ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ; ಕೂಡಿಕೊಂಡಿದ್ರೆ ಅದೃಷ್ಟವಂತೆ, ನಿಮ್ಮ ಹುಬ್ಬು ಯಾವ ರೀತಿ ಇದೆ ನೋಡಿಕೊಂಡಿದ್ದೀರಾ-eyebrows show your personality as luck if you eyebrows being together see which one is yours rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ; ಕೂಡಿಕೊಂಡಿದ್ರೆ ಅದೃಷ್ಟವಂತೆ, ನಿಮ್ಮ ಹುಬ್ಬು ಯಾವ ರೀತಿ ಇದೆ ನೋಡಿಕೊಂಡಿದ್ದೀರಾ

ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವೆ; ಕೂಡಿಕೊಂಡಿದ್ರೆ ಅದೃಷ್ಟವಂತೆ, ನಿಮ್ಮ ಹುಬ್ಬು ಯಾವ ರೀತಿ ಇದೆ ನೋಡಿಕೊಂಡಿದ್ದೀರಾ

ಮನುಷ್ಯನ ಕಣ್ಣಿನ ಹುಬ್ಬುಗಳಿಂದ ಅವರ ವ್ಯಕ್ತಿತ್ವವನ್ನು ತಿಳಿಯಬಹುದು. ಆರು ರೀತಿಯ ಹಣ್ಣಿನ ಹುಬ್ಬುಗಳ ವಿನ್ಯಾಸದಲ್ಲಿ ಯಾರು ಹೆಚ್ಚು ಅದೃಷ್ಟವಂತರು ಅನ್ನೋದನ್ನ ಇಲ್ಲಿ ತಿಳಿಯಿರಿ.

6 ರೀತಿಯ ಕಣ್ಣಿನ ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ. ಅದರ ವಿವರ ಇಲ್ಲಿದೆ.
6 ರೀತಿಯ ಕಣ್ಣಿನ ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ. ಅದರ ವಿವರ ಇಲ್ಲಿದೆ.

ಮನುಷ್ಯರಲ್ಲಿನ ಮೊದಲ ಆಕರ್ಷಣೆಯೇ ಕಣ್ಣುಗಳು. ಆ ಕಣ್ಣುಗಳ ಮೇಲಿನ ಹುಬ್ಬುಗಳು (Eyebrow) ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರಿಗೆ ಹುಬ್ಬುಗಳು ಕೂಡಿಕೊಂಡಿರುತ್ತವೆ. ಕೆಲವರಿಗೆ ದಪ್ಪಾ, ಇನ್ನೂ ಕೆಲವರಿಗೆ ನೇರವಾಗಿ ಇಲ್ಲವೇ ಬಾಗಿದ ರೀತಿಯಲ್ಲಿ ಇರುತ್ತವೆ. ಈ ಕಣ್ಣಿನ ಹುಬ್ಬುಗಳಿಂದಲೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಇದು ನಿಮಗೆ ಅಚ್ಚರಿ ಏನಿಸಿದೂರ ಸತ್ಯ ಎನ್ನುತ್ತವೆ ಅಧ್ಯಯನಗಳು.

ಕಣ್ಣುಬ್ಬಿನ ಆಕಾರ ನಿಮ್ಮ ವ್ಯಕ್ತಿತ್ವನ್ನು ತಿಳಿಯಲು ಹೇಗೆ ನೆರವಾಗುತ್ತೆ ಅನ್ನೋದನ್ನ ಐಬ್ರೋ ಶೇಪ್ ಪರ್ಸನಾಲಿಟಿ ಟೆಸ್ಟ್ (Eyebrow Shape Personality Test) ತಿಳಿಯೋಣ. ಹಲವಾರು ಅಧ್ಯಯನಗಳ ಪ್ರಕಾರ, ಕಣ್ಣಿನ ಹುಬ್ಬುಗಳು ಮತ್ತು ವ್ಯಕ್ತಿತ್ವದ ನಡುವೆ ನೇರ ಸಂಬಂಧದ ಬಗ್ಗೆ ಸಂಶೋಧನೆಗಳನ್ನು ನಡೆಸಿವೆ. ನಿಮ್ಮ ಕಣ್ಣಿನ ಹುಬ್ಬುಗಳು ಯಾವ ವಿನ್ಯಾಸದಲ್ಲಿವೆ ಎಂಬುದನ್ನು ಒಮ್ಮೆ ನೋಡಿಕೊಳ್ಳಿ. ಹುಬ್ಬುಗಳು ದಪ್ಪ ಇದಾವಾ, ತೆಳುವಾಗಿ ಇದಾವಾ ಅಥವಾ ನೇರವಾಗಿ ಇದ್ದಾವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ಕಣ್ಣಿನ ಹುಬ್ಬುಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತವೆ ಅನ್ನೋದನ್ನ ಇಲ್ಲಿ ತಿಳಿಯೋಣ. ನಿಮ್ಮ ಇಷ್ಟಗಳು, ನೀವು ಇಷ್ಟ ಪಡೆದಿರುವುದು, ನಿಮ್ಮ ಆದ್ಯತೆಗಳು, ನೀವು ಹೇಗೆ ಯೋಚಿಸುತ್ತೀರಿ, ನಿಮ್ಮ ಭಾವನೆಗಳು, ಬುದ್ಧಿವಂತಿಕೆಯನ್ನು ಅಳೆಯಲು ನಿಮ್ಮ ಹುಬ್ಬಗಳು ಸೂಪರ್ ಸಾಧನವಾಗಿದೆ.

1. ದಪ್ಪ ಕಣ್ಣಿನ ಹುಬ್ಬುಗಳ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತೆ

ಚಿತ್ರದಲ್ಲಿರುವ ಪ್ರಕಾರ ಸಂಖ್ಯೆ 1 ರಲ್ಲಿ ಇರುವ ಕಣ್ಣಿನ ಹುಬ್ಬು ತುಂಬಾ ದಪ್ಪಾಗಿದೆ. ನೀವು ದಪ್ಪ ಹುಬ್ಬುಗಳನ್ನು ಹೊಂದಿದ್ದರೆ ನೀವು ಸ್ವತಂತ್ರ ಮನೋಭಾವವನ್ನು ಹೊಂದಿರುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ. ಪ್ರಾಕ್ಟಿಕಲ್ ಆಗಿ ನೀವು ವಿಷಯಗಳನ್ನು ಪ್ರಶಂಸಿಸುತ್ತೀರಿ. ಜನರು ನಿಮ್ಮ ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಜೀವನವನ್ನು ಪೂರ್ಣವಾಗಿ ಜೀವಿಸುವುದು ನಿಮ್ಮ ಪ್ರಧಾನ ಕಾಳಜಿಯಾಗಿರುತ್ತದೆ. ನಿಮ್ಮ ಆಲೋಚನೆಗಳು, ಆದರ್ಶಗಳಿಗೆ ಅನುಗುಣವಾಗಿ ಜೀವನವನ್ನು ನಡೆಸುತ್ತೀರಿ.

2. ತೆಳುವಾದ ಹುಬ್ಬುಗಳನ್ನು ಹೊಂದಿರ ವ್ಯಕ್ತಿಯ ವ್ಯಕ್ತಿತ್ವ

ಈ ರೀತಿಯ ಕಣ್ಣಿನ ಹುಬ್ಬಗಳನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಒಳಗಿನಿಂದ ಆತ್ಮವಿಶ್ವಾಸವನ್ನು ಹೊಂದಿರುವುದಿಲ್ಲ ಎಂಬುದನ್ನು ಈ ವಿನ್ಯಾಸ ತೋರಿಸುತ್ತದೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋರಾಟ ನಡೆಸುತ್ತೀರಿ. ಒಂದು ತೀರ್ಮಾನ ಕೈಗೊಳ್ಳಬೇಕಾದರೆ ಬೇರೆಯವರ ಸಹಾಯ ಪಡೆಯುತ್ತೀರಿ. ದಪ್ಪ ಹುಬ್ಬು ಹೊಂದಿರುವವರಿಗೆ ಹೋಲಿಸಿದರೆ ನಿಮಗೆ ಧೈರ್ಯ ಕಡಿಮೆ.

3. ವಕ್ರವಾಗಿ ಹುಬ್ಬುಗಳು ಇರುವವರ ವ್ಯಕ್ತಿತ್ವ

ಚಿತ್ರದಲ್ಲಿ ತೋರಿಸಿರುವ ಸಂಖ್ಯೆ ಮೂರಲ್ಲಿ ಕಾಣುವ ವಕ್ರ ರೀತಿಯ ಹುಬ್ಬುಗಳನ್ನು ಹೊಂದಿರುವವರು ಮಹತ್ವಾಕಾಂಕ್ಷೆ, ತಾಳ್ಮೆ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಸ್ವಲ್ಪ ನಾಟಕೀಯ ಎನಿಸಿದರೂ ನಿಮ್ಮ ಮಾತುಗಳು, ಡ್ರೆಸ್ಸಿಂಗ್ ಮೂಲಕ ದೊಡ್ಡ ಹೇಳಿಕೆಗಳನ್ನು ನೀಡಲು ಇಷ್ಟಪಡುತ್ತೀರಿ. ಇವರು ಮನರಂಜನೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ನಿಮ್ಮ ಮಾತಿನ ಶೈಲಿ ಬೇರೆಯವರನ್ನು ಸೆಳೆಯುತ್ತದೆ. ಪ್ರತಿಕ್ರಿಯಾತ್ಮಕ ಹಾಗೂ ಭಾವನಾತ್ಮಕವಾಗಿರುತ್ತೀರಿ.

4. ನೇರ ಹುಬ್ಬುಗಳು ಇರುವವರ ವ್ಯಕ್ತಿತ್ವ

ಈ ರೀತಿಯ ಹುಬ್ಬುಗಳ ವಿನ್ಯಾಸವನ್ನು ಹೊಂದಿರುವವರು ಭಾವನಾತ್ಮಕವಾಗಿರುವುದಕ್ಕಿಂತ ತರ್ಕಬದ್ಧವಾಗಿರಲು ಬಯಸುತ್ತಾರೆ. ಯಾವುದೇ ವಿಷಯದಲ್ಲಿ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಎಚ್ಚರಿಕೆಯಿಂದ ಹಲವು ಬಾರಿ ಯೋಚನೆ ಮಾಡುತ್ತಾರೆ. ಭಾವನೆಗಳಿಗಿಂತ ಸತ್ಯ ಮತ್ತು ಅಂಕಿಅಂಶಗಳನ್ನು ನೋಡುವ ಬೌದ್ದಿಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರಂತೆಯೇ ಭಾವನಾತ್ಮಕ ವಿಷಯಗಳಲ್ಲಿ ಸ್ಥಿರತೆ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತೀರಿ. ವಿಷಯವನ್ನು ಇರುವಂತೆಯೇ ಹೇಳುವ ಸ್ವಭಾವವನ್ನು ಹೊಂದಿರುತ್ತಾರೆ.

5 ಕೂಡಿಕೊಂಡಿರುವ ಹುಬ್ಬುಗಳ ವ್ಯಕ್ತಿಗಳ ವ್ಯಕ್ತಿತ್ವ

ಈ ರೀತಿಯ ಹುಬ್ಬುಗಳು ನಿಮಗಿದ್ದರೆ ಜಗತ್ತು ನಿಮ್ಮನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಅಂತ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ತಿಳಿಸುತ್ತವೆ. ನಿಮ್ಮ ವ್ಯಕ್ತಿತ್ವವನ್ನು ನೀವು ಸಂಪೂರ್ಣವಾಗಿ ಸ್ವೀಕರಿಸುತ್ತೀರಿ. ನೀವು ಸೃಜನಶೀಲ ಮನಸ್ಸನ್ನು ಹೊಂದಿರುತ್ತೀರಿ. ನಿಮ್ಮ ಮನಸ್ಸು ಮುಕ್ತವಾಗಿ ಹಾಗೂ ಹುಚ್ಚುಚ್ಚಾಗಿ ಯೋಜನೆ ಮಾಡಲು ಅವಕಾಶ ನೀಡುವ ಚಟುವಟಿಕೆಗಳಲ್ಲಿ ದಿನ ಕನಸುಗಳನ್ನು ಕಾಣುತ್ತಾ ಸಮಯ ವ್ಯರ್ಥ ಮಾಡಬಹುದು. ಇಷ್ಟ ಇಲ್ಲದ ವಿಷಯಗಳಲ್ಲಿ ಆಗಾಗ ಕಿರಿಕಿರಿ ಅನುಭವಿಸುತ್ತೀರಿ.

6. ಹುಬ್ಬುಗಳ ನಡುವೆ ಹೆಚ್ಚು ಅಂತರ ಇರುವ ವ್ಯಕ್ತಿಗಳ ವ್ಯಕ್ತಿತ್ವ

ಹೀಗೆ ಕಣ್ಣುಹುಬ್ಬುಗಳನ್ನು ಹೊಂದಿರುವವರು ಪ್ರೀತಿಯ ವ್ಯಕ್ತಿಯಾಗಿರುತ್ತಾರೆ. ನೇರವಾಗಿ ಮಾತುಗಳನ್ನು ಹೇಳುವವರು ನೀವಾಗಿರುತ್ತೀರಿ. ವಸ್ತುಗಳ ವಿಷಯಗಳಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಹುದು. ಭಯದ ಕಾರಣದಿಂದ ಕೆಲವೊಮ್ಮ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಯಾರು ಏನೇ ಹೇಳಿದರೂ ತಾಳ್ಮೆಯಿಂದ ಕೇಳುತ್ತೀರಿ. ಜನ ನಿಮ್ಮನ್ನು ನಂಬುತ್ತಾರೆ.

mysore-dasara_Entry_Point