ಕನ್ನಡ ಸುದ್ದಿ  /  ಜೀವನಶೈಲಿ  /  400 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ಭರ್ತಿಗೆ ಮುಂದಾದ ಎನ್‌ಪಿಸಿಐಎಲ್‌; ಏಪ್ರಿಲ್ 30 ರೊಳಗೆ ಅರ್ಜಿ ಸಲ್ಲಿಸಿ

400 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ಭರ್ತಿಗೆ ಮುಂದಾದ ಎನ್‌ಪಿಸಿಐಎಲ್‌; ಏಪ್ರಿಲ್ 30 ರೊಳಗೆ ಅರ್ಜಿ ಸಲ್ಲಿಸಿ

ಎನ್‌ಪಿಸಿಐಎಲ್ ಗೇಟ್ ಅಂಕಗಳ ಮೂಲಕ ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳನ್ನು ನೇಮಕ ಮಾಡುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಹುದ್ದೆಗಳ ವಿವರ ಇಲ್ಲಿದೆ.

ಎನ್‌ಪಿಸಿಐಎಲ್‌ನಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಎನ್‌ಪಿಸಿಐಎಲ್‌ನಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಗೇಟ್ 2022/2023/2024 ಅಂಕಗಳ ಮೂಲಕ ಹುದ್ದೆಗಳ ನೇಮಕಾತಿಯನ್ನು ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಎನ್‌ಪಿಸಿಐಎಲ್‌ನ ಅಧಿಕೃತ ವೆಬ್‌ಸೈಟ್ npcilcareers.co.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆಯು ಏಪ್ರಿಲ್ 10 (ಬುಧವಾರ) ರಿಂದ ಪ್ರಾರಂಭವಾಗಿದ್ದು, 2024ರ ಏಪ್ರಿಲ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ 400 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಕೆಳಗೆ ಓದಿ.

ಟ್ರೆಂಡಿಂಗ್​ ಸುದ್ದಿ

ಎನ್‌ಪಿಸಿಐಎಲ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿ ವಿವರ

  • ಮೆಕ್ಯಾನಿಕಲ್: 150 ಹುದ್ದೆಗಳು
  • ಕೆಮಿಕಲ್: 73 ಹುದ್ದೆಗಳು
  • ಎಲೆಕ್ಟ್ರಿಕಲ್: 69 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್: 29 ಹುದ್ದೆಗಳು
  • ಇನ್‌ಸ್ಟ್ರುಮೆಂಟೇಶನ್: 19 ಹುದ್ದೆಗಳು
  • ಸಿವಿಲ್: 60 ಹುದ್ದೆಗಳು

ಎನ್‌ಪಿಸಿಐಎಲ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿಯ ಅರ್ಹತಾ ಮಾನದಂಡಗಳು

ಬಿಇ / ಬಿಟೆಕ್ / ಬಿಎಸ್ಸಿ (ಎಂಜಿನಿಯರಿಂಗ್) / 5 ವರ್ಷದ ಇಂಟಿಗ್ರೇಟೆಡ್ ಎಂಟೆಕ್ ಅನ್ನು ವಿಶ್ವವಿದ್ಯಾಲಯ / ಡೀಮ್ಡ್ ವಿಶ್ವವಿದ್ಯಾಲಯ ಅಥವಾ ಎಐಸಿಟಿಇ / ಯುಜಿಸಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗಿನ ಕೋಷ್ಟಕದಲ್ಲಿ ಉಲ್ಲೇಖಿಸಲಾದ 6 ಎಂಜಿನಿಯರಿಂಗ್ ವಿಭಾಗಗಳಲ್ಲಿ ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಪಡೆದಿರಬೇಕು. ಕನಿಷ್ಠ ಶೇಕಡಾ 60 ಅಂಕಗಳು ಎಂದರೆ ಆಯಾ ವಿಶ್ವವಿದ್ಯಾಲಯದ ಸುಗ್ರೀವಾಜ್ಞೆಗಳ ಪ್ರಕಾರ ಅಂಕಗಳು. ಅರ್ಜಿದಾರರು ಅರ್ಹತಾ ಪದವಿ ವಿಭಾಗದಂತೆಯೇ ಅದೇ ಎಂಜಿನಿಯರಿಂಗ್ ವಿಭಾಗದಲ್ಲಿ ಗೇಟ್ -2022 ಅಥವಾ ಗೇಟ್ -2023 ಅಥವಾ ಗೇಟ್ -2024 ಸ್ಕೋರ್ ಹೊಂದಿರಬೇಕು.

ಎನ್‌ಪಿಸಿಐಎಲ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ

ಎನ್‌ಪಿಸಿಐಎಲ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿಯನ್ನು ಗೇಟ್ 2022, ಗೇಟ್ 2023 ಹಾಗೂ ಗೇಟ್ 2024 ನಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ 1:12 ರ ಅನುಪಾತದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮೆರಿಟ್ ಕ್ರಮದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ವೈದ್ಯಕೀಯ ಫಿಟ್ನೆಸ್‌ಗೆ ಒಳಪಟ್ಟು ವೈಯಕ್ತಿಕ ಸಂದರ್ಶನದಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಎನ್‌ಪಿಸಿಐಎಲ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಶುಲ್ಕ

ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ವರ್ಗದ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಶುಲ್ಕವಾಗಿ 500 ರೂಪಾಯಿಗಳನ್ನು ಪಾವತಿಸಬೇಕು. ವಿಶೇಷ ಸೂಚನೆಯೆಂದರೆ ಶುಲ್ಕದ ಹಣವನ್ನು ಮರುಪಾವತಿಸುವುದಿಲ್ಲ.. ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕರು, ಡಿಒಡಿಪಿಕೆಐಎ, ಮಹಿಳಾ ಅರ್ಜಿದಾರರು ಮತ್ತು ಎನ್‌ಪಿಸಿಐಎಲ್ ಉದ್ಯೋಗಿಗಳಿಗೆ ಅರ್ಜಿ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎನ್‌ಪಿಸಿಐಎಲ್ ಅಧಿಕೃತ ವೆಬ್‌ಸೈಟ್ npcilcareers.co.in ಪರಿಶೀಲಿಸಬಹುದು.