ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ನಲ್ಲಿ ಕಾನ್ಸ್‌ಟೇಬಲ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ನಲ್ಲಿ ಕಾನ್ಸ್‌ಟೇಬಲ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ನಲ್ಲಿ ಕಾನ್ಸ್‌ಟೇಬಲ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ಐಟಿಬಿಪಿಎಫ್‌ನಲ್ಲಿ ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು, ವೇತನ, ಅರ್ಹತೆ ಹಾಗೂ ಮಾನದಂಡಗಳು ಸೇರಿದಂತೆ ನೇಮಕಾತಿ ಮಾಹಿತಿ ಇಲ್ಲಿದೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ನಲ್ಲಿ ಕಾನ್ಸ್‌ಟೇಬಲ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ನಲ್ಲಿ ಕಾನ್ಸ್‌ಟೇಬಲ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ (ITBPF) ಕಾನ್ಸ್‌ಟೇಬಲ್, ಟ್ರೇಡ್ಸ್‌ಮನ್ (ಕ್ಷೌರಿಕ, ಸಫಾಯಿ ಕರ್ಮಚಾರಿ ಹಾಗೂ ಮಾಲಿ), ಜನರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್ ಸಿ, ನಾನ್ ಗೆಜೆಡೆಟ್ (ಸಚಿವಾಲಯತೇರ) ಹುದ್ದೆಗಳ ಭರ್ತಿಗೆ ಅರ್ಹ ಪುರುಷ ಮತ್ತು ಮಹಿಳಾ ಭಾರತೀಯ ನಾಗರಿಕ ಅಭ್ಯರ್ಥಿಗಳಿಂದ ಅರ್ಜಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಪೇ ಮ್ಯಾಟ್ರಿಕ್ಸ್‌ನಲ್ಲಿ ಲೆವೆಲ್ -3 21,700 ರೂಪಾಯಿ (7111 ಸಿಪಿಸಿ ಪ್ರಕಾರ) ಖಾಯಂ ಆಗುವ ಸಾಧ್ಯತೆಯಿದೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತ ಮತ್ತು ವಿದೇಶದಲ್ಲಿ ಎಲ್ಲಿಯಾದರೂ ಸೇವೆ ಸಲ್ಲಿಸಲು ಸಿದ್ಧರಿರಬೇಕು. ನಂತರದಲ್ಲಿ ನಿರಾಸೆಯನ್ನು ತಪ್ಪಿಸಲು ಅರ್ಜಿ ಸಲ್ಲಿಸುವ ಮೊದಲು ತಮ್ಮ ಅರ್ಹತೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಹುದ್ದೆಗಳು ವಿವರ

ಕಾನ್ಸ್‌ಟೇಬಲ್ (ಕ್ಷೌರಿಕ) - 5 ಹುದ್ದೆಗಳು
ಕಾನ್ಸ್‌ಟೇಬಲ್ (ಸಫಾಯಿ ಕರ್ಮಚಾರಿ) - 101
ಕಾನ್ಸ್‌ಟೇಬಲ್ (ಮಾಲಿ) - 37

ಖಾಲಿ ಹುದ್ದೆಗಳು ತಾತ್ಕಾಲಿಕವಾಗಿದೆ ಮತ್ತು ಯಾವುದೇ ಸೂಚನೆಯಿಲ್ಲದೆ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯನ್ನು ಐಟಿಬಿಪಿಎಫ್ ನೇಮಕಾತಿ ವೆಬ್‌ಸೈಟ್ https://recruitment.itbpolice.nic.in ಮೂಲಕ ತಿಳಿಸಲಾಗುತ್ತದೆ.

ಅರ್ಜಿ ಶುಲ್ಕ, ಮೀಸಲು ಸೇರಿದಂತೆ ಇತರೆ ಮಾಹಿತಿ

  • ಖಾಲಿ ಹುದ್ದೆಗಳ ಶೇಕಡಾ 10 ರಷ್ಟುನ್ನು ಆಯಾ ಹುದ್ದೆ, ವರ್ಗದಲ್ಲಿ ಮಾಜಿ ಸೈನಿಕರಿಗೆ ಕಾಯ್ದಿರಿಸಲಾಗಿದೆ
  • ಅರ್ಜಿ ಶುಲ್ಕ 100 ರೂಪಾಯಿ
  • ಮಹಿಳೆಯರು, ಮಾಜಿ ಸೈನಿಕರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

ಹುದ್ದೆಯ ಹೆಸರು: ಕಾನ್ಸ್‌ಟೇಬಲ್ (ಕ್ಷೌರಿಕ ಮತ್ತು ಸಫಾಯಿ ಕರ್ಮಚಾರಿ)

ವಯೋಮಿತಿ: 18 ರಿಂದ 25 ವರ್ಷ
ಕನಿಷ್ಠ ಶೈಕ್ಷಣಿಕ ಮತ್ತು ಇತರ ಅರ್ಹತೆ

  • ಮಾನ್ಯತೆ ಪಡೆದ ಶಾಲೆ ಅಥವಾ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್
  • ಅಭ್ಯರ್ಥಿಗಳು ವೃತ್ತಿಯಲ್ಲಿ ಪ್ರಾಯೋಗಿಕ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ

ಹುದ್ದೆಯ ಹೆಸರು - ಕಾನ್ಸ್‌ಟೇಬಲ್ (ಮಾಲಿ)

ವಯೋಮಿತಿ: 18 ರಿಂದ 23 ವರ್ಷ
ಕನಿಷ್ಠ ಶೈಕ್ಷಣಿಕ ಮತ್ತು ಇತರ ಅರ್ಹತೆ

  • ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು
  • ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವೃತ್ತಿಯಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಅಥವಾ
  • ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ವೃತ್ತಿಪರ ಸಂಸ್ಥೆಯಿಂದ ಒಂದು ವರ್ಷದ ಪ್ರಮಾಣಪತ್ರ ಮತ್ತು ವೃತ್ತಿಯಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಅಥವಾ
  • ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಿಂದ ಎರಡು ವರ್ಷಗಳ ಡಿಪ್ಲೋಮಾ

ಅಭ್ಯರ್ಥಿಗಳಿಂದ ಅರ್ಜಿಗಳನ್ನು ಐಟಿಬಿಪಿಯ ಅಧಿಕೃತ ವೆಬ್‌ಸೈಟ್ https://recruitment.itbpolice.nic.in ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ವಯೋಮಿತಿ ಸಡಿಲಿಕೆ, ಅರ್ಹತಾ ಷರತ್ತುಗಳು, ಅರ್ಜಿ ಮೂನೆಯನ್ನು ಭರ್ತಿ ಮಾಡುವ ವಿಧಾನ, ನೇಮಕಾತಿ ಕಾರ್ಯವಿಧಾನ, ಪರೀಕ್ಷೆಗಳು ಮತ್ತು ವೇತನ ಮತ್ತು ಭತ್ಯಗಳು ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಗಾಗಿ ಅರ್ಜಿದಾರರು ಐಟಿಬಿಪಿಎಫ್ ನೇಮಕಾತಿ ವೆಬ್‌ಸೈಟ್‌ನಲ್ಲಿರುವ ವಿವರವಾದ ಜಾಹೀರಾತು ನೋಡಲು ಸೂಚಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner