ಬೆಳಿಗ್ಗೆ ಎದ್ದ ಕೂಡಲೇ ಟ್ರೈ ಮಾಡಿ ಈ ಸರಳ ವ್ಯಾಯಾಮ: ತೂಕ ಇಳಿಕೆಗೂ ಸಹಕಾರಿ, ದಿನವಿಡೀ ಚೈತನ್ಯದಿಂದಿರುವಿರಿ-exercise morning 15 minutes exercise morning workout for beginners you should follow prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಿಗ್ಗೆ ಎದ್ದ ಕೂಡಲೇ ಟ್ರೈ ಮಾಡಿ ಈ ಸರಳ ವ್ಯಾಯಾಮ: ತೂಕ ಇಳಿಕೆಗೂ ಸಹಕಾರಿ, ದಿನವಿಡೀ ಚೈತನ್ಯದಿಂದಿರುವಿರಿ

ಬೆಳಿಗ್ಗೆ ಎದ್ದ ಕೂಡಲೇ ಟ್ರೈ ಮಾಡಿ ಈ ಸರಳ ವ್ಯಾಯಾಮ: ತೂಕ ಇಳಿಕೆಗೂ ಸಹಕಾರಿ, ದಿನವಿಡೀ ಚೈತನ್ಯದಿಂದಿರುವಿರಿ

ದಿನವಿಡೀಕಚೇರಿ ಕೆಲಸ, ಮನೆಗಲಸ ಅಂತಾ ಸುಸ್ತಾಗಿರುತ್ತೀರಿ. ದೇಹದ ಫಿಟ್‍ನೆಸ್‍ಗೆ ವ್ಯಾಯಾಮ ಮಾಡಲು ಸಮಯ ಸಿಗುತ್ತಿರದಿರಬಹುದು. ಆದರೆ ದೇಹ ಫಿಟ್ ಆಗಿರಲು ಬೆಳಗ್ಗಿನ ಸಮಯದಲ್ಲಿ ಕೇವಲ 15 ನಿಮಿಷ ವ್ಯಾಯಾಮ ಮಾಡಿದರೂ ಸಾಕು. ದಿನವಿಡೀ ಲವಲವಿಕೆಯಿಂದಿರುವಿರಿ. ಹಾಗಿದ್ದರೆ ಯಾವ ರೀತಿಯ ವ್ಯಾಯಾಮ ಮಾಡಬಹುದು ಇಲ್ಲಿದೆ ಮಾಹಿತಿ.

15 ನಿಮಿಷಗಳಲ್ಲಿ ನೀವು ಯಾವೆಲ್ಲಾ ವ್ಯಾಯಾಮ ಮಾಡಬಹುದು ಇಲ್ಲಿದೆ ಮಾಹಿತಿ:
15 ನಿಮಿಷಗಳಲ್ಲಿ ನೀವು ಯಾವೆಲ್ಲಾ ವ್ಯಾಯಾಮ ಮಾಡಬಹುದು ಇಲ್ಲಿದೆ ಮಾಹಿತಿ: (freepik)

ಆರೋಗ್ಯವಾಗಿರಲು, ದೇಹ ಫಿಟ್ ಆಗಿರಲು ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಬಿಡುವಿಲ್ಲದ ಕೆಲಸ, ಮನೆ ಜವಾಬ್ದಾರಿ ಇತ್ಯಾದಿಗಳಿಂದ ಕೆಲವರು ಫಿಟ್‍ನೆಸ್‍ನತ್ತ ಮುಖ ಮಾಡಿಯೂ ನೋಡುತ್ತಿಲ್ಲ. ದಿನಾ ಬೆಳಗ್ಗೆ ಬೇಗ ಯಾರು ಏಳುತ್ತಾರೆ ಎನ್ನುತ್ತಾ ಹಾಸಿಗೆಯಲ್ಲಿ ಹಾಯಾಗಿ ಮಲಗುತ್ತಾರೆ. ಬಳಿಕ ಗಡಿಬಿಡಿಯಲ್ಲಿ ತಿಂಡಿ ತಿಂದು ಆಫೀಸ್‍ಗೆ ಓಡುತ್ತಾರೆ. ಅದರಲ್ಲೂ ಭಾನುವಾರ ಬಂತೆಂದರೆ ಮುಗೀತು. ಬೆಳಗ್ಗೆ 10 ಗಂಟೆಯಾದರೂ ಹಾಸಿಗೆ ಬಿಟ್ಟು ಕದಲುವುದಿಲ್ಲ. ಆದರೆ, ನಮ್ಮ ದೇಹಕ್ಕೆ ವ್ಯಾಯಾಮ ಬಹಳ ಅತ್ಯಗತ್ಯ.

ಫಿಟ್‌ನೆಸ್‌ಗಾಗಿ ಕನಿಷ್ಠ 15 ನಿಮಿಷ ಮೀಸಲಿಡಲು ಆಗುವುದಿಲ್ವಾ? ಬೆಳಿಗ್ಗೆ ಕೇವಲ 15 ನಿಮಿಷ ವ್ಯಾಯಾಮ ಮಾಡುವ ಮೂಲಕ ನೀವು ಫಿಟ್ ಆಗಿರಬಹುದು. ಅಷ್ಟೇ ಅಲ್ಲ, ರೋಗಗಳಿಂದಲೂ ದೂರ ಉಳಿಯಬಹುದು. ದಿನವಿಡೀ ಚಟುವಟಿಕೆಯಿಂದರಲು 15 ನಿಮಿಷದ ವ್ಯಾಯಾಮಗಳನ್ನು ಮಾಡಬಹುದು. ಇದರಿಂದ ದೇಹವೂ ಫಿಟ್ ಆಗಿರುತ್ತದೆ, ಮನಸ್ಸೂ ಲವಲವಿಕೆಯಿಂದಿರುವಲ್ಲಿ ಸಹಕಾರಿ. ಈ 15 ನಿಮಿಷಗಳಲ್ಲಿ, ಸ್ಟ್ರೆಚಿಂಗ್ ಮಾಡಬಹುದು, ಲಘು ವ್ಯಾಯಾಮಗಳನ್ನು ಸಹ ಮಾಡಬಹುದು. ಇದರಿಂದ ಫಿಟ್ನೆಸ್ ಅನ್ನು ಕಾಯ್ದುಕೊಳ್ಳಬಹುದು. ವ್ಯಾಯಾಮವನ್ನು ಯಾವುದೇ ಸಮಯದಲ್ಲಿ ಮಾಡಬಹುದು. ಆದರೆ, ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಮಾತ್ರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಈ 15 ನಿಮಿಷಗಳಲ್ಲಿ ನೀವು ಯಾವೆಲ್ಲಾ ವ್ಯಾಯಾಮ ಮಾಡಬಹುದು ಇಲ್ಲಿದೆ ಮಾಹಿತಿ:

ಬೆಳಿಗ್ಗೆ 15 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ

ಜಾಗಿಂಗ್: ಬೆಳಿಗ್ಗೆ ಜಾಗಿಂಗ್ ಮಾಡುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿ. ಜಾಗಿಂಗ್ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಕೇವಲ 15 ನಿಮಿಷಗಳ ಜಾಗಿಂಗ್ ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಬೆಳಿಗ್ಗೆ ಜಾಗಿಂಗ್ ಮಾಡುವುದರಿಂದ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.

ಸ್ಕಿಪ್ಪಿಂಗ್: ಬೆಳಿಗ್ಗೆ ವ್ಯಾಯಾಮ ಮಾಡಲು ಕಷ್ಟವಾಗುತ್ತದೆ ಎಂದು ಹೇಳುವವರು ಸ್ಕಿಪ್ಪಿಂಗ್ ಮಾಡಬಹುದು. ಈ ಕಾರ್ಡಿಯೋ ವ್ಯಾಯಾಮಗಳು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಹಾಗೂ ದೇಹವನ್ನು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ. ಸ್ಕಿಪ್ಪಿಂಗ್ ಮಾಡುವುದು ಉತ್ತಮ ವ್ಯಾಯಾಮವಾಗಿದ್ದು, ಇದು ದೇಹದ ಸಮತೋಲನವನ್ನು ಸುಧಾರಿಸುತ್ತದೆ.

ಪುಷ್-ಅಪ್‌: ನಿಮಗೆ ಬೇರೆ ಯಾವುದೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ, ಪ್ರತಿದಿನ ಬೆಳಿಗ್ಗೆ 10 ರಿಂದ 15 ನಿಮಿಷಗಳ ಕಾಲ ಪುಶ್ ಅಪ್‌ಗಳನ್ನು ಮಾಡಿ. ಇದು ತೋಳುಗಳು ಮತ್ತು ಭುಜಗಳ ಸ್ನಾಯುಗಳನ್ನು ಶಕ್ತಿಯುತವಾಗಿರಿಸುವಲ್ಲಿ ಸಹಕಾರಿ. ಹೊಟ್ಟೆಯ ಕೊಬ್ಬನ್ನು ಮತ್ತು ತೂಕ ಇಳಿಕೆಗೆ ಪುಷ್-ಅಪ್ ಮಾಡುವುದರಿಂದ ಪ್ರಯೋಜನ ಪಡೆಯಬಹುದು.

ಜಂಪ್ ಮಾಡುವುದು: ಈ ವ್ಯಾಯಾಮ ಮಾಡುವುದು ತುಂಬಾನೇ ಸಿಂಪಲ್. ಶಾಲೆಯಲ್ಲಿರುವಾಗ ಪಿಟಿ ದಿನಗಳು ನಿಮಗೆ ನೆನಪಿಗೆ ಬರಬಹುದು. ಬೆಳಗ್ಗಿನ ಸರಳ ವ್ಯಾಯಾಮಗಳನ್ನು ಅಂದು ಪಿಟಿ ಟೀಚರ್ ಮಾಡಿಸುತ್ತಿದ್ದರು. ಇವುಗಳಲ್ಲಿ ಜಂಪ್ ಮಾಡುವುದೂ ಸೇರಿತ್ತು. ಇದೇ ರೀತಿ ಮನೆಯಲ್ಲಿ ಈ ವ್ಯಾಯಾಮವನ್ನು ಮಾಡಬಹುದು. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಅಲ್ಲದೆ, ಇದರಿಂದ ಸೋಮಾರಿತನ ದೂರವಾಗುತ್ತದೆ ಮತ್ತು ತೂಕ ಇಳಿಕೆಗೂ ಸಹಕಾರಿ.

mysore-dasara_Entry_Point