ಚಳಿಗಾಲದಲ್ಲಿ ಬಟ್ಟೆ ಒಣಗಿಸಲು ತೊಂದರೆ ಆಗ್ತಿದ್ಯಾ: ಸೂರ್ಯನ ಬೆಳಕು ಇಲ್ಲದೆಯೂ ಹೀಗೆ ಒಣಗಿಸಬಹುದು, ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಬಟ್ಟೆ ಒಣಗಿಸಲು ತೊಂದರೆ ಆಗ್ತಿದ್ಯಾ: ಸೂರ್ಯನ ಬೆಳಕು ಇಲ್ಲದೆಯೂ ಹೀಗೆ ಒಣಗಿಸಬಹುದು, ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಬಟ್ಟೆ ಒಣಗಿಸಲು ತೊಂದರೆ ಆಗ್ತಿದ್ಯಾ: ಸೂರ್ಯನ ಬೆಳಕು ಇಲ್ಲದೆಯೂ ಹೀಗೆ ಒಣಗಿಸಬಹುದು, ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದಾಗಿ,ಬಟ್ಟೆ ಬೇಗ ಒಣಗುವುದಿಲ್ಲ. ಇದರಿಂದ ಹಲವು ಮಂದಿ ತೊಂದರೆ ಅನುಭವಿಸುತ್ತಾರೆ. ನೀವು ಸಹ ಈ ಸಮಸ್ಯೆಯನ್ನು ಹೊಂದಿದ್ದರೆ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು. ಸೂರ್ಯನ ಬೆಳಕು ಇಲ್ಲದೆಯೂ ಒದ್ದೆ ಬಟ್ಟೆಗಳನ್ನು ಹೇಗೆ ಒಣಗಿಸಬಹುದು ಎಂಬುದು ಇಲ್ಲಿದೆ.

ಚಳಿಗಾಲದಲ್ಲಿ ಬಟ್ಟೆ ಒಣಗಿಸಲು ತೊಂದರೆ ಎದುರಿಸುತ್ತಿರುವಿರಾ: ಸೂರ್ಯನ ಬೆಳಕು ಇಲ್ಲದೆಯೂ ಹೀಗೆ ಒಣಗಿಸಬಹುದು, ಇಲ್ಲಿದೆ ಟಿಪ್ಸ್
ಚಳಿಗಾಲದಲ್ಲಿ ಬಟ್ಟೆ ಒಣಗಿಸಲು ತೊಂದರೆ ಎದುರಿಸುತ್ತಿರುವಿರಾ: ಸೂರ್ಯನ ಬೆಳಕು ಇಲ್ಲದೆಯೂ ಹೀಗೆ ಒಣಗಿಸಬಹುದು, ಇಲ್ಲಿದೆ ಟಿಪ್ಸ್ (PC: Canva)

ಹೊಸ ವರ್ಷ ಬರುತ್ತಿದ್ದಂತೆ ಚಳಿಯೂ ಹೆಚ್ಚಾಗತೊಡಗುತ್ತಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಬಟ್ಟೆ ಒಣಗಿಸಲು ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ನೀವು ಸಹ ಈ ಸಮಸ್ಯೆಯನ್ನು ಹೊಂದಿದ್ದರೆ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು. ಸೂರ್ಯನ ಬೆಳಕು ಇಲ್ಲದೆಯೂ ಒದ್ದೆ ಬಟ್ಟೆಗಳನ್ನು ಒಣಗಿಸಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ಟಿಪ್ಸ್.

ಚಳಿಗಾಲದಲ್ಲಿ ಬಟ್ಟೆಗಳನ್ನು ಹೀಗೆ ಒಣಗಿಸಬಹುದು

ಇಸ್ತ್ರಿ ಮಾಡಬಹುದು: ಚಳಿಗಾಲದಲ್ಲಿ ಒದ್ದೆ ಬಟ್ಟೆಗಳನ್ನು ಒಣಗಿಸಲು ನೀವು ಇಸ್ತ್ರಿಯನ್ನು ಬಳಸಬಹುದು. ತುಂಬಾ ಒದ್ದೆ ಇದ್ದರೆ ಫ್ಯಾನ್ ಹಾಕಿ ಒಣಗಿಸಿ. ಫ್ಯಾನ್ ಹಾಕಿದರೂ ತೇವಾಂಶ ಹಾಗೆಯೇ ಇರುತ್ತದೆ. ಹೀಗಾಗಿ ಹಾಸಿಗೆಯ ಮೇಲೆ ಹತ್ತಿ ಬಟ್ಟೆಯನ್ನು ಹರಡಿ. ಈಗ ಅದರ ಮೇಲೆ ಒದ್ದೆ ಬಟ್ಟೆಗಳನ್ನು ಹರಡಿ. ಇದರ ನಂತರ, ಈ ಬಟ್ಟೆಗಳ ಮೇಲೆ ಮತ್ತೊಂದು ಬಟ್ಟೆಯನ್ನು ಹಾಕಿ ನಂತರ ಇಸ್ತ್ರಿ ಹಾಕಬಹುದು. ಈ ಹ್ಯಾಕ್ ಸಹಾಯದಿಂದ, ಸೂರ್ಯನ ಬೆಳಕು ಇಲ್ಲದೆಯೂ ಸಹ ಬಟ್ಟೆಗಳನ್ನು ಒಣಗಿಸಬಹುದು.

ಹೀಟರ್ ಅನ್ನು ಬಳಸಬಹುದು: ಒದ್ದೆಯಾದ ಬಟ್ಟೆಗಳನ್ನು ಒಣಗಿಸಲು ರೂಮ್ ಹೀಟರ್ ಅನ್ನು ಸಹ ಬಳಸಬಹುದು. ಇದಕ್ಕಾಗಿ, ಎಲ್ಲಾ ಒದ್ದೆಯಾದ ಬಟ್ಟೆಗಳನ್ನು ಹಾಳೆಯ ಮೇಲೆ ಹರಡಿ. ಈ ಬಟ್ಟೆಗಳ ಮೇಲೆ ಮತ್ತೊಂದು ಹಾಳೆಯನ್ನು ಹರಡಿ. ಇದನ್ನು ಸ್ವಲ್ಪ ಎತ್ತರದಲ್ಲಿಸಿ, ರೂಮ್ ಹೀಟರ್ ಆನ್ ಮಾಡಬಹುದು. ಕೆಲವೇ ಗಂಟೆಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೋಡಬಹುದು.

ಹೇರ್ ಡ್ರೈಯರ್ ಪರಿಣಾಮಕಾರಿ: ಚಳಿಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಒಣಗಿಸಲು ಹೇರ್ ಡ್ರೈಯರ್ ಅನ್ನು ಬಳಸಬಹುದು. ಕೂದಲನ್ನು ಒಣಗಿಸಲು ಬಳಸುವ ಹೇರ್ ಡ್ರೈಯರ್ ಬಟ್ಟೆಗಳನ್ನು ಕೂಡ ಸುಲಭವಾಗಿ ಒಣಗಿಸುತ್ತದೆ.

ಓವನ್ (ಕಡಿಮೆ ಶಾಖ) ಬಳಸಿ: ತುಂಬಾ ಅಗತ್ಯವಿರುವ ಒಳಉಡುಪುಗಳು, ಸಾಕ್ಸ್ ಅಥವಾ ಕೈಗವಸುಗಳಂತಹ ಸಣ್ಣ ಉಡುಪುಗಳನ್ನು ಒಣಗಿಸಲು ಓವನ್ ಬಳಸಬಹುದು. ಓವನ್ ಕಡಿಮೆ ಶಾಖಕ್ಕೆ ಹೊಂದಿಸಿ ಒಣಗಿಸಬಹುದು. ಆದರೆ, ಬಹಳ ಜಾಗರೂಕರಾಗಿರಬೇಕಾದುದು ಅಗತ್ಯ

ಮೇಲೆ ತಿಳಿಸಿದ ಈ ವಿಧಾನಗಳ ಮೂಲಕ ಸೂರ್ಯನ ಬೆಳಕು ಇಲ್ಲದೆಯೂ ಚಳಿಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಒಣಗಿಸಬಹುದು. ಆದರೆ, ಬಟ್ಟೆ ಒಣಗಿಸುವ ರ್ಯಾಕ್‌ನಲ್ಲಿ ಒಂದೇ ಬಾರಿಗೆ ಹಲವಾರು ಬಟ್ಟೆಗಳನ್ನು ಒಟ್ಟಿಗೆ ಹಾಕಬೇಡಿ. ಉತ್ತಮ ಗಾಳಿಯ ಪ್ರಸರಣಕ್ಕಾಗಿ ಅವಗಳನ್ನು ಒಂದೊಂದಾಗಿಯೇ ಒಣಗಿಸಲು ಹಾಕಿ. ಈ ವಿಧಾನಗಳನ್ನು ಬಳಸಿಕೊಂಡು, ಸೂರ್ಯನ ಬೆಳಕು ಅಗತ್ಯವಿಲ್ಲದೆಯೇ ಚಳಿಗಾಲದಲ್ಲಿ ಬಟ್ಟೆಗಳನ್ನು ಯಶಸ್ವಿಯಾಗಿ ಒಣಗಿಸಬಹುದು.

Whats_app_banner