ಕನ್ನಡ ಸುದ್ದಿ  /  ಜೀವನಶೈಲಿ  /  Job Search Tips: ಹುಡುಕಿದ್ದಷ್ಟು ಉದ್ಯೋಗ ಸಿಗುತ್ತಿಲ್ಲವೇ, ನಿಮ್ಮ ಉದ್ಯೋಗದ ಹುಡುಕಾಟದಲ್ಲೇನೋ ತೊಂದರೆಯಿದೆ, ಈ ರೀತಿ ಜಾಬ್‌ ಸರ್ಚ್‌ ಮಾಡಿ

Job Search Tips: ಹುಡುಕಿದ್ದಷ್ಟು ಉದ್ಯೋಗ ಸಿಗುತ್ತಿಲ್ಲವೇ, ನಿಮ್ಮ ಉದ್ಯೋಗದ ಹುಡುಕಾಟದಲ್ಲೇನೋ ತೊಂದರೆಯಿದೆ, ಈ ರೀತಿ ಜಾಬ್‌ ಸರ್ಚ್‌ ಮಾಡಿ

Essential Job Search Tips for 2023: ಹೊಸ ಉದ್ಯೋಗದ ಹುಡುಕಾಟ ಕೆಲವರಿಗೆ ಕಷ್ಟವಾಗುತ್ತದೆ. ಎಷ್ಟೇ ಹುಡುಕಿದರೂ ಉದ್ಯೋಗ ದೊರಕದೆ ಪರದಾಡುತ್ತಾರೆ. ಹೊಸ ಉದ್ಯೋಗ ಅನ್ವೇಷಣೆಯಲ್ಲಿರುವವರು ಅಥವಾ ಕೆಲಸದ ಬದಲಾವಣೆ ಮಾಡಲು ಬಯಸುವವರು ಈ ರೀತಿ ಉದ್ಯೋಗ ಹುಡುಕಾಟ ನಡೆಸಲು ಪ್ರಯತ್ನಿಸಿ.

Job Search Tips: ಹುಡುಕಿದ್ದಷ್ಟು ಉದ್ಯೋಗ ಸಿಗುತ್ತಿಲ್ಲವೇ, ಈ ರೀತಿ ಜಾಬ್‌ ಸರ್ಚ್‌ ಮಾಡಿ
Job Search Tips: ಹುಡುಕಿದ್ದಷ್ಟು ಉದ್ಯೋಗ ಸಿಗುತ್ತಿಲ್ಲವೇ, ಈ ರೀತಿ ಜಾಬ್‌ ಸರ್ಚ್‌ ಮಾಡಿ

ಈಗ ದೇಶದಲ್ಲಿ ಎಲ್ಲರಿಗೂ ಬಯಸಿದ ಉದ್ಯೋಗ ದೊರಕುತ್ತದೆ ಎಂದು ಹೇಳಲಾಗದು. ಸಾಕಷ್ಟು ಪರಿಶ್ರಮಪಟ್ಟು ಹೊಸ ಉದ್ಯೋಗ ಹುಡುಕಾಟ ನಡೆಸಬೇಕಾಗುತ್ತದೆ. ಕೆಲವೊಮ್ಮೆ ನಿಮ್ಮಲ್ಲಿ ಸೂಕ್ತ ಪ್ರತಿಭೆಯಿದ್ದರೂ ಒಳ್ಳೆಯ ಜಾಬ್‌ ದೊರಕುವುದಿಲ್ಲ. ನಿಮಗಿಂತ ಕಡಿಮೆ ಪ್ರತಿಭೆ ಇರುವವರು ಉತ್ತಮ ಕಂಪನಿಯಲ್ಲಿ ಉದ್ಯೋಗ ಪಡೆದಿರಬಹುದು. ಸರಿಯಾಗಿ ಉದ್ಯೋಗ ಹುಡುಕಾಟ ನಡೆಸಲು ನಿಮಗೆ ತಿಳಿದಿರದೆ ಇರುವುದೇ ಈ ತೊಂದರೆಗೆ ಕಾರಣ. ಹೊಸ ಉದ್ಯೋಗದ ಹುಡುಕಾಟ ಹೇಗಿರಬೇಕು ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಇಲ್ಲಿ ಒಂದಿಷ್ಟು ಅಮೂಲ್ಯ ಸಲಹೆಗಳನ್ನು ನೀಡುತ್ತಿದೆ. ಈ ರೀತಿ ಜಾಬ್‌ ಸರ್ಚ್‌ ಮಾಡಿ.

ಟ್ರೆಂಡಿಂಗ್​ ಸುದ್ದಿ

  1. ಮೊದಲೆಲ್ಲ ಉದ್ಯೋಗ ಹುಡುಕಲು ಕಂಪನಿಗಳ ಆಫೀಸ್‌ಗೆ ಹೋಗಬೇಕಿತ್ತು. ಈಗ ಆನ್‌ಲೈನ್‌ನಲ್ಲಿಯೇ ಜಾಬ್‌ ಸರ್ಚ್‌ ಮಾಡಬಹುದು. ಉದ್ಯೋಗ ಹುಡುಕಾಟಕ್ಕೆ ನೀವು ಯಾವುದಾದರೂ ಪ್ರಮುಖ ಜಾಬ್‌ ತಾಣದ ವೆಬ್‌ಸೈಟ್‌ ಅವಲಂಬಿಸಿರಬಹುದು. ನೌಕ್ರಿ ಮಾನೆಸ್ಟರ್‌ ಇತ್ಯಾದಿ ವೆಬ್‌ಸೈಟ್‌ ಬಿಟ್ಟು ಬೇರೆ ಕಡೆಗಳಲ್ಲಿಯೂ ಹುಡುಕಿ. ಮುಖ್ಯವಾಗಿ ಲಿಂಕ್ಡ್‌ಇನ್‌ನಲ್ಲಿ ಜಾಬ್‌ ಸರ್ಚ್‌ ಮಾಡಿ. ನಿಮಗೆ ಸಂಬಂಧಪಟ್ಟ ಜಾಬ್‌ ಕೀವರ್ಡನ್ನು ಲಿಂಕ್ಡ್‌ಇನ್‌ನಲ್ಲಿ ಸೇವ್‌ ಮಾಡಿರಿ. ನಿಮಗೆ ಅಲರ್ಟ್‌ ಬರುತ್ತ ಇರುತ್ತದೆ.
  2. ನಿಮಗೆ ತಿಳಿದಿರುವ ಪ್ರಮುಖ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಅವರ ಕರಿಯರ್‌ ವಿಭಾಗದಲ್ಲಿ ಲಭ್ಯವಿರುವ ಉದ್ಯೋಗದ ಮಾಹಿತಿಯನ್ನು ಹುಡುಕಿ. ಕೆಲವು ಕಂಪನಿಗಳು ಉದ್ಯೋಗ ಮಾಹಿತಿಯನ್ನು ಹೊರಗಿನ ವೆಬ್‌ಸೈಟ್‌ಗಳಿಗೆ ನೀಡುವುದಿಲ್ಲ. ತಮ್ಮ ವೆಬ್‌ಸೈಟ್‌ಗಳಲ್ಲಿ ಮಾತ್ರ ಪ್ರಕಟಿಸುತ್ತ ಇರುತ್ತವೆ. ಜಾಬ್‌ ಸರ್ಚ್‌ ತಾಣಗಳು ಮಾತ್ರವಲ್ಲದೆ ಕಂಪನಿಗಳ ವೆಬ್‌ಸೈಟ್‌ಗಳಲ್ಲಿಯೂ ಉದ್ಯೋಗ ಹುಡುಕಾಟ ನಡೆಸಿ.
  3. ನಿಮ್ಮ ರೆಸ್ಯುಮೆ ಅನ್ನು ಮತ್ತೆ ಬರೆಯಿರಿ. ಯಾವುದೋ ಹಳೆ ಫಾರ್ಮಾಟ್‌ನಲ್ಲಿ ಬರೆದಿರಬಹುದು. ಅದನ್ನು ಇನ್ನೊಮ್ಮೆ ನೀಟಾಗಿ ಬರೆಯಿರಿ. ಹೊಸದಾಗಿ ಬರೆಯಿರಿ. ಇತರೆ ಅಭ್ಯರ್ಥಿಗಳ ನೂರು ರೆಸ್ಯೂಂಗಳಿಗಿಂತ ಭಿನ್ನವಾಗಿ ನಿಮ್ಮ ರೆಸ್ಯೂಂ ಇರಲಿ. ನೀವು ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನಕ್ಕೆ ಕರೆ ಬರುವ ಸಾಧ್ಯತೆಯನ್ನು ಇದು ಹೆಚ್ಚಿಸುತ್ತದೆ.
  4. ವಿವಿಧ ಜಾಬ್‌ ಸರ್ಚ್‌ ವೆಬ್‌ಸೈಟ್‌ಗಳಿಗೆ ಅಪ್ಲೋಡ್‌ ಮಾಡಿರುವ ನಿಮ್ಮ ಹಳೆಯ ರೆಸ್ಯೂಂ ಅಥವಾ ರೆಸ್ಯುಮೆಯನ್ನು ಅಪ್‌ಡೇಟ್‌ ಮಾಡಿ. ಲಿಂಕ್ಡ್‌ಇನ್‌ ಪ್ರೊಫೈಲ್‌ ಅಪ್ಡೇಟ್‌ ಮಾಡಿ. ಸ್ಕಿಲ್‌ ಇತ್ಯಾದಿಗಳನ್ನು ಸೇರಿಸಿ.
  5. ರೆಫರಲ್‌ ಜಾಬ್‌ಗಳು ಈಗ ಹೆಚ್ಚಿರುತ್ತವೆ. ನಿಮ್ಮ ಸ್ನೇಹಿತರಲ್ಲಿ ಅಥವಾ ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡುವವರಲ್ಲಿ ಉದ್ಯೋಗ ಮಾಹಿತಿ ಕೇಳುತ್ತ ಇರಿ. ನಿಮ್ಮಲ್ಲಿ ಅಥವಾ ಬೇರೆ ಕಡೆ ಕೆಲಸ ಇದ್ರೆ ಹೇಳಿ ಎಂದು ಒಂದು ಮಾತು ಹೇಳಿರಿ.
  6. ಉದ್ಯೋಗ ಹುಡುಕಾಟಕ್ಕೆ ಸಾಕಷ್ಟು ಸಮಯ ನೀಡಿ. ದಿನದಲ್ಲಿ ಕನಿಷ್ಠ ಒಂದೆರಡು ಗಂಟೆ ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕಾಟಕ್ಕೆ ಮೀಸಲಿಡಿ. ಹಲವು ಕಂಪನಿಗಳಿಗೆ ರೆಸ್ಯುಮೆ ಕಳುಹಿಸುತ್ತ ಇರಿ.
  7. ಆನ್‌ಲೈನ್ನಲ್ಲಿ ಮಾತ್ರವಲ್ಲದೆ ಸೋಷಿಯಲ್‌ ಮೀಡಿಯಾಗಳಲ್ಲಿಯೂ ಜಾಬ್‌ ಸರ್ಚ್‌ ಮಾಡಿ. ಫೇಸ್‌ಬುಕ್‌, ಟ್ವಿಟ್ಟರ್‌ ಇತ್ಯಾದಿ ಕಡೆಗಳಲ್ಲಿ ಜಾಬ್‌ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಸಂಬಂಧಪಟ್ಟ ಜಾಬ್‌ ರೊಲ್‌ ಹೆಸರು ಹಾಕಿ ಸೋಷಿಯಲ್‌ ಮೀಡಿಯಾಗಳಲ್ಲಿ ಹುಡುಕಾಟ ನಡೆಸಿ.
  8. ನಿಮ್ಮ ನೆಟ್‌ವರ್ಕ್‌ ಹೆಚ್ಚಿಸಿ. ಸ್ನೇಹಿತರು ಅಥವಾ ನಿಮ್ಮ ಉದ್ಯೋಗ ಕ್ಷೇತ್ರದ ಹಳೆ ಸಹೋದ್ಯೋಗಿಗಳನ್ನು ಕಾಂಟ್ಯಾಕ್ಟ್‌ ಆಗಿ. ಈಗಷ್ಟೇ ಪದವಿ ಮುಗಿಸಿದ ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಸ್ನೇಹಿತರು ಅಥವಾ ಬಂಧುಬಳಗದಲ್ಲಿರುವ ಉದ್ಯೋಗಿಗಳಿಂದ ಮಾಹಿತಿ ಪಡೆಯುತ್ತ ಇರಿ.
  9. ಉದ್ಯೋಗ ದೊರಕಿಲ್ಲ ಎಂದು ಚಿಂತೆ ಮಾಡುತ್ತ ಇರಬೇಡಿ. ಬ್ಯುಸಿಯಾಗಿರಲು ಪ್ರಯತ್ನಿಸಿ. ಉದ್ಯೋಗ ಹುಡುಕಾಟ ಮುಂದುವರೆಸಿ.
  10. ಉದ್ಯೋಗ ಇಲ್ಲದ ಸಂದರ್ಭದಲ್ಲಿ ನಿರುದ್ಯೋಗಿಯಂತೆ ಇರಬೇಡಿ. ಆನ್‌ಲೈನ್‌ನಲ್ಲಿ ಉಚಿತ ಅಥವಾ ಪಾವತಿ ಕೋರ್ಸ್‌ಗಳಿಗೆ ಸೇರಿ. ದಿನದ ಕೆಲವು ಗಂಟೆಗಳ ಕಾಲ ನಿಮ್ಮ ಉದ್ಯೋಗ ಸಂಬಂಧಪಟ್ಟ ಕೌಶಲ ಕಲಿಕೆಗೆ ಮೀಸಲಿಡಿ.