ಕನ್ನಡ ಸುದ್ದಿ  /  Lifestyle  /  Employment News Iitm Recruitment 2024 Apply For Research Associate And Research Fellow Post By April 15 Rmy

IITM Recruitment 2024: ಏಪ್ರಿಲ್ 15 ರೊಳಗೆ ರಿಸರ್ಚ್ ಅಸೋಸಿಯೇಟ್, ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಪುಣೆಯ ಐಐಟಿಎಂ 30 ರಿಸರ್ಚ್ ಅಸೋಸಿಯೇಟ್ ಮತ್ತು ರಿಸರ್ಚ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಏಪ್ರಿಲ್ 15 ರೊಳಗೆ tropmet.res.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ.

ರಿಸರ್ಚ್ ಅಸೋಸಿಯೇಟ್‌ ಮತ್ತು ರಿಸರ್ಚ್ ಫೆಲೋ ಹುದ್ದೆಗಳ ಭರ್ತಿಗಾಗಿ ಐಐಟಿಎಂ ಪುಣೆ ಅರ್ಜಿ ಆಹ್ವಾನಿಸಿದೆ.
ರಿಸರ್ಚ್ ಅಸೋಸಿಯೇಟ್‌ ಮತ್ತು ರಿಸರ್ಚ್ ಫೆಲೋ ಹುದ್ದೆಗಳ ಭರ್ತಿಗಾಗಿ ಐಐಟಿಎಂ ಪುಣೆ ಅರ್ಜಿ ಆಹ್ವಾನಿಸಿದೆ.

ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ (ಐಐಟಿಎಂ) 30 ಐಐಟಿಎಂ ರಿಸರ್ಚ್ ಅಸೋಸಿಯೇಟ್ ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಟ್ರಾಪಿಕಲ್ tropmet.res.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಐಐಟಿಎಂ ನೇಮಕಾತಿ 2024 ಖಾಲಿ ಹುದ್ದೆಗಳ ವಿವರ: 30 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದ್ದು, ಇದರಲ್ಲಿ 10 ಹುದ್ದೆಗಳು ಐಐಟಿಎಂ ರಿಸರ್ಚ್ ಅಸೋಸಿಯೇಟ್ ಮತ್ತು 20 ಹುದ್ದೆಗಳು ಐಐಟಿಎಂ ರಿಸರ್ಚ್ ಫೆಲೋ ಹುದ್ದೆಗಳಾಗಿವೆ.

ಐಐಟಿಎಂ ನೇಮಕಾತಿ 2024 ವಯೋಮಿತಿ: ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ಐಐಟಿಎಂ ನೇಮಕಾತಿ 2024: ಅರ್ಜಿ ಸಲ್ಲಿಸುವುದು ಹೇಗೆ?

  • ಟ್ರಾಪಿಕಲ್ ಮೆಟಿಯಾಲಜಿ ಅಧಿಕೃತ ವೆಬ್‌ಸೈಟ್‌ tropmet.res.in ಗೆ ಭೇಟಿ ನೀಡಿ
  • ಮುಖಪುಟದಲ್ಲಿ, "ಜಾಹಿರಾತು ಸಂಖ್ಯೆ ಪರ್/04/2024 ಮೇಲೆ ಕ್ಲಿಕ್ ಮಾಡಿ
  • ಐಐಟಿಎಂ ರಿಸರ್ಚ್ ಅಸೋಸಿಯೇಟ್ ಮತ್ತು ರಿಸರ್ಚ್ ಫೆಲೋ ಹುದ್ದೆಗೆ ಜಾಹೀರಾತು ಪರದೆಯ ಮೇಲೆ ಹೊಸ ಪುಟವನ್ನು ತೆರೆದುಕೊಳ್ಳುತ್ತದೆ
  • ಮುಂದೆ, ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಅಪ್ಲೋಡ್ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ

ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್ಔಟ್ ತೆಗೆದುಕೊಳ್ಳಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 5 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು www.ippbonline.com ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಐಪಿಪಿಬಿ ನೇಮಕಾತಿ 2024 ಖಾಲಿ ಹುದ್ದೆಗಳ ವಿವರಗಳು: 47 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದ್ದು, ಇದರಲ್ಲಿ 21 ಹುದ್ದೆಗಳು ಕಾಯ್ದಿರಿಸದ ವರ್ಗಗಳಿಗೆ, 4 ಹುದ್ದೆಗಳು ಇಡಬ್ಲ್ಯೂಎಸ್ ವರ್ಗಗಳಿಗೆ, 12 ಹುದ್ದೆಗಳು ಒಬಿಸಿ ವರ್ಗಗಳಿಗೆ, 7 ಹುದ್ದೆಗಳು ಎಸ್ಸಿ ವರ್ಗಕ್ಕೆ ಹಾಗೂ 3 ಹುದ್ದೆಗಳು ಎಸ್ಟಿ ವರ್ಗಕ್ಕೆ ಮೀಸಲಾಗಿವೆ.

ಸೆಬಿಯಲ್ಲಿ ಅಸಿಸ್ಟಿಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ-(SEBI) ಗ್ರೇಡ್ ಎ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿವರವಾದ ಜಾಹೀರಾತು ಮತ್ತು ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಏಪ್ರಿಲ್ 13 ರಂದು ಲಭ್ಯವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.sebi.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸೇನಾ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 22 ಕೊನೆ ದಿನ

ಭಾರತೀಯ ಸೇನಾ ಅಡಿಯಲ್ಲಿ ಬರುವ ಅಗ್ನಿವೀರ್ (Agniveer Recruitment 2024) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ನಾಳೆ (ಮಾರ್ಚ್ 22, ಶುಕ್ರವಾರ) ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ. ಫೆಬ್ರವರಿ 13 ರಿಂದ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಈ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ indianarmy.nic.in ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಬಹುದಾಗಿದೆ.