4,187 ಸಬ್‌ ಇನ್ಸ್‌ಪೆಕ್ಟರ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಎಸ್‌ಸಿ; ವೇತನ, ವಿದ್ಯಾರ್ಹತೆ ಸೇರಿ ಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  4,187 ಸಬ್‌ ಇನ್ಸ್‌ಪೆಕ್ಟರ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಎಸ್‌ಸಿ; ವೇತನ, ವಿದ್ಯಾರ್ಹತೆ ಸೇರಿ ಪೂರ್ಣ ಮಾಹಿತಿ ಇಲ್ಲಿದೆ

4,187 ಸಬ್‌ ಇನ್ಸ್‌ಪೆಕ್ಟರ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಎಸ್‌ಸಿ; ವೇತನ, ವಿದ್ಯಾರ್ಹತೆ ಸೇರಿ ಪೂರ್ಣ ಮಾಹಿತಿ ಇಲ್ಲಿದೆ

Sub Inspector Recruitment 2024: ಕೇಂದ್ರ ಸಶಸ್ತ್ರ ಮೀಸಲು ಪಡೆಗಳು, ದೆಹಲಿ ಪೊಲೀಸ್ ಪಡೆಯಲ್ಲಿ 4,187 ಸನ್ ಇನ್ಸ್‌ಪೆಕ್ಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಡೆಯ ದಿನಾಂಕ, ವೇತನ, ವಿದ್ಯಾರ್ಹತೆಯ ಮಾಹಿತಿ ಇಲ್ಲಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ 4,187 ಸನ್ ಇನ್ಸ್‌ಪೆಕ್ಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 28 ರೊಳಗೆ ಅರ್ಜಿ ಸಲ್ಲಿಸಿ.
ಸ್ಟಾಫ್ ಸೆಲೆಕ್ಷನ್ ಕಮಿಷನ್ 4,187 ಸನ್ ಇನ್ಸ್‌ಪೆಕ್ಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 28 ರೊಳಗೆ ಅರ್ಜಿ ಸಲ್ಲಿಸಿ.

ಬೆಂಗಳೂರು: ನೀವೇನಾದರೂ ಪೊಲೀಸ್ ಆಗಿ ದೇಶ ಸೇವೆ ಸಲ್ಲಿಸಬೇಕೆಂಬ ಕನಸು ಕಾಣುತ್ತಿದ್ದರೆ, ಆ ಕನಸ್ಸನ್ನು ನನಸು ಮಾಡಿಕೊಳ್ಳುವ ಅವಕಾಶ ಕೂಡಿಬಂದಿದೆ. ಪೊಲೀಸ್ ಆಗಬೇಕೆಂದು ನೀವು ಅಂದುಕೊಳ್ಳುತ್ತಿದ್ದರೆ ನಿಮಗಾಗಿ ಸಿಹಿ ಸುದ್ದಿ ಇಲ್ಲಿದೆ. ಸ್ಟಾಫ್ ಸೆಲೆಷನ್ ಕಮಿಷನ್-ಎಸ್‌ಎಸ್‌ಸಿ ಕೇಂದ್ರ ಸಶಸ್ತ್ರ ಮೀಸಲು ಪಡೆಗಳು ಹಾಗೂ ದೆಹಲಿ ಪೊಲೀಸ್ ಪಡೆಯಲ್ಲಿ 4,187 ಸನ್ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳನ್ನು (Sub Inspector Recruitment 2024) ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ಎಲ್ಲಿ ಅರ್ಜಿ ಸಲ್ಲಿಸುವುದು, ವಿದ್ಯಾರ್ಹತೆ, ವೇತನ ಹಾಗೂ ಇತರೆ ಮಾಹಿತಿಯ ವಿವರ ಇಲ್ಲಿದೆ.

ಮಾರ್ಚ್ 4 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ. ಜೊತೆಗೆ ಶುಲ್ಕಪಾವತಿಗೆ ಮಾರ್ಚ್ 29 ಕೊನೆಯ ದಿನವಾಗಿದೆ. ಏನಾದರೂ ತಿದ್ದುಪಡಿಗಳಿದ್ದರೆ 2024ರ ಮಾರ್ಚ್ 30ರ ಶನಿವಾರ ಮತ್ತು 31ರ ಭಾನುವಾರ 2 ದಿನಗಳ ಅವಕಾಶ ಕಲ್ಪಿಸಲಾಗಿದೆ.

ದೆಹಲಿ ಪೊಲೀಸ್, ಕೇಂದ್ರ ಸಶಸ್ತ್ರ ಮೀಸಲು ಪಡೆಳಾದ ಬಿಎಸ್‌ಎಸ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಹಾಗೂ ಎಸ್‌ಎಸ್‌ಬಿಯಲ್ಲಿ ಒಟ್ಟು 4,187 ಸನ್‌ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅವರ ಅಧಿಕೃತ ವೆಬ್‌ಸೈಟ್ https://ssc.nic.in/ ಜಾಲತಾಣಕ್ಕೆ ಭೇಟಿ ನೀಡಿ.

ಎಸ್‌ಎಸ್‌ಸಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಹತಾ ಮಾನದಂಡಗಳು

  • ಎಸ್‌ಎಸ್‌ಸಿ ಸಿಪಿಒ 2024 ನೇಮಕಾತಿಯಡಿಯಲ್ಲಿ ಸನ್‌ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಯಾವುದೇ ರೀತಿಯ ಪದವಿಯನ್ನು ಮುಗಿಸಿರಬೇಕು
  • ಪುರುಷ ಅಭ್ಯರ್ಥಿಗಳು - ಯಾರೆಲ್ಲಾ ದೆಹಲಿಯಲ್ಲಿ ಇನ್ಸ್‌ ಪೆಕ್ಟರ್ ಆಗಬೇಕೆಂದು ಬಯಸುವರು ಕಡ್ಡಾಯವಾಗಿ ಎಲ್‌ಎಂವಿ ಚಾಲನಾ ಪರವಾನಿಗೆ, ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು

ಎಸ್‌ಎಸ್‌ಸಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ವಯೋಮಿತಿ

  • ಅರ್ಜಿ ಸಲ್ಲಿಸುವ ವೇಳೆಗೆ ಗರಿಷ್ಠ 25 ವರ್ಷ ಮೀರಿರಬಾರದು
  • ಅರ್ಜಿ ಸಲ್ಲಿಸುವ ವೇಳೆಗೆ ಕನಿಷ್ಠ 20 ವರ್ಷ ಆಗಿರಬೇಕು

ಎಸ್‌ಎಸ್‌ಸಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆ

  • ಒಬಿಸಿಯವರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 5 ವರ್ಷ ವಯೋಮಿತಿ ಸಡಿಲಿಕೆ

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎತ್ತರ ಮತ್ತು ಎದೆಯ ಅಳತೆಯಲ್ಲಿ ಕೆಲ ಸಮುದಾಯಗಳು ಹಾಗೂ ಪ್ರದೇಶಗಳಿಗೆ ಅನುಗುಣವಾಗಿ ಮಾನದಂಡಗಳಿವೆ

ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್ https://ssc.nic.in/ ಜಾಲತಾಣಕ್ಕೆ ಭೇಟಿ
  • ಮುಖಪುಟದಲ್ಲಿ ಕಾಣಿಸುವ ಸಿಎಪಿಎಫ್ ಮೇಲೆ ಕ್ಲಿಕ್ ಮಾಡಿ
  • ಎಸ್‌ಐ 2024 ಆನ್‌ಲೈನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಲಾಗಿನ್ ಆಗಲು ಮೇಲಿನ ಲಿಂಕ್ ಅನ್ನು ಮತ್ತೆ ಕ್ಲಿಕ್ ಮಾಡಿ
  • ಲಾಗಿನ್ ಆದ ನಂತರ ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ನಮೂದಿಸಿ
  • ಭವಿಷ್ಯದಲ್ಲಿ ದಾಖಲೆಗಳಿಗಾಗಿ ಇದರ ನಕಲು ಪ್ರತಿ ಅಥವಾ ಸ್ಕ್ಯಾನ್ಡ್ ಕಾಪಿ ಪಡೆಯಿರಿ

ಇದನ್ನೂ ಓದಿ: ಮಾರ್ಚ್ 28 ರೊಳಗೆ ಯುಪಿಎಸ್‌ಸಿಯ ಆರ್ಥಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -UPSC Recruitment 2024

ರೈಲ್ವೆ ಇಲಾಖೆಯ 9,144 ಟೆಕ್ನಿಷಿಯನ್ ಹುದ್ದಳಿಗೆ ಅರ್ಜಿ ಸಲ್ಲಿಸಿ

ಮಾರ್ಚ್ 9 ರಿಂದ ರೈಲ್ವೆ ಇಲಾಖೆಯ 9,144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ-ಆರ್‌ಆರ್‌ಬಿ ಮುಂದಾಗಿದೆ. ಆಸಕ್ತಿರು ಏಪ್ರಿಲ್ 8 ರೊಗಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಟೆಕ್ನಿಷಯನ್ ಗ್ರೇಡ್-1 ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್-3 ರ ವಿವಿಧ ವಿಭಾಗಗಳಲ್ಲಿ ಒಟ್ಟು 9,144 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ.

(This copy first appeared in Hindustan Times Kannada website. To read more like this please logon to kannada.hindustantimes.com )

.

Whats_app_banner