ಮಾರ್ಚ್ 8 ರೊಗಳಗೆ ಎನ್‌ಟಿಪಿಸಿಯಲ್ಲಿ ಖಾಲಿ ಇರುವ 110 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -NTPC Recruitment 2024
ಕನ್ನಡ ಸುದ್ದಿ  /  ಜೀವನಶೈಲಿ  /  ಮಾರ್ಚ್ 8 ರೊಗಳಗೆ ಎನ್‌ಟಿಪಿಸಿಯಲ್ಲಿ ಖಾಲಿ ಇರುವ 110 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -Ntpc Recruitment 2024

ಮಾರ್ಚ್ 8 ರೊಗಳಗೆ ಎನ್‌ಟಿಪಿಸಿಯಲ್ಲಿ ಖಾಲಿ ಇರುವ 110 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -NTPC Recruitment 2024

ಎನ್‌ಟಿಪಿಸಿಯಲ್ಲಿ ಪ್ರಾಜೆಕ್ಟ್ ನಿರ್ಮಾಣದ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಎನ್‌ಟಿಪಿಸಿಯಲ್ಲಿ ಖಾಲಿ ಇರುವ 110 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 8 ರೊಳಗೆ ಅರ್ಜಿ ಸಲ್ಲಿಸಿ.
ಎನ್‌ಟಿಪಿಸಿಯಲ್ಲಿ ಖಾಲಿ ಇರುವ 110 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 8 ರೊಳಗೆ ಅರ್ಜಿ ಸಲ್ಲಿಸಿ. (Representative photo)

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್-ಎನ್‌ಟಿಪಿಸಿಯಲ್ಲಿ E4 ಮಟ್ಟದಲ್ಲಿ ಪ್ರಾಜೆಕ್ಟ್ ನಿರ್ಮಾಣ / ನಿರ್ಮಾಣ ಕ್ಷೇತ್ರದಲ್ಲಿ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿ 23 ರಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 8 (ಶುಕ್ರವಾರ) ಕೊನೆಯ ದಿನಾಂಕವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎನ್‌ಟಿಪಿಸಿಯ ಅಧಿಕೃತ ವೆಬ್‌ಸೈಟ್ careers.ntpc.co.in ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಎನ್‌ಟಿಪಿಸಿ ನೇಮಕಾತಿ 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೇರ ಲಿಂಕ್:

110 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಯನ್ನು ನಡೆಸಲಾಗುತ್ತಿದ್ದು, ಅರ್ಜಿ ಸಲ್ಲಿಸುವುದು ಹೇಗೆ, ಶುಲ್ಕ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಎನ್‌ಟಿಪಿಸಿ ನೇಮಕಾತಿ 2024: ಹುದ್ದೆಗಳ ವಿವರ

ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ ಎರೆಕ್ಷನ್)- 20

ಡೆಪ್ಯೂಟಿ ಮ್ಯಾನೇಜರ್ (ಮೆಕ್ಯಾನಿಕಲ್ ಎರೆಕ್ಷನ್)- 50 ಹುದ್ದೆಗಳು

ಡೆಪ್ಯೂಟಿ ಮ್ಯಾನೇಜರ್ (ಸಿ &ಐ ನಿರ್ಮಾಣ) - 10 ಹುದ್ದೆಗಳು

ಡೆಪ್ಯೂಟಿ ಮ್ಯಾನೇಜರ್ (ಸಿವಿಲ್ ಕನ್‌ಸ್ಟ್ರಕ್ಷನ್)- 30 ಹುದ್ದೆಗಳು

ಎನ್‌ಟಿಪಿಸಿ ನೇಮಕಾತಿ 2024 ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷಗಳು

ಎನ್‌ಟಿಪಿಸಿ ನೇಮಕಾತಿ 2024 ಅರ್ಜಿ ಶುಲ್ಕ: ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 300 ರೂಪಾಯಿ ಮರುಪಾವತಿಸಲಾಗದ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್ಸಿ/ಎಸ್ಟಿ/ಅಂಗವಿಕಲ/ಎಕ್ಸ್ಎಸ್ಎಂ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. ಇವರಿಗೆ ಅರ್ಜಿ ಸಲ್ಲಿಕೆ ಉಚಿತವಾಗಿದೆ.

ಎನ್‌ಟಿಪಿಸಿ ನೇಮಕಾತಿ 2024: ಅರ್ಜಿ ಸಲ್ಲಿಸುವುದು ಹೇಗೆ:

ಇದನ್ನೂ ಓದಿ: RRB Technician Recruitment 2024: 9 ಸಾವಿರ ಹುದ್ದೆಗಳ ನೇಮಕಾತಿಗಾಗಿ ಅತಿ ಶೀಘ್ರದಲ್ಲೇ ಆರ್‌ಆರ್‌ಬಿ ನೋಟಿಫಿಕೇಷನ್

  • ಎನ್‌ಟಿಪಿಸಿಯ ಅಧಿಕೃತ ವೆಬ್‌ಸೈಟ್ www.ntpc.co.in ಭೇಟಿ ನೀಡಿ
  • ಮುಖಪುಟದಲ್ಲಿ ಕಾಣಿಸುವ ವೃತ್ತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಬಳಿಕ"ಪ್ರಾಜೆಕ್ಟ್ ನಿರ್ಮಾಣ / ನಿರ್ಮಾಣ ಕ್ಷೇತ್ರದಲ್ಲಿ (ಇ 4 ಲೆವೆಲ್) ಡೆಪ್ಯೂಟಿ ಮ್ಯಾನೇಜರ್ ಆಗಿ ಅನುಭವಿ ವೃತ್ತಿಪರರ ನೇಮಕಾತಿಗಾಗಿ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ
  • ಅಡ್ವಕೇಟ್ ಸಂಖ್ಯೆ 05/24. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08.03.2024 ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ
  • ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಸಮ್ಮಿಟ್ ಕೊಡಿ
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿರುವ ಪ್ರಿಂಟ್ ಕಾಪಿಯೊಂದನ್ನು ತೆಗೆದುಕೊಳ್ಳಿ
  • ಅಭ್ಯರ್ಥಿಗಳು ವಿವರವಾದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರಿ ಬ್ಯಾಂಕ್, ಕಚೇರಿ ಹಾಗೂ ಇತರೆ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಇಲಾಖೆಗಳು ಅರ್ಜಿ ಆಹ್ವಾನಿಸುವ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಸದಾ ನಿಮಗೆ ನೀಡುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹಾಗೂ ಹೊಸ ಅಪ್ಡೇಟ್‌ಗಳಿಗೆ ಹೆಚ್‌ಟಿ ಕನ್ನಡವನ್ನು ಫಾಲೋ ಮಾಡಿ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner