ಏಪ್ರಿಲ್ 1 ರೊಳಗೆ ಇಂಡಿಯನ್ ಬ್ಯಾಂಕ್‌ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -Indian Bank Recruitment 2024-employment news indian bank recruitment 2024 apply for 146 specialist officer posts rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಏಪ್ರಿಲ್ 1 ರೊಳಗೆ ಇಂಡಿಯನ್ ಬ್ಯಾಂಕ್‌ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -Indian Bank Recruitment 2024

ಏಪ್ರಿಲ್ 1 ರೊಳಗೆ ಇಂಡಿಯನ್ ಬ್ಯಾಂಕ್‌ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -Indian Bank Recruitment 2024

ಇಂಡಿಯನ್ ಬ್ಯಾಂಕ್ 146 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 12 ರಿಂದಲೇ ಆರಂಭವಾಗಿದ್ದು, ಏಪ್ರಿಲ್ 1 ಕೊನೆಯ ದಿನವಾಗಿದೆ. ಶುಲ್ಕ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿ ತಿಳಿಯಿರಿ.

146 ಸ್ಪೆಷಲಿಸ್ಟ್ ಆಫೀಸರ್‌ ಹುದ್ದೆಗಳ ನೇಮಕಾತಿಕಾಗಿ ಇಂಡಿಯಾನ್ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ.
146 ಸ್ಪೆಷಲಿಸ್ಟ್ ಆಫೀಸರ್‌ ಹುದ್ದೆಗಳ ನೇಮಕಾತಿಕಾಗಿ ಇಂಡಿಯಾನ್ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ.

ಇಂಡಿಯನ್ ಬ್ಯಾಂಕ್ 146 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 12ರಿಂದಲ್ಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 1 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು www.indianbank.in ಅಧಿಕೃತ ವೆಬ್‌ ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೀವೇನಾದರೂ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದರೆ ಇಂಡಿಯನ್ ಬ್ಯಾಂಕ್ ಕೇಳಿರುವ ಅರ್ಹತೆ ನಿಮ್ಮಲ್ಲಿ ಇದ್ದರೆ ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ. ನಿಗದಿಪಡಿಸಿರುವ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸುವ ಮೂಲಕ ಉದ್ಯೋಗವನ್ನು ಗಿಟ್ಟಿಸಿಕೊಳ್ಳಿ.

ಇಂಡಿಯನ್ ಬ್ಯಾಂಕ್ ನೇಮಕಾತಿ 2024 ಅರ್ಜಿ ಶುಲ್ಕ: ಎಸ್ಸಿ / ಎಸ್ಟಿ / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ರೂ. ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1000 ರೂಪಾಯಿ ನಿಗದಿ ಮಾಡಲಾಗಿದೆ.

ಇಂಡಿಯನ್ ಬ್ಯಾಂಕ್ ನೇಮಕಾತಿ 2024: 146 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಂಡಿಯಾನ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ www.indianbank.in ಗೆ ಭೇಟಿ ನೀಡಿ
  • ವೆಬ್‌ಸೈಟ್‌ನ ಮುಖಪುಟದಲ್ಲಿ ವೃತ್ತಿಜೀವನದ ಟ್ಯಾಬ್ ಮೇಲೆ ಕ್ಲಿಕ್
  • ನಂತರ "ರೆಕ್ರ್ಯೂಟ್‌ಮೆಂಟ್ ಆಫ್ ಸ್ಪೆೆಷಲಿಸ್ಟ್ ಆಫೀಸರ್ - 2024" ಮೇಲೆ ಕ್ಲಿಕ್ ಮಾಡಿ
  • ಪರದೆಯ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತದೆ
  • "ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ" ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ
  • ಬಳಿಕ ಅರ್ಜಿಯನ್ನು ಭರ್ತಿ ಮಾಡಿ
  • ಅರ್ಜಿ ಶುಲ್ಕವನ್ನು ಭರ್ತಿ ಮಾಡಿ
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಶುಲ್ಕವನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
  • ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ವಿವರವಾದ ಅಧಿಸೂಚನೆಯನ್ನು ಇಲ್ಲಿ ಪರಿಶೀಲಿಸಬಹುದು.

Candidates can check the detailed notification here for more details.