಬಹುದು, ಮುನ್ನೆಚ್ಚರಿಕೆ ವಹಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಾಷಿಂಗ್ ಮೆಷಿನ್ ನಿಂದ ಕೆಟ್ಟ ವಾಸನೆ ಬರುತ್ತಿದೆಯಾ? ಕಾರಣಗಳು ಹೀಗಿರಬಹುದು, ಮುನ್ನೆಚ್ಚರಿಕೆ ವಹಿಸಿ

ವಾಷಿಂಗ್ ಮೆಷಿನ್ ನಿಂದ ಕೆಟ್ಟ ವಾಸನೆ ಬರುತ್ತಿದೆಯಾ? ಕಾರಣಗಳು ಹೀಗಿರಬಹುದು, ಮುನ್ನೆಚ್ಚರಿಕೆ ವಹಿಸಿ

ನಿಮ್ಮ ವಾಷಿಂಗ್ ಮೆಷಿನ್ ನಿಂದ ವಾಸನೆ ಬರುತ್ತಿದ್ದರೆ ನೀವು ಒಂದಷ್ಟು ಟಿಪ್ಸ್ ಅನುಸರಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವಾಷಿಂಗ್ ಮೆಷಿನ್ ನಲ್ಲಿ ಕೆಟ್ಟ ವಾಸನೆ ಯಾಕೆ ಬರುತ್ತದೆ ಮತ್ತು ಇದಕ್ಕೆ ಏನು ಪರಿಹಾರ ಎಂಬುದನ್ನು ತಿಳಿಯಿರಿ.

ವಾಷಿಂಗ್ ಮೆಷಿನ್ ನಲ್ಲಿ ಕೆಟ್ಟ ವಾಸನೆ ಬಾರದಂತೆ ಸ್ವಚ್ಛವಾಗಿ ಇಡುವುದು ಹೇಗೆ ಎಂಬುದನ್ನು ತಿಳಿಯಿರಿ
ವಾಷಿಂಗ್ ಮೆಷಿನ್ ನಲ್ಲಿ ಕೆಟ್ಟ ವಾಸನೆ ಬಾರದಂತೆ ಸ್ವಚ್ಛವಾಗಿ ಇಡುವುದು ಹೇಗೆ ಎಂಬುದನ್ನು ತಿಳಿಯಿರಿ

ವಾಷಿಂಗ್ ಮೆಷಿನ್ ಅನ್ನು ಪ್ರತಿದಿನ ಅನೇಕ ಜನರು ಬಳಸುತ್ತಾರೆ. ಬಟ್ಟೆಗಳನ್ನು ಸುಲಭವಾಗಿ ಒಗೆಯಬಹುದಾದ್ದರಿಂದ ಈ ಯಂತ್ರಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಕೆಲವೊಮ್ಮೆ ವಾಷಿಂಗ್ ಮೆಷಿನ್ ನಿಂದ ಕೆಟ್ಟ ವಾಸನೆ ಬರುತ್ತದೆ. ಇದು ಏಕೆ ಹೀಗಾಗುತ್ತದೆ ಎಂದು ಅರ್ಥವಾಗುತ್ತಿಲ್ಲ. ಮನೆಯಲ್ಲಿ ವಾಸನೆ ಕಿರಿಕಿರಿ ಉಂಟುಮಾಡುತ್ತದೆ. ವಾಷಿಂಗ್ ಮೆಷಿನ್ ನಿಂದ ವಾಸನೆ ಬರಲು ಕಾರಣವೇನು ಎಂಬುದರ ಬಗ್ಗೆ ಮಹಿಳೆಯರು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ವಾಷಿಂಗ್ ಮೆಷಿನ್ ನಿಂದ ವಾಸನೆ ಬರಲು ಕಾರಣ ಮತ್ತು ಪರಿಹಾರಗಳನ್ನು ಇಲ್ಲಿ ತಿಳಿಯೋಣ.

ತಕ್ಷಣ ಬಾಗಿಲು ಮುಚ್ಚಿ

ಬಟ್ಟೆಗಳನ್ನು ತೊಳೆದ ನಂತರ ವಾಷಿಂಗ್ ಮೆಷನ್ ಡ್ರಮ್ ನಲ್ಲಿ ಸಾಕಷ್ಟು ತೇವಾಂಶ ಇರುತ್ತದೆ. ಗಾಳಿ ಬೀಸದಿದ್ದರೆ ಅದು ಒಣಗುವುದಿಲ್ಲ. ಬಟ್ಟೆ ಒಗೆದ ತಕ್ಷಣ ಬಾಗಿಲು ಮುಚ್ಚುವುದರಿಂದ ಒಳಗಿನ ತೇವಾಂಶದಿಂದ ವಾಸನೆ ಬರಬಹುದು. ಅದಕ್ಕಾಗಿಯೇ ಬಟ್ಟೆಗಳನ್ನು ತೊಳೆದ ನಂತರ, ತೇವಾಂಶವು ಒಣಗುವವರೆಗೆ ವಾಷಿಂಗ್ ಮೆಷನ್ ಬಾಗಿಲುಗಳನ್ನು ಸ್ವಲ್ಪ ಸಮಯದವರೆಗೆ ತೆರೆದಿಡಬೇಕು.

ಡಿಟರ್ಜೆಂಟ್ ಹೆಚ್ಚಾದರೆ ವಾಸನೆ ಬರುತ್ತೆ

ಬಟ್ಟೆಗಳನ್ನು ವಾಷಿಂಗ್ ಮೆಷಿನ್ ಗೆ ಹಾಕಿದಾಗ ಹೆಚ್ಚು ಡಿಟರ್ಜೆಂಟ್ ನಿಂದಾಗಿ ವಾಸನೆ ಬರಬಹುದು. ಡ್ರಮ್ ನ ರಂಧ್ರಗಳಲ್ಲಿ ನೊರೆ ಸೇರಿಕೊಂಡಾಗ ಫಿಲ್ಟರ್ ಗೆ ಸಮಸ್ಯೆಯಾಗಬಹುದು. ಇದು ಕೆಟ್ಟ ವಾಸನೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಬಟ್ಟೆಗಳಿಗೆ ಸರಿಹೊಂದುವಷ್ಟು ಡಿಟರ್ಜೆಂಟ್ ಸೇರಿಸಿದ ನಂತರವೇ ವಾಷಿಂಗ್ ಮೆಷಿನ್ ಯಂತ್ರಗಳನ್ನು ಬಳಸಬೇಕು. ಈ ಬಗ್ಗೆ ಜಾಗರೂಕರಾಗಿರಬೇಕು.

ಸ್ವಚ್ಛಗೊಳಿಸದಿದ್ದರೆ ವಾಸನೆ ಬರುತ್ತೆ

ನೀರಿನಲ್ಲಿರುವ ಕೊಳಕು, ಧೂಳು ಮತ್ತು ಖನಿಜಗಳು ವಾಷಿಂಗ್ ಮೆಷಿನ್ ಡ್ರಮ್‌ನಲ್ಲಿ ಕೆಲವು ದಿನಗಳವರೆಗೆ ಸಂಗ್ರಹವಾಗುತ್ತವೆ. ಇವು ದುರ್ವಾಸನೆಗೂ ಕಾರಣವಾಗುತ್ತವೆ. ವಾಷಿಂಗ್ ಮೆಷಿನ್ ಅನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದಿದ್ದರೆ ವಾಸನೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ 30 ದಿನಗಳಲ್ಲಿ ಒಮ್ಮೆಯಾದರೂ ಸ್ವಚ್ಛಗೊಳಿಸಬೇಕು.

ವಾಷಿಂಗ್ ಮೆಷನ್ ಹೀಗೆ ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್ ಡ್ರಮ್ ಅನ್ನು ಬಿಸಿ ನೀರಿನಿಂದ ತುಂಬಿಸಿ. ಅದಕ್ಕೆ ವಿನೆಗರ್ ಸೇರಿಸಿ. ಬಟ್ಟೆ ಇಲ್ಲದೆ ಸ್ವಲ್ಪ ಸಮಯದವರಿಗೆ ಮೆಷನ್ ಸ್ವಿಚ್ ಆನ್ ಮಾಡಿದರೆ ಸ್ವಚ್ಛವಾಗುತ್ತದೆ. ತಣ್ಣೀರಿನಿಂದಲೂ ಹೀಗೆ ಮಾಡಬಹುದು. ವಾಷಿಂಗ್ ಮೆಷನ್ ಡ್ರಮ್ ನಲ್ಲಿ ನೀವು ಗಲೀಜು ಕಂಡರೆ, ನೀವು ಅದನ್ನು ಬಟ್ಟೆಯಿಂದ ಒರೆಸಬಹುದು. ಫಿಲ್ಟರ್ ಅನ್ನು ಸಹ ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ಮೆಷನ್ ಒಳಗೆ ಬಟ್ಟೆಯನ್ನು ಹೆಚ್ಚು ಸಮಯ ಇಡಬೇಡಿ

ಒಗೆದ ನಂತರ ಬಟ್ಟೆಯನ್ನು ವಾಷಿಂಗ್ ಮೆಷಿನ್‌ನಲ್ಲಿ ದೀರ್ಘಕಾಲ ಇಡುವುದರಿಂದ ವಾಸನೆ ಬರಬಹುದು. ಒದ್ದೆ ಬಟ್ಟೆಗಳು ಡ್ರಮ್‌ನಲ್ಲಿ ಹೆಚ್ಚು ಹೊತ್ತು ಇದ್ದರೆ ವಾಸನೆ ಬರುತ್ತದೆ. ಇದರಿಂದ ಬಟ್ಟೆ ತೆಗೆದರೂ ವಾಷಿಂಗ್ ಮೆಷಿನ್ ನಲ್ಲಿ ವಾಸನೆ ಉಳಿಯುತ್ತದೆ. ಅದಕ್ಕಾಗಿಯೇ ಬಟ್ಟೆ ತೊಳೆದ ತಕ್ಷಣ ಹೊರಗಡೆ ತೆಗೆಯಬೇಕು.

ವಾಷಿಂಗ್ ಮೆಷನ್ ವಾಸನೆ ಬರುತ್ತಿದ್ದರೆ ವಿನೆಗರ್ ಮತ್ತು ಅಡಿಗೆ ಸೋಡಾ ಸಹಾಯ ಕ್ಲಿನ್ ಮಾಡಿ. ಡ್ರಮ್‌ನಲ್ಲಿರುವ ನೀರಿಗೆ ಎರಡು ಸಣ್ಣ ಕಪ್ ವಿನೆಗರ್ ಸೇರಿಸಿ ಮತ್ತು ವಾಸನೆಯನ್ನು ಕಡಿಮೆ ಮಾಡಲು ಅದನ್ನು ತಿರುಗಿಸಿ. ನೀರಿಲ್ಲದೆ ವಿನೆಗರ್ ಸೇರಿಸಿ ಮತ್ತು ಸುತ್ತುವುದರಿಂದ ವಾಸನೆಯನ್ನು ಕಡಿಮೆ ಮಾಡಬಹುದು. ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಮತ್ತು ಅದನ್ನು ಡಿಟರ್ಜೆಂಟ್ ಪಾತ್ರೆಯಲ್ಲಿ ಹಾಕಿ. ನಂತರ ವಾಷಿಂಗ್ ಮಿಷನ್ ಆನ್ ಮಾಡಿ. ಇದರಿಂದ ವಾಸನೆಯೂ ಕಡಿಮೆಯಾಗುತ್ತದೆ. ಕಾಲಕಾಲಕ್ಕೆ ಫಿಲ್ಟರ್‌ಗಳನ್ನು ಸಹ ಸ್ವಚ್ಛಗೊಳಿಸಬೇಕು.

Whats_app_banner