ಕನ್ನಡ ಸುದ್ದಿ  /  Lifestyle  /  Employment News 11 Vacancies Of Sr Post In Esic Hospital Peenya Bangalore Walk In Interview On March 6 Rmy

ಬೆಂಗಳೂರಿನ ಪೀಣ್ಯ ಇಎಸ್‌ಐಸಿ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಮಾರ್ಚ್ 6ಕ್ಕೆ ನೇರ ಸಂದರ್ಶನ -ESIC Recruitment 2024

ESIC Recruitment 2024: ಪೀಣ್ಯದ ಇಎಸ್ಐಸಿ ಆಸ್ಪತ್ರೆಯಲ್ಲಿ ಖಾಲಿ ಇರುವ 11 ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಮಾರ್ಚ್ 6 ರಂದು ನೇರ ಸಂದರ್ಶನ ನಡೆಯಲಿದೆ.

ಬೆಂಗಳೂರಿನ ಪೀಣ್ಯದಲ್ಲಿರುವ ಇಎಸ್‌ಐಸಿ ಆಸ್ಪತ್ರೆಯಲ್ಲಿ ಖಾಲಿ ಇರುವ 11 ಜಿಡಿಎಂಒ ಹಾಗೂ ಸೀನಿಯರ್ ರೆಸಿಡೆಂಟ್‌ಗಳ ನೇಮಕಾತಿಗಾಗಿ ಮಾರ್ಚ್ 6 ರಂದು ನೇರ ಸಂದರ್ಶನ ನಡೆಯಲಿದೆ.
ಬೆಂಗಳೂರಿನ ಪೀಣ್ಯದಲ್ಲಿರುವ ಇಎಸ್‌ಐಸಿ ಆಸ್ಪತ್ರೆಯಲ್ಲಿ ಖಾಲಿ ಇರುವ 11 ಜಿಡಿಎಂಒ ಹಾಗೂ ಸೀನಿಯರ್ ರೆಸಿಡೆಂಟ್‌ಗಳ ನೇಮಕಾತಿಗಾಗಿ ಮಾರ್ಚ್ 6 ರಂದು ನೇರ ಸಂದರ್ಶನ ನಡೆಯಲಿದೆ. (Representative photo)

ಬೆಂಗಳೂರಿನ ಪೀಣ್ಯದಲ್ಲಿರುವ ನೌಕರರ ರಾಜ್ಯ ವಿಮಾ ನಿಗಮ- ಇಎಸ್ಐಸಿ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಮಾರ್ಚ್ 6 ರಂದು ನೇರ ಸಂದರ್ಶನವನ್ನು ನಡೆಸಲಾಗುತ್ತಿದೆ. ಅಂದು ಬೆಳಗ್ಗೆ 9.15 ರಿಂದ 11 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.

ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಇಎಸ್‌ಐಸಿಯ ಅಧಿಕೃತ ವೆಬ್‌ಸೈಟ್ www.esic.gov.in ಗೆ ಭೇಟಿ ನೀಡಿ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ತಕ್ಷಣ / 15 ದಿನಗಳ ಒಳಗೆ ಸೇವೆಗೆ ಸೇರಬೇಕಾಗುತ್ತದೆ.

ಇಎಸ್ಐಸಿ ನೇಮಕಾತಿ 2024 ಹುದ್ದೆಗಳ ವಿವರ: 11 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಇದರಲ್ಲಿ 5 ಹುದ್ದೆಗಳು ಜನರಲ್ ಡ್ಯುಟಿ ಮೆಡಿಕಲ್ ಆಫೀಸರ್ (ಡಿಜಿಎಂಒ) ಹಾಗೂ 6 ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದು ಮೂರು ವರ್ಷಗಳಿಗೆ ಮೀಸಲಾಗಿರುವ ಯೋಜನೆಯಾಗಿದೆ.

ಇಎಸ್ಐಸಿ ನೇಮಕಾತಿ 2024 ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಎಂಬಿಬಿಎಸ್ ಜೊತೆಗೆ ಪಿಜಿ ಪದವಿ / ಡಿಪ್ಲೊಮಾವನ್ನು ಸಂಬಂಧಪಟ್ಟ ಸ್ಪೆಷಾಲಿಟಿಯಲ್ಲಿ ಹೊಂದಿರಬೇಕು. ಅಥವಾ ಎಂಬಿಬಿಎಸ್ ಜೊತೆಗೆ ಸಂಬಂಧಪಟ್ಟ ಇಲಾಖೆಯಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ಇಎಸ್ಐಸಿ ನೇಮಕಾತಿ 2024 ವಯಸ್ಸಿನ ಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷಗಳು. ಅಭ್ಯರ್ಥಿಗಳು ತಮ್ಮ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ (ವಯಸ್ಸಿನ ಪುರಾವೆಯಾಗಿ), ಎಂಬಿಬಿಎಸ್, ಪಿಜಿ ಪದವಿ ಪ್ರಮಾಣಪತ್ರ (ಅನ್ವಯವಾಗಿದ್ದರೆ), ಎಸ್ಸಿ / ಎಸ್ಟಿ / ಒಬಿಸಿ ಪ್ರಮಾಣಪತ್ರ, ಕೆಎಂಸಿ ನೋಂದಣಿ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ ಮತ್ತು ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳ ಫೋಟೋಕಾಪಿಗಳನ್ನು ಸಂದರ್ಶನಕ್ಕೆ ತರಬೇಕು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು www.esic.gov.in ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com )