UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ? ಐಎಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ‌ ಇತ್ಯಾದಿ ನೇಮಕ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Upsc Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ? ಐಎಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ‌ ಇತ್ಯಾದಿ ನೇಮಕ ವಿವರ

UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ? ಐಎಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ‌ ಇತ್ಯಾದಿ ನೇಮಕ ವಿವರ

UPSC Exam date 2025 Calender: ಕೇಂದ್ರ ಲೋಕಸೇವಾ ಆಯೋಗವು ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ. ಈ ಹುದ್ದೆಗಳ ಅಧಿಸೂಚನೆ ಪ್ರಕಟ ದಿನಾಂಕ, ಪರೀಕ್ಷೆ ದಿನಾಂಕ ಸೇರಿದಂತೆ ಯುಪಿಎಸ್‌ಸಿ ಕ್ಯಾಲೆಂಡರ್‌ ಇಲ್ಲಿದೆ.

UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ?
UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ?

UPSC Exam date 2025 Calender: ಹೊಸ ವರ್ಷವನ್ನು ಸ್ವಾಗತಿಸುವ ಈ ಸಮಯದಲ್ಲಿ ಸಾಕಷ್ಟು ಜನರು ಹೊಸ ವರ್ಷದಲ್ಲಿ ಯಾವುದಾದರೂ ಸರಕಾರಿ ಹುದ್ದೆಗೆ ಟ್ರೈ ಮಾಡಲೇಬೇಕೆಂಬ ಸಂಕಲ್ಪ ಮಾಡಿಕೊಂಡಿರಬಹುದು. ಈ ಸಮಯದಲ್ಲಿ ಯುಪಿಎಸ್‌ಸಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಲೋಚನೆಯಲ್ಲಿ ಸಾಕಷ್ಟು ಜನರು ಇರಬಹುದು. ಕೇಂದ್ರ ಲೋಕಸೇವಾ ಆಯೋಗವು ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ. ಈಗಾಗಲೇ ಈ ಪರೀಕ್ಷೆಗಳು ನಡೆಯುವ ದಿನಾಂಕ, ಅಧಿಸೂಚನೆ ಪ್ರಕಟವಾಗುವ ದಿನಾಂಕಗಳನ್ನು ಒಳಗೊಂಡ ಕ್ಯಾಲೆಂಡರ್‌ ಅನ್ನು ಯುಪಿಎಸ್‌ಸಿ ಬಿಡುಗಡೆ ಮಾಡಿದೆ.

ಯುಪಿಎಸ್‌ಸಿ ಪರೀಕ್ಷೆ ಕ್ಯಾಲೆಂಡರ್‌- 2025

ನಾಗರಿಕ ಸೇವಾ ಪರೀಕ್ಷೆ (ಪ್ರಿಲಿಮ್ಸ್‌)

ಅಧಿಸೂಚನೆ ಪ್ರಕಟ- 22.01.2025

ಅರ್ಜಿ ಸಲ್ಲಿಸಲು ಕೊನೆದಿನ- 11.02.2025

ಪರೀಕ್ಷೆ ನಡೆಯುವ ದಿನ- 25.05.2025

ಪರೀಕ್ಷೆ ಅವಧಿ- 1 ದಿನ

ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ ಪರೀಕ್ಷೆ (ಪ್ರಿಲಿಮ್ಸ್‌)

ಅಧಿಸೂಚನೆ ಪ್ರಕಟ- 22.01.2025

ಅರ್ಜಿ ಸಲ್ಲಿಸಲು ಕೊನೆದಿನ- 11.02.2025

ಪರೀಕ್ಷೆ ನಡೆಯುವ ದಿನ- 25.05.2025

ಪರೀಕ್ಷೆ ಅವಧಿ- 1 ದಿನ

ಐಇಎಸ್‌/ಐಎಸ್‌ಎಸ್‌ ಪರೀಕ್ಷೆ

ಅಧಿಸೂಚನೆ ಪ್ರಕಟ- 12.02.2025

ಅರ್ಜಿ ಸಲ್ಲಿಸಲು ಕೊನೆದಿನ- 04.03.2025

ಪರೀಕ್ಷೆ ಆರಂಭವಾಗುವ ದಿನ- 20.06.2025

ಪರೀಕ್ಷೆ ಅವಧಿ- 3 ದಿನ

ಸಿಜಿಎಸ್‌- ಕಂಬೈನ್ಡ್‌ ಜಿಯೋ ಸೈಂಟಿಸ್ಟ್‌ (ಮೇನ್‌)

ಪರೀಕ್ಷೆ ಆರಂಭವಾಗುವ ದಿನಾಂಕ: 21.06.2025

ಪರೀಕ್ಷೆ ಅವಧಿ: 2 ದಿನ

ಎಂಜಿನಿಯರ್‌ ಸರ್ವೀಸ್‌ (ಮೇನ್‌)

ಪರೀಕ್ಷೆ ಆರಂಭವಾಗುವ ದಿನಾಂಕ: 22.06.2025

ಪರೀಕ್ಷೆ ಅವಧಿ: 1 ದಿನ

ಕಂಬೈನ್ಡ್‌ ಮೆಡಿಕಲ್‌ ಸರ್ವೀಸ್‌ ಪರೀಕ್ಷೆ

ಅಧಿಸೂಚನೆ ಪ್ರಕಟ- 19.02.2025

ಅರ್ಜಿ ಸಲ್ಲಿಸಲು ಕೊನೆದಿನ- 11.03.2025

ಪರೀಕ್ಷೆ ಆರಂಭವಾಗುವ ದಿನ- 20.07.2025

ಪರೀಕ್ಷೆ ಅವಧಿ- 1 ದಿನ

ಸೆಂಟ್ರಲ್‌ ಆರ್ಮ್‌ಡ್‌ ಪೊಲೀಸ್‌ ಫೋರ್ಸ್‌ (ಎಸಿ) ಪರೀಕ್ಷೆ

ಅಧಿಸೂಚನೆ ಪ್ರಕಟ- 05.03.2025

ಅರ್ಜಿ ಸಲ್ಲಿಸಲು ಕೊನೆದಿನ- 25.03.2025

ಪರೀಕ್ಷೆ ಆರಂಭವಾಗುವ ದಿನ- 03.08.2025

ಪರೀಕ್ಷೆ ಅವಧಿ- 1 ದಿನ

ಸಿವಿಲ್‌ ಸರ್ವೀಸ್ ಮುಖ್ಯ ಪರೀಕ್ಷೆ

ಪರೀಕ್ಷೆ ಆರಂಭವಾಗುವ ದಿನ- 22.08.2025

ಪರೀಕ್ಷೆ ಅವಧಿ- 5 ದಿನಗಳು

ಎನ್‌ಡಿಎ ಮತ್ತು ಎನ್‌ಎ (2) ಪರೀಕ್ಷೆ

ಅಧಿಸೂಚನೆ ಪ್ರಕಟ- 28.05.2025

ಅರ್ಜಿ ಸಲ್ಲಿಸಲು ಕೊನೆದಿನ- 17.06.2025

ಪರೀಕ್ಷೆ ಆರಂಭವಾಗುವ ದಿನ- 14.09.2025

ಪರೀಕ್ಷೆ ಅವಧಿ- 1 ದಿನ

ಸಿಡಿಎಸ್‌ (2) ಪರೀಕ್ಷೆ

ಅಧಿಸೂಚನೆ ಪ್ರಕಟ- 28.05.2025

ಅರ್ಜಿ ಸಲ್ಲಿಸಲು ಕೊನೆದಿನ- 17.06.2025

ಪರೀಕ್ಷೆ ಆರಂಭವಾಗುವ ದಿನ- 14.09.2025

ಪರೀಕ್ಷೆ ಅವಧಿ- 1 ದಿನ

ಇಂಡಿಯನ್‌ ಫಾರೆಸ್ಟ್‌ ಸರ್ವೀಸ್‌ ಮುಖ್ಯ ಪರೀಕ್ಷೆ

ಪರೀಕ್ಷೆ ಆರಂಭವಾಗುವ ದಿನ- 16.11.2025

ಪರೀಕ್ಷೆ ಅವಧಿ- 7 ದಿನಗಳು

ಎಸ್‌ಒ/ಸ್ಟೆನೊ ಎಲ್‌ಡಿಸಿಇ ಪರೀಕ್ಷೆ

ಅಧಿಸೂಚನೆ ಪ್ರಕಟ- 17.09.2025

ಅರ್ಜಿ ಸಲ್ಲಿಸಲು ಕೊನೆದಿನ- 07.10.2025

ಪರೀಕ್ಷೆ ಆರಂಭವಾಗುವ ದಿನ- 3.12.2025

ಪರೀಕ್ಷೆ ಅವಧಿ- 2 ದಿನ

ಯುಪಿಎಸ್‌ಸಿ ಪರೀಕ್ಷೆ ಕ್ಯಾಲೆಂಡರ್‌- 2025 ಪಿಡಿಎಫ್‌

 

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner