ಗ್ರಾಮೀಣ ವಿದ್ಯುದೀಕರಣ ನಿಗಮದಲ್ಲಿ ಉದ್ಯೋಗಾವಕಾಶ; 90 ಸಾವಿರದಿಂದ 2.5 ಲಕ್ಷ ರೂಪಾಯಿವರೆಗೆ ಸಂಬಳ, ಹುದ್ದೆಗಳ ವಿವರ ಇಲ್ಲಿದೆ
ಇಂಧನ ಇಲಾಖೆಯಡಿಯಲ್ಲಿ ಬರುವ ಗ್ರಾಮೀಣ ವಿದ್ಯುದೀಕರಣ ನಿಗಮದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ವೇತನ, ನೋಟಿಫಿಕೇಶನ್ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.
ದೆಹಲಿ: ಸಾರ್ವಜನಿಕ ವಲಯದ ಗ್ರಾಮೀಣ ವಿದ್ಯುದೀಕರಣ ನಿಗಮ-ಆರ್‌ಇಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕ್ರಿಯಾತ್ಮಕ, ಬದ್ಧತೆ ಹಾಗೂ ಅನುಭವಿ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಆರ್‌ಇಸಿಯಲ್ಲಿ ಇಂಜಿನಿಯರಿಂಗ್, ಫೈನಾನ್ಸ್ ಮತ್ತು ಅಕೌಂಟ್ಸ್, ಮಾಹಿತಿ ತಂತ್ರಜ್ಞಾನ, ಕಂಪನಿ ಕಾರ್ಯದರ್ಶಿ, ಕಾನೂನು ಶಿಸ್ತು ಮುಂದಾದ ವಿಭಾಗಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಫೆಬ್ರವರಿ 9 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆಯ ಸ್ಥಳ ಮತ್ತು ಸಮಯವನ್ನು ಪೋರ್ಟಲ್ ಮೂಲಕ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಐಸಿಎಸ್‌ಐಗೆ ಭೇಟಿ ನೀಡಿ.
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 9, 2023. ಸೂಕ್ತವೆಂದು ಕಂಡುಬಂದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು/ಅಥವಾ ಸಂದರ್ಶನಕ್ಕೆ ಕರೆಯಲಾಗುವುದು. ಪರೀಕ್ಷೆಯ ಸ್ಥಳ ಮತ್ತು ಸಮಯವನ್ನು ಪೋರ್ಟಲ್ ಮೂಲಕ ತಿಳಿಸಲಾಗುತ್ತದೆ ಮತ್ತು ಅಪ್ಲಿಕೇಶನ್‌ನೊಂದಿಗೆ ಸೂಚಿಸಲಾದ ಇಮೇಲ್.
ಹುದ್ದೆಗಳು, ವೇತನ, ವಯೋಮಿತಿ, ಮೀಸಲಾತಿ ಹಾಗೂ ಅರ್ಹತೆಯ ಮಾನಂಡಗಳನ್ನು ನೋಡುವುದಾದರೆ ಇಂಜಿನಿಯರಿಂಗ್ ವಿಭಾಗದಲ್ಲಿ 1 ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆ ಖಾಲಿ ಇದ್ದು, ಎಸ್‌ಟಿ ಗೆ ಮೀಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಗರಿಷ್ಠ 48 ವರ್ಷ ಆಗಿದೆ. ವ್ಯಾಸಂಗ ಮುಗಿದ ಬಳಿಕ 18 ವರ್ಷಗಳ ವೃತ್ತಿಯ ಅನುಭವ ಹೊಂದಿರಬೇಕು. ತಿಂಗಳಿಗೆ 1 ರಿಂದ 2 ಲಕ್ಷ 60 ಸಾವಿರ ರೂಪಾಯಿ ಅಥವಾ ವಾರ್ಷಿಕವಾಗಿ 23 ಲಕ್ಷ ರೂಪಾಯಿ ವೇತನ ನೀಡಲಾಗುತ್ತದೆ. ಇಂಧನ ವಲಯದಲ್ಲಿ ಅನುಭವ ಹೊಂದಿರಬೇಕು.
ಇಂಜಿನಿಯರಿಂಗ್ ವಿಭಾಗದಲ್ಲಿ ಖಾಲಿ ಇರುವ 2 ಮುಖ್ಯ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ವೇತನ 90 ಸಾವಿರ ರೂಪಾಯಿಯಿಂದ 2,40,000 ರೂಪಾಯಿ ಅಥವಾ ವಾರ್ಷಿಕವಾಗಿ 20 ಲಕ್ಷ ರೂಪಾಯಿವರೆಗೆ ಇರುತ್ತದೆ. ಗರಿಷ್ಠ ವಯೋಮತಿ 45 ವರ್ಷ ಆಗಿದ್ದು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಪವರ್ ಇಂಜಿನಿಯರಿಂಗ್, ಮೆಕಾನಿಕಲ್ ಅಥವಾ ಇದಕ್ಕೆ ಸಮಾನವಾದ ಶಿಕ್ಷಣವನ್ನು ಪಡೆದಿರಬೇಕು. ಹಣಕಾಸು ಸಂಸ್ಥೆ, ಶೆಡ್ಯೂಲ್ಡ್ ಕರ್ಮಷಿಯಲ್ ಬ್ಯಾಂಕ್, ಕೇಂದ್ರ, ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಂಸ್ಥೆಗಳು, ಹಣಕಾಸ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಆಫೀಸರ್, ಫೈನಾನ್ಸ್ ಮತ್ತು ಅಕೌಂಟ್ ವಿಭಾಗದಲ್ಲಿ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಆಫೀಸರ್ ಹಾಗೂ ಐಟಿ ವಿಭಾಗದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ಯವಿದ್ಯಾಲಯ ಅಥವಾ ಇತರೆ ಶೈಕ್ಷಣಿಕ ಸಂಸ್ಥೆಗಳಿಂದ ಹುದ್ದೆಗೆ ಸಂಬಂಧಿತ ಪದವಿಗಳನ್ನು ಪಡೆದಿರಬೇಕು. ಕನಿಷ್ಠ ಒಂದು ವರ್ಷದ ಅನುಭವ, ಸಿಟಿಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in