ಆರ್‌ಪಿಎಫ್ ಎಸ್‌ಐ, ಕಾನ್ಸ್‌ಟೇಬಲ್ ನೇಮಕಾತಿ ವರದಿ ಸುಳ್ಳು; ಹೀಗಿತ್ತು ಪಿಐಬಿ ಸ್ಪಷ್ಟನೆ -RPF Recruitment Fake Notice-employment news rpf si constable recruitment vacancies report is fake pib clarification rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆರ್‌ಪಿಎಫ್ ಎಸ್‌ಐ, ಕಾನ್ಸ್‌ಟೇಬಲ್ ನೇಮಕಾತಿ ವರದಿ ಸುಳ್ಳು; ಹೀಗಿತ್ತು ಪಿಐಬಿ ಸ್ಪಷ್ಟನೆ -Rpf Recruitment Fake Notice

ಆರ್‌ಪಿಎಫ್ ಎಸ್‌ಐ, ಕಾನ್ಸ್‌ಟೇಬಲ್ ನೇಮಕಾತಿ ವರದಿ ಸುಳ್ಳು; ಹೀಗಿತ್ತು ಪಿಐಬಿ ಸ್ಪಷ್ಟನೆ -RPF Recruitment Fake Notice

ಆರ್‌ಪಿಎಫ್ ನೇಮಕಾತಿ 2024 ಸಂಬಂಧ ವಿವಿಧ ಮಾಧ್ಯಮ ಪ್ರಸಾರವಾಗುತ್ತಿರುವ ಅಧಿಸೂಚನೆ ನಕಲಿ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಆರ್‌ಆರ್‌ಬಿ ಆರ್‌ಪಿಎಫ್ ಎಸ್‌ಐ, ಕಾನ್ಸ್‌ಟೇಬಲ್ ನೇಮಕಾತಿ 2024 ಅಧಿಸೂಚನೆಯ ವರದಿ ಸುಳ್ಳೆಂದು ಪಿಐಬಿ ಸ್ಪಷ್ಟಪಡಿಸಿದೆ.
ಆರ್‌ಆರ್‌ಬಿ ಆರ್‌ಪಿಎಫ್ ಎಸ್‌ಐ, ಕಾನ್ಸ್‌ಟೇಬಲ್ ನೇಮಕಾತಿ 2024 ಅಧಿಸೂಚನೆಯ ವರದಿ ಸುಳ್ಳೆಂದು ಪಿಐಬಿ ಸ್ಪಷ್ಟಪಡಿಸಿದೆ.

ದೆಹಲಿ: ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನಲ್ಲಿ ಖಾಲಿ ಇರುವ ಸಬ್ ಇನ್ಸ್‌ಪೆಕ್ಟರ್ (ಎಸ್ಐ) ಮತ್ತು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಘೋಷಿಸಿಲ್ಲ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. ಹಲವು ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುತ್ತಿರುವ ಅಧಿಸೂಚನೆ ನಕಲಿ ಎಂದು ದೃಢಪಡಿಸಿದೆ."ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯದ ಹೆಸರಿನಲ್ಲಿ ಹೊರಡಿಸಲಾದ #Fake ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಂತಹ ಯಾವುದೇ ನೋಟಿಸ್ ಅನ್ನು @RailMinIndia ನೀಡಿಲ್ಲ. ನಿಮ್ಮ ವೈಯಕ್ತಿಕ / ಆರ್ಥಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ" ಎಂದು ಪಿಐಬಿ ಫ್ಯಾಕ್ಟ್ ಚೆಕ್ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಆರ್‌ಪಿಎಫ್‌ನಲ್ಲಿ ಖಾಲಿ ಇರುವ 4,660 ಹುದ್ದೆಗಳಿಗೆ ಆರ್‌ಆರ್‌ಬಿ ನೇಮಕಾತಿ ಮಾಡಿಕೊಳ್ಳಲಿವೆ - 452 ಸಬ್ ಇನ್ಸ್‌ಪೆಕ್ಟರ್ ಮತ್ತು 4,208 ಕಾನ್ಸ್‌ಟೇಬಲ್‌ಗಳ ಹುದ್ದೆಗಳಿಗೆ ಏಪ್ರಿಲ್ 15 ರಿಂದ ಮೇ 14 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಯಾವುದೇ ದಾರಿತಪ್ಪಿಸುವ ಮತ್ತು ಸುಳ್ಳು ಮಾಹಿತಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಅವರು ಯಾವಾಗಲೂ ಪರೀಕ್ಷೆ ನಡೆಸುವ ಸಂಸ್ಥೆ / ನೇಮಕಾತಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಬೇಕು.

ಭಾರತೀಯ ರೈಲ್ವೆಯಲ್ಲಿ 21 ನೇಮಕಾತಿ ಮಂಡಳಿಗಳಿವೆ: ಬೆಂಗಳೂರು, ಅಹಮದಾಬಾದ್, ಅಜ್ಮೀರ್, ಅಲಹಾಬಾದ್, ಭೋಪಾಲ್, ಭುವನೇಶ್ವರ, ಬಿಲಾಸ್‌ಪುರ್, ಚಂಡೀಗಢ, ಚೆನ್ನೈ, ಗೋರಖ್‌ಪುರ, ಗುವಾಹಟಿ, ಜಮ್ಮು, ಕೋಲ್ಕತಾ, ಮಾಲ್ಡಾ, ಮುಂಬೈ, ಮುಜಾಫರ್‌ಪುರ, ಪಾಟ್ನಾ, ರಾಂಚಿ, ಸಿಕಂದರಾಬಾದ್, ಸಿಲಿಗುರಿ ಹಾಗೂ ತಿರುವನಂತಪುರಂ. ಅಧಿಸೂಚನೆಗಳು, ಪರೀಕ್ಷಾ ಫಲಿತಾಂಶಗಳು ಮತ್ತು ಇತರ ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಅದನ್ನು ಪ್ರವೇಶಿಸಲು ಕೆಳಗೆ ನೀಡಲಾದ ಲಿಂಕ್ ಬಳಸಿ RRBs ವೆಬ್ ಸೈಟ್ ಗಳ ಪಟ್ಟಿ