Railway Jobs: 2025ರಲ್ಲಿ ಭಾರತೀಯ ರೈಲ್ವೆ ನೇಮಕ ಪರೀಕ್ಷೆಗಳು ಯಾವಾಗ? ರೈಲ್ವೆ ಜಾಬ್‌ ಕನಸಿನಲ್ಲಿರುವವರಿಗೆ ಇಲ್ಲಿದೆ ವೇಳಾಪಟ್ಟಿ
ಕನ್ನಡ ಸುದ್ದಿ  /  ಜೀವನಶೈಲಿ  /  Railway Jobs: 2025ರಲ್ಲಿ ಭಾರತೀಯ ರೈಲ್ವೆ ನೇಮಕ ಪರೀಕ್ಷೆಗಳು ಯಾವಾಗ? ರೈಲ್ವೆ ಜಾಬ್‌ ಕನಸಿನಲ್ಲಿರುವವರಿಗೆ ಇಲ್ಲಿದೆ ವೇಳಾಪಟ್ಟಿ

Railway Jobs: 2025ರಲ್ಲಿ ಭಾರತೀಯ ರೈಲ್ವೆ ನೇಮಕ ಪರೀಕ್ಷೆಗಳು ಯಾವಾಗ? ರೈಲ್ವೆ ಜಾಬ್‌ ಕನಸಿನಲ್ಲಿರುವವರಿಗೆ ಇಲ್ಲಿದೆ ವೇಳಾಪಟ್ಟಿ

Railway recruitment 2025: ಹೊಸ ವರ್ಷವನ್ನು ಸ್ವಾಗತಿಸುವ ಸಮಯವಿದು. ಈ ಸಮಯದಲ್ಲಿ ರೈಲ್ವೆಯಲ್ಲಿ ಉದ್ಯೋಗ ಪಡೆಯುವ ಕನಸಿನಲ್ಲಿರುವವರಿಗೆ ಅನುಕೂಲವಾಗುವಂತೆ 2025ರಲ್ಲಿ ನಡೆಯುವ ರೈಲ್ವೆ ನೇಮಕ ಪರೀಕ್ಷೆಗಳ ಮಾಹಿತಿ, ಪಿಡಿಎಫ್‌ ಇಲ್ಲಿ ನೀಡಲಾಗಿದೆ.

Railway Jobs: 2025ರಲ್ಲಿ ಭಾರತೀಯ ರೈಲ್ವೆ ನೇಮಕ ಪರೀಕ್ಷೆಗಳ  ಕ್ಯಾಲೆಂಡರ್‌
Railway Jobs: 2025ರಲ್ಲಿ ಭಾರತೀಯ ರೈಲ್ವೆ ನೇಮಕ ಪರೀಕ್ಷೆಗಳ ಕ್ಯಾಲೆಂಡರ್‌

Railway recruitment 2025: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಬೇಕೆನ್ನುವುದು ಬಹುತೇಕರ ಕನಸು. ಈ ಸೆಂಟ್ರಲ್‌ ಗವರ್ನ್ಮೆಂಟ್‌ ಉದ್ಯೋಗ ದೊರಕಿದರೆ ಜೀವನದಲ್ಲಿ ನಿಶ್ಚಿಂತೆಯಿಂದ ಇರಬಹುದು ಎಂದು ಸಾಕಷ್ಟು ಜನರು ಅಂದುಕೊಳ್ಳುತ್ತಾರೆ. ಭಾರತೀಯ ರೈಲ್ವೆಯಲ್ಲಿ ಉದ್ಯೋಗ ದೊರಕಿದರೆ ಜಾಬ್‌ ಕಟ್‌ ಭಯವಿಲ್ಲ. ರೈಲ್ವೆ ಉದ್ಯೋಗಿಗಳಿಗೆ ಜೀವನ ಪೂರ್ತಿ ಉಚಿತ ರೈಲು ಪ್ರಯಾಣ ಭಾಗ್ಯ ದೊರಕುತ್ತದೆ. ರೈಲ್ವೆ ಕ್ವಾಟರ್ಸ್‌ ದೊರಕುತ್ತದೆ. ಕಡಿಮೆ ದರಕ್ಕೆ ಸಬ್ಸಿಡಿ ಆಹಾರ ದೊರಕುತ್ತದೆ. ಉದ್ಯೋಗಿ ಮತ್ತು ಆತನ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೌಕರ್ಯ ದೊರಕುತ್ತದೆ. ಈಗಿನ ದುಬಾರಿ ವೈದ್ಯಕೀಯ ಖರ್ಚುಗಳ ಕಾಲದಲ್ಲಿ ಇದು ಅತ್ಯಂತ ಅಗತ್ಯವಾಗಿದೆ. ಇದೇ ಸಮಯದಲ್ಲಿ ಈಗಿನ ದುಬಾರಿ ಶಿಕ್ಷಣ ಕಾಲದಲ್ಲಿ ರೈಲ್ವೆ ಉದ್ಯೋಗಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತದೆ. ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ಉಳಿಯುತ್ತದೆ. ರೈಲ್ವೆ ಉದ್ಯೋಗಿ ಮೃತಪಟ್ಟರೆ ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರಿಗೆ ಉದ್ಯೋಗ ದೊರಕುತ್ತದೆ. ಸ್ಡಡಿ ಲಿವ್‌ ದೊರಕುತ್ತದೆ. ನಿವೃತ್ತಿ ನಂತರ ಉತ್ತಮ ಪೆನ್ಷನ್‌ ದೊರಕುತ್ತದೆ. ಹೀಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದರೆ ಸಾಕಷ್ಟು ಅನುಕೂಲ ದೊರಕುತ್ತದೆ. ಇದೇ ಕಾರಣಕ್ಕೆ ಪ್ರತಿವರ್ಷ ಸಾವಿರಾರು ಹುದ್ದೆಗಳಿಗೆ ಲಕ್ಷಾಂತರ ಜನರು ಅರ್ಜಿ ಸಲ್ಲಿಸುತ್ತಾರೆ. ಸಾಕಷ್ಟು ಜನರಿಗೆ ರೈಲ್ವೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಕನಸು ಇರುತ್ತದೆ. ಆದರೆ, ಯಾವಾಗ ಅರ್ಜಿ ಸಲ್ಲಿಸಬೇಕೆಂಬ ಮಾಹಿತಿ ಇರುತ್ತದೆ. ಜತೆಗೆ, ರೈಲ್ವೆ ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧತೆ ನಡೆಸಬೇಕೆಂದೂ ತಿಳಿದಿರುವುದಿಲ್ಲ. ರೈಲ್ವೆ ಪರೀಕ್ಷೆಯ ಸಿಲೆಬಸ್‌, ನೇಮಕ ಪರೀಕ್ಷೆಯನ್ನು ಅರ್ಥ ಮಾಡಿಕೊಂಡು ಪರೀಕ್ಷೆ ಬರೆದರೆ ಖಂಡಿತಾ ಯಶಸ್ಸು ಪಡೆಯಬಹುದು.

ಭಾರತೀಯ ರೈಲ್ವೆ ನೇಮಕಾತಿ 2025 ಕ್ಯಾಲೆಂಡರ್‌

ಇದೀಗ 2025ರಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಗಳು ಯಾವಾಗ ನಡೆಯಬಹುದು ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಕಾಲಕಾಲಕ್ಕೆ ವಿವಿಧ ನೇಮಕಾತಿ ಪರೀಕ್ಷೆಗಳ ಅಧಿಸೂಚನೆಯನ್ನು ಭಾರತೀಯ ರೈಲ್ವೆ ಪ್ರಕಟಿಸುತ್ತದೆ. ಇಲ್ಲಿ ನೀಡಲಾಗಿರುವ ಪರೀಕ್ಷಾ ದಿನಾಂಕಗಳು ನಿಮ್ಮ ಅಂದಾಜಿಗಷ್ಟೇ. ಭಾರತೀಯ ರೈಲ್ವೆಯ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಅಧಿಸೂಚನೆಗಳು ಪ್ರಕಟವಾಗಿರುವುದೇ ಎಂದು ನಿಯಮಿತವಾಗಿ ಪರಿಶೀಲನೆ ನಡೆಸುತ್ತ ಇರಿ. ಈಗಾಗಲೇ 2025ರಲ್ಲಿ ಯಾವಾಗ ಯಾವ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲಾಗುವುದು ಎಂದು ಆರ್‌ಆರ್‌ಬಿಯು ಕೆಲವು ತಿಂಗಳ ಹಿಂದೆಯೇ ಕ್ಯಾಲೆಂಡರ್‌ ಪ್ರಕಟಿಸಿದೆ. ಹೊಸ ವರ್ಷದ ಸ್ವಾಗತಕ್ಕೆ ಸಿದ್ಧರಾಗಿರುವ ಈ ಸಮಯದಲ್ಲಿ ಮುಂಬರುವ ರೈಲ್ವೆ ಪರೀಕ್ಷೆಗಳ ಕುರಿತು ತಿಳಿದುಕೊಳ್ಳೋಣ.

ಅಸಿಸ್ಟೆಂಟ್‌ ಲೊಕೊ ಪೈಲೆಟ್‌ ಪರೀಕ್ಷೆ ಯಾವಾಗ?

2025ರ ಜನವರಿ

ಟೆಕ್ನಿಷಿಯನ್‌ ಪರೀಕ್ಷೆ ಯಾವಾಗ?

2025ರ ಮಾರ್ಚ್‌ ತಿಂಗಳು

ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕೆಟಗರಿ (ಎನ್‌ಟಿಪಿಸಿ) (ಪದವಿ ಪೂರ್ವ) ಪರೀಕ್ಷೆ ದಿನಾಂಕ

ಲೆವೆಲ್‌ 2 ಮತ್ತು ಲೆವೆಲ್‌ 3 ಹುದ್ದೆಗಳ ನೇಮಕಾತಿ ಪರೀಕ್ಷೆಯು ಜೂನ್‌ 2025ರಲ್ಲಿ ನಡೆಯಲಿದೆ.

ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕೆಟಗರಿ (ಎನ್‌ಟಿಪಿಸಿ) (ಪದವಿ) ಪರೀಕ್ಷೆ ದಿನಾಂಕ

ಲೆವೆಲ್‌ 4, 5, 6 ಪದವಿ ವಿಭಾಗದ ಎನ್‌ಟಿಪಿಎಸಿ ಹುದ್ದೆಗಳ ಅಧಿಸೂಚನೆಯು 2025ರ ಜೂನ್‌ ತಿಂಗಳಲ್ಲಿ ಪ್ರಕಟವಾಗುವ ಸೂಚನೆ ಇದೆ.

ಭಾರತೀಯ ರೈಲ್ವೆ ಪ್ಯಾರಾಮೆಡಿಕಲ್‌ ಹುದ್ದೆಗಳ ಅಧಿಸೂಚನೆ ಯಾವಾಗ ಪ್ರಕಟವಾಗಬಹುದು?

ಜೂನ್‌ 2025ರಲ್ಲಿ ಪ್ರಕಟವಾಗಬಹುದು.

ಜೂನಿಯರ್‌ ಎಂಜಿನಿಯರ್‌, ಡಿಪೋ ಮೆಟಿರಿಯಲ್‌ ಸೂಪರಿಂಟೆಂಡೆಂಟ್‌, ಕೆಮಿಕಲ್‌ ಆಂಡ್‌ ಮೆಟಲಾರ್ಜಿಕಲ್‌ ಅಸಿಸ್ಟೆಂಟ್‌ ಹುದ್ದೆಗಳ ನೇಮಕ ಪರೀಕ್ಷೆ ಯಾವಾಗ ನಡೆಯಲಿದೆ?

ಜೂನ್‌ 2025

ಭಾರತೀಯ ರೈಲ್ವೆಯ ಲೆವೆಲ್‌ 1 ಹುದ್ದೆಗಳ ನೇಮಕ ಯಾವಾಗ?

2025ರ ಸೆಪ್ಟೆಂಬರ್‌

ರೈಲ್ವೆ ಸಚಿವಾಲಯದ ಹುದ್ದೆಗಳ ಭರ್ತಿ ಯಾವಾಗ?

ಸೆಪ್ಟೆಂಬರ್‌ 2025

ಆರ್‌ಆರ್‌ಬಿ ನೇಮಕಾತಿ ಕ್ಯಾಲೆಂಡರ್‌ 2025: ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳಿ

 

ಆರ್‌ಆರ್‌ಬಿ ನೇಮಕಾತಿ 2024ರ ಕ್ಯಾಲೆಂಡರ್‌ ಅನ್ನು ಭಾರತೀಯ ರೈಲ್ವೆ ಈಗಾಗಲೇ ಪ್ರಕಟಿಸಿದೆ. ಈ ಕ್ಯಾಲೆಂಡರ್‌ನಲ್ಲಿ 2025ರಲ್ಲಿ ಯಾವಾಗ ಅಧಿಸೂಚನೆಗಳು ಪ್ರಕಟವಾಗಲಿವೆ ಎಂಬ ಕರಡು ಮಾಹಿತಿ ನೀಡಲಾಗಿದೆ. ರೈಲ್ವೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಯಸುವವರು ಈ ಪಿಡಿಎಫ್‌ ಅನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಬಹುದು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner