ಕನ್ನಡ ಸುದ್ದಿ  /  Lifestyle  /  Employment News Nhpc Recruitment 2024 Apply For 269 Trainee Engineers Trainee Officers Posts By March 26 Rmy

ಮಾರ್ಚ್ 26 ರೊಳಗೆ ಎನ್‌ಹೆಚ್‌ಪಿಸಿಯ 269 ಟ್ರೈನಿ ಇಂಜಿನಿಯರ್ಸ್, ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -NHPC Recruitment 2024

ಎನ್ಎಚ್‌ಪಿಸಿ ಲಿಮಿಟೆಡ್ ಗೇಟ್ 2023 ಮೂಲಕ 269 ಟ್ರೈನಿ ಎಂಜಿನಿಯರ್ಗಳು, ಟ್ರೈನಿ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಮಾರ್ಚ್ 26 ರೊಳಗೆ ಅರ್ಜಿ ಸಲ್ಲಿಸಿ.

ಎನ್‌ಹೆಚ್‌ಪಿಸಿ ಸಂಸ್ಖೆ 269 ಟ್ರೈನಿ ಇಂಜಿನಿಯರ್ಸ್ ಮತ್ತು ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಎನ್‌ಹೆಚ್‌ಪಿಸಿ ಸಂಸ್ಖೆ 269 ಟ್ರೈನಿ ಇಂಜಿನಿಯರ್ಸ್ ಮತ್ತು ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಸರ್ಕಾರಿ ಸ್ವಾಮ್ಯದ ಎನ್ಎಚ್‌ಪಿಸಿ ಲಿಮಿಟೆಡ್‌ನಲ್ಲಿ ಟ್ರೈನಿ ಎಂಜಿನಿಯರ್‌ಗಳು, ಟ್ರೈನಿ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 26 ರ ಮಂಗಳವಾರ ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಎನ್‌ಹೆಚ್‌ಪಿಸಿಯ ಅಧಿಕೃತ ವೆಬ್‌ಸೈಟ್ www.nhpcindia.com ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಗೇಟ್ 2023 ಸ್ಕೋರ್ ಮೂಲಕ ನೇಮಕಾತಿ ನಡೆಯಲಿದೆ.

ಎನ್ಎಚ್‌ಪಿಸಿ ನೇಮಕಾತಿ 2024 ಖಾಲಿ ಹುದ್ದೆಗಳ ವಿವರಗಳು: 269 ಟ್ರೈನಿ ಎಂಜಿನಿಯರ್‌ಗಳು / ಟ್ರೈನಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದೆ.

ಎನ್ಎಚ್‌ಪಿಸಿ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ: ಆಯ್ಕೆ ಪ್ರಕ್ರಿಯೆಯು ಗೇಟ್ 2023, ಗುಂಪು ಚರ್ಚೆ ಹಾಗೂ ವೈಯಕ್ತಿಕ ಸಂದರ್ಶನದ ಸಂಬಂಧಿತ ಪತ್ರಿಕೆಯಲ್ಲಿ ಪಡೆದ ಸಾಮಾನ್ಯ ಅಂಕಗಳನ್ನು (100 ರಲ್ಲಿ) ಒಳಗೊಂಡಿರುತ್ತದೆ.

ಎನ್ಎಚ್‌ಪಿಸಿ ನೇಮಕಾತಿ 2024 ಅರ್ಜಿ ಶುಲ್ಕ: ಯುಆರ್ / ಇಡಬ್ಲ್ಯೂಎಸ್ / ಒಬಿಸಿ (ಎನ್‌ಸಿಎಲ್) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 600 ರೂಪಾಯಿಗಳ ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್ಸಿ/ಎಸ್ಟಿ/ಅಂಗವಿಕಲ/ಮಾಜಿ ಸೈನಿಕ/ಮಹಿಳಾ ವರ್ಗದ ಅಭ್ಯರ್ಥಿಗಳು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇವರಿಗೆ ಸಂಪೂರ್ಣವಾಗಿ ಶುಲ್ಕ ಉಚಿತವಾಗಿದೆ.

ಎನ್ಎಚ್‌ಪಿಸಿ ನೇಮಕಾತಿ 2024: ಅರ್ಜಿ ಸಲ್ಲಿಸುವುದು ಹೇಗೆ?

  • ಎನ್‌ಎಚ್‌ಪಿಸಿಯ ಅಧಿಕೃತ ವೆಬ್‌ಸೈಟ್ www.nhpcindia.com ಭೇಟಿ ನೀಡ
  • ಮುಖಪುಟದಲ್ಲಿ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಎನ್ಎಚ್‌ಪಿಸಿ ಲಿಮಿಟೆಡ್ ಮತ್ತು ಅದರ ಜಂಟಿ ಉದ್ಯಮ (ಎನ್ಎಚ್‌ಡಿಸಿ ಲಿಮಿಟೆಡ್) ಗಾಗಿ ಗೇಟ್ 2023 ಸ್ಕೋರ್ ಮೂಲಕ ಟ್ರೈನಿ ಎಂಜಿನಿಯರ್‌ಗಳು / ಟ್ರೈನಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ ಅಧಿಸೂಚನೆ ಮೇಲೆ ಕ್ಲಿಕ್ ಮಾಡಿ
  • ನೋಂದಣಿ ನಂತರ ಅರ್ಜಿಯೊಂದಿಗೆ ಮುಂದುವರಿಯಿರಿ
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯವಿರುವ ಎಲ್ಲಾ ಅರ್ಜಿಗಳನ್ನು ಅಪ್ಲೋಡ್ ಮಾಡಿ

ಅರ್ಜಿ ಶುಲ್ಕವನ್ನು ಪಾವತಿಸಿಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಐಐಟಿಎಂ ರಿಸರ್ಚ್ ಅಸೋಸಿಯೇಟ್, ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ (ಐಐಟಿಎಂ) 30 ಐಐಟಿಎಂ ರಿಸರ್ಚ್ ಅಸೋಸಿಯೇಟ್ ಮತ್ತು ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಟ್ರಾಪಿಕಲ್ tropmet.res.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 5 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು www.ippbonline.com ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಸೆಬಿಯಲ್ಲಿ ಅಸಿಸ್ಟಿಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ-(SEBI) ಗ್ರೇಡ್ ಎ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿವರವಾದ ಜಾಹೀರಾತು ಮತ್ತು ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಏಪ್ರಿಲ್ 13 ರಂದು ಲಭ್ಯವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.sebi.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.