ಸೆಬಿಯಲ್ಲಿ ಉದ್ಯೋಗಾವಕಾಶಗಳು; ಏಪ್ರಿಲ್ 13 ರಿಂದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ -SEBI Recruitment 2024-employment news sebi recruitment 2024 apply for 97 assistant manager post from april 13 rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೆಬಿಯಲ್ಲಿ ಉದ್ಯೋಗಾವಕಾಶಗಳು; ಏಪ್ರಿಲ್ 13 ರಿಂದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ -Sebi Recruitment 2024

ಸೆಬಿಯಲ್ಲಿ ಉದ್ಯೋಗಾವಕಾಶಗಳು; ಏಪ್ರಿಲ್ 13 ರಿಂದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ -SEBI Recruitment 2024

SEBI Recruitment 2024: ಸೆಬಿಯ ಗ್ರೇಡ್ ಎ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಏಪ್ರಿಲ್ 13 ರಿಂದ ಆನ್‌ಲೈನ್ ಅರ್ಜಿ ಲಿಂಕ್ ಸಕ್ರಿಯವಾಗಿರುತ್ತದೆ. ಆಸಕ್ತರು ತಿಳಿಯಬೇಕಿರುವ ಮಾಹಿತಿ ಇಲ್ಲಿದೆ.

ಸೆಬಿಯಲ್ಲಿ 97 ಅಸಿಸ್ಟಿಂಟ್ ಮ್ಯಾನೇಜರ್‌ಗಳ ನೇಮಕಾತಿ ಏಪ್ರಿಲ್ 13 ರಿಂದ ಅರ್ಜಿ ಸಲ್ಲಿಸಬಹುದಾಗಿದೆ
ಸೆಬಿಯಲ್ಲಿ 97 ಅಸಿಸ್ಟಿಂಟ್ ಮ್ಯಾನೇಜರ್‌ಗಳ ನೇಮಕಾತಿ ಏಪ್ರಿಲ್ 13 ರಿಂದ ಅರ್ಜಿ ಸಲ್ಲಿಸಬಹುದಾಗಿದೆ

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ-(SEBI) ಗ್ರೇಡ್ ಎ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿವರವಾದ ಜಾಹೀರಾತು ಮತ್ತು ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಏಪ್ರಿಲ್ 13 ರಂದು ಲಭ್ಯವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.sebi.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸೆಬಿ ನೇಮಕಾತಿ 2024: ಜನರಲ್ ಸ್ಟ್ರೀಮ್, ಲೀಗಲ್ ಸ್ಟ್ರೀಮ್, ಇನ್ಫರ್ಮೇಷನ್ ಟೆಕ್ನಾಲಜಿ ಸ್ಟ್ರೀಮ್, ಎಂಜಿನಿಯರಿಂಗ್ ಎಲೆಕ್ಟ್ರಿಕಲ್ ಸ್ಟ್ರೀಮ್, ರಿಸರ್ಚ್ ಸ್ಟ್ರೀಮ್ ಹಾಗೂ ಅಧಿಕೃತ ಭಾಷಾ ವಿಭಾಗದಲ್ಲಿ ಖಾಲಿ ಇರುವ 97 ಗ್ರೇಡ್ ಎ (ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದೆ.

ಸೆಬಿ ನೇಮಕಾತಿ 2024 ವಯಸ್ಸಿನ ಮಿತಿ: 2024ರ ಮಾರ್ಚ್ 31 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಪೂರ್ಣಗೊಂಡಿರಬೇಕು.

ಸೆಬಿ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ: ಆಯ್ಕೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತವು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಆನ್‌ಲೈನ್ ಪರೀಕ್ಷೆ ಇರುತ್ತದೆ. ಹಂತ 1 ರಲ್ಲಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳು ಎರಡನೇ ಹಂತಕ್ಕೆ ಹಾಜರಾಗುತ್ತಾರೆ. ಇದು ಎರಡು ಪತ್ರಿಕೆಗಳ ಆನ್‌ಲೈನ್ ಪರೀಕ್ಷೆ (ಗಳ) ರೂಪದಲ್ಲಿರುತ್ತದೆ. ಎರಡನೇ ಹಂತದಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

ಸೆಬಿ ನೇಮಕಾತಿ 2024 ಅರ್ಜಿ ಶುಲ್ಕ: ಕಾಯ್ದಿರಿಸದ / ಒಬಿಸಿ / ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1000 ರೂಪಾಯಿ ಇದೆ. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಸೇನಾ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 22 ಕೊನೆ ದಿನ

ಭಾರತೀಯ ಸೇನಾ ಅಡಿಯಲ್ಲಿ ಬರುವ ಅಗ್ನಿವೀರ್ (Agniveer Recruitment 2024) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ನಾಳೆ (ಮಾರ್ಚ್ 22, ಶುಕ್ರವಾರ) ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ. ಫೆಬ್ರವರಿ 13 ರಿಂದ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಈ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ indianarmy.nic.in ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಬಹುದಾಗಿದೆ.

ಇಂಡಿಯನ್ ಬ್ಯಾಂಕ್‌ನಲ್ಲಿ 146 ಸೆೆಷಲಿಸ್ಟ್ ಆಫೀಸ್‌ಗಳ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಬ್ಯಾಂಕ್‌ನಲ್ಲಿ 146 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 12ರಿಂದಲ್ಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 1 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು www.indianbank.in ಅಧಿಕೃತ ವೆಬ್‌ ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದರೆ ಇಂಡಿಯನ್ ಬ್ಯಾಂಕ್ ಕೇಳಿರುವ ಅರ್ಹತೆ, ಮಾನದಂಡಗಳನ್ನು ನೀವು ಪೂರೈಸುವವರಾಗಿದ್ದರೆ ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ.

ಸರ್ಕಾರಿ ಇಲಾಖೆಗಳು, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು, ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳು, ಪರೀಕ್ಷೆ ಹಾಗೂ ಕೊನೆಯ ದಿನಾಂಕಗಳು ಸೇರಿದಂತೆ ಉದ್ಯೋಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದಲ್ಲಿ ಪ್ರಕಟಿಸಲಾಗುತ್ತದೆ. ಉದ್ಯೋಗ ಮಾಹಿತಿಗಾಗಿ ಆಗಾಗ ಸೈಟ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯಿರಿ.