ಕನ್ನಡ ಸುದ್ದಿ  /  Lifestyle  /  Fashion News Denim Fashion Trend Jeans Trend And Styling Comfort Fit Ankle Length Carrot Fit Skinny Fit Kannada News Rst

Denim Fashion: ಇದು ಡೆನಿಮ್‌ ಜೀನ್ಸ್‌ ಜಮಾನ; ಜೀನ್ಸ್‌ ಧರಿಸಿದಾಗ ಸ್ಟೈಲಿಶ್‌ ಆಗಿ, ಟ್ರೆಂಡಿ ಆಗಿ ಕಾಣಲು ಈ ಸೂತ್ರ ಅನುಸರಿಸಿ

Denim Trend: ಡೆನಿಮ್‌ ಜಗತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುತ್ತದೆ. ಡೆನಿಮ್‌ ಲೋಕಕ್ಕೆ ಅಂತ್ಯವೆಂಬುದಿಲ್ಲ. ಡೆನಿಮ್‌ ಬಟ್ಟೆಗಳು ಫ್ಯಾಷನ್‌ ಜಗತ್ತಿಗೆ ಕಾಲಿರಿಸಿದ ಕ್ಷಣದಿಂದಲೂ ದಿನಕ್ಕೊಂದು ಹೊಸ ಬಗೆಯ ಟ್ರೆಂಡ್‌ ಫ್ಯಾಷನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಕ್ಲಾಸಿಕ್‌ ಕಟ್‌ನಿಂದ ಬೋಲ್ಡ್‌ ಡಿಸೈನ್‌ವರೆಗೆ ಈಗಿನ ಡೆನಿಮ್‌ ಜೀನ್ಸ್‌ ಟ್ರೆಂಡ್‌ ಹೀಗಿದೆ.

ಜೀನ್ಸ್‌ ಸ್ಟೈಲಿಂಗ್‌ ಟಿಪ್ಸ್‌
ಜೀನ್ಸ್‌ ಸ್ಟೈಲಿಂಗ್‌ ಟಿಪ್ಸ್‌

ಜೀನ್ಸ್‌ ಪ್ರತಿಯೊಬ್ಬರ ವಾರ್ಡ್‌ರೋಬ್‌ನಲ್ಲೂ ಸ್ಥಾನ ಪಡೆದಿರುವ ಪ್ರಮುಖ ಉಡುಪು. ಸ್ಟೈಲಿಶ್‌ ಜೀನ್ಸ್‌ ಟ್ರೆಂಡ್‌ಗೆ ಅಂತ್ಯವೆಂಬುದಿಲ್ಲ. ಜೀನ್ಸ್‌ ಪ್ಯಾಂಟ್‌ ಅನ್ನು ಬಹುತೇಕ ಎಲ್ಲರೂ ಮೆಚ್ಚಿ ತೊಡುತ್ತಾರೆ, ಆರಾಮದಾಯಕ ಕೂಡ. ಆದರೆ ಜೀನ್ಸ್‌ ತೊಡುವ ರೀತಿ ಹಾಗೂ ಜೀನ್ಸ್‌ ಯಾವ ಕಾಲಕ್ಕೆ ಹೇಗಿರಬೇಕು ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಬೇರೆ ಬೇರೆ ಬಣ್ಣ, ಕಂಪರ್ಟ್‌, ಆರಾಮದಾಯಕ ಫಿಟ್‌, ಸ್ಲಿಮ್‌ ಜೀನ್ಸ್‌ ಹೀಗೆ ಹಲವು ವಿಧದ ಆಯ್ಕೆಗಳು ಫ್ಯಾಷನ್‌ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ನಿಮ್ಮ ದೇಹಕ್ಕೆ ಸೂಕ್ತ ಎನ್ನಿಸುವ ಹಾಗೂ ಆರಾಮ ಎನ್ನಿಸುವ ಜೀನ್ಸ್‌ ಧರಿಸುವುದು ಬಹಳ ಮುಖ್ಯ. ಈಗ ವೆಡ್‌ಲೆಗ್‌, ಹೈ ವೇಸ್ಟೆಡ್‌ ಜೀನ್ಸ್‌ ಹೆಚ್ಚು ಟ್ರೆಂಡ್‌ನಲ್ಲಿವೆ. ಜೀನ್ಸ್‌ನೊಂದಿಗೆ ಇನ್ನಷ್ಟು ಸ್ಟೈಲಿಶ್‌ ಆಗಿ ಕಾಣಲು ಇಲ್ಲಿದೆ ಒಂದಿಷ್ಟು ಸಲಹೆ.

ಜೀನ್ಸ್‌ ಇತ್ತೀಚಿನ ಟ್ರೆಂಡ್‌ ಹಾಗೂ ಸ್ಟೈಲಿಂಗ್‌ ಟಿಪ್ಸ್‌ ಹೀಗಿದೆ

ಡೆನಿಮ್‌ ಎಕ್ಸ್‌ಫರ್ಟ್‌ ಮತ್ತು ಮಫ್ತಿ ಜೀನ್ಸ್‌ನ ಸಂಸ್ಥಾಪಕ ನಿರ್ದೇಶಕ ಇತ್ತೀಚಿನ ಜೀನ್ಸ್‌ ಟ್ರೆಂಡ್‌ ಹಾಗೂ ಸ್ಟೈಲಿಂಗ್‌ ಟಿಪ್ಸ್‌ಗಳನ್ನು ಎಚ್‌ಟಿ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ಆರಾಮದಾಯಕ ಫಿಟ್‌

ಜೀನ್ಸ್‌ ನೋಡುವವರಿಗಿಂತ ಧರಿಸುವವರಿಗೆ ಕಂಪರ್ಟ್‌ ಆಗಿರುವುದು ಬಹಳ ಮುಖ್ಯ. ಹಿಂದಿನಿಂದಲೂ ಸ್ಟ್ರೇಟ್‌ ಜೀನ್ಸ್‌ ಹೆಚ್ಚು ಚಾಲ್ತಿಯಲ್ಲಿದೆ, ಇಂದಿಗೂ ಆ ಟ್ರೆಂಡ್‌ ಮುಂದುವರಿದಿದೆ. ಈ ಜೀನ್ಸ್‌ ಸೊಂಟ ಹಾಗೂ ತೊಡೆಯ ಭಾಗದಿಂದ ಮೊಣಕಾಲಿನವರೆಗೆ ಅಂಟಿಕೊಂಡಂತಿರುತ್ತದೆ. ಇದು ತೊಡೆಯಿಂದ ನೆಲಕ್ಕೆ ಸಮಾನಾಂತರವಾಗಿ ಕಾಣುತ್ತದೆ. ಇದು ಪರ್ಫೆಕ್ಟ್‌ ಫಿಟಿಂಗ್‌ ಹುಡುಕುತ್ತಿರುವವರಿಗೆ ಬೆಸ್ಟ್‌ ಆಯ್ಕೆ.

ಆರಾಮದಾಯಕ ಸ್ಟ್ರೇಟ್‌ ಫಿಟ್‌

ಈ ಪ್ಯಾಂಟ್‌ ಹೆಸರೇ ಸೂಚಿಸುವಂತೆ ಹಿಪ್‌ನಿಂದ ಕಾಲಿನವರೆಗೆ ನೇರವಾಗಿರುತ್ತದೆ. ಇದು ಸೊಂಟದಿಂದ ಕಾಲಿನವರೆಗೆ ಆರಾಮದಾಯಕ ಎನ್ನಿಸುವಂತಿರುತ್ತದೆ. ಇದರಲ್ಲಿ ಆಂಕಲ್‌ ಲೆಂಥ್‌ ಇದ್ದರೆ ಇನ್ನಷ್ಟು ಟ್ರೆಂಡಿ ಆಗಿ ಕಾಣಬಹುದು. ಈ ಟ್ರೆಂಡ್‌ ಎಲ್ಲಾ ರೀತಿಯ ದೇಹ ಸೌಂದರ್ಯದವರಿಗೂ ಹೊಂದುತ್ತದೆ. ಜೀನ್ಸ್‌ ಮೆಚ್ಚುವವರಿಗೆ ಈ ಟ್ರೆಂಡ್‌ ಬೆಸ್ಟ್‌. ಏಕೆಂದರೆ ಇದು ತುಂಬಾ ಬಿಗಿಯಾಗಿ ಇರುವುದಿಲ್ಲ, ಹಾಗಂತ ಸಡಿಲವಾಗಿಯೂ ಇರುವುದಿಲ್ಲ. ಸೊಂಟ ಹಾಗೂ ಹಿಂಭಾಗದಲ್ಲೂ ಎದ್ದು ಕಾಣುವಂತಿರುವುದಿಲ್ಲ.

ನ್ಯಾರೊ ಫಿಟ್‌

ಈ ಪ್ಯಾಂಟ್‌ಗಳು ಸೊಂಟ ಹಾಗೂ ತೊಡೆಯ ಭಾಗದಲ್ಲಿ ಅಗಲವಾಗಿದ್ದು, ನಂತರ ಕಾಲಿನ ಆಕಾರಕ್ಕೆ ತಕ್ಕಂತೆ ಕಿರದಾಗುತ್ತಾ ಹೋಗುತ್ತದೆ. ಇವು ಧರಿಸಲು ಆರಾಮದಾಯಕವಾಗಿದ್ದು, ಮೊಣಕಾಲಿನ ಬಳಿ ಅಗಲವಾಗಿರುತ್ತವೆ, ಅಲ್ಲದೆ ಟ್ರೆಂಡಿ ನೋಟ ಸಿಗುವಂತೆಯೂ ಮಾಡುತ್ತವೆ. ಈ ಜೀನ್ಸ್‌ನಲ್ಲಿ ಸ್ಟ್ರೆಚ್‌ ಡೆನಿಮ್‌ ಬಟ್ಟೆ ಹೆಚ್ಚು ಹೊಂದುತ್ತದೆ.

ಆಂಕಲ್‌ ಲೆಂಥ್‌

ಆಂಕಲ್‌ ಲೆಂಥ್‌ ಜೀನ್ಸ್‌ ಸದ್ಯ ಹೆಚ್ಚು ಟ್ರೆಂಡ್‌ನಲ್ಲಿದೆ. ಸ್ಕಿನ್ನಿ ಜೀನ್ಸ್‌ ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ್ದು. ತೆಳ್ಳಗೆ ಇರುವವರಿಗೆ ಆಂಕಲ್‌ ಜೀನ್ಸ್‌ ಹೆಚ್ಚು ಹೊಂದುತ್ತದೆ. ಕುಳ್ಳಗೆ ಇರುವವರು ಆಂಕಲ್‌ ಲೆಂಥ ಜೀನ್ಸ್‌ ಧರಿಸುವುದರಿಂದ ಸ್ವಲ್ಪ ಉದ್ದವಾಗಿ ಕಾಣಿಸಬಹುದು. ಭಾರತದಲ್ಲಿ ಎಲ್ಲಾ ಕಾಲಮಾನಕ್ಕೂ ಆಂಕಲ್‌ ಲೆಂಥ್‌ ಜೀನ್ಸ್‌ ಬೆಸ್ಟ್‌ ಆಯ್ಕೆ ಎನ್ನುತ್ತಾರೆ

ಕ್ಯಾರೆಟ್‌ ಫಿಟ್‌

ಕ್ಯಾರೆಟ್‌ ಫಿಟ್‌ ಜೀನ್ಸ್‌ ಹೆಸರೇ ಸೂಚಿಸುವಂತೆ ಸೊಂಟ, ತೊಡೆಯ ಉದ್ದಕ್ಕೂ ಅಗಲವಾಗಿರುತ್ತದೆ. ಮೊಣಕಾಲಿನ ಕೆಳಗೆ ಸ್ಕಿನ್ನಿ ಫಿಟ್‌ನ ಸ್ನಾಗ್‌ನೆಸ್‌ ಇರುತ್ತದೆ. ಇದು ದಪ್ಪಗಿರುವವರಿಗೆ ಹೆಚ್ಚು ಹೊಂದುತ್ತದೆ.

ಸ್ಕಿನ್ನಿ ಫಿಟ್‌

ಸ್ಕಿನ್ನಿ ಫಿಟ್‌ ಜೀನ್ಸ್‌ ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಇದು ಚರ್ಮಕ್ಕೆ ಅಂಟಿಕೊಂಡಿರುವ ಕಾರಣಕ್ಕೆ ಇದು ಸ್ಟೈಲಿಶ್‌ ನೋಟ ಸಿಗುವಂತೆ ಮಾಡುತ್ತದೆ. ಫಾರ್ಮಲ್‌ ಶರ್ಟ್‌ನೊಂದಿಗೆ ಈ ಸ್ಕಿನ್ನಿ ಫಿಟ್‌ ಜೀನ್ಸ್‌ ಹೆಚ್ಚು ಹೊಂದುತ್ತದೆ. ವಾರಾಂತ್ಯದ ಪಾರ್ಟಿ, ಪಬ್‌ಗೂ ಇದು ಉತ್ತಮ.

ವಿಭಾಗ